ನಮ್ಮಲ್ಲಿ ಒಂದು ಮಾತಿದೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತು. ಹೌದು ಕೆಲವೊಮ್ಮೆ ಅತಿಯಾದರೆ ಅಮೃತವು ಕೂಡ ವಿಷವಾಗುತ್ತದೆ ಎಂಬ ಮಾತಿದೆ ಆಯುರ್ವೇದದಲ್ಲಿ ಕೆಲವೊಂದು ಅಮೃತದಂತಹ ಔಷಧಿಗಳಿವೆ ಅವುಗಳ ಅತಿಯಾದ ಬಳಕೆ ಜೊತೆಗೆ ತಪ್ಪಾದ ಬಳಕೆಯಿಂದಲೂ ಕೂಡ ಅಮೃತದಂತಹ ಔಷಧ ವಿಷವಾಗುತ್ತದೆ ದೇಹದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ನಿಮಗೆ ಯಾವುದೇ ಒಂದು ವಸ್ತುವಿನ ಬಳಕೆ ತಿಳಿದಿದ್ದರೆ ಅದರ ಬಗ್ಗೆ ಎಚ್ಚರಿಕೆಯೂ ಕೂಡ ತಿಳಿದಿರಬೇಕು. ಇಂದು ನಾವು ನಿಮಗೆ ತುಳಸಿಯನ್ನು ಬಳಸುವಾಗ ನೀವು ಮಾಡಬಹುದಾದಂತಹ ತಪ್ಪುಗಳು ಮತ್ತು ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ತುಳಸಿಯ ಉಪಯುಕ್ತತೆ ಮತ್ತು ಎಚ್ಚರಿಕೆಯ ಬಗ್ಗೆ ಧಾತ್ರಿ ಆಯುರ್ವೇದ ಕೇಂದ್ರ ಶಿರಸಿಯ ಮುಖ್ಯಸ್ಥರಾದ ಡಾಕ್ಟರ್ ವಿನಾಯಕ್ ಹೆಬ್ಬಾರ್ ಅವರು ಕೆಲವು ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದಾರೆ ಅದೇನೆಂದು ನಾವು ನಿಮಗೆ ತಿಳಿಸುತ್ತೇವೆ. ನಮ್ಮ ಸಂಸ್ಕೃತಿಯಲ್ಲಿ ತುಳಸಿಯನ್ನು ತಿನ್ನುವ ರೂಢಿ ಇಲ್ಲ ಅದನ್ನು ನೀರಿಗೆ ಹಾಕಿ ಕುಡಿಯುವ ರೂಢಿ ಇದೆ. ಹಿರಿಯರು ಒಂದು ಮಾತನ್ನು ಹೇಳುತ್ತಾರೆ ಮನೆಯ ಎದುರಿಗೆ ಬೆಳೆದಂತಹ ತುಳಸಿ ಗಿಡಗಳಿಂದ ಬರುವ ಗಾಳಿಯನ್ನು ತೆಗೆದುಕೊಂಡರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು.
ತುಳಸಿ ಎಂಬುದು ದೇವಿ ಸ್ವರೂಪ ದೇವರಿಗೆ ಸಮಾನವಾದಂತಹ ಔಷಧಿ ದೃವ್ಯ ಹಾಗಾಗಿ ತುಳಸಿಯ ಗಾಳಿಯನ್ನ ಸೇವಿಸಬೇಕು ಹಾಗೂ ತುಳಸಿ ನೀರನ್ನು ಕುಡಿಯಬೇಕು. ನಮ್ಮ ಹಿರಿಯರು ತುಳಸಿಯನ್ನು ನೇರವಾಗಿ ತಿನ್ನಬಾರದು ಅದು ಕೇವಲ ಸನ್ಯಾಸಿಗಳಿಗೆ ಮಾತ್ರ ಮಾಮೂಲಿಯಾಗಿ ಎಲ್ಲರೂ ತಿನ್ನಬಾರದು ಎಂದು ಹೇಳುತ್ತಿದ್ದರು. ತುಳಸಿಯನ್ನು ಅತಿಯಾಗಿ ಸೇವನೆ ಮಾಡುವುದರಿಂದಲೂ ಕೆಲವೊಂದು ಸಮಸ್ಯೆಗಳು ಉಂಟಾಗುತ್ತವೆ.
ಈ ಕೊರೋನಾ ಸಮಯದಲ್ಲಿ ಕೆಲವೊಬ್ಬರು ತುಳಸಿ ಕಷಾಯವನ್ನು ಮಾಡಿ ದಿನಪೂರ್ತಿ ಅದನ್ನು ಕುಡಿದು ಕುಡಿದು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡಿದ್ದಾರೆ. ತುಳಸಿ ಅಮೃತಕ್ಕೆ ಸಮಾನವಾಗಿದ್ದು ಅದರಲ್ಲಿ ಯಾವುದೇ ರೀತಿಯ ಸಂದೇಹ ಇಲ್ಲ ಆದರೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ತುಳಸಿಗೆ ಉಷ್ಣ ಮತ್ತು ತೀಕ್ಷ್ಣ ಗುಣಗಳಿವೆ ಈ ಕಾರಣದಿಂದ ತುಳಸಿಯನ್ನು ಅತಿಯಾಗಿ ಬಳಕೆ ಮಾಡುವುದರಿಂದ ಉಷ್ಣದಿಂದ ಆಗುವ ಪರಿಣಾಮ ನಮ್ಮ ದೇಹದ ಮೇಲೆ ಉಂಟಾಗುತ್ತದೆ ಕಣ್ಣು ಉರಿಯಬಹುದು
ಕೆಲವು ಚರ್ಮದ ಸಮಸ್ಯೆಗಳು ಇರಬಹುದು ಚರ್ಮ ಒಣಗಿ ಗುಳ್ಳೆಗಳಾಗಿ ತುರಿಕೆ ಬರುವಂಥದ್ದು ಈ ತರಹದ ಸಮಸ್ಯೆಗಳು ಉಂಟಾಗುತ್ತವೆ ಬಾಯಿ ಹುಣ್ಣಾಗುವುದು ಇರಬಹುದು ಅಥವಾ ಮೂಲವ್ಯಾಧಿಯ ಸಮಸ್ಯೆಗಳುಂಟಾಗಬಹುದು ನಿದ್ದೆ ಸರಿಯಾಗಿ ಬರದಿರಬಹುದು ಈ ರೀತಿಯಾಗಿ ಹಲವಾರು ಸಮಸ್ಯೆಗಳು ತುಳಸಿಯನ್ನು ಅತಿಯಾಗಿ ಬಳಕೆ ಮಾಡುವುದರಿಂದ ಉಂಟಾಗುತ್ತವೆ.
ಕೆಲವರು ತುಳಸಿಯನ್ನು ಬಳಕೆಮಾಡಿ ಎಂದು ಹೇಳುತ್ತಾರೆ ಅದನ್ನ ಹೇಗೆ ಬಳಕೆ ಮಾಡಬೇಕು ಎಂಬುದು ಕೆಲವರ ಪ್ರಶ್ನೆ. ಕೆಲವರು ತುಳಸಿ ರಸವನ್ನು ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ ಹೇಗೆ ತೆಗೆದುಕೊಳ್ಳಬೇಕು ಎಷ್ಟು ದಿನ ತೆಗೆದುಕೊಳ್ಳಬೇಕು ಒಂದು ವಾರ ಅಥವಾ ಹದಿನೈದು ದಿನ ಈ ರೀತಿಯಾಗಿ ಕೇಳುತ್ತಾರೆ ನಿಮ್ಮ ದೇಹದಲ್ಲಿ ಉಷ್ಣದ ಪರಿಣಾಮ ಕಡಿಮೆ ಇದ್ದಲ್ಲಿ ಶೀತ ಪ್ರಕೃತಿ ಕಡಿಮೆಯಿದ್ದಾಗ ನೀವು ತುಳಸಿಯನ್ನು ಸೇವನೆ ಮಾಡಬಹುದು ಆದರೆ ಈಗಾಗಲೇ ನಿಮ್ಮ ದೇಹದಲ್ಲಿ ಉಷ್ಣಪ್ರಕೃತಿ ಇದೆ ಅಥವಾ ಉಷ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೇಹದಲ್ಲಿ ಉಂಟಾಗುತ್ತಿವೆ ಎಂದರೆ ಆ ಸಮಯದಲ್ಲಿ ತುಳಸಿಯ ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕು.
ನೀವು ತುಳಸಿಯನ್ನು ಬಳಸುತ್ತಿದ್ದಿರಿ ಎಂದರೆ ಅದನ್ನ ತೆಗೆದುಕೊಳ್ಳುವ ಪ್ರಮಾಣವು ಮುಖ್ಯವಾಗಿರುತ್ತದೆ ಹಾಗಾದರೆ ಎಷ್ಟು ಪ್ರಮಾಣದ ತುಳಸಿಯನ್ನು ತೆಗೆದುಕೊಳ್ಳಬೇಕು ಎಂದರೆ ಸಾಮಾನ್ಯವಾಗಿ ಒಬ್ಬ ಮನುಷ್ಯ ಚಿಕ್ಕ ಮಕ್ಕಳನ್ನು ಬಿಟ್ಟು ದೊಡ್ಡವರು ಅಂತವರಿಗೆ ತುಳಸಿಯನ್ನು ನಿತ್ಯಸೇವನೆ ಮಾಡಬೇಕು ಎಂದರೆ ನಾಲ್ಕರಿಂದ 5 ಎಲೆಗಳನ್ನು ಹಾಕಿ ಕಷಾಯವನ್ನು ತಯಾರಿಸಿಕೊಳ್ಳಬಹುದು.
ಅದನ್ನು ಬಿಟ್ಟು ಒಬ್ಬರೇ ಎಂಟರಿಂದ ಹತ್ತು ಎಲೆಗಳನ್ನು ಬಳಸಿ ಕಷಾಯವನ್ನು ಮಾಡಿ ಕುಡಿಯುವಂತಿಲ್ಲ. ಹಿಂದೆಲ್ಲಾ ಕುಟುಂಬದಲ್ಲಿ ಹತ್ತರಿಂದ ಹದಿನೈದು ಜನ ಇರುತ್ತಿದ್ದರು ಅವರಿಗೆ ಮಾಡುತ್ತಿದ್ದಂತ ಕಷಾಯದ ಪ್ರಮಾಣವನ್ನು ನೋಡಿ ಈಗಿನವರು ಅಷ್ಟೇ ಪ್ರಮಾಣದಲ್ಲಿ ಕಷಾಯವನ್ನು ಮಾಡಿ ನಾಲ್ಕು ಜನ ಹಂಚಿಕೊಂಡು ಕುಡಿಯುತ್ತಾರೆ ಆಗ ಅಷ್ಟು ಪ್ರಮಾಣದಲ್ಲಿ ಅದನ್ನು ಸೇವಿಸಿದಾಗ ಅದು ದೇಹದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ.
ತುಳಸಿ ಒಂದನ್ನೇ ಅಲ್ಲ ಯಾವುದೇ ದ್ರವ್ಯವನ್ನು ಆದರೂ ಅದನ್ನು ಬಳಸುವಾಗ ಅದರ ಬಗ್ಗೆ ಎಚ್ಚರಿಕೆವಹಿಸಬೇಕು ಆಯುರ್ವೇದದಲ್ಲಿ ಚಿಕ್ಕ ಚಿಕ್ಕ ಔಷಧೀಯ ವಸ್ತುಗಳು ತುಂಬಾ ಪರಿಣಾಮವನ್ನುಂಟು ಮಾಡುತ್ತವೆ. ಯಾವುದೇ ವಸ್ತು ಒಳ್ಳೆಯದಾಗಿದ್ದರೂ ಅದನ್ನು ಬಳಸುವಾಗ ಒಳ್ಳೆಯ ಮಾರ್ಗದಲ್ಲಿ ಬಳಸಿದರೆ ಅದರಿಂದ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಆದರೆ ಸರಿಯಾದ ರೀತಿಯಲ್ಲಿ ಅದನ್ನು ಬಳಸದಿದ್ದಾಗ ಅದು ವಿಷಕಾರಿ ಪರಿಣಾಮಗಳನ್ನು ಉಂಟುಮಾಡಬಹುದು.
ಯಾವುದೇ ಒಂದು ಔಷಧಿಯನ್ನು ಬಳಸುವಾಗ ಅದಕ್ಕೆ ತಕ್ಕದಾದ ಜ್ಞಾನ ಇರುವುದು ಅವಶ್ಯಕ. ನೀವು ಗಿಡಮೂಲಿಕೆಗಳನ್ನು ಔಷಧಿಯಾಗಿ ಬಳಸುತ್ತಿದ್ದಾಗ ಯಾವುದೋ ಒಂದು ಗಿಡಮೂಲಿಕೆ ಬದಲು ಇನ್ಯಾವುದೋ ಗಿಡಮೂಲಿಕೆಯನ್ನು ಬಳಸಿದಾಗ ಅದು ಬೇರೆ ರೀತಿಯಾದ ಪರಿಣಾಮವನ್ನು ಉಂಟುಮಾಡುತ್ತದೆ ಹಾಗಾಗಿ ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಅದನ್ನು ತೆಗೆದುಕೊಳ್ಳುವುದರಿಂದ ಅದು ಒಳ್ಳೆಯ ಪರಿಣಾಮವನ್ನು ನೀಡುತ್ತದೆ.
ನೋಡಿದಿರಲ್ಲ ಸ್ನೇಹಿತರೆ ನಾವು ಯಾವುದೇ ಒಂದು ಔಷಧಿ ವಸ್ತುವನ್ನು ಬಳಸುವಾಗ ಅದರ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದುವುದು ಅವಶ್ಯಕ. ನಾವಿಂದು ನಿಮಗೆ ತುಳಸಿಯ ಬಗ್ಗೆ ತಿಳಿಸಿ ಕೊಟ್ಟಿದ್ದೇವೆ ನೀವು ಕೂಡ ತುಳಸಿಯನ್ನು ಔಷಧಿಯನ್ನಾಗಿ ಬಳಸುವಾಗ ಅದರಿಂದಾಗುವ ಪರಿಣಾಮ ಮತ್ತು ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ಕ್ರಮದಲ್ಲಿ ತುಳಸಿಯನ್ನು ಬೆಳೆಸಿ ಅದರಿಂದ ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಿ
ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430