ಮುಖದ ಅಂದಕ್ಕೆ ಟೊಮೊಟೊ ಫೇಸ್ ಪ್ಯಾಕ್

0 2

ತ್ವಚೆ ಬೆಳ್ಳಗಾಗಲು ಎಲ್ಲರು ಇಚ್ಚಿಸುತ್ತಾರೆ ಅದ್ರಲ್ಲೂ ಇಂದಿನ ದಿನಗಳಲ್ಲಿ ಯುವತಿಯರು ತಮ್ಮ ತ್ವಚೆಯ ಹೊಳಪನ್ನ ಹೆಚ್ಚಿಸಿಕೊಳ್ಳಲು ಹಲವು ಬಗೆಯ ಕ್ರೀಮ್ಗಳನ್ನ ಬಳಸುತ್ತಾರೆ, ಆದರೆ ಅಂತಹ ಕ್ರೀಮ್ ಗಳಿಂದ ಆಗುವ ಪರಿಣಾಮಗಳಿಗಿಂತ ಅದರಿಂದಾಗುವ ಅಡ್ಡ ಪರಿಣಾಮಗಳೇ ಹೆಚ್ಚು, ಆದ್ದರಿಂದ ಮನೆಯಲ್ಲೇ ಸಿಗುವ ಟಮೊಟೊವನ್ನ ಬಳಸಿ ಹೊಳೆಯುವ ತ್ವಚೆಯನ್ನ ಪಡೆಯುವುದು ಹೇಗೆ ಎಂಬುದು ಇಲ್ಲಿ ತಿಳಿಯೋಣ ಇಷ್ಟ ಆದ್ರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಲು ಮರೆಯದಿರಿ.

ಮೊದಲಿಗೆ ಒಂದು ಬಟ್ಟಲಿನಲ್ಲಿ ಎರಡು ಚಮಚ ಸಕ್ಕರೆ, ಅರ್ಧ ಚಮಚ ನಿಂಬೆ ರಸವನ್ನ ಹಾಕಿ ಚನ್ನಾಗಿ ಮಿಕ್ಸ್ ಮಾಡಬೇಕು, ನಂತರ ಒಂದು ಟಮೊಟೊವನ್ನ ಎರಡು ಭಾಗಗಳಾಗಿ ಕತ್ತರಿಸಿ ಅದಕ್ಕೆ ಮೊದಲು ಮಿಶ್ರಣ ಮಾಡಿದ ಸಕ್ಕರೆ ಹಾಗೂ ನಿಂಬೆರಸದ ಮಿಶ್ರಣವನ್ನ ಹಾಕಿ ನಂತರ ಆ ಟಮೊಟೊವನ್ನ ಮುಖಕ್ಕೆ ಸ್ಕ್ರಬ್ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಮ್ಮ ತ್ವಚೆಯ ಮೇಲಿರುವ ಡೆಡ್ ಸ್ಕಿನ್ ನಿವಾರಣೆಯಾಗಿ ತ್ವಚೆಗೆ ಹೊಳಪು ಸಿಗುತ್ತದೆ, ಹೀಗೆ ಸ್ಕ್ರಬ್ ಮಾಡಿದ ನಂತರ ನೀರಿನ ಸಹಾಯದಿಂದ ಮುಖವನ್ನ ತೊಳೆಯಿರಿ. ಇದಾದ ಬಳಿಕ ಮುಂದೆ ತಿಳಿಸಿರುವ ಹಾಗೆ ಮಾಡಬೇಕಾಗುತ್ತದೆ.

ಮೊದಲು ಒಂದು ಖಾಲಿ ಬಟ್ಟಲಿನಲ್ಲಿ ಎರಡು ಚಮಚ ಅಕ್ಕಿ ಹಿಟ್ಟು, ಎರಡು ಚಮಚ ಟೊಮೊಟೊ ರಸ, ಎರಡು ಚಮಚ ಹಸಿ ಹಾಲು, ಒಂದು ಚಮಚ ನಿಂಬೆ ರಸವನ್ನ ಹಾಕಿ ಚನ್ನಾಗಿ ಕಲಸಬೇಕು. ಹೀಗೆ ತಯಾರಿಸಿದ ಮಿಶ್ರಣವನ್ನ ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷದ ನಂತರ ತಣ್ಣೀರಿನಿಂದ ತೊಳೆದುಕೊಳ್ಳಬೇಕು ಇದರಿಂದ ನಿಮ್ಮ ತ್ವಚೆಯ ಬಣ್ಣ ಬಿಳಿಯಾಗುತ್ತದೆ, ಇದನ್ನ ವಾರಕ್ಕೆ ಎರಡು ಬಾರಿಯಾದರೂ ಬಳಸಿದರೆ ಉತ್ತಮ ಫಲಿತಾಂಶವನ್ನ ಕಾಣಬಹುದು.

Leave A Reply

Your email address will not be published.