ಪಂಚಮುಖಿ ಆಂಜನೇಯ (Panchmukhi Anjaneya) ಎಂದರೆ ಹನುಮಂತನ ಐದು ವಿಶೇಷ ರೂಪಗಳು ಈ ಪಂಚಮುಖಿ ಆಂಜನೇಯನನ್ನು ಪೂಜಿಸುವುದರಿಂದ ಉಂಟಾಗುವ ಪ್ರಯೋಜನಗಳು ಹಾಗೂ ಪೂಜೆಯ ವಿಧಾನಗಳನ್ನು ಇಲ್ಲಿ ನಾವು ತಿಳಿಯೋಣ.

ಕಲಿಯುಗದಲ್ಲಿ ಅತ್ಯಂತ ಹೆಚ್ಚಿಗೆ ಪೂಜಿಸಲ್ಪಡುವ ದೇವರೆಂದರೆ ಅದು ಆಂಜನೇಯ (Sri Rama) ಶ್ರೀ ರಾಮನ ಮಹಾನ್ ಭಕ್ತನಾದ ಈತನನ್ನು ಪೂಜಿಸುವುದರಿಂದ ಸರ್ವ ಸಂಕಷ್ಟಗಳು ಪರಿಹಾರ ಗೊಳ್ಳುತ್ತವೆ ಈ ಪಂಚಮುಖಿಯ (Panchmukhi Anjaneya) ಹನುಮಂತನು ತನ್ನ ಭಕ್ತರ ಎಲ್ಲಾ ಸಂಕಷ್ಟಗಳನ್ನು ದೂರ ಮಾಡಿ ಅವರಲ್ಲಿ ಸಮೃದ್ಧಿಯನ್ನು ತರುತ್ತಾನೆ ಈತ ಬುದ್ಧಿವಂತಿಕೆ ಮತ್ತು ಜ್ಞಾನದ ಪ್ರತಿರೂಪವಾಗಿದ್ದಾನೆ.

ಒಂದು ದಂಥ ಕಥೆಯ ಪ್ರಕಾರ ಹೇಳುವುದಾದರೆ ಶ್ರೀರಾಮ ಮತ್ತು ರಾವಣನ ನಡುವೆ ಘೋರ ಯುದ್ಧ ನಡೆಯುತ್ತಿರುವಾಗ ರಾವಣನು ತನ್ನ ಸೋಲಿನಿಂದ ತಪ್ಪಿಸಿಕೊಳ್ಳಲು ತನ್ನ ಸಹೋದರನಾದ ಅಹಿರಾವಣನ ಸಹಾಯವನ್ನು ಕೋರುತ್ತಾನೆ ಈ ಅಹಿರಾವಣನು ತನ್ನ ವಿಶೇಷ ತಂತ್ರದ ಮೂಲಕ ಶ್ರೀ ರಾಮನ ಸೈನ್ಯವನ್ನು ನಿದ್ರೆಗೆ ಜಾರುವಂತೆ ಮಾಡುತ್ತಾನೆ ರಾಮ ಲಕ್ಷ್ಮಣರನ್ನು ಪಾತಾಳ ಲೋಕಕ್ಕೆ ಕರೆದೊಯ್ಯುತ್ತಾನೆ ಇದೇ ಸಂದರ್ಭದಲ್ಲಿ ಆಂಜನೇಯನು ಪಂಚಮುಖಿ ಅವತಾರವನ್ನ ಧರಿಸಿದ್ದನಂತೆ.

ಆಂಜನೇಯನು ಪಂಚಮುಖಿ ಅವತಾರದಲ್ಲಿ ಪಾತಾಳ ಲೋಕಕ್ಕೆ ಹೋಗಿ ರಾವಣನ ಸಹೋದರನಾದ ಅಹಿರಾವಣನನ್ನು ಕೊಂದು ರಾಮ ಲಕ್ಷ್ಮಣರನ್ನು ಅಲ್ಲಿಂದ ಕರೆ ತಂದನು ಎಂದು ಹೇಳಲಾಗುತ್ತದೆ ಇದೇ ಕಾರಣದಿಂದ ಆಂಜನೇಯನನ್ನು ಪಂಚಮುಖಿ ಹನುಮಂತ ಎಂದು ಕರೆಯುತ್ತಾರೆ.

ಪಂಚಮುಖಿ ಹನುಮಂತನ ಐದು ಬೇರೆ ಬೇರೆ ಮುಖಗಳು ವಿವಿಧ ಪ್ರಾಮುಖ್ಯತೆಯನ್ನು ಹೊಂದಿವೆ, ಇದರಲ್ಲಿ ಹನುಮಂತನ ಮೊದಲ ಮುಖವು ಕೋತಿಯ ಬಾಯಿಯನ್ನ ಹೊಂದಿರುವ ರೂಪವಾಗಿದೆ ಇದರ ಅರ್ಥ ಈ ರೂಪದಿಂದ ಹನುಮಂತನು ಶತ್ರುಗಳ ವಿರುದ್ಧ ಗೆಲುವನ್ನ ಸಾಧಿಸುತ್ತಾನೆ ಎಂಬುದಾಗಿದೆ.

ಎರಡನೆಯ ಮುಖ ಗರುಡನ ಮುಖವುಳ್ಳದಾಗಿದ್ದು ಈ ರೂಪವು ನಮ್ಮ ಜೀವನದಲ್ಲಿನ ಎಲ್ಲಾ ಕಷ್ಟ ನೋವುಗಳನ್ನು ತೆಗೆದುಹಾಕುತ್ತದೆ ಎಂದು ನಂಬಲಾಗಿದೆ. ಮೂರನೆಯ ರೂಪವು ವರಾಹ ರೂಪವಾಗಿದ್ದು ಇದು ಅಪಾರ ಶಕ್ತಿ ಖ್ಯಾತಿ ಮತ್ತು ದೀರ್ಘಾಯುಷ್ಯವನ್ನು ಜೀವನಕ್ಕೆ ತರುತ್ತದೆ.

ನಾಲ್ಕನೆಯ ರೂಪವು ನರಸಿಂಹ ಅವತಾರವಾಗಿದ್ದು ಈ ಮುಖವು ನಮ್ಮ ಭಯ ಮತ್ತು ಉದ್ವೇಗಗಳನ್ನು ಕೊನೆಗೊಳಿಸುತ್ತದೆ. ಐದನೆಯ ರೂಪವು ಅಶ್ವದ ರೂಪವಾಗಿದ್ದು ಈ ರೂಪವು ವ್ಯಕ್ತಿಯ ಎಲ್ಲಾ ಆಸೆಗಳನ್ನು ಬಹುಬೇಗ ಈಡೇರಿಸುವುದಾಗಿದೆ.

ಪಂಚಮುಖಿ ಆಂಜನೇಯನನ್ನ ಪೂಜಿಸುವುದರಿಂದ ಹಲವಾರು ಪ್ರಯೋಜನಗಳನ್ನು ಕಾಣಬಹುದು ಅವುಗಳೇನೆಂದರೆ ಯಾವುದೇ ರೀತಿಯ ಪರೀಕ್ಷೆ ಅಥವಾ ಸಂದರ್ಶನದಲ್ಲಿ ಯಶಸ್ಸು ಪಡೆಯಲು ಪಂಚಮುಖಿ ಹನುಮಂತನಿಗೆ ಲಡ್ಡುಗಳನ್ನು ಅಥವಾ ದಾಳಿಂಬೆ ಅಥವಾ ಇನ್ನಿತರ ಹಣ್ಣುಗಳನ್ನ ನೈವೇದ್ಯ ಮಾಡಬೇಕು.

ಇದನ್ನೂ ಓದಿ..Ugadi Horoscope: ಈ ಯುಗಾದಿಯ ಹೊಸವರ್ಷದಲ್ಲಿ ಯಾವ ರಾಶಿಯವರಿಗಿದೆ ರಾಜಯೋಗ?

ಮನೆಯಲ್ಲಿ ನಡೆಯುತ್ತಿರುವ ಯಾವುದೇ ರೀತಿಯ ಕಚೇರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಗೆಲುವನ್ನು ಸಾಧಿಸಲು ಪಂಚಮುಖಿ ಹನುಮಂತನಿಗೆ ಪೂಜಿಸಬೇಕು. ಮನೆಯಲ್ಲಿ ವಾಸ್ತು ದೋಷ ಇದ್ದರೆ ಪಂಚಮುಖಿ ಹನುಮಂತನ ವಿಗ್ರಹವನ್ನ ಮನೆಯ ದಿಕ್ಕಿನಲ್ಲಿ ಇಟ್ಟು ಪೂಜಿಸಬೇಕು ಇದರಿಂದ ವಾಸ್ತುದೋಷ ಕೊನೆಗೊಳ್ಳುತ್ತದೆ. ಈ ಪಂಚಮುಖಿ ಹನುಮಂತನ ವಿಗ್ರಹಗಳು ತುಂಬಾ ವಿರಳವಾಗಿದ್ದು ಅದನ್ನು ಪೂಜಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

Leave a Reply

Your email address will not be published. Required fields are marked *