Ugadi Horoscope: ಈ ಯುಗಾದಿಯ ಹೊಸವರ್ಷದಲ್ಲಿ ಯಾವ ರಾಶಿಯವರಿಗಿದೆ ರಾಜಯೋಗ?

Astrology

Ugadi Horoscope on 2023: ಯುಗಯುಗಾದಿ ಕಳೆದರೂ ಯುಗಾದಿ (Ugadi) ಮರಳಿ ಬರುತಿದೆ ಎನ್ನುವ ಸಾಲಿನಂತೆ, ಯಾರಿರಲಿ ಇಲ್ಲದಿರಲಿ ಯುಗಾದಿಯ ಹಬ್ಬ ಬಂದೇ ಬರುತ್ತದೆ. ಇದೇ ಮಾರ್ಚ್ 21ರ ಅಮವಾಸ್ಯೆ ಕಳೆದ ಮರುದಿನದಿಂದ ಶೋಭಾಕೃತ ಎನ್ನುವ ಹೊಸ ಸಂವತ್ಸರವು ಆರಂಭವಾಗಲಿದೆ. ಈ ಸಂವತ್ಸರದ ಪ್ರಾರಂಭದ ಜೊತೆಗೆ ಗ್ರಹಗತಿಗಳು ಬದಲಾಗಿ ಹೊಸ ಜೀವನವನ್ನು ನಾವೆಲ್ಲರು ಬರ ಮಾಡಿಕೊಳ್ಳಲಿದ್ದೇವೆ. ಹಾಗಿದ್ದರೆ ಬರಲಿರುವ ಈ ಶೋಭಾಕೃತ ಸಂವತ್ಸರದಲ್ಲಿ ರಾಶಿಯ ವಿಶೇಷತೆಗಳು ಹೇಗಿರಲಿವೆ ಎಂದು‌ ತಿಳಿಯೋಣವೆ?

ಶುಭಕೃತ ನಾಮ ಸಂವತ್ಸರವು ಕಳೆದು ಶೋಭಾಕೃತ ಸಂವತ್ಸರದ ಆರಂಭವಾಗುತ್ತಿದೆ. ಈ ಸಂವತ್ಸರದಲ್ಲಿ ರಾಜನಾಗಿ ಬುಧನು ಇರಲಿದ್ದಾನೆ. ಹಾಗೆ ಮಂತ್ರಿಯಾಗಿ ಶುಕ್ರನು, ಸಸ್ಯಾಧಿಪತಿಯಾಗಿ ಚಂದ್ರನು ಇರಲಿದ್ದಾರೆ. ಧಾನ್ಯಾಧಿಪತಿಯಾಗಿ ಶನಿಯು, ಅರ್ಕಾಧಿಪತಿಯಾಗಿ ಗುರುವು ಮತ್ತು ಪಶುನಾಯಕನಾಗಿ ಬಲರಾಮನು ಇರಲಿದ್ದಾರೆ. ಮೇಘಾಧಿಪನಾಗಿ ಗುರುವು, ರಸಾಧಿಪನಾಗಿ ಬುಧನು ಹಾಗೂ ನಿರಸಾಧಿಪತಿಯಾಗಿ ಚಂದ್ರನು ಇರಲಿದ್ದಾರೆ.

ಈ ಶೋಭಾಕೃತ ಸಂವತ್ಸರದಲ್ಲಿ ಬುಧನು ರಾಜನಾಗಿರುವುದರಿಂದ ಗಾಳಿಯು ತನ್ನ ವೇಗವನ್ನು ಹೆಚ್ಚಿಸಿಕೊಳ್ಳಲಿದೆ. ಮಳೆಯು ಕಡಿಮೆಯಾಗುವ ಸಾಧ್ಯತೆಗಳಿವೆ. ಪ್ರಜೆಗಳಲ್ಲಿ ರೋಗದ ವಾತಾವರಣವು ಹೆಚ್ಚಲಿದೆ. ರಾಜಕೀಯದಲ್ಲಿ ವಿಪರೀತ ಜಗಳಗಳು, ದೂಷಣೆಗಳು ನಡೆಯಲಿವೆ. ಹಸಿರು ಬೆಳೆಗಳು ಈ ಬಾರಿ ಚೆನ್ನಾಗಿ ಬರಲಿದೆ. ಹೈನುಗಾರಿಕೆ ಅಥವಾ ಹಾಲಿಗೆ ಸಂಬಂಧಿಸಿದ ಉದ್ಯೋಗಗಳು ಹಾಗೂ ಉತ್ಪನ್ನಗಳ ಲಾಭಾಂಶ ಹೆಚ್ಚಾಗುತ್ತದೆ. ಲೇಖಕರಿಗೆ ಈ ಸಂವತ್ಸರದಲ್ಲಿ ಅತಿ ಹೆಚ್ಚು ಮನ್ನಣೆ ದೊರೆಯಲಿದ್ದು, ಅವರು ಹೆಚ್ಚು ಜನಪ್ರಿಯತೆಯನ್ನು ಗಳಿಸಲಿದ್ದಾರೆ.

ಇದನ್ನೂ ಓದಿ..ವೃಶ್ಚಿಕ ರಾಶಿಯವರು ಈ ವಿಷಯದಲ್ಲಿ ಸ್ವಲ್ಪ ಎಚ್ಚರವಹಿಸಿದರೆ, ನಿಮ್ಮ ಜೀವನ ಹೇಗಿರತ್ತೆ ಗೊತ್ತಾ..

ಹಾಗಿದ್ದರೆ ಈ ಸಂವತ್ಸರದಲ್ಲಿ ಯಾವ ರಾಶಿಯವರಿಗೆ ಲಾಭ ಹಾಗೂ ಯಾವ ರಾಶಿಯವರು ನಷ್ಟವನ್ನು ಅನುಭವಿಸಲಿದ್ದಾರೆ ಎನ್ನುವುದು ತಿಳಿಯೋಣ. ಮೇಷ ಹಾಗೂ ವೃಶ್ಚಿಕ ರಾಶಿಯವರಿಗೆ ಈ ಸಂವತ್ಸರದಲ್ಲಿ ಲಾಭ ಐದಂಶವಿದ್ದರೆ, ನಷ್ಟ ಐದಂಶವಿದೆ. ಆರೋಗ್ಯ ಒಂದಂಶವಿದ್ದೇ ಅನಾರೋಗ್ಯ ಕೂಡ ಒಂದು ಅಂಶವಿದ್ದು ಎರಡು ಸಮಪ್ರಮಾಣದಲ್ಲಿ ದೊರೆಯಲಿವೆ. ರಾಜಪೂಜೆ 4ಇದ್ದು, 2ರಾಜ ಕೋಪವಿದೆ. ಸಣ್ಣಪುಟ್ಟ ತೊಂದರೆಗಳು ಈ ರಾಶಿಯಲ್ಲಿ ಸಾಮಾನ್ಯವಾಗಿ ಇರಲಿವೆ. ಮೇಷ ಹಾಗೂ ವೃಶ್ಚಿಕ ರಾಶಿಯವರಿಗೆ ಈ ವರ್ಷವು ಸುಖದ ವರ್ಷವಾಗಿದೆ.

ತುಲಾ ಹಾಗೂ ವೃಷಭ ರಾಶಿಯವರಿಗೆ ಆದಾಯ 14 ಇದ್ದರೆ, ವ್ಯಯವು 11ಇರಲಿದೆ. ಆರೋಗ್ಯವು 2ಇದ್ದು, ಅನಾರೋಗ್ಯ 5 ಇರಲಿದೆ. ಮೂರಂಶ ರಾಜಪೂಜೆಯಿದ್ದರೆ, ಐದಂಶ ರಾಜಕೋಪವಿರುತ್ತದೆ. ಇದರಿಂದ ಈ ಎರಡು ರಾಶಿಯವರಿಗೆ ಅವಮಾನಗಳನ್ನು ಅನುಭವಿಸುವ ಸಂದರ್ಭಗಳು ಎದುರಾಗಲಿವೆ. ಸುಖದುಃಖಗಳು ಈ ವರ್ಷ ಸಮಪ್ರಮಾಣದಲ್ಲಿ ಇರಲಿವೆ.

ಮಿಥುನ ಹಾಗೂ ಕನ್ಯಾರಾಶಿಯವರಿಗೆ ಹೊಸ ಸಂವತ್ಸರದಲ್ಲಿ ಎರಡಂಶ ಆದಾಯವಿದ್ದರೆ ಹನ್ನೊಂದು ವ್ಯಯವಾಗಲಿದೆ. ಇದರಿಂದ ಈ ರಾಶಿಯವರು ಸಾಲಬಾಧೆಗೆ ತುತ್ತಾಗಲಿದ್ದಾರೆ. ಆದಷ್ಟು ಮೊದಲಿನಿಂದ ಹಿಡಿತ ಮಾಡುವುದು ಒಳಿತು. ಆರೋಗ್ಯ ಸೊನ್ನೆಯಾಗಿದ್ದು, ಅನಾರೋಗ್ಯ ಆರು ಪ್ರಮಾಣದಲ್ಲಿ ಕಾಡಲಿದೆ. ರಾಜಪೂಜೆಯು ಸೊನ್ನೆಯಾಗಿದ್ದು, ರಾಜಕೋಪವು ಹೆಚ್ಚಾಗಿದೆ. ಸುಖ ಹಾಗೂ ದುಃಖ ಸಮಪ್ರಮಾಣದಲ್ಲಿ ಇದ್ದು, ಈ ವರ್ಷವಿಡಿ ಮಿಥುನ ಹಾಗೂ ಕನ್ಯಾರಾಶಿಯವರಿಗೆ ಕಷ್ಟಕಾಲ ಎನ್ನಬಹುದು.

ಕರ್ಕಾಟಕ ರಾಶಿಗೆ ಈ ವರ್ಷದಲ್ಲಿ 2-2 ರ ಪ್ರಮಾಣದಲ್ಲಿ ಆಯ ವ್ಯಯಗಳು ಇರಲಿವೆ. ನಾಲ್ಕು ಆರೋಗ್ಯವಿದ್ದರೆ, ಆರು ಅನಾರೋಗ್ಯ ಇದೆ. ಐದು ರಾಜಪೂಜೆಯಿದ್ದರೆ, ಆರು ರಾಜಕೋಪ ಇರಲಿದೆ. ಸುಖ ದುಃಖವು ಸಹ ಈ ವರ್ಷ ಸಮಪ್ರಮಾಣದಲ್ಲಿ ದೊರೆಯಲಿದೆ. ಇನ್ನು ಸಿಂಹರಾಶಿಗೆ ಆಯ 14 ಇದ್ದರೆ, ವ್ಯಯವು 2 ಇದೆ. ಸಿಂಹರಾಶಿಯವರಿಗೆ ಈ ವರ್ಷವು ಅತ್ಯಧಿಕ ಆದಾಯವನ್ನು ತರುವಂತಹ ವರ್ಷವಾಗಿದೆ. ಖರ್ಚುಗಳು ಬಹಳವೇ ಕಡಿಮೆಯಾಗಲಿದೆ. ಆರೋಗ್ಯ 2ರಷ್ಟಿದ್ದರೆ ಅನಾರೋಗ್ಯವು 4 ಭಾಗದಷ್ಟು ಇರಲಿದೆ. ರಾಜನ ಕೋಪ 1ರಷ್ಟಿದ್ದರೆ 4ರಷ್ಟು ಆಶೀರ್ವಾದ ದೊರೆಯಲಿದೆ. ಸುಖ ಆರರಷ್ಟು ಇದ್ದರೆ, ದುಃಖದ ಪರಿಣಾಮ ಮೂರರಷ್ಟು ಇರಲಿದೆ‌.

ಇದನ್ನೂ ಓದಿ..ಈ ವರ್ಷದ ಯುಗಾದಿ ಯಾವ ರಾಶಿಗೆ ಬೇವು, ಯಾರಿಗೆ ಬೆಲ್ಲ.. ತಿಳಿದುಕೊಳ್ಳಿ

ಧನಸ್ಸು ಮತ್ತು ಮೀನ ರಾಶಿಯವರಿಗೆ ಈ ವರ್ಷದಲ್ಲಿ 8 ಆದಾಯ 11ವ್ಯಯ, 6 ಆರೋಗ್ಯ 6ಅನಾರೋಗ್ಯ ಸರಿಪ್ರಮಾಣ ಇರಲಿದೆ. 0 ರಾಜಕೋಪ 6 ರಾಜಪೂಜೆ, ಸುಖ 6 ಹಾಗೂ ದುಃಖ 3 ಇರುತ್ತದೆ. ಮಕರ ಮತ್ತು ಕುಂಭ ರಾಶಿಯವರಿಗೆ 11 ಆದಾಯ 5 ವ್ಯಯ ಇರಲಿದೆ. 0ಆರೋಗ್ಯ ಹಾಗೂ 4 ಅನಾರೋಗ್ಯ ಉಂಟಾಗುತ್ತವೆ. 4 ರಾಜಕೋಪ 4 ರಾಜಪೂಜೆ ಸಮಪ್ರಮಾಣದಲ್ಲಿ ಇದ್ದರೆ, 6 ಸುಖ ಮತ್ತು 6 ದುಃಖ ಇರುತ್ತದೆ. ಇದು ಎಲ್ಲ ರಾಶಿಗಳ ಪಂಚಾಗದ‌ ಶ್ರವಣವಾಗಿದೆ.

Leave a Reply

Your email address will not be published. Required fields are marked *