ಭಾರತೀಯ ಸಂಪ್ರದಾಯದ ಪ್ರಕಾರ ತುಳಸಿ ಗಿಡಕ್ಕೆ ಅದರದ್ದೇ ಆದ ಮಹತ್ವ ಇದೆ ಯಾಕಂದ್ರೆ ತುಳಸಿ ಗಿಡದಲ್ಲಿ ಮಹಾಲಕ್ಷ್ಮೀ ನೆಲೆಸಿರುತ್ತಾಳೆ ಎಂಬ ಧಾರ್ಮಿಕ ನಂಬಿಕೆ ನಮ್ಮಲ್ಲಿ ಹಾಸುಹೊಕ್ಕಾಗಿದೆ ಹಾಗಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ತುಳಸಿ ಗಿಡ ಇದ್ದೇ ಇರುತ್ತದೆ ಯಾಕಂದ್ರೆ ನಮ್ಮ ಭಾರತೀಯ ವಾಸ್ತುಶಾಸ್ತ್ರಕ್ಕೆ ವಿಶೇಷವಾದ ಮಹತ್ವ ಇದೆ. ಈ ನಿಟ್ಟಿನಲ್ಲಿ ವಾಸ್ತುಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಇಂತಹ ಫಲಗಳನ್ನು ಪಡೆಯಬಹುದು ಎಂದು ಬಹಳ ಹಿಂದಿನ ಕಾಲದಿಂದಲೂ ಆಚರಿಸುತ್ತಾ ಬಂದಿದ್ದೇವೆ ಹಾಗಾದ್ರೆ ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಯಾವ ದಿಕ್ಕಿನಲ್ಲಿ ಇಡಬಾರದು ಯಾವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು ಯಾವ ದಿಕ್ಕಿನಲ್ಲಿ ಇಟ್ಟರೆ ಕೆಟ್ಟದ್ದು ಅದರಿಂದ ಏನು ಫಲ ಎಂಬುದನ್ನೂ ನಾವಿನ್ನು ನಿಮಗೆ ತಿಳಿಸುತ್ತೇವೆ ಬನ್ನಿ

ತುಳಸಿ ಗಿಡಕ್ಕೆ ವಿಶೇಷವಾದ ಮಹತ್ವವಿದೆ ಯಾರ ಮನೆಯಲ್ಲಿ ತುಳಸಿ ಗಿಡ ಇರುತದೆಯೋ ಆ ಮನೆಗೆ ಮಾಟ ಮಂತ್ರದ ದೋಷಗಳು ತಗುಲುವುದಿಲ್ಲ ಮಾಟ ಮಂತ್ರಗಳ ಪ್ರಯೋಗ ದುಷ್ಟ ಶಕ್ತಿಗಳ ಕಾಟ ನಿಮ್ಮ ಮನೆಯ ಮೇಲೆ ಇದೆ ಅಂದ್ರೆ ನಿಮ್ಮ ಮನೆಯ ತುಳಸಿ ಗಿಡ ಅಮಾವಾಸ್ಯೆ ಅಥವಾ ಹುಣ್ಣಿಮೆಯ ಹಿಂದಿನ ಅಥವಾ ಮುಂದಿನ ದಿನಗಳಲ್ಲಿ ಒಣಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಒಣಗಿದ ತುಳಸಿ ಗಿಡವನ್ನು ಹಾಗೆ ಬಿಡದೆ ಅದನ್ನು ನೀವು ಬದಲಾಯಿಸಬೇಕು ಹೀಗೆ ತುಳಸಿ ಗಿಡವನ್ನು ಮತ್ತೆ ನೆಡುವುದರಿಂದ ಅದು ನಿಮ್ಮ ಮನೆಗೆ ರಕ್ಷಣೆಯಾಗಿ ಕೆಲಸ ಮಾಡುತ್ತದೆ. ಇಂತಹ ತುಳಸಿ ಗಿಡವನ್ನು ನೀವು ಅಪ್ಪಿ ತಪ್ಪಿಯೂ ಕೂಡ ಧಕ್ಷಿಣ ದಿಕ್ಕಿಗೆ ಇಡಬಾರದು, ಹೀಗೆ ಮಾಡುವುದರಿಂದ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಬೀದಿಗೆ ಬಂದು ನಿಲ್ಲುವ ಸಾಧ್ಯತೆ ಇದೆ. ಮನೆಯಲ್ಲಿ ಅನಾರೋಗ್ಯದ ಸಮಸ್ಯೆ ತಾಂಡವವಾಡಲು ಶುರು ಮಾಡುತ್ತದೆ ನೀವು ಸಂಕಷ್ಟಕ್ಕೆ ಗುರಿಯಾಗುತ್ತೀರಿ ಮನೆಯಲ್ಲಿ ಕಲಹಗಳು ಹೆಚ್ಚಾಗುತ್ತವೆ ಆದ್ದರಿಂದ ತುಳಸಿ ಗಿಡವನ್ನು ಧಕ್ಷಿಣ ದಿಕ್ಕಿಗೆ ಇಡುವುದು ಉತ್ತಮವಲ್ಲ.

ಹಾಗೆಯೇ ನಾವು ಪೂಜೆಗಾಗಿ ಮತ್ತು ತೀರ್ಥಕಾಗಿ ತುಳಸಿ ಎಲೆಗಳನ್ನು ಕೀಳುತ್ತಿರುತ್ತೇವೆ ಆದರೆ ಶಾಸ್ತ್ರದ ಪ್ರಕಾರ ಏಕಾದಶಿಯ ದಿನದಂದು ಭಾನುವಾರ ಶುಕ್ರವಾರ ಹಾಗೂ ಮಂಗಳವಾರದ ದಿನಗಳಂದು ತುಳಸಿ ಎಲೆಗಳನ್ನು ಕೀಳುವುದು ನಿಷಿದ್ಧ ಯಾಕಂದ್ರೆ ಏಕಾದಶಿಗೆ ಭಾರತೀಯ ಧರ್ಮಶಾಸ್ತ್ರದ ಪ್ರಕಾರ ವಿಶೇಷವಾದ ಸ್ಥಾನಮಾನವಿದೆ. ಹಾಗಾದ್ರೆ ನಾವು ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ಇಡುವುದರಿಂದ ನಮಗೆ ಶುಭ ಫಲಗಳು ಪ್ರಾಪ್ತಿಯಾಗುತ್ತವೆ ಎಂಬುದನ್ನು ತಿಳಿಯೋಣ ಬನ್ನಿ

ಕಂಕಣ ಭಾಗ್ಯ ಇಲ್ಲದೆ ಇರುವ ಮನೆಯಲ್ಲಿ ತುಳಸಿ ಗಿಡವನ್ನು ಆಗ್ನೇಯ ದಿಕ್ಕಿನಲ್ಲಿ ಇಟ್ಟು ಸೂರ್ಯೋದಯದ ಕಾಲದಲ್ಲಿ ಪೂಜೆ ಮಾಡುವುದರಿಂದ ಆದಷ್ಟು ಬೇಗ ನಿಮಗೆ ಕಂಕಣ ಭಾಗ್ಯ ಕೂಡಿಬರುತ್ತದೆ ಎಂದು ಹಿಂದೂ ಧರ್ಮಶಾಸ್ತ್ರ ಸ್ಪಷ್ಟಪಡಿಸುತ್ತದೆ. ಯಾರ ಮನೆಯಲ್ಲಿ ಹಣಕಾಸಿನ ಸಮಸ್ಯೆ ಹೆಚ್ಚಾಗಿರುತ್ತದೆಯೋ ಅವರು ಮನೆಯ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನಿಟ್ಟು ಸೂರ್ಯೋದಯ ಕಾಲದಲ್ಲಿ ಪೂಜೆ ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳಿಂದ ಖಂಡಿತ ಹೊರಬರಬಹುದು. ಯಾರಿಗೆ ಪಿತೃ ದೋಷ ಇರುತ್ತದೆಯೋ ಅವರು ಮನೆಯಲ್ಲಿ ತುಳಸಿ ಗಿಡವನ್ನು ನೈರುತ್ಯ ದಿಕ್ಕಿನಲ್ಲಿ ಇಟ್ಟು ಪೂಜೆ ಮಾಡುವುದರಿಂದ ನಿಮ್ಮ ಜಾತಕದಲ್ಲಿನ ಸಮಸ್ಯೆಗಳು ನಿವಾರಣೆಯಾಗಿ ಪಿತೃ ದೋಷವು ಕೂಡ ನಿವಾರಣೆಯಾಗುವುದು ಖಚಿತ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ ಒಂದೆ ಕರೆ ಮೂಲಕ ಪರಿಹಾರ ಕಂಡುಕೊಳ್ಳಿ. ಕರೆ ಮಾಡಿ 9845 559493 ಸಮಸ್ಯೆ ಎಷ್ಟೇ ಕಠಿಣವಾದರೂ 2 ದಿನದಲ್ಲಿ ಪರಿಹಾರ ನೀಡುತ್ತೇವೆ. ಎಂ ಪಿ ಶರ್ಮ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

By

Leave a Reply

Your email address will not be published. Required fields are marked *