R ಅಕ್ಷರದಿಂದ ಶುರುವಾಗೋ ವ್ಯಕ್ತಿಗಳ ಗುಣ ಸ್ವಭಾವ ತಿಳಿಯಿರಿ

0 6

ಭಾರತದಲ್ಲಿ ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ಹಲವಾರು ಶಾಸ್ತ್ರಗಳು ಪ್ರಚಲಿತದಲ್ಲಿವೆ ಜ್ಯೋತಿಷ್ಯ ಶಾಸ್ತ್ರ ಸಂಖ್ಯಾಶಾಸ್ತ್ರ ಮುಖಲಕ್ಷಣ ನೋಡಿ ಹೇಳುವ ಶಾಸ್ತ್ರ ಹಸ್ತರೇಖಾ ಶಾಸ್ತ್ರ ಹೀಗೆ ಇನ್ನೂ ಹಲವಾರು ರೀತಿಯ ನಿಮ್ಮ ಭವಿಷ್ಯವನ್ನು ಹಾಗೂ ಗುಣ ಲಕ್ಷಣಗಳನ್ನು ತಿಳಿದುಕೊಳ್ಳುವ ಮಾರ್ಗಗಳಿವೆ ಅದರಲ್ಲಿ ತುಂಬಾ ವಿಶಿಷ್ಟವಾಗಿ ಸಾಂಖ್ಯಾಶಾಸ್ತ್ರವು ಪ್ರಾಮುಖ್ಯವಹಿಸುತ್ತದೆ, ಹಾಗೆಯೇ ನಾವಿಂದು ಆರ್ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳ ಬಗ್ಗೆ ಗುಣಲಕ್ಷಣಗಳನ್ನು ಕುರಿತು ಚರ್ಚಿಸುತ್ತಿದ್ದೇವೆ ಒಂದು ವೇಳೆ ನಿಮ್ಮ ಹೆಸರು ಈ ಅಕ್ಷರದಿಂದ ಶುರುವಾಗಿದ್ದರೆ ಖಂಡಿತ ನಿಮ್ಮ ಬಗ್ಗೆ ನೀವು ತಿಳಿದಿರದ ಮಾಹಿತಿಗಳು ನಿಮ್ಮನ್ನು ಆಶ್ಚರ್ಯಗೊಳಿಸಬಹುದು.

ಸಂಖ್ಯಾಶಾಸ್ತ್ರದ ಪ್ರಕಾರ ಈ ವ್ಯಕ್ತಿಗಳು ಸಧ್ಗುಣಶೀಲ ಪ್ರಭಲ ಹಾಗೂ ಸುಲಭವಾಗಿ ಒಗ್ಗಿಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ, ಇವರು ಸುಲಭವಾಗಿ ಸ್ನೇಹಿತರನ್ನು ಸಂಪಾದಿಸುತ್ತಾರೆ ಇವರು ಪ್ರೀತಿಯನ್ನು ಶ್ಲಾಗಿಸುವವರಾಗಿದ್ದು ಇವರ ಈ ಗುಣಕ್ಕೇನೆ ಇತರರು ಇಷ್ಟಪಡುತ್ತಾರೆ. ಇನ್ನೂ ಈ ವ್ಯಕ್ತಿಗಳು ಸಾಕಷ್ಟು ಹಣವನ್ನೇನೋ ಸಂಪಾದಿಸುತ್ತಾರೆ, ಆದರೆ ಇನ್ನೊಂದು ಕಡೆ ಇವರು ಹಣದ ನಿರ್ವಹಣೆಯಲ್ಲಿ ಸೋಲುವ ಕಾರಣ ಇವರು ಸದಾಕಾಲ ಹಣದ ಮುಗ್ಗಟ್ಟನ್ನು ಎದಿರಿಸುತ್ತಿರುತ್ತಾರೆ. ಇದೇ ಕಾರಣದಿಂದ ಕೆಲವೊಮ್ಮೆ ಈ ವ್ಯಕ್ತಿಗಳು ಕೆಲವೊಮ್ಮೆ ಹಣದ ನಷ್ಟವನ್ನೂ ಅನುಭವಿಸುತ್ತಾರೆ ಹಾಗಾಗಿ ಈ ವ್ಯಕ್ತಿಗಳು ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ.

ಇನ್ನೂ ಇವರು ನೈಸರ್ಗಿಕ ಅಧಿಕಾರಯುತ ದ್ವನಿಯನ್ನು ಹೊಂದಿದ್ದು ತಮ್ಮ ಮಾತುಗಳಿಂದ ಇತರರನ್ನು ತಮ್ಮ ಚರ್ಚೆಯ ವಲಯದಲ್ಲಿ ಸುಲಭವಾಗಿ ಒಳಗೊಳ್ಳುವಂತೆ ಮಾಡುವ ಚಾಣಕ್ಯತನವನ್ನು ಇವರು ಹೊಂದಿರುತ್ತಾರೆ, ಈ ಕಾರಣದಿಂದ ಇವರು ಸುಲಭವಾಗಿ ಸ್ನೇಹಿತರನ್ನು ಗಳಿಸುತ್ತಾರೆ ಆದರೆ ಕೆಲವೊಮ್ಮೆ ಇವರನ್ನು ಅರ್ಥ ಮಾಡಿಕೊಳ್ಳುವುದು ಇತರರಿಗೆ ಅಷ್ಟು ಸುಲಭವಲ್ಲದ ಕಾರಣ ಗಳಿಸಿದ ನಂಬಿಕೆಯನ್ನು ಉಳಿಸಿಕೊಳ್ಳುವುದರಲ್ಲಿ ವಿಫಲರಾಗಿರುತ್ತಾರೆ.

ಇನ್ನು ಹೆಚ್ಚಿನ ಸಂಧರ್ಭಗಳಲ್ಲಿ ಇವರು ನಿಗೂಡರಾಗಿ ಇತರರ ಕುತೂಹಲಕ್ಕೆ ಕಾರಣರಾಗುತ್ತಾರೆ. ಇವರು ನೇರವಾಗಿ ತಮ್ಮ ಮಾತುಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರೂ ಆಗಿರುತ್ತಾರೆ ಅಲ್ಲದೇ ಇವರು ಉತ್ತಮ ವಾಗ್ಮಿಗಳೂ ಕೂಡ ಅಲ್ಲದೇ ಈ ವ್ಯಕ್ತಿಗಳು ಕಲ್ಪನೆಗಿಂತ ವಾಸ್ತವಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವವರಾಗಿರುತ್ತಾರೆ ಅಲ್ಲದೇ ತಾರ್ಕಿಕವಾಗಿ ಯೋಚಿಸುವ ಎದುರಿನವರು ಹೇಳುವುದನ್ನು ಗಮನ ಇಟ್ಟು ಕೇಳುವ ಹೆಚ್ಚಿನ ಮಾಹಿತಿಗಳನ್ನು ಹೊಂದಿರುವ ಇತರರ ಗೌರವ ಪಡೆಯುವ ಮತ್ತು ಉತ್ತಮ ಪ್ರೇಮಿಗಳೂ ಆಗಿರುತ್ತಾರೆ

ಅಲ್ಲದೇ ಇವರು ವಿಶ್ವಾಸವನ್ನು ಉಳಿಸಿಕೊಳ್ಳುವ ಸಹಾನುಭೂತಿಯುಳ್ಳ ಹಾಗೂ ಮಮತಾಮಯಿಗಳು ಕೂಡಾ ಆಗಿರುತ್ತಾರೆ, ಆದರೆ ಮೊದಲು ಬಂದವನಿಗೆ ಸೀರುಂಡೆ ಎನ್ನುವ ಪರಿಸ್ಥಿತಿ ಎದುರಾದಾಗ ಹಾಗೂ ಸಾಮಾಜಿಕ ವಲಯದಲ್ಲಿ ಹೆಚ್ಚಿನ ಗಮನ ಸೆಳೆಯುವ ಅವಕಾಶ ಬಂದ್ರೆ ಎಲ್ಲರನ್ನು ಬಿಟ್ಟು ಮೊದಲು ತಲುಪಲು ದೌಡಾಯಿಸುತ್ತಾರೆ. ಇನ್ನು ಇವರ ಮಾತುಗಳಲ್ಲಿ ಅಲ್ಲಲ್ಲಿ ಹಾಸ್ಯಗಳನ್ನು ಅಳವಡಿಸಿಕೊಂಡು ಎದುರಿನವರ ಮುಖದಲ್ಲಿ ಮುಗುಳ್ನಗೆಯನ್ನು ಮೂಡಿಸುವುದರಲ್ಲಿ ಸಫಲಾರಾಗುತ್ತಾರೆ ಈ ಮೂಲಕ ಇವರು ಯಾವುದೇ ಸಂದರ್ಭವನ್ನು ಸುಲಭವಾಗಿ ನಿಬಾಯಿಸುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಇವರನ್ನು ಇತರರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಸಾಧ್ಯ ಇಲ್ಲ ಇನ್ನು ಇವರು ತಮ್ಮನ್ನು ತಾವು ಉತ್ತಮ ಪಡಿಸಿಕೊಳ್ಳಲು ತಮ್ಮಲ್ಲಿ ಬದಲಾವಣೆಗಳನ್ನು ತಂದುಕೊಳ್ಳಲು ಸದಾ ಸಿದ್ಧರಿರುತ್ತಾರೆ, ಹಾಗೆಯೇ ತಮ್ಮ ಗುಣಲಕ್ಷಣಗಳಿಗೆ ಹೊಂದುವಂತಹ ಜೀವನ ಸಂಗಾತಿಯನ್ನೇ ಪಡೆಯಲು ಬಯಸುತ್ತಾರೆ ಇನ್ನೊಂದೆಡೆ ಇವರು ತೆರೆದ ಮನಸ್ಸಿನ ವ್ಯಕ್ತಿಗಳಾಗಿರುತ್ತಾರೆ.

Leave A Reply

Your email address will not be published.