ಮನೆಯಲ್ಲಿ ಇಂತಹ ದೇವರ ಫೋಟೋಗಳು ಇದ್ದರೆ ಕೂಡಲೇ ತೆಗೆದು ಬಿಡಿ ಇದರಿಂದ ಏನಾಗುವುದು ಗೊತ್ತೇ

0 36

ಸಾಮಾನ್ಯವಾಗಿ ಎಲ್ಲರ ಮನೆಯ ದೇವರ ಕೋಣೆಗಳಲ್ಲಿ ತಮಗೆ ಇಷ್ಟವಾದ ಮತ್ತು ಮನೆದೇವರುಗಳ ಫೋಟೋಗಳನ್ನು ಇಡುವುದು ಸಹಜ. ಬಹಳ ಹಿಂದಿನಿಂದಲೂ ಈ ಪದ್ದತಿ ರೂಡಿಯಲ್ಲಿ ಬಂದಿದೆ ಪ್ರತಿ ಮನೆಗಳಲ್ಲಿಯೂ ದೇವರ ಫೋಟೋಗಳನ್ನು ಇಟ್ಟು ಪೂಜೆ ಮಾಡುವುದಕ್ಕಾಗಿಯೇ ಜಾಗವನ್ನು ಮೀಸಲಿಟ್ಟಿರುತ್ತಾರೆ, ಇನ್ನೂ ಕೆಲವರಂತೂ ದೇವರಿಗಾಗಿ ಪ್ರತ್ಯೇಕ ಕೋಣೆಯನ್ನೇ ಮೀಸಲಿಡುತ್ತಾರೆ. ಆದರೆ ನಾವು ತಿಳಿದೋ ತಿಳಿಯದೆಯೋ ಮಾಡುವ ಕೆಲವು ಚಿಕ್ಕ ಚಿಕ್ಕ ತಪ್ಪುಗಳು ಮನೆಯಲ್ಲಿ ಅಶುಭಕ್ಕೆ ಎಡೆಮಾಡಿಕೊಡುತ್ತದೆ, ಹಾಗೆಯೇ ಕೆಲವು ದೇವರುಗಳ ಫೋಟೋಗಳನ್ನು ಮನೆಯಲ್ಲಿ ಇಟ್ಟು ಪೂಜಿಸುವಂತಿಲ್ಲ ಹೀಗೆ ಮಾಡುವುದರಿಂದ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ. ಮನೆಯ ನೆಮ್ಮದಿ ಹಾಳಾಗುತ್ತದೆ ಹಾಗೆಯೇ ಮನೆಯಲ್ಲಿರುವ ಮಂದಿ ಮಾನಸಿಕವಾಗಿ ದೈಹಿಕವಾಗಿ ಸಂಕಟಗಳಿಗೆ ಒಳಗಾಗುತ್ತಾರೆ. ಯಾವ ಫೋಟೋಗಳನ್ನು ಮನೆಯಲ್ಲಿ ಇಡಬಾರದು ಯಾವ ಫೋಟೋಗಳನ್ನು ಮನೆಯಲ್ಲಿ ಇಡಬೇಕು ಅವುಗಳಿಂದಾಗುವ ಲಾಭ ನಷ್ಟಗಳೇನು ಎಂಬುದರ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾವು ನಿಮ್ಮ ಮುಂದೆ ಇಡುತ್ತೇವೆ ಬನ್ನಿ

ಮೊದಲನೆಯದಾಗಿ ಮನೆಯಲ್ಲಿ ಭೈರವನ ಫೋಟೋವನ್ನು ಇಡಬಾರದು ಯಾಕಂದ್ರೆ ಭೈರವನು ಶಿವನ ಸ್ವರೂಪವೇ ಆಗಿದ್ದರು ಕೂಡ ಭೈರವ ಒಬ್ಬ ನಿಗೂಡ ದೇವರು ಹಾಗಾಗಿ ಭೈರವನ ಫೋಟೋಗಳನ್ನು ಹಾಗೂ ಭೈರವನ ವಿಗ್ರಹಗಳನ್ನು ಮನೆಯಲ್ಲಿ ಇಡುವುದು ಸೂಕ್ತವಲ್ಲ, ಹಾಗೆಯೇ ಶಿವನ ಇನ್ನೊಂದು ಸ್ವರೂಪವೇ ನಟರಾಜ ಇಂತಹ ನಟರಾಜನ ವಿಗ್ರಹವನ್ನು ಹಾಗೆ ನಟರಾಜನ ಫೋಟೋವನ್ನು ಕೂಡ ಮನೆಯಲ್ಲಿ ಇದಲೇಬಾರದು ಯಾಕಂದ್ರೆ ನಟರಾಜ ಎಂಬುದು ಶಿವನ ರುದ್ರ ಭಯಂಕರ ತಾಂಡವ ನೃತ್ಯವಾಗಿದೆ.

ಇನ್ನೂ ಗ್ರಹಗಳ ಶಾಂತಿಗಾಗಿ ನಾವು ಶನಿ ದೇವನ ಮೊರೆಹೋಗುವುದು ಅಥವಾ ನವಗ್ರಹಗಳ ಮೊರೆ ಹೋಗುವುದು ಸಾಮಾನ್ಯ ಆದರೆ ಯಾವುದೇ ಕಾರಣಕ್ಕೂ ಶನಿದೇವರ ಅಥವಾ ಇತರೆ ಗ್ರಹಗಳ ಅಥವಾ ರಾಹು ಕೇತುಗಳ ಫೋಟೋಗಳನ್ನು ಮನೆಯಲ್ಲಿ ಇದಕೂಡದು ಯಾಕಂದ್ರೆ ರಾಹು ಕೇತುಗಳು ಛಾಯಾಗ್ರಹಗಳೇ ಆದರೂ ಅವುಗಳು ಪಾಪಗ್ರಹಗಳಾಗಿವೆ ಅಂತೆಯೇ ಮನೆಯಲ್ಲಿ ರೌದ್ರ ರೂಪದಲ್ಲಿರುವ ದುರ್ಗಾದೇವಿಯ ಫೋಟೋಗಳನ್ನು ಇಡಬಾರದು ವಾಸ್ತು ಶಾಸ್ತ್ರದ ಪ್ರಕಾರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಾಕಾರ ಇದು ಸೂಕ್ತವಲ್ಲ ಹಾಗೆಯೇ ದೇವರ ಮನೆಯಲ್ಲಿ ಒಡೆದು ಹೋದ ದೇವರುಗಳ ವಿಗ್ರಹಗಳನ್ನು ಮತ್ತು ಫೋಟೋಗಳನ್ನು ಇಟ್ಟುಕೊಳ್ಳಲೆಬಾರದು

ಪ್ರತೀ ಮನೆಯಲ್ಲಿಯೂ ದೇವರುಗಳ ಸೌಮ್ಯ ರೂಪದ ಫೋಟೋಗಳನ್ನು ಇಡಬೇಕು ಹೆಚ್ಚಾಗಿ ಮನೆಯಲ್ಲಿ ವಿನಾಯಕನ ಫೋಟೋವನ್ನು ಇಡಲೇಬೇಕು ಹಾಗೆಯೇ ಕೆಲವರು ಪೊಜೆಗಾಗಿ ದೇವರ ಮನೆಯಲ್ಲಿ ಎರಡು ಶಂಖಗಳನ್ನು ಇಟ್ಟಿರುತ್ತಾರೆ, ಹಾಗೇನಾದರೂ ಇದ್ದರೆ ಒಂದು ಶಂಖವನ್ನು ತೆಗೆದು ಬಿಡಿ ಎರಡು ಶಂಖ ಇರುವುದು ಅಶುಭದ ಸಂಕೇತ ಹಾಗೆಯೇ ನಿಮಗೇನಾದರೂ ಶಿವಲಿಂಗವನ್ನು ಇಟ್ಟು ಪೂಜೆ ಮಾಡಬೇಕೆನಿಸಿದಲ್ಲಿ ತುಂಬಾ ಚಿಕ್ಕದಾದ ಅಂದರೆ ನಿಮ್ಮ ಹೆಬ್ಬೆರಳಿಗಿಂತ ಕಡಿಮೆ ಇರುವ ಶಿವಲಿಂಗವನ್ನು ಇಟ್ಟು ಪೂಜೆ ಮಾಡಬಹುದು ಯಾವುದೇ ಕಾರಣಕ್ಕೂ ದೊಡ್ಡ ದೊಡ್ಡ ವಿಗ್ರಹಗಳನ್ನು ದೇವರ ಮನೆಯಲ್ಲಿ ಇಡುವುದು ಸೂಕ್ತವಲ್ಲ. ದೇವರ ಮನೆಯಲ್ಲಿ ಚರ್ಮದಿಂದ ಮಾಡಿದ ವಸ್ತುಗಳನ್ನು ಬಳಸಬಾರದು ಹಾಗೆಯೇ ಮರಣ ಹೊಂದಿದ ವ್ಯಕ್ತಿಗಳ ಫೋಟೋಗಳನ್ನು ದೇವರ ಮನೆಯಲ್ಲಿ ಇಡಬಾರದು ಹಾಗೆಯೇ ಪೂಜೆ ಮಾಡುವ ಸಮಯದಲ್ಲಿ ದೇವರಿಗೆ ಸಮರ್ಪಿಸುವ ಫಲ ಪುಷ್ಪಗಳನ್ನು ಶುಭ್ರವಾದ ನೀರಿನಲ್ಲಿ ತೊಳೆದು ಸಮರ್ಪಿಸಬೇಕು.

Leave A Reply

Your email address will not be published.