Scorpio: ವೃಶ್ಚಿಕ ರಾಶಿಯವರು ಈ ವಿಷಯದಲ್ಲಿ ಸ್ವಲ್ಪ ಎಚ್ಚರವಹಿಸಿದರೆ, ನಿಮ್ಮ ಜೀವನ ಹೇಗಿರತ್ತೆ ಗೊತ್ತಾ..

0 203

Scorpio Horoscope on today: ಶೋಭಾಕೃತ ಎನ್ನುವ ನಾಮದ ಹೊಸ ಸಂವತ್ಸರದ ಆಗಮನವಾಗುತ್ತಿದೆ. ನಮ್ಮ (Sanatana Dharma) ಸನಾತನ ಧರ್ಮದಲ್ಲಿ ಯುಗಾದಿಗೆ (Ugadi) ವಿಶೇಷ ರೀತಿಯ ಸ್ಥಾನಮಾನಗಳು ಇದೆ. ಹೊಸ ಸಂವತ್ಸರದ ಆರಂಭದಿಂದ ಎಲ್ಲ ರಾಶಿಗಳ ಗ್ರಹಗತಿಗಳು ಸಹ ಬದಲಾವಣೆ ಕಾಣುತ್ತವೆ. ಗ್ರಹಗಳು ನಿರಂತರ ಚಲನೆಯನ್ನು ಹೊಂದಿರುತ್ತವೆ. ವರ್ಷದ ಎಲ್ಲ ಋತುವಿನಲ್ಲಿ ಇವುಗಳ ಚಲನೆ ಒಂದೇ ಸಮವಾಗಿರುವುದಿಲ್ಲ. ಅದಕ್ಕಾಗಿ ಕಾಲ ಕಾಲಕ್ಕೆ ಜಾತಕಗಳನ್ನು ನೋಡಿ ಗ್ರಹಫಲಗಳನ್ನು ಅರಿತುಕೊಂಡು ಕೆಲಸಗಳನ್ನು ಪ್ರಾರಂಭಿಸುವ ಪದ್ಧತಿ ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿದೆ. ಹೊಸ ಸಂವತ್ಸರದ ಶುಭಾರಂಭದ ಜೊತೆಯಲ್ಲಿ ವೃಶ್ಚಿಕ (Scorpio) ರಾಶಿಯ ವರ್ಷ ಭವಿಷ್ಯವು ಹೇಗಿರಲಿದೆ ಎನ್ನುವುದನ್ನು ತಿಳಿಯೋಣ.

ವೃಶ್ಚಿಕ ರಾಶಿಯಲ್ಲಿ (Scorpio) ಜನಿಸಿದವರು ಬಹಳಷ್ಟು ಸ್ವಾಭಿಮಾನಿಗಳಾಗಿದ್ದು, ಆಸೆ ಪಟ್ಟಿದ್ದನ್ನು ಪಡೆಯುವ ಹಟವನ್ನು ಹೊಂದಿದವರಾಗಿರುತ್ತಾರೆ. ಇದರಿಂದಾಗಿ ಈ ಸಂವತ್ಸರವು ಇವರಿಗೆ ಅನೇಕ ಕಷ್ಟಗಳನ್ನು ತಂದೊಡ್ಡಲಿದೆ. ವೃಷಭರಾಶಿಗೆ ವೃಶ್ಚಿಕ ರಾಶಿಯ ಶುಕ್ರನು 6 ಏಪ್ರಿಲ್’ನಂದು ಪ್ರವೇಶ ಮಾಡುತ್ತಾನೆ. ಇದೇ ಏಪ್ರಿಲ್ ತಿಂಗಳ 14ನೇ ತಾರೀಕಿನಂದು ರವಿಯು ಮೇಷ ರಾಶಿಗೆ ಬರಲಿದ್ದಾನೆ. ಹಾಗೆ 22ನೇ ತಾರೀಕಿನಂದು ಗುರುವು ಸಹ ಮೇಷ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಇವು ವೃಶ್ಚಿಕ ರಾಶಿಯ ಗ್ರಹ ಸಂಚಾರಗಳಾಗಿದ್ದು ಇದರಿಂದಾಗಿ ಯಾವ ಫಲಗಳು ಸಿಗುತ್ತದೆ ಎಂದು ನೋಡೊಣ.

ಏಪ್ರಿಲ್ ತಿಂಗಳಿನಲ್ಲಿ ಪ್ರಮುಖವಾಗಿ ವೃಶ್ಚಿಕ ರಾಶಿಯಲ್ಲಿ (Scorpio) ಗುರುವಿನ ಸ್ಥಾನ ಬದಲಾಗಲಿದ್ದು ಇದರಿಂದಾಗಿ ಒಂದಷ್ಟು ಶುಭ ಫಲಗಳನ್ನು ಈ ತಿಂಗಳಿನಲ್ಲಿ ನಿರೀಕ್ಷಿಸಬಹುದು. ರವಿಯು ಐದು ಹಾಗೂ ಆರನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಇದು ರವಿಯ ಉಚ್ಛಕ್ಷೇತ್ರವಾದರು ಸಹ ಷಷ್ಟ ಸ್ಥಾನವು ವೃಶ್ಚಿಕ ರಾಶಿಗೆ ಅಷ್ಟೊಂದು ಉತ್ತಮಫಲಗಳನ್ನು ನೀಡಲಾರದು. ಇನ್ನೇನು ಕೈಗೆ ಸಿಗಬೇಕು ಎನ್ನುವಷ್ಟರಲ್ಲಿ ನಿಮ್ಮ ವಸ್ತುವು ಜಾರಿ ಹೋಗಬಹುದು. ಆಗಬೇಕಾದ ಕೆಲಸಗಳು ಆಗದೆ ಹೋಗಬಹುದು.

ಇದನ್ನೂ ಓದಿ.Libra Astrology: ತುಲಾ ರಾಶಿಯವರಿಗೆ ಒಂದು ಸ್ತ್ರೀಯಿಂದ ನಿಮ್ಮ ಲೈಫ್ ಟರ್ನಿಂಗ್ ಪಾಯಿಂಟ್ ಆಗಲಿದೆ

ಕುಜನು ವೃಶ್ಚಿಕ ರಾಶಿಯಲ್ಲಿ ಎಂಟನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದು, ಅನಾರೋಗ್ಯಗಳನ್ನು ತರುತ್ತಾನೆ. ದೇಹಕ್ಕೆ ಪೆಟ್ಟುಗಳು ಬೀಳುವ ಸಾಧ್ಯತೆಯಿದ್ದು, ಆದಷ್ಟು ವಾಹನ ಸವಾರರು ಎಚ್ಚರಿಕೆಯಿಂದ ಇರಿ. ಮಾನಸಿಕವಾಗಿ ಸಹ ಈ ಸಮಯವು ಜರ್ಜರ ಸ್ಥಿತಿಯನ್ನು ತಂದೊಡ್ಡಲಿದ್ದು ಜಾಗರೂಕತೆಯಿಂದ ಇರುವುದು ಅನಿವಾರ್ಯವಾಗುತ್ತದೆ. ಇಲ್ಲವಾದಲ್ಲಿ ವೃಥಾ ಅಪವಾದಕ್ಕೆ ಗುರಿಯಾಗಬೇಕಾದಿತು. ಇನ್ನು ಬುಧನು ಆರನೇ ಮನೆಯಲ್ಲಿ ಸಂಚರಿಸಿದ್ದು ಬಹಳ ಶುಭವು ಅಲ್ಲದ, ಕೆಟ್ಟದ್ದನ್ನು ಮಾಡದ ಸಮಸ್ಥಿತಿಯನ್ನು ತರಲಿದ್ದಾನೆ. ಆಗಬೇಕಾದ ಕೆಲಸಗಳಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಗಳೆ ಹೆಚ್ಚಿವೆ.

ಕೆಲವೊಮ್ಮೆ ರಾಹುವಿನಿಂದಾಗಿ ದೀಢಿರ್ ಬದಲಾವಣೆಗಳು ಉಂಟಾಗುತ್ತವೆ. ಲಾಭ ಬಂದರೂ ಅಥವಾ ನಷ್ಟವಾದರೂ ಹೆಚ್ಚು ಎನ್ನಿಸುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ರಾಹು ಹಾಗೂ ಬುಧನ ಸಂಕ್ರಮಣದಿಂದಾಗಿ ಶುಭವೋ ಅಶುಭವೋ ಒಟ್ಟಿನಲ್ಲಿ ನಿಮ್ಮ ಜೀವನ ಈ ತಿಂಗಳಿನಲ್ಲಿ ಬದಲಾಗುತ್ತದೆ. ಪಂಚಮದಿಂದ ಗುರುವು ಆರನೇ ಮನೆಗೆ ಬರುತ್ತಿರುವುದರಿಂದ ಗುರು ಬಲವು ಸಹ ಕಳೆದುಕೊಳ್ಳುತ್ತಿರಿ. ಇದರಿಂದಾಗಿ ಶುಭವು ಘಟಿಸುವುದು ನಿಧಾನವಾಗುತ್ತದೆ.

ಇದನ್ನೂ ಓದಿ..ಈ ವರ್ಷದ ಯುಗಾದಿ ಯಾವ ರಾಶಿಗೆ ಬೇವು, ಯಾರಿಗೆ ಬೆಲ್ಲ.. ತಿಳಿದುಕೊಳ್ಳಿ

ಶುಕ್ರ ಸ್ಥಾನವು ಬದಲಾಗಲಿದ್ದು, ಒಂದಷ್ಟು ಒಳ್ಳೆಯ ಫಲಗಳನ್ನು ಶುಕ್ರನಿಂದ ನಿರೀಕ್ಷಿಸಬಹುದು. ಮದುವೆಯ ಕಾರ್ಯಗಳು ನಿಶ್ಚಯವಾಗಲಿದ್ದು, ಮನೆಯಲ್ಲಿ ಮಂಗಳಕಾರ್ಯಕ್ಕೆ ಮುನ್ನುಡಿ ಬರೆಯುತ್ತಿರಿ. ಹಣಕಾಸಿನ ವ್ಯವಸ್ಥೆಯಲ್ಲಿ ಒಳಿತಾಗಲಿದೆ. ಶನಿಯು ನಾಲ್ಕನೆ ಮನೆಯಲ್ಲಿ ಇರುವುದರಿಂದ ಮೂಳೆ ಸಂಬಂಧಿತ ಖಾಯಿಲೆಗಳಲ್ಲಿ ಕೊಂಚ ಬಳಲಲಿದ್ದಿರಿ. ಅನಾನುಕೂಲ ಉಂಟಾಗಲಿದೆ. ರಾಹು ಆರನೇ ಮನೆಯಲ್ಲಿ ಇರುವುದರಿಂದ ಭೂ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಶುಭವಾಗುತ್ತದೆ. ಇದು ವೃಶ್ಚಿಕ ರಾಶಿಯವರ ವರ್ಷ ಭವಿಷ್ಯವಾಗಿದೆ.

Leave A Reply

Your email address will not be published.