ಕನ್ನಡ ಚಿತ್ರರಂಗದ ಟೈಗರ್ ಎಂದೆ ಪ್ರಸಿದ್ಧನಾದ ಟೈಗರ್ ಪ್ರಭಾಕರ್ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯ ನಟರಾಗಿದ್ದಾರೆ. ಅವರ ಬಹುತೇಕ ಸಿನಿಮಾಗಳು ಹಿಟ್ ಆಗಿದೆ. ಅವರ ಜೀವನದ ಬಗ್ಗೆ ಮದುವೆ, ಮಕ್ಕಳ ಬಗ್ಗೆ ಕೆಲವು ವಿಷಯಗಳನ್ನು ಈ ಲೇಖನದಲ್ಲಿ ನೋಡೋಣ.
ಟೈಗರ್ ಪ್ರಭಾಕರ್ ಅವರು 1950ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರು ಮೊದಲು ಸಿನಿಮಾಗಳಲ್ಲಿ ನೆಗೆಟಿವ್ ರೋಲ್ ಅನ್ನು ನಟಿಸುತ್ತಿದ್ದರು. ನಂತರ ಇವರು ಹೀರೊ ಪಾತ್ರದಲ್ಲಿ ನಟಿಸುತ್ತಿದ್ದರು. ಟೈಗರ್ ಪ್ರಭಾಕರ್ ಅವರು ಸುಮಾರು 450 ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ಕಂಗ್ಲಿಷ್ ಅನ್ನು ಕನ್ನಡ ಸಿನಿಮಾಗಳಲ್ಲಿ ಪರಿಚಯಿಸಿದವರು ಟೈಗರ್ ಪ್ರಭಾಕರ್. ಅವರು ಮೂರು ಬಾರಿ ಮದುವೆಯಾಗಿದ್ದು ಅವರಿಗೆ ಐದು ಜನ ಮಕ್ಕಳಿದ್ದಾರೆ. ಮೊದಲನೆ ಹೆಂಡತಿಯ ಹೆಸರು ಅಲ್ಪಂಜಾ ಮೇರಿ ಇವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದಾನೆ. ಇಬ್ಬರು ಹೆಣ್ಣು ಮಕ್ಕಳ ಹೆಸರು ಭಾರತಿ ಮತ್ತು ಗೀತಾ, ಮಗನ ಹೆಸರು ವಿನೋದ್ ಪ್ರಭಾಕರ್. ಸ್ವಲ್ಪ ವರ್ಷಗಳ ಕಾಲ ಸಂಸಾರ ಮಾಡಿ ನಂತರ ಟೈಗರ್ ಪ್ರಭಾಕರ್ ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ.
ಮೊದಲ ಹೆಂಡತಿಯೊಂದಿಗೆ ವಿಚ್ಛೇದನದ ನಂತರ ಟೈಗರ್ ಪ್ರಭಾಕರ್ ಅವರು ಜಯಮಾಲಾ ಅವರೊಂದಿಗೆ ವಿವಾಹವಾಗಿದ್ದಾರೆ. ಜಯಮಾಲಾ ಅವರು ನಟಿಯಾಗಿದ್ದು, ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಬ್ಬರು ಚಿತ್ರರಂಗದಲ್ಲಿರುವ ಕಾರಣ ಪರಿಚಯವಾಗಿ ನಂತರ ಪ್ರೇಮಕ್ಕೆ ತಿರುಗಿ ಮದುವೆ ಮಾಡಿಕೊಂಡರು. ಸ್ವಲ್ಪ ವರ್ಷಗಳ ನಂತರ ಜಯಮಾಲಾ ಮತ್ತು ಟೈಗರ್ ಪ್ರಭಾಕರ್ ಅವರು ಫ್ಯಾಮಿಲಿ ಕೋರ್ಟ್ ನಿಂದ ವಿಚ್ಛೇದನ ಪಡೆದು, ಜೈಮಾಲಾ ಅವರು ಎಚ್ಎಂ ರಾಮಚಂದ್ರ ಅವರನ್ನು ವಿವಾಹವಾದರು. ಜಯಮಾಲಾ ಅವರಿಗೆ ಒಬ್ಬಳು ಮಗಳಿದ್ದಾಳೆ ಅವಳ ಹೆಸರು ಸೌಂದರ್ಯ, ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಟೈಗರ್ ಪ್ರಭಾಕರ್ ಅವರು ನಂತರ ಮೂರನೆ ಮದುವೆಯಾದರು ಅವರ ಹೆಸರು ಅಂಜು, ಅವರ ತಂದೆ ಮುಸ್ಲಿಂ, ತಾಯಿ ಹಿಂದೂ. ಟೈಗರ್ ಪ್ರಭಾಕರ್ ಅವರು ಅಂಜು ಅವರೊಂದಿಗೆ ವಿವಾಹವಾಗಿ ಒಂದು ವರ್ಷದಲ್ಲಿ ವಿಚ್ಛೇದನ ತೆಗೆದುಕೊಂಡರು. ಅಂಜು ಅವರಿಗೆ ಒಬ್ಬ ಮಗನಿದ್ದಾನೆ ಅವನ ಹೆಸರು ಅರ್ಜುನ್ ಪ್ರಭಾಕರ್. ಟೈಗರ್ ಪ್ರಭಾಕರ್ ಅವರ ಮಗನಾದ ವಿನೋದ್ ಪ್ರಭಾಕರ್ ಅವರು ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಅವರೊಂದಿಗೆ ನಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ಅವರು ಹಿಂದೂ, ಮುಸ್ಲಿಂ ಧರ್ಮದ ಹೆಣ್ಣುಮಕ್ಕಳನ್ನು ವಿವಾಹವಾಗಿರುವ ಏಕೈಕ ವ್ಯಕ್ತಿಯಾಗಿದ್ದಾರೆ.