ಮಗ ಕೇಂದ್ರ ಸಚಿವ ಆದ್ರೂ ಕೂಡ ತಂದೆ ತಾಯಿ ಇನ್ನೂ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ, ಯಾರು ಗೊತ್ತಾ ಆ ಮಂತ್ರಿ.

0 20,527

Union Minister: ನಮ್ಮಲ್ಲಿ ಕೆಲವರು ಕೇವಲ ಗ್ರಾಮ ಪಂಚಾಯಿತಿ ಸದಸ್ಯರು ಆಗಿದ್ರೂ ಕೂಡ ಅವರ ಮನೆಯವರು ಅವರ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲು ಬೇಕಾಗುವಂತಹ ಎಲ್ಲಾ ಕೆಲಸಗಳನ್ನು ಕೂಡ ಮಾಡಲು ಸಿದ್ಧರಾಗಿ ನಿಲ್ಲುತ್ತಾರೆ. ಸಮಾಜದಲ್ಲಿ ಕೂಡ ತಮ್ಮನ್ನು ತಾವು ಬೇರೆಯವರಿಗಿಂತ ವಿಭಿನ್ನರು ಎಂಬುದಾಗಿ ಬಿಂಬಿಸಿಕೊಳ್ಳುತ್ತಾರೆ. ಆದರೆ ಇನ್ನೊಬ್ಬರು ಕೇಂದ್ರ ಮಂತ್ರಿ ಆಗಿದ್ದರೂ ಕೂಡ ಅವರ ತಂದೆ ತಾಯಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಹೌದು ನಾವು ಮಾತನಾಡುತ್ತಿರುವುದು ಕೇಂದ್ರ ಸಚಿವರಾಗಿರುವಂತಹ ತಮಿಳುನಾಡಿನ ಮೂಲದ ಎಲ್ ಮುರುಗನ್ ಅವರ ಬಗ್ಗೆ. ಅವರು ತಮ್ಮ ತಂದೆ ತಾಯಿಗೆ ನನ್ನ ಜೊತೆಗೆ ಬಂದು ಚೆನ್ನೈನಲ್ಲಿ ಚೆನ್ನಾಗಿ ಇರಿ ಎಂಬುದಾಗಿ ಕೇಳಿಕೊಂಡರು ಕೂಡ ಅವರ ತಂದೆ ತಾಯಿ ನಿನ್ನ ಅಧಿಕಾರವನ್ನು ನಮ್ಮ ಸುಖದ ಸುಪ್ಪತ್ತಿಗೆಯನ್ನು ಮಾಡಿಕೊಳ್ಳಲು ನಾವು ಸಿದ್ದರಿಲ್ಲ ಎಂಬುದಾಗಿ ಹೇಳಿ ಊರಿನಲ್ಲಿಯೇ ಬೇರೆಯವರ ಜಮೀನಿನಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇನ್ನು ಎಲ್ ಮುರುಗನ್ ಅವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

L murugan tamilnaadu

ಚಿಕ್ಕವಯಸ್ಸಿನಿಂದಲೂ ಕೂಡ ಎಲ್ ಮುರುಗನ್ ರವರು ತಮಿಳುನಾಡಿನಲ್ಲಿ ABVP RSS ಹಾಗು ಬಿಜೆಪಿಯ ಪರವಾಗಿ ಹೊಲವನ್ನು ಹೊಂದಿದ್ದರು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸ್ಥಾನಮಾನ ಅಷ್ಟೇನೂ ಇರಲಿಲ್ಲ ಆದರೆ ಇತ್ತೀಚಿನ ವರ್ಷಗಳಲ್ಲಿ ಸ್ವಲ್ಪ ಮಟ್ಟಿಗೆ ಬಲವಾಗಿದೆ.

ಸಾಕಷ್ಟು ವರ್ಷಗಳಿಂದ ತಮಿಳುನಾಡಿನ ಬಿಜೆಪಿಯಲ್ಲಿ ಪ್ರಮುಖ ಮುಖಂಡರಾಗಿ ಗುರುತಿಸಿಕೊಂಡಿರುವ ಎಲ್ ಮುರುಗನ್ ರವರು ಹಲವಾರು ಪಕ್ಷಗಳಿಂದ ಆಫರ್ ಬಂದಿದ್ದರು ಕೂಡ ಪಕ್ಷ ನಿಷ್ಠೆಯನ್ನು ತೊರೆದಿರಲಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಇವರ ಪಕ್ಷ ನಿಷ್ಠೆಯನ್ನು ಗುರುತಿಸಿ ಮೀನುಗಾರಿಕೆಯ ರಾಜ್ಯ ಖಾತೆ ಸಚಿವ ಸ್ಥಾನವನ್ನು ನೀಡಲಾಗಿದೆ.

ಮಗ ತಮಿಳುನಾಡಿನ ರಾಜ್ಯ ಬಿಜೆಪಿ ಅಧ್ಯಕ್ಷರಾದಾಗಲೂ ಹಾಗೂ ಕೇಂದ್ರ ಸಚಿವರಾದಾಗಲೂ ಕೂಡ ಅವರ ತಂದೆ ತಾಯಿ ಇಬ್ಬರು ಕೂಡ ತಾವು ಹೇಗೆ ಮೊದಲಿನಿಂದ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಅದೇ ರೀತಿಯ ಸ್ವಾಭಿಮಾನ ಜೀವನವನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ..4 ಬಾರಿ ಮುಖ್ಯಮಂತ್ರಿ ಆಗಿದ್ರೂ ಕೂಡ ಇವರ ಬಳಿ ಇರೋದು ಕೇವಲ 5,000 ಮಾತ್ರ ನಮ್ಮ ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಇವರು.

ಮಂತ್ರಿಗಳ ಹೆಸರು ಹೇಳಿಕೊಂಡು ಅವರ ಕುಟುಂಬಸ್ಥರು ಸಾಕಷ್ಟು ಹಗರಣಗಳನ್ನು ಮಾಡುವ ಹೊತ್ತಿನಲ್ಲಿ ಇಲ್ಲೊಬ್ಬ ಕೇಂದ್ರ ಸಚಿವರ ತಂದೆ ತಾಯಿ ಆಗಿದ್ದರೂ ಕೂಡ ಅವರ ತಂದೆ ತಾಯಿ ಇಬ್ಬರು ಬಡತನದಲ್ಲಿದ್ದರು ಕೂಡ ಸ್ವಾಭಿಮಾನ ಜೀವನವನ್ನೇ ನಡೆಸುತ್ತಿದ್ದಾರೆ. ನಿಜಕ್ಕೂ ಇವರಿಗೆ ಸಲ್ಯೂಟ್ ಹೊಡೆಯಲೇ ಬೇಕು.

Leave A Reply

Your email address will not be published.