ತುಲಾ ರಾಶಿಯ ಸಂಜಾತರು ತಾವು ಹುಟ್ಟಿನಿಂದಲೇ ಬಹಳ ಸೌಂದರ್ಯವಂತರಾಗಿದ್ದರೂ ಸಹ ಅವರು ಅಲಂಕಾರ ಪ್ರಿಯರಾಗಿರುತ್ತಾರೆ ತಾವು ದೈವ ಭಕ್ತಿಯುಳ್ಳವರೂ ಅಲ್ಲದೇ ಧರ್ಮ ಕಾರ್ಯಗಳನ್ನು ಮಾಡುವಲ್ಲಿ ಒಂದು ಹೆಜ್ಜೆ ಮುಂದಿಡುವಂತಹವರಾಗಿರುತ್ತೀರಿ ನಿಮ್ಮ ಎತ್ತರ ನಿಮ್ಮ ಆಳ್ತನ ನಿಮ್ಮ ಪ್ರಕಾಶಮಾನವಾದ ಕಣ್ಣುಗಳು ಜನರನ್ನು ತಮ್ಮತ್ತ ಆಕರ್ಷಿಸುವಲ್ಲಿ ಎರಡು ಮಾತಿಲ್ಲ ತಾವು ವ್ಯವಸಾಯವನ್ನು ಇಷ್ಟಪಡುವವರಾಗಿದ್ದು ತಮ್ಮಲ್ಲಿ ಕಲಾವಿದನೊಬ್ಬ ಅಡಗಿರುವುದರಲ್ಲಿ ಸಂಶಯವಿಲ್ಲ ತಾವು ರಾಜಕಾರಣಿಯಾಗಿಯೂ ಸಹ ಉತ್ತಮ ಗೌರವ ಮನ್ನಣೆ ಪ್ರತಿಷ್ಟೆಯನ್ನು ಸಮಾಜದಲ್ಲಿ ಸಂಪಾದಿಸುವವರಾಗಿರುತ್ತಿರಿ

ಅಲ್ಲದೇ ರಾಜಕಾರಣದಲ್ಲಂತು ತಾವು ಮಣ್ಣು ಹಿಡಿದರು ಅದು ಬಂಗಾರವಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ ರಾಜಕೀಯದಲ್ಲಿ ನೈಪುಣ್ಯತೆಯನ್ನು ಪಡೆಯುವವರಾಗಿದ್ದೀರಿ ನೀವು ಯಾವುದಾದರೊಂದು ಕೆಲಸವನ್ನು ಕೈಗೆತ್ತಿಕೊಂಡದ್ದೇ ಆದಲ್ಲಿ ಆ ಕೆಲಸವನ್ನು ಪೂರ್ಣಗೊಳಿಸದೇ ಬಿಡುವ ವ್ಯಕ್ತಿತ್ವ ನಿಮ್ಮದಲ್ಲ ತಾವು ಆಕಸ್ಮಿಕ ನಷ್ಟವನ್ನು ಕಂಡರೂ ಸಹ ನಿಮ್ಮ ಸೋಲುಗಳನ್ನೇ ತಾವು ಗೆಲುವಿನ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಳ್ಳುವಂತಹ ಕಲೆ ನಿಮಗೆ ಜನ್ಮತಃ ಬಂದಿರುತ್ತದೆ ಅಲ್ಲದೇ ಅತ್ಯಂತ ಕೋಪಿಷ್ಠ ಮನುಷ್ಯನಾಗಿಯೂ ಮತ್ತು ಅಷ್ಟೇ ಬೇಗ ತಾಳ್ಮೆಯನ್ನು ವಹಿಸಿ ಎಲ್ಲರಲ್ಲಿಯೂ ಸಮಾಧಾನ ಚಿತ್ತದಿಂದ ಚರ್ಚಿಸುವವರೂ ಆಗಿ ಸಮಾಜದಲ್ಲಿ ಮತ್ತು ವ್ಯಕ್ತಿಗಳ ನಡುವೆ ಪರಸ್ಪರ ಉತ್ತಮ ಬಾಂದವ್ಯವನ್ನು ನೀವು ಹೆಚ್ಚಿಸಿಕೊಳ್ಳುವವರಾಗಿರುತ್ತಿರಿ

ಇನ್ನೂ ವಿವಾಹದ ನಂತರದ ನಿಮ್ಮ ಜೀವನವೂ ಸಹ ಬಹಳ ಸಂತೋಷದಿಂದಲೇ ಕೂಡಿರುತ್ತದೆ ಮತ್ತು ನಿಮ್ಮ ದಾಂಪತ್ಯ ಜೀವನವೂ ಬೇರೆಯವರಿಗೆ ಆದರ್ಶವಾಗಿರುವುದರಲ್ಲಿ ಸಂಶಯವಿಲ್ಲ ಮತ್ತು ನೀವು ಪಡೆಯಲಿರುವ ಸಂಗಾತಿಯೂ ಸಹ ನಿಮ್ಮನ್ನು ಚೆನ್ನಾಗಿ ಅರ್ಥೈಸಿ ನಿಮ್ಮ ಎಲ್ಲ ಕೆಲಸ ಕಾರ್ಯಗಳಲ್ಲಿ ನಿಮ್ಮ ಬೆನ್ನೆಲುಬಾಗಿ ನಿಂತು ನಿಮಗೆ ಸಹಾಯ ಮಾಡುವರು ಅನಾರೋಗ್ಯದ ಸಮಸ್ಯೆಗಳು ನಿಮ್ಮನ್ನು ಎಡೆಬಿಡದೇ ಬಾದಿಸುತ್ತಿರುತ್ತವೆಯಾದರೂ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವಲ್ಲಿ ತಾವು ಯಶಸ್ವಿಯಾಗುವಿರಿ ಮತ್ತು ತಾವು ಉತ್ತಮ ಸಂತಾನವನ್ನು ಹೊಂದುವುವಿರಿ ಮತ್ತು ನಿಮ್ಮ ಸಂತಾನದಿಂದಲೂ ಸಹ ನಿಮಗೆ ಉತ್ತಮ ಸುಖ ಜೀವನ ಪ್ರಾಪ್ತಿಯಾಗುವುದು

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!