ಹೆಚ್ಚಿನ ಜನರ ಸಮಸ್ಯೆ ಎಂದರೆ ಅದು ತೂಕ ಹೆಚ್ಚಳ. ಅಯ್ಯೋ ನನ್ನ ತೂಕ ಕಡಿಮೆ ಇರಬೇಕಿತ್ತು, ನಾನು ಇತ್ತೀಚೆಗೆ ಸ್ವಲ್ಪ ದಪ್ಪ ಆಗಿದ್ದೇನೆ.. ಹೀಗೆ ಎಲ್ಲರಿಗೂ ಒಂದೊಂದು ರೀತಿಯಲ್ಲೂ ತೂಕದ ಬಗ್ಗೆ ತುಂಬಾನೆ ಯೋಚನೆ ಇರುತ್ತದೆ. ಹೆಚ್ಚಿನ ಜನ ತೂಕ ಕಳೆದುಕೊಳ್ಳುವತ್ತ ಕಸರತ್ತುಗಳನ್ನು ಮಾಡುತ್ತಾರೆ. ಕೆಲವರಿಗೆ ಹಠಾತ್ ಆಗಿ ತೂಕ ಹೆಚ್ಚಳ ಕಾಣಿಸಿಕೊಳ್ಳುತ್ತದೆ.

ನಾವು ಪ್ರತಿದಿನ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದಲೇ ತೂಕ ಹೆಚ್ಚುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಕಳಪೆ ಜೀವನಶೈಲಿ, ಒತ್ತಡ, ಅನಾರೋಗ್ಯಕರ ಆಹಾರಗಳು, ದೈಹಿಕ ನಿಷ್ಕ್ರಿಯತೆ ಮತ್ತು ನಿದ್ರೆಯ ಕೊರತೆಯಿಂದಾಗಿ ಬೊಜ್ಜು ಒಂದು ಪ್ರಮುಖ ಸಮಸ್ಯೆಯಾಗಿ ಹೊರಹೊಮ್ಮಿದೆ.

ಸ್ಥೂಲಕಾಯದಿಂದಾಗಿ, ಜನರು ಅನೇಕ ಗಂಭೀರ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಆದರೆ ಅತೀ ಹೆಚ್ಚು ಜನರ ಈ ಸಮಸ್ಯೆಗೆ , ಸಣ್ಣ ಆಗುವುದಕೆ ಈ ಒಂದು ಗಿಡ ನಿಮ್ಮ ಜೊತೆ ಇದ್ದರೆ ಸಾಕು,ಈ ಮನೆಮದ್ದು ನಿಮಗೆ ಸಹಾಯ ಮಾಡುತ್ತದೆ. ಹಾಗಾದ್ರೆ ಆ ಗಿಡ ಯಾವುದು ಹಾಗೂ ಅದನ್ನ ಬಳಕೆ ಮಾಡುವುದು ಹೇಗೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಉತ್ತರಾಣಿ ಸಸ್ಯವು ಬೆಟ್ಟಗುಡ್ಡಗಳ ಪ್ರದೇಶ, ಪಾಳುಭೂಮಿ, ಸಾಗುವಳಿ ಭೂಮಿ, ರಸ್ತೆಗಳ ಪಕ್ಕ, ಹೊಲಗಳ ಬದುಗಳ ಮೇಲೆ ಕಳೆಯಂತೆ ಬೆಳೆಯುತ್ತೆ. ಇದರಲ್ಲಿ ಕೆಂಪು ಉತ್ತರಾಣಿ, ಬಿಳಿ ಉತ್ತರಾಣಿ ಎಂಬ ಎರಡು ಪ್ರಭೇದಗಳಿದ್ದು, ಎರಡರಲ್ಲೂ ಅಪಾರವಾದ ಔಷಧೀಯ ಗುಣಗಳು ತುಂಬಿವೆ.

ಇವೆರಡೂ ಕೂಡ ಒಗರು ಹಾಗೂ ಖಾರ ರಸದಿಂದ ಕೂಡಿವೆ. ಆಯುರ್ವೇದ, ಹಿಂದೂಯುನಾನಿ, ಸಿದ್ಧ, ಪಾರಂಪರಿಕ ಔಷಧೀಯ ಪದ್ದತಿಯಲ್ಲಿ ಉತ್ತರಾಣಿ ಗಿಡವನ್ನು ಅನಾದಿ ಕಾಲದಿಂದಲೂ ಅನೇಕ ವ್ಯಾಧಿಗಳ ನಿವಾರಣೆಗೆ ಔಷಧಿಯಾಗಿ ಪೂರ್ವಿಕರು ಬಳಸುತ್ತಾ ಬಂದಿದ್ದಾರೆ.

ಇದು ಅನೇಕ ರೋಗಗಳಿಗೆ ಅತ್ಯಂತ ಪ್ರಭಾವಶಾಲಿಯಾದ ವ್ಯಾಧಿ ನಿವಾರಕವೆನಿಸಿದೆ. ಉತ್ತರಾಣಿ ಗಿಡವು ಸಪ್ತ ಧಾತುಗಳನ್ನು ತನ್ನಲ್ಲಿರುವ ದಿವ್ಯ ಶಕ್ತಿಯಿಂದ ಶುದ್ಧಗೊಳಿಸುತ್ತದೆ. ಆದ್ದರಿಂದಲೇ ಉತ್ತರಾಣಿಗೆ “ಅಪಮಾರ್ಗ” ಎಂದು ಋಷಮುನಿಗ

ಉತ್ತರಾಣಿಗಿಡ ಸಾಮಾನ್ಯವಾಗಿ ಎಲ್ಲರೂ ಈ ಒಂದು ಗಿಡದ ಹೆಸರನ್ನು ಕೇಳಿರುತ್ತೇವೆ. ಇದರಿಂದ ಸಿಗುವ ಲಾಭ ತೂಕ ಇಳಿಸಲು ಮಾತ್ರವಲ್ಲದೆ ಇನ್ನೂ ಅನೇಕ ಸಮಸ್ಯೆಗೆ ರಾಮಬಾಣವಾಗಿದೆ. ಉತ್ತರಾಣಿ ಗಿಡದಿಂದ ಹೇಗೆ ತೂಕವನ್ನು ಕಡಿಮೆಮಾಡಿಕೊಳ್ಳ ಬೇಕೆಂದು ನೋಡೋಣ. ಉತ್ತರಾಣಿ ಸಾಕಷ್ಟುcಔಷಧಿ ಗುಣವನ್ನು ಹೊಂದಿದೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಲವಾರು ಕಾಯಿಲೆಗಳನ್ನು ಗುಣಪಡಿಸುತ್ತದೆ.

ಉತ್ತರಾಣಿ ಗಿಡವನ್ನು ಆಯುರ್ವೇದದಲ್ಲಿ ಬಳಸುತ್ತಾರೆ ಗಿಡವನ್ನು ಹಲವಾರು ಹೆಸರುಗಳಿಂದ ಕರೆಯುತ್ತಾರೆ ಇದರ ಬೇರನ್ನು ಹಲ್ಲಿಗೆ ಬಳಸಿದರೆ ಹಲ್ಲಿನ ನೋವು ಗುಣವಾಗುತ್ತದೆ ಇದರ ಬೇರನ್ನು ಮಿಕ್ಸಿ ಮಾಡಿ ಹಚ್ಚಿದರೆ ಗುಳ್ಳೆ, ಕಲೆ, ನಿವಾರಣೆಯಾಗುತ್ತದೆ. ಸ್ತ್ರೀಯರು ಉತ್ತರಾಣಿಯ ಹೂ ಗೊಂಚಲು ತಂದು ಹಾಲಿನಲ್ಲಿ ನುಣ್ಣಗೆ ಅರೆದು ಮುಟ್ಟಿನ ಸಮಯದಲ್ಲಿ ಸೇವಿಸಿದರೆ, ಗರ್ಭನಿಂತು ಸಂತಾನ ಪ್ರಾಪ್ತಿಯಾಗುತ್ತೆ.

ಇನ್ನೂ ತೂಕ ಇಳಿಸಿಕೊಳ್ಳಲು ಉತ್ತರಾಣಿ ಗಿಡ ಹೇಗೆ ಸಹಾಯಕಾರಿ ಎಂದು ನೋಡುವುದಾದರೆ, ನೀರಿಗೆ ಈ ಗಿಡದ ಬೇರನ್ನು ಜಜ್ಜಿ ಹಾಕಿ ಕುದಿಸಬೇಕು ಇದನ್ನು ಬೆಳಗ್ಗೆ ಹೊತ್ತು ಕುಡಿದರೆ ಒಬಿಸಿಟಿ ತೂಕ ಕಡಿಮೆಯಾಗುತ್ತದೆ ಹಾಗಾಗಿ ಇದನ್ನು ಪ್ರತಿದಿನ ಉಪಯೋಗಿಸಬೇಕು. ಇದರ ಎಲೆಗಳನ್ನು ಪೇಸ್ಟ್ ಮಾಡಿ ಸೇವಿಸಿದರೆ ಕೆಮ್ಮು ಗಂಟಲು ನೋವು ನಿವಾರಣೆಯಾಗುತ್ತದೆ.

PCOD ಸಮಸ್ಯೆ, ಬಿಳಿಹೋಗುವುದನ್ನು ನಿವಾರಿಸುತ್ತದೆ. ಎಲೆಗಳ ರಸವನ್ನು ಹಾಲಿಗೆ ಹಾಕಿ ಕುಡಿದರೆ ನಿಯಂತ್ರಣವಾಗುತ್ತದೆ ಗರ್ಭಕೋಶವನ್ನು ಶುದ್ಧಿ ಮಾಡುತ್ತದೆ ಋತುಚಕ್ರ ಸರಿಯಾದ ಸಮಯಕ್ಕೆ ಆಗುತ್ತಿಲ್ಲ ಎಂದರೆ ಸರಿಯಾದ ಸಮಯಕ್ಕೆ ಆಗುವಂತೆ ಮಾಡುತ್ತದೆ.ಇದನ್ನು ಪುರುಷರು ಕೂಡ ಸೇವಿಸಬಹುದು ಇದರ ರಸವನ್ನು ಹಾಲಿಗೆ ಹಾಕಿ ಕುಡಿದರೆ ರಕ್ತ ಹೆಚ್ಚಾಗುತ್ತದೆ. ಎಲೆಯನ್ನು ಕಿಚ್ಚಡಿ ಮಾಡಿ ಸೇವಿಸಿದರೆ ಒಳ್ಳೆಯದು ಸಂತಾನ ಸಮಸ್ಯೆ ಇದ್ದರೆ ಗುಣವಾಗುತ್ತದೆ. ಇದರ ಎಲೆಯನ್ನು ಪ್ರತಿದಿನ ಉಪಯೋಗಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಈ ಗಿಡ ಎಲ್ಲಾ ಕಡೆ ಸಿಗುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *