4 ಬಾರಿ ಮುಖ್ಯಮಂತ್ರಿ ಆಗಿದ್ರೂ ಕೂಡ ಇವರ ಬಳಿ ಇರೋದು ಕೇವಲ 5,000 ಮಾತ್ರ ನಮ್ಮ ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಇವರು.

News

indian poorest chifminister: ಇಂದಿನ ರಾಜಕೀಯ ಹೇಗಾಗಿ ಬಿಟ್ಟಿದೆ ಅಂದರೆ ಹಣ ಹಾಕಿ ಹಣ ಮಾಡುವಂತಹ ವ್ಯವಹಾರ ಆಗಿದೆ ಎಂದರು ಕೂಡ ತಪ್ಪಾಗಲಾರದು. ಅದರ ನಡುವೆ ಕೂಡ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದರೂ ಕೂಡ ಯಾವುದೇ ಹಣವನ್ನು ಮಾಡದೆ ಆಸ್ತಿಯನ್ನು ಮಾಡಿಕೊಳ್ಳದೆ ಕೊನೆಯಲ್ಲಿ ಅವರ ಬಳಿ ಇದ್ದಿದ್ದೆ ಕೇವಲ ಐದು ಸಾವಿರ ರೂಪಾಯಿ ಎಂದರೆ ಪ್ರತಿಯೊಬ್ಬರೂ ಕೂಡ ನಂಬಲು ಸಾಧ್ಯವಾಗದಂತಹ ಮಾತು ಎನ್ನಬಹುದಾಗಿದೆ. ಹೇಗಿದ್ದರೂ ಕೂಡ ನೀವು ಇದನ್ನು ನಂಬಲೇಬೇಕು ಯಾಕೆಂದರೆ ಇದು ನಿಜವಾದ ವಿಚಾರ.

ಹೌದು ನಾವು ಮಾತನಾಡುತ್ತಿರುವುದು ತ್ರಿಪುರ ರಾಜ್ಯದ ನಾಲ್ಕು ಬಾರಿ ಅಂದರೆ ಒಟ್ಟಾರೆಯಾಗಿ ಮುಖ್ಯಮಂತ್ರಿ ಆಗಿ 20 ವರ್ಷ ಆಳಿದ ಮಾಣಿಕ್ ಸರ್ಕಾರ್ ಅವರ ಬಗ್ಗೆ ಮಾತನಾಡಲು ಹೊರಟಿರುವುದು. ಮಾಣಿಕ್ ಸರ್ಕಾರ ಅವರು ಅತ್ಯಂತ ಯುವಕನಾಗಿರುವಾಗಲೇ ಕಾಲೇಜು ಚುನಾವಣೆಯಲ್ಲಿ ನಾಯಕನಾಗಿ ಕಂಡುಬಂದು ಕೇವಲ 31ನೆ ವಯಸ್ಸಿಗೆ ಶಾಸಕರಾಗಿ ಕಾಣಿಸಿಕೊಳ್ಳುತ್ತಾರೆ. ಸಿಪಿಐ ಪಕ್ಷದ ನಾಯಕರಾಗಿರುವ ಇವರು ರಾಜಕಾರಣದಲ್ಲಿ ತಮ್ಮದೇ ಆದಂತಹ ಇತಿಹಾಸವನ್ನು ಹೊಂದಿದ್ದಾರೆ ಎಂದರು ಕೂಡ ತಪ್ಪಾಗಲಾರದು.

1998 ಮೊದಲ ಬಾರಿಗೆ ಮಾಡಿ ಸರ್ಕಾರ ಅವರು ತ್ರಿಪುರ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ ಆಗುತ್ತಾರೆ. ಅದಾದ ನಂತರ ಮತ್ತೆ ಅವರು ರಾಜ್ಯ ರಾಜಕಾರಣದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ಸತತ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಜನರ ಮೆಚ್ಚಿನ ನಾಯಕನಾಗಿ ಆಯ್ಕೆಯಾಗುತ್ತಾರೆ. 1998ರಿಂದ 2018ರ ವರೆಗೂ ಕೂಡ ಸತತವಾಗಿ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿರುತ್ತಾರೆ. ಅಷ್ಟರ ಮಟ್ಟಿಗೆ ತ್ರಿಪುರ ರಾಜ್ಯದಲ್ಲಿ ಅವರ ಜನಪ್ರಿಯತೆ ದೊಡ್ಡ ಮಟ್ಟದಲ್ಲಿ ಹರಡಿತ್ತು.

ಮುಖ್ಯಮಂತ್ರಿ ಆಗಿ ಹೊರಬಂದ ನಂತರ ಸರ್ಕಾರ ಕೊಟ್ಟಿದ್ದ ನಿವಾಸದಿಂದ ಹೊರಬಂದು ತಾತನ ಗುಡಿಸಲಿನಂತಿದ್ದ ಹಳೆಯ ಮನೆಯಲ್ಲಿ ಅವರು ಹಾಗೂ ಅವರ ಹೆಂಡತಿ ವಾಸವಿರುತ್ತಾರೆ. ಕೈಯಲ್ಲಿ ಎರಡುವರೆ ಸಾವಿರ ರೂಪಾಯಿ ಹಾಗೂ ಅಕೌಂಟ್ನಲ್ಲಿ ಎರಡುವರೆ ಸಾವಿರ ಒಟ್ಟಾಗಿ 5000 ಹಣ ಇತ್ತಷ್ಟೆ. ಕಾಡು ಆಸ್ತಿ ಏನು ಕೂಡ ಅವರಲ್ಲಿ ಇರಲಿಲ್ಲ ಅಷ್ಟರ ಮಟ್ಟಿಗೆ ಪ್ರಾಮಾಣಿಕ ಹಾಗೂ ಪಾರದರ್ಶಕ ರಾಜಕೀಯವನ್ನು ಅವರು ತಮ್ಮ ರಾಜಕೀಯ ಜೀವನದಲ್ಲಿ ನಡೆಸಿದ್ದರು. ಮಾಣಿಕ್ ಸರ್ಕಾರ್ ನಿಜಕ್ಕೂ ಕೂಡ ಒಬ್ಬ ಆದರ್ಶ ರಾಜಕೀಯ ನಾಯಕ ಎಂದರೂ ಕೂಡ ತಪ್ಪಾಗಲ್ಲ.

Leave a Reply

Your email address will not be published. Required fields are marked *