ತುಟಿಗಳ ಮೇಲಿನ ಕೂದಲು ಒಂದು ಸಲ ಹೋದ್ರೆ ಮತ್ತೆ ಬರೋದಿಲ್ಲ

0 11

ತುಟಿಗಳ ಮೇಲ್ಭಾಗದಲ್ಲಿ ಇರುವಂತಹ ಕೂದಲನ್ನು ಸ್ವಲ್ಪವೂ ಉರಿ, ನೋವು ಇಲ್ಲದೆಯೇ ಹೇಗೆ ತೆಗೆದುಹಾಕುವುದು ಮತ್ತು ಇನ್ನೊಮ್ಮೆ ಕೂದಲು ಬೆಳೆಯದಂತೆ ಹೇಗೆ ತಡೆಯುವುದು ಎನ್ನುವುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ತುಟಿಗಳ ಮೇಲ್ಭಾಗದಲ್ಲಿ ಅಂದರೆ ಅಪ್ಪರ್ ಲಿಪ್ಸ್ ಮೇಲೆ ಪಾರ್ಲರ್ ಗಳಲ್ಲಿ ತ್ರೇಡ್ ಬಳಸಿದರೂ ಅಥವಾ ವಾಕ್ಸಿಂಗ್ ಮಾಡಿಸಿದರೂ ಸಹ ಈ ಭಾಗದಲ್ಲಿ ಒಂದೇ ವಾರದಲ್ಲಿ ಮತ್ತೆ ಕೂದಲು ಬೆಳವಣಿಗೆ ಕಂಡುಬರುತ್ತದೆ. ಆದರೆ ಈ ಒಂದು ಮೇತಡ್ ಬಳಸುವುದರಿಂದ ಕೂದಲು ಆಳದಿಂದಲೇ ಹೊರಗೆ ಬರುವುದು ಹಾಗೂ ಮತ್ತೆಂದು ಕೂದಲು ಬರುವುದಿಲ್ಲ. ಇದನ್ನ ಮಾಡೋಕೆ ಬೇಕಿರುವುದು, ಒಂದು ಬೌಲ್ ಗೆ 3 ಚಮಚ ಗೋಧಿ ಹಿಟ್ಟು, ಅರ್ಧ ಚಮಚ ಕಡಲೆ ಹಿಟ್ಟು, ಎರಡರಿಂದ ಮೂರು ಚಮಚ ರೋಸ್ ವಾಟರ್, ಎರಡರಿಂದ ಮೂರು ಹನಿ ಕೊಬ್ಬರಿ ಎಣ್ಣೆ ಹಾಕಿ, ಬೇಕಿದ್ದಲ್ಲಿ ಹಾಲು ಅಥವಾ ನೀರು ಸೇರಿಸಿ ಸ್ವಲ್ಪ ಗಟ್ಟಿಯಾಗಿಯೇ ಪೇಸ್ಟ್ ಮಾಡಿಕೊಂಡು ಇದನ್ನು ಅಪ್ಪರ್ ಲಿಪ್ಸ್ ಗೆ ಹಚ್ಚಿ ಪೂರ್ತಿಯಾಗಿ ಒಣಗಲು ಬಿಡಬೇಕು. 20 ರಿಂದ 30 ನಿಮಿಷಗಳ ನಂತರ ಪೂರ್ತಿಯಾಗಿ ಒಣಗಿದ ಮೇಲೆ ಇದನ್ನು ಕೂದಲಿನ ವಿರುದ್ಧ ದಿಕ್ಕಿನಲ್ಲಿ ತೆಗೆಯಬೇಕು. ಇದರಿಂದ ಕೂದಲು ಬುಡದಿಂದಲೇ ಹೊರಗೆ ಬರುವುದು.

ಈ ಒಂದು ಪ್ಯಾಕ್ ಅನ್ನು ಬಳಸುವುದರಿಂದ ಅಪರ್ ಲಿಪ್ಸ್ ಮೇಲೆ ಇರುವಂತಹ ಕೂದಲು ಬುಡಸಮೇತ ಕಿತ್ತು ಬರುವುದು ಅಷ್ಟೇ ಅಲ್ಲದೇ ಮತ್ತೆಂದೂ ಕೂದಲ ಬೆಳವಣಿಗೆ ಆಗುವುದಿಲ್ಲ. ಇದನ್ನು ಮೂರು ಬಾರಿ ಬಳಸಿದರೆ ಅಪ್ಪರ್ ಲಿಪ್ಸ್ ಮೇಲಿನ ಕೂದಲುಗಳು ಮತ್ತೆ ಹುಟ್ಟುವುದಿಲ್ಲ. ನಿಮಗೆ ಇಷ್ಟವಾದ್ರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಉಪಯೋಗವನ್ನು ಪಡೆದುಕೊಳ್ಳಲಿ. ಒಂದು ಲೈಕ್ ಹಾಗೂ ಷೇರ್ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ

Leave A Reply

Your email address will not be published.