1980 ರ ಜೂನ್ 18 ನೆ ತಾರೀಕು. ಲಂಡನಿನ ಖ್ಯಾತ ಇಂಪಿರಿಯಲ್ ಕಾಲೇಜಿನ ಸಿಬ್ಬಂದಿ ತಮ್ಮ ಎದುರು ನಿಂತ ಮಧ್ಯಮ ವಯಸ್ಸಿನ ಒಬ್ಬರು ಮಹಿಳೆಯ ಅಸಾಧಾರಣ ಬುದ್ಧಿಗೆ ದಂಗಾಗಿ ಹೋಗಿದ್ದರು 13 ಅಂಕಿಗಳ ಎರಡು ಲೆಕ್ಕವನ್ನು ಕರಾರುವಕ್ಕಾಗಿ ಯಾವ ಕಂಪ್ಯೂಟರಿಗೂ ಕಡಿಮೆ ಇಲ್ಲ ಎನ್ನುವಂತೆ ಆಕೆ ಪರಿಹರಿಸಿದ್ದರು ಕ್ಲಿಷ್ಟ ಕರವಾದ ಗುಣಾಕಾರವನ್ನು ಪರಿಹರಿಸಲು ಆಕೆ ತೆಗೆದುಕೊಂಡ ಸಮಯ ಕೇವಲ 28 ಸೆಕೆಂಡುಗಳು. ಆಗಿನಕಾಲದ ಸೂಪರ್ ಕಂಪ್ಯೂಟರುಗಳನ್ನು ಮೀರಿಸಿದ್ದರು. 1982ರ ವಿಶ್ವ ಗಿನ್ನಿಸ್ ದಾಖಲೆಯಲ್ಲಿ ಹೆಸರುಮಾಡಿದ ಆಕೆಯ ಹೆಸರು ಮಾನವ ಕಂಪ್ಯೂಟರ್ ಎಂದೇ ಹೆಸರಾದ ಶಕುಂತಲಾದೇವಿ. ಶಕುಂತಲಾ ದೇವಿ ಮೂಲತಹ ಕರ್ನಾಟಕದವರ ಹಾಗೂ ಅಪ್ಪಟ ಕನ್ನಡತಿ ಎನ್ನುವುದು ಕೆಲವು ಜನರಿಗೆ ತಿಳಿದಿಲ್ಲ. ಶಕುಂತಲಾದೇವಿಯವರು ಕುರಿತಾಗಿ ಈ ಲೇಖನದ ಮೂಲಕ ಕೆಲವು ವಿಷಯಗಳನ್ನು ತಿಳಿದುಕೊಳ್ಳೋಣ.

1929 ರ ನವೆಂಬರ್ 4ರಂದು ಬೆಂಗಳೂರಿನಲ್ಲಿ ಜನಿಸಿದ ಶಕುಂತಲಾದೇವಿ ಶುದ್ಧ ಕನ್ನಡತಿ. ಇವರ ತಂದೆ ಬಿಷಮಿತ್ರ ಅವರು ಸಿಂಹಗಳನ್ನು ಪಳಗಿಸುವ ರಿಂಗ್ ಮಾಸ್ಟರ್ ಆಗಿದ್ದರು. ಶಕುಂತಲಾ ದೇವಿ ಅವರಿಗೆ ಮೂರು ವರ್ಷ ಇದ್ದಾಗಲೇ ಅವರಲ್ಲಿ ಅಸಾಧಾರಣ ಬುದ್ಧಿ ಇರುವುದನ್ನು ಅವರ ತಂದೆ ಗಮನಿಸಿದ್ದರು. ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಅಂಕಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಅಸಾಧಾರಣ ಬುದ್ಧಿಮತ್ತೆ ಶಕುಂತಲಾದೇವಿಯವರಿಗೆ ಇದ್ದಿತ್ತು. ಇದನ್ನು ಗಮನಿಸಿದ ಶಕುಂತಲಾದೇವಿಯವರ ತಂದೆ ತಮ್ಮ ರಿಂಗ್ ಮಾಸ್ಟರ್ ಕೆಲಸವನ್ನು ನಿಲ್ಲಿಸಿ ಅದರ ಬದಲಿಗೆ ರೋಡ್ ಶೋಗಳ ಮೂಲಕ ತಮ್ಮ ಮಗಳ ಚತುರತೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಆರಂಭಿಸಿದರು. ಇವರಿಗೆ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಗುಣಾಕಾರ ಭಾಗಕಾರ ದಂತಹ ಎಂತಹ ಕಷ್ಟದ ಸಮಸ್ಯೆ ಇದ್ದರೂ ಸಹ ಅದನ್ನು ಪರಿಹರಿಸುವ ಬುದ್ಧಿ ಶಕ್ತಿ ಲಭಿಸಿತ್ತು.

ತನ್ನ ಆರನೇ ವಯಸ್ಸಿನಲ್ಲಿ ಇರುವಾಗಲೇ ಮೈಸೂರು ವಿಶ್ವವಿದ್ಯಾಲಯದಲ್ಲಿ ತಮ್ಮ ಬುದ್ಧಿಶಕ್ತಿಗೆ ಮೀರಿದಂತಹ ಅಂಕ ಗಣಿತದ ಲೆಕ್ಕವನ್ನು ಪರಿಹರಿಸಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಬೆರಗಾಗುವಂತೆ ಮಾಡಿದ್ದರು. ಶಕುಂತಲಾ ದೇವಿ ಹೆಚ್ಚು ಕಲಿತವರು ಅಲ್ಲ ಆದರೂ ಸಹ ಆಕೆಯ ಬುದ್ಧಿ ಶಕ್ತಿ ಮಾತ್ರ ಅಸಾಧಾರಣ ಗಣಿತವನ್ನು ಪರಿಹರಿಸುವಂತೆ ಪರಿಣಿತಿಯನ್ನು ಹೊಂದಿತ್ತು. 1964 ರಲ್ಲಿ ಸಮಯದಲ್ಲಿ ಶಕುಂತಲಾದೇವಿ ತನ್ನ ತಂದೆಯ ಜೊತೆಗೆ ಲಂಡನ್ನಿಗೆ ಬಂದು 1950 ರವರೆಗೆ ಯುರೋಪಿನ ಹಲವು ರಾಷ್ಟ್ರಗಳನ್ನು ಸುತ್ತಿ ತಮ್ಮ ವಿಶೇಷ ಗಣಿತ ಕಲಿಯಲು ಹಲವಾರು ಪ್ರಾಜ್ಞರ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪ್ರದರ್ಶನ ಮಾಡಿದರು. 1954 ರಲ್ಲಿ ಅಂತರಾಷ್ಟ್ರೀಯ ನ್ಯೂಸ್ ಏಜೆನ್ಸಿ ಆದ ಬಿಬಿಸಿ ಇವರನ್ನು ಗುರುತಿಸಿ ಇವರಲ್ಲಿ ಇರುವಂತಹ ಅಗಾಧ ಕಲೆಯನ್ನು ಜಗತ್ತಿಗೆ ತೋರಿ ಮೊಟ್ಟಮೊದಲ ಬಾರಿಗೆ ಮಾನವ ಕಂಪ್ಯೂಟರ್ ಎಂಬ ಹೆಸರಿನಿಂದ ಕರೆದಿತ್ತು.

1972 ರಲ್ಲೀ ಶಕುಂತಲಾದೇವಿಯವರು ಬೃಹತ್ ಅಂಕೆಗಳ 23 ರೂಟ್ ಅನ್ನು ಬಿಡಿಸುವ ಮೂಲಕ ಸರಿಯಾದ ಉತ್ತರ ನೀಡಿದ್ದರು. ಅಷ್ಟು ಕ್ಲಿಷ್ಟಕರವಾದ ಪ್ರಶ್ನೆಗೆ ಕೇವಲ ಐವತ್ತು ಸೆಕೆಂಡ್ ನಲ್ಲಿ ಸರಿಯಾದ ಉತ್ತರವನ್ನು ನೀಡಿದ್ದರು. 1101 ಸುಪರ್ಕಾಂಪ್ಯೂಟರ್ ಸಹ ಶಕುಂತಲಾದೇವಿಯವರು ನೀಡಿದ ಸರಿಯಾದ ಉತ್ತರವನ್ನು ನೀಡಿ ಇವರ ಉತ್ತರ ಸರಿ ಅನ್ನೋದನ್ನು ದೃಢೀಕರಿಸಿತು.1980 ರ ಜೂನ್ ನಲ್ಲಿ ಲಂಡನ ಇಂಪಿರಿಯಲ್ ಕಾಲೇಜಿನಲ್ಲಿ 13 ಅಂಕಿಗಳ ಎರಡು ಬೃಹತ್ ನಂಬರ್ ಗಳನ್ನು ಗುಣಿಸಿ ಕೇವಲ 20 ಸೆಕೆಂಡುಗಳಲ್ಲಿ ಸರಿಯಾದ ಉತ್ತರವನ್ನು ನೀಡಿದ್ದರು. ಈ ಮೂಲಕ ಇವರು ನೂತನ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

1976 ರ ಹೊತ್ತಿಗೆ ಅಮೆರಿಕಾದ ನ್ಯೂಯಾರ್ಕ್ ನಲ್ಲಿದ್ದ ಶಕುಂತಲಾದೇವಿಯವರು ಈ ಅಸಂಖ್ಯಾತ ಗಣಿತ ಜ್ಞಾನವನ್ನು ಗುರುತಿಸಿದ ಕ್ಯಾಲಿಫೋರ್ನಿಯ ವಿಶ್ವ ವಿದ್ಯಾಲಯದ ಸೈಕಾಲಜಿಸ್ಟ್ ಆಗಿದ್ದ ಆರ್ಪರ್ ಜನ್ಸನ್ ಶಕುಂತಲಾ ದೇವಿ ಅವರನ್ನು ಭೇಟಿ ಮಾಡಿ ಅವರಿಂದ ಕೆಲವು ಕ್ಲಿಷ್ಟಕರ ಪ್ರಶ್ನೆಗಳಿಗೆ ಉತ್ತರವನ್ನು ಪಡೆದರು. ಶಕುಂತಲಾದೇವಿಯವರು ಎಷ್ಟೇ ಕಷ್ಟದ ಪ್ರಶ್ನೆ ಆಗಿದ್ದರೂ ಅದನ್ನು ಮನಸ್ಸಲ್ಲಿ ಲೆಕ್ಕಹಾಕಿ ಉತ್ತರವನ್ನು ನೀಡುತ್ತಿದ್ದರು. ಕಂಪ್ಯೂಟರ್ ಉತ್ತರಕ್ಕೆ ಇವರನ್ನು ಹೋಲಿಕೆ ಮಾಡಿದರೆ ಕಂಪ್ಯೂಟರ್ ಗಿಂತಲೂ ಬಹಳ ವೇಗವಾಗಿ ಉತ್ತರವನ್ನು ನೀಡುತ್ತಿದ್ದರು. ಇವರು 1964 ರಲ್ಲಿ ಕೋಲ್ಕತಾ ಮೂಲದ ಪಾರಿತೋಷ್ ಬ್ಯಾನರ್ಜಿ ಎಂಬ ಐಎಎಸ್ ಅಧಿಕಾರಿಯನ್ನು ವಿವಾಹವಾಗಿದ್ದರು. ಇವರ ವೈವಾಹಿಕ ಜೀವನ ಅಷ್ಟೊಂದು ಯಶಸ್ವಿ ಆಗಿರದ ಕಾರಣ 1978 ರಲ್ಲಿ ಕೆಲವು ವೈಯಕ್ತಿಕ ಕಾರಣಗಳಿಂದ ವಿವಾಹ ಮುರಿದುಬಿದ್ದಿತ್ತು. ಶಕುಂತಲಾ ದೇವಿ ಅಸಾಧಾರಣ ಗಣಿತಜ್ಞ ಮಾತ್ರವಲ್ಲದೆ ಪ್ರಸಿದ್ಧ ಸಾಹಿತ್ಯ ಕೂಡ ಹೌದು. 1972 ರಲ್ಲಿ ಇವರು ಬರೆದ “ದ ವರ್ಲ್ಡ್ ಆಫ್ ಹೋಮೋಸೆಕ್ಸುಯಲ್” ಎಂಬ ಭಾರತದ ಮೊಟ್ಟ ಮೊದಲ ಸಲಿಂಗಿಗಳ ಕುರಿತಾದ ಪುಸ್ತಕವು ಭಾರತದಲ್ಲಿ ಬಹಳ ಸುದ್ದಿ ಆಗಿದ್ದಲ್ಲದೇ ಅನೇಕ ಟೀಕೆಗಳಿಗೂ ಸಹ ಒಳಗಾಗಿತ್ತು.

ಶಕುಂತಲಾದೇವಿಯವರು ತನ್ನ ವೈಯಕ್ತಿಕ ಜೀವನದ ಬದುಕು ಈ ಕೃತಿಯನ್ನು ಬರೆಯಲು ಪ್ರೇರೇಪಣೆ ಎಂದು ಹೇಳಿದರು. ಇದು ಹಲವಾರು ಕಾಲೇಜ್ ಅಕಾಡೆಮಿಗಳಲ್ಲಿ ಕೂಡ ಪ್ರಮುಖ ಅಧ್ಯಯನದ ಭಾಗವಾಗಿ ಆಯ್ಕೆಯಾಗಿತ್ತು. ಇದನ್ನು ಅಂಕಗಣಿತದ ಹಲವಾರು ಸರಳ ಸೂತ್ರಗಳ ಬಗ್ಗೆ , ನಂಬರ್ ಗಳ ಬಗ್ಗೆ ಹಾಗೂ ಮ್ಯಾಜಿಕ್ ನಂಬರ್ ಗಳ ಬಗ್ಗೆ ಶಕುಂತಲಾ ದೇವಿ ಹಲವಾರು ಕಿರು ಹೊತ್ತಿಗೆಗಳನ್ನು ರಚಿಸಿದ್ದಾರೆ. ಸಂಖ್ಯಾಶಾಸ್ತ್ರ ಹಾಗೂ ಜ್ಯೋತಿಷ್ಯದ ಬಗ್ಗೆಯೂ ಕೂಡ ಇವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ತನ್ನನ್ನು ಮಾನವ ಕಂಪ್ಯೂಟರ್ ಎಂದು ಕರೆಯುವ ಅದರ ಬಗ್ಗೆ ವಿವರಣೆ ನೀಡಿದ ಶಕುಂತಲಾದೇವಿ ಕಂಪ್ಯೂಟರ್ ಗಿಂತಲೂ ಶಕ್ತಿಯುತವಾದದ್ದು ಹಾಗೂ ಅಸಂಖ್ಯಾತ ಸಮಸ್ಯೆಗಳನ್ನು ಬಗೆಹರಿಸಬಲ್ಲದು ಮಾನವನ ಮೆದುಳು ಆಗಿರುವುದರಿಂದ ಬೇರೆ ಯಾವ ಮಾನವನಿರ್ಮಿತ ಉಪಕರಣಗಳಿಗೂ ಇದರ ಹೋಲಿಕೆ ಸಲ್ಲದು ಎಂದು ಇವರು ಅಭಿಪ್ರಾಯಪಟ್ಟಿದ್ದಾರೆ.

By

Leave a Reply

Your email address will not be published. Required fields are marked *