ಸಾಧಿಸುವವನಿಗೆ ಛಲವೊಂದಿದ್ದರೆ ಏನಿಲ್ಲ ಸಾಧಿಸಬಹುದು ಅನ್ನೋದಕ್ಕೆ ಹಲವು ಉದಾಹರಣೆಗಳಿವೆ, ಸಾಧಿಸುವ ಛಲ, ಶ್ರಮ, ಪ್ರಯತ್ನ, ಇದ್ರೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಅನ್ನೋದಕ್ಕೆ ಈ ಯುವತಿಯೇ ಸಾಕ್ಷಿ ಅನ್ನಬಹುದು. ದೇಹದ ಅಂಗಾಗಳು ಎಲ್ಲವು ಸರಿಯಿದ್ದು ಸಾಧಿಸುವುದು ಕಷ್ಟ ಆದ್ರೆ ಈ ಹೆಣ್ಣುಮಗಳಿಗೆ ಕಣ್ಣು ಕಾಣಿಸೋದಿಲ್ಲ ಆದ್ರೂ ಈಕೆಯ ಶ್ರಮ ನಿಜಕ್ಕೂ ಮೆಚ್ಚಲೇಬೇಕು. ಕಣ್ಣು ಕಾಣಿಸದೆ ಇದ್ರೂ ಕೂಡ ಈಕೆ ಯುಪಿಎಸ್ಸಿ ಪರೀಕ್ಷೆಯಲ್ಲಿ 286 ನೇ ರ್ಯಾಂಕ್ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾಳೆ.

ಹೌದು ಹೆಸರು ಪೂರ್ಣ ಎಂಬುದಾಗಿ ತಮಿಳುನಾಡಿನ ಮಧುರೈ ಮೂಲದವರು ಇವರ ವಯಸ್ಸು 25 ಕಣ್ಣಿನ ದೃಷ್ಟಿ ಇಲ್ಲ, ಆದ್ರೆ ಸಾಧಿಸುವ ಛಲ ಗುರಿ ಶ್ರಮ ಎಲ್ಲವು ಕೂಡ ಇವರಲ್ಲಿ ಕಾಣಬಹುದು. ತನ್ನ ಜೀವನದಲ್ಲಿ ಎದುರಾದಂತ ನಾನಾ ರೀತಿಯ ಅಡೆ ತಡೆಗಳನ್ನು ಎದುರಿಸಿ ಇಂದು ಯಶಸ್ಸಿನ ಹಾದಿಯನ್ನು ಮುಟ್ಟಿದ್ದಾರೆ.

ಯುಪಿಎಸ್ಸಿ ಪರೀಕ್ಷೆಯಲ್ಲಿ ಸತತ ನಾಲ್ಕನೇ ಪ್ರಯತ್ನದಲ್ಲಿ ಪೂರ್ಣ ರ‍್ಯಾಂಕ್ ಪಡೆದಿದ್ದು, ತನ್ನ ತಂದೆಯ ಆಸೆಯನ್ನು ನೆರೆವೇರಿಸಿದ್ದಾಳೆ. ಇನ್ನು ಮನೆಯಲ್ಲಿ ತಂದೆ ತಾಯಿ ಹಾಗೂ ತಮ್ಮನ್ನನ್ನು ಹೊಂದಿರುವಂತ ಪೂರ್ಣ ಮನೆಯವರ ಬೆಂಬಲವನ್ನು ಹೆಚ್ಚು ಪಡೆಯುತ್ತಾರೆ. ಇಂದಿನ ಇವರ ಯಶಸ್ಸಿಗೆ ತನ್ನ ಮನೆಯವರ ಬೆಂಬಲವೇ ಮುಖ್ಯ ಕಾರಣ ಅನ್ನೋದನ್ನ ಒಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಪೂರ್ಣ ಅವರು ಹೇಳಿದ್ದಾರೆ.

ಕಣ್ಣು ಕಾಣಿಸದೆ ಇದ್ರೂ ಕೂಡ ಈ ಹೆಣ್ಣು ಮಗಳು ಯುಪಿಎಸ್ಸಿಯಲ್ಲಿ ರಾಂಕ್ ಗಳಿಸುವಲ್ಲಿ ಮುಖ್ಯ ಪಾತ್ರ ಹೇಗಿತ್ತು ಅನ್ನೋದನ್ನ ನೋಡುವುದಾದರೆ,ಇವರು ಪುಸ್ತಕಗಳನ್ನು ಕೇಳುತ್ತಿದ್ದರು ಮತ್ತು ಆಡಿಯೊ ಮೂಲಕ ತಯಾರಿ ನಡೆಸುತ್ತಿದ್ದರು. ಸರ್ಕಾರಿ ಉದ್ಯೋಗಗಳಲ್ಲಿರುವ ನನ್ನ ಅನೇಕ ಸ್ನೇಹಿತರು, ಅವರು ಯುಪಿಎಸ್‌ಸಿ ತಯಾರಿಗಾಗಿ ಮೆಟಿರಿಯಲ್‌ ಸಂಗ್ರಹಿಸಿ ಆಡಿಯೋ ತಯಾರಿಸಿದರು ಎಂದಿದ್ದಾಳೆ ಪೂರ್ಣಾ. ಅದೇನೇ ಇರಲಿ ತನ್ನ ಶ್ರಮ ಛಲದಿಂದ ಗುರಿಮುಟ್ಟಿದ ಈಕೆಯ ಮುಂದಿನ ಕೆಲಸ ಜನಪರವಾಗಿರಲಿ ಅನ್ನೋದೇ ನಮ್ಮ ಆಶಯ.

By

Leave a Reply

Your email address will not be published. Required fields are marked *