ಪ್ರಧಾನಿ ಮೋದಿ ಅವರ ಉಜ್ವಲ ಯೋಜನೆಯ ಲಾಭಗಳೇನು, ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿದೆ ಮಾಹಿತಿ

0 1

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉಜ್ವಲ 2.0 (Pradhan Mantri Ujjwala Yojana-PMUY) ಯೋಜನೆಯನ್ನು ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ವಿಡಿಯೊ ಸಂವಾದ ಮೂಲಕ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಎಲ್‌ಪಿಜಿ ಸಂಪರ್ಕಗಳನ್ನು ನೀಡಿದ್ದು ಉಜ್ವಲ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದಾರೆ, ಯೋಜನೆಯ ಮೊದಲ ಹಂತದಲ್ಲಿ 1,47,43,862 ಎಲ್‌ಪಿಜಿ ಸಂಪರ್ಕಗಳನ್ನು ರಾಜ್ಯದ ಬಡ ಕುಟುಂಬಗಳಿಗೆ ಒದಗಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಉಜ್ವಲ ಯೋಜನೆಯ ಮೊದಲ ಹಂತದಲ್ಲಿ ಹೊರಗುಳಿದ ಕುಟುಂಬಗಳು ಎರಡನೇ ಹಂತದಲ್ಲಿ ಪ್ರಯೋಜನ ಪಡೆಯುತ್ತವೆ ಎಂದು ಅವರು ಹೇಳಿದ್ದಾರೆ. ಉಜ್ವಲ ಯೋಜನೆ 2.0 ಇದರ ಲಾಭಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಎನ್ನುವುದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕುಟುಂಬದ ಯೋಜನಾ ವೆಚ್ಚ ಕಡಿಮೆ ಮಾಡುವುದು, ಮಹಿಳೆಯರ ಆರೋಗ್ಯ ಸುಧಾರಣೆಗೆ ಒತ್ತು ನೀಡುವ ಉದ್ದೇಶದಿಂದ ಜಾರಿಗೆ ಬಂದ ಯಶಸ್ವಿ ಯೋಜನೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ. ಈ ಯೋಜನೆಯಡಿ ಕುಟುಂಬಗಳಿಗೆ ಉಚಿತವಾಗಿ ಎಲ್‌ ಪಿ ಜಿ ಸಂಪರ್ಕವನ್ನು ನೀಡಲಾಗುತ್ತದೆ. 2016ರಲ್ಲಿ ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉಜ್ವಲ 2.0 (Pradhan Mantri Ujjwala Yojana-PMUY) ಯೋಜನೆಯನ್ನು ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ವಿಡಿಯೊ ಸಂವಾದ ಮೂಲಕ ಚಾಲನೆ ನೀಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಎಲ್‌ಪಿಜಿ ಸಂಪರ್ಕಗಳನ್ನು ನೀಡಿದ್ದು ಉಜ್ವಲ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದಾರೆ, ಯೋಜನೆಯ ಮೊದಲ ಹಂತದಲ್ಲಿ 1,47,43,862 ಎಲ್‌ಪಿಜಿ ಸಂಪರ್ಕಗಳನ್ನು ರಾಜ್ಯದ ಬಡ ಕುಟುಂಬಗಳಿಗೆ ಒದಗಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಉಜ್ವಲ ಯೋಜನೆಯ ಮೊದಲ ಹಂತದಲ್ಲಿ ಹೊರಗುಳಿದ ಕುಟುಂಬಗಳು ಎರಡನೇ ಹಂತದಲ್ಲಿ ಪ್ರಯೋಜನ ಪಡೆಯುತ್ತವೆ ಎಂದು ಅವರು ಹೇಳಿದ್ದಾರೆ.

ಮೊದಲಿಗೆ ನಾವು ಈ ಉಜ್ವಲ ಯೋಜನೆ ಎಂದರೆ ಏನು? ಅನ್ನೋದನ್ನ ತಿಳಿದುಕೊಳ್ಳೋಣ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು (PMUY) 2016 ರಲ್ಲಿ ಪ್ರಾರಂಭಿಸಲಾಯಿತು. ಮೊದಲ ಹಂತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಐದು ಕೋಟಿ ಮಹಿಳಾ ಸದಸ್ಯರಿಗೆ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ.

ಈ ಯೋಜನೆಯನ್ನು 2018 ರ ಏಪ್ರಿಲ್‌ನಲ್ಲಿ ವಿಸ್ತರಿಸಲಾಗಿದ್ದು , ಇನ್ನೂ ಏಳು ವರ್ಗಗಳ (SC/ST, PMAY, AAY,  ಹಿಂದುಳಿದ ವರ್ಗಗಳು, ಚಹಾ ತೋಟ, ಅರಣ್ಯ ನಿವಾಸಿಗಳು, ದ್ವೀಪಗಳು) ಮಹಿಳಾ ಫಲಾನುಭವಿಗಳನ್ನು ಒಳಗೊಂಡಿದೆ. ಎರಡನೇ ಹಂತದಲ್ಲಿ ಗುರಿಯನ್ನು ಎಂಟು ಕೋಟಿ LPG ಸಂಪರ್ಕಗಳಿಗೆ ವಿಸ್ತರಿಸಲಾಯಿತು.

ಏನಿದು ಉಜ್ವಲ ಯೋಜನೆ? ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು (PMUY) 2016 ರಲ್ಲಿ ಪ್ರಾರಂಭಿಸಲಾಯಿತು. ಮೊದಲ ಹಂತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಐದು ಕೋಟಿ ಮಹಿಳಾ ಸದಸ್ಯರಿಗೆ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ. ಈ ಯೋಜನೆಯನ್ನು 2018 ರ ಏಪ್ರಿಲ್‌ನಲ್ಲಿ ವಿಸ್ತರಿಸಲಾಗಿದ್ದು , ಇನ್ನೂ ಏಳು ವರ್ಗಗಳ (SC/ST, PMAY, AAY,  ಹಿಂದುಳಿದ ವರ್ಗಗಳು, ಚಹಾ ತೋಟ, ಅರಣ್ಯ ನಿವಾಸಿಗಳು, ದ್ವೀಪಗಳು) ಮಹಿಳಾ ಫಲಾನುಭವಿಗಳನ್ನು ಒಳಗೊಂಡಿದೆ. ಎರಡನೇ ಹಂತದಲ್ಲಿ ಗುರಿಯನ್ನು ಎಂಟು ಕೋಟಿ LPG ಸಂಪರ್ಕಗಳಿಗೆ ವಿಸ್ತರಿಸಲಾಯಿತು.

ಏನಿದು ಉಜ್ವಲ 2.0? ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ನೋಡೋಣ. ಉಜ್ವಲ 2.0 ಅಡಿಯಲ್ಲಿ ನರೇಂದ್ರ ಮೋದಿ ಸರ್ಕಾರವು ಈ ಆರ್ಥಿಕ ವರ್ಷದಲ್ಲಿ ಸುಮಾರು 1 ಕೋಟಿ ಗ್ಯಾಸ್ ಸಂಪರ್ಕಗಳನ್ನು ಬಡವರಿಗೆ ಉಚಿತ ರೀಫಿಲ್ ಮತ್ತು ಸ್ಟೌವ್ ಜೊತೆಗೆ ವಿತರಿಸುತ್ತದೆ. ಈ ವರ್ಷದ ವಾರ್ಷಿಕ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22 ರಲ್ಲಿ 1 ಕೋಟಿ ಹೊಸ ಫಲಾನುಭವಿಗಳಿಗೆ ಯೋಜನೆಯನ್ನು ವಿಸ್ತರಿಸುವುದಾಗಿ ಘೋಷಿಸಿದ್ದರು.

ಈ ಯೋಜನೆಯಡಿ 8 ಕೋಟಿ ಫಲಾನುಭವಿಗಳು ಈಗಾಗಲೇ ಪ್ರಯೋಜನ ಪಡೆದಿದ್ದಾರೆ. ಹಾಗಾದರೆ ಇದನ್ನು ನಾವು ಹೊಂದಿದರೆ ನಮಗೆ ಸಿಗುವಂತಹ ಲಾಭಗಳೇನು? ಎಂದು ನೋಡುವುದಾದರೆ, ಪ್ರಸ್ತುತ ಯೋಜನೆಯಡಿ ಠೇವಣಿ ರಹಿತ ಎಲ್‌ಪಿಜಿ ಸಂಪರ್ಕದ ಹೊರತಾಗಿ, 800 ರೂಪಾಯಿಗೂ ಹೆಚ್ಚು ಮೌಲ್ಯದ ಉಚಿತ ರೀಫಿಲ್ ಮತ್ತು ಫಲಾನುಭವಿಗಳಿಗೆ ಉಚಿತ ಸ್ಟೌ ಒದಗಿಸಲಾಗುವುದು ಎಂದು ಈ ಬೆಳವಣಿಗೆ ಬಗ್ಗೆ ತಿಳಿದಿರುವ ಅಧಿಕಾರಿಗಳು ಹೇಳಿದ್ದಾರೆ.

ಈ ಮೊದಲು ಉಜ್ವಲ 1.0 ಅಡಿಯಲ್ಲಿ, ಠೇವಣಿ ರಹಿತ LPG ಸಂಪರ್ಕವನ್ನು 1600 ರೂಪಾಯಿ ಹಣಕಾಸಿನ ನೆರವಿನೊಂದಿಗೆ ನೀಡಲಾಗುತ್ತಿತ್ತು. ಅಲ್ಲಿ ಫಲಾನುಭವಿಗಳು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಂದ ಹಾಟ್ ಪ್ಲೇಟ್ (ಸ್ಟವ್) ಮತ್ತು ಮೊದಲ ರೀಫಿಲ್ ಶೂನ್ಯ ಬಡ್ಡಿ ಸಾಲದ ಆಯ್ಕೆಯನ್ನು ಹೊಂದಿದ್ದರು.

ಉಜ್ವಲ ಯೋಜನೆಗಾಗಿರುವ ಅರ್ಹತೆ ಏನು? ಎಂದು ನೋಡುವುದಾದರೆ, ಪಿಎಂಯುವೈ (PMUY) ಉಜ್ವಲ 2.0 ಗಾಗಿ ದಾಖಲಾತಿ ಪ್ರಕ್ರಿಯೆಗೆ ಕನಿಷ್ಠ ಪೇಪರ್‌ವರ್ಕ್ ಅಗತ್ಯವಿದೆ. ಇದಲ್ಲದೆ ವಲಸಿಗರು ಈ ಯೋಜನೆಯ  ಲಾಭ ಪಡೆಯಲು ಪಡಿತರ ಚೀಟಿ ಅಥವಾ ವಿಳಾಸ ಪುರಾವೆ ಸಲ್ಲಿಸುವ ಅಗತ್ಯವಿಲ್ಲ. ಅವರಿಗೆ ಬೇಕಾಗಿರುವುದು ಕುಟುಂಬ ಮತ್ತು ವಿಳಾಸದ ಪುರಾವೆಗಾಗಿ ಸ್ವಯಂ ಘೋಷಣೆ. ಯೋಜನೆಗೆ ಕೆಲವು ಮಾನದಂಡಗಳು ಹೀಗಿವೆ: ಅರ್ಜಿದಾರರು ಮಹಿಳೆಯೇ ಆಗಿರಬೇಕು. ಮಹಿಳೆಯ ವಯಸ್ಸು 18ವರ್ಷ ದಾಟಿರಬೇಕು. ಬಿಪಿಎಲ್ (ಬಡತನ ರೇಖೆಗಿಂತ ಕೆಳಗೆ) ಕುಟುಂಬದವರಾಗಿದ್ದು, ಬಿಪಿಎಲ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಹೊಂದಿರಬೇಕು.

ಅರ್ಜಿದಾರರ ಕುಟುಂಬದ ಯಾವೊಬ್ಬ ಸದಸ್ಯರ ಹೆಸರಿನಲ್ಲಿಯೂ ಎಲ್ ಪಿಜಿ ಕನೆಕ್ಷನ್ ಇರಬಾರದು. ಹಾಗಾದರೆ ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಎಂದು ನೋಡುವುದಾದರೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಲಾಭ ಪಡೆಯಲು ಎಲ್‌ಪಿಜಿ ವಿತರಣಾ ಏಜೆನ್ಸಿಯಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಮೂಲಕ ಆಫ್‌ಲೈನ್ ಮೋಡ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೋಡ್‌ನಲ್ಲಿ ಅರ್ಜಿ ಸಲ್ಲಿಸುವುದಾದರೆ ಅರ್ಜಿದಾರರು ಅಧಿಕೃತ ವೆಬ್‌ಸೈಟ್ pmujjwalayojana.com ಗೆ ಹೋಗಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಈ ಫಾರ್ಮ್ ಅನ್ನು ಹತ್ತಿರದ ಎಲ್‌ಪಿಜಿ ಕೇಂದ್ರದಲ್ಲಿ ಸಲ್ಲಿಸಬೇಕು.

Leave A Reply

Your email address will not be published.