ಈ ವರ್ಷದ ಕೊನೆಯ ಸೂರ್ಯಗ್ರಹಣ ಯಾವ ರಾಶಿಯವರಿಗೆ ಶುಭವಾಗಲಿದೆ ನೋಡಿ

0 1

ಈ ವರ್ಷದ ಕೊನೆಯ ಗ್ರಹಣವಾಗಿ ಸಂಭವಿಸಲಿರುವ ಸಂಪೂರ್ಣ ಸೂರ್ಯಗ್ರಹಣ ಯಾವ ಯಾವ ಪ್ರದೇಶಗಳಲ್ಲಿ ಗೋಚರಿಸಬಹುದು ಇದರಿಂದ ಯಾವೆಲ್ಲ ರೀತಿಯ ಪರಿಣಾಮಗಳು ಉಂಟಾಗುತ್ತವೆ ವಿಶ್ವದ ಮೇಲೆ ಈ ಬಾರಿಯ ಸೂರ್ಯಗ್ರಹಣ ಯಾವ ರೀತಿಯ ಪರಿಣಾಮವನ್ನು ಬೀರಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಗ್ರಹಣ ಎಂದ ತಕ್ಷಣ ಜನಸಾಮಾನ್ಯರಿಗೆ ಗಾಬರಿ ಉಂಟಾಗುತ್ತದೆ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿಯೂ ಗ್ರಹಣದ ಬಗ್ಗೆ ಮಾತುಕತೆಗಳು ನಡೆಯುತ್ತಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅಗ್ನಿ ದುರಂತಗಳು ಪ್ರಕೃತಿ ವಿಕೋಪಗಳು ಅನ್ಯಾಯದ ಪ್ರಕರಣಗಳು ಇವುಗಳನ್ನೆಲ್ಲಾ ನೋಡಿ ಜನರ ಮನಸ್ಸು ರೋಸಿ ಹೋಗಿದೆ ಈ ರೀತಿಯ ಘಟನೆಗಳು ಗ್ರಹಣದ ಆಸುಪಾಸು ನಡೆದಾಗ ಜನರಿಗೆ ಇನ್ನೂ ಹೆಚ್ಚಿನ ಗಾಬರಿಯಾಗುತ್ತದೆ.

ಸೂರ್ಯಗ್ರಹಣ ಅಮಾವಾಸ್ಯೆ ದಿನ ಚಂದ್ರಗ್ರಹಣ ಹುಣ್ಣಿಮೆಯ ದಿನ ನಡೆಯುತ್ತದೆ. ಸಾಮಾನ್ಯವಾಗಿ ಜನರು ಹುಣ್ಣಿಮೆ ಅಥವಾ ಅಮಾವಾಸ್ಯೆ ದಿನಗಳಲ್ಲಿ ಗೊಂದಲಕ್ಕೊಳಗಾಗಿರುತ್ತಾರೆ. ಗ್ರಹಗಳ ಬದಲಾವಣೆಯ ಫಲ ಮನುಷ್ಯನ ಜೀವನದ ಮೇಲೆ ಉಂಟಾಗಿರುತ್ತದೆ. ಒಂದೊಂದು ಬಾರಿ ಗ್ರಹಣದಿಂದಲೂ ಒಳ್ಳೆಯ ಫಲಗಳು ಕಂಡುಬರುತ್ತವೆ

ಎಲ್ಲಾ ಗ್ರಹಣ ಫಲಗಳು ಕೆಟ್ಟದಾಗಿರುವುದಿಲ್ಲ. ಪ್ರಕೃತಿಗಳ ಮೇಲೆ ಜೀವರಾಶಿಗಳ ಮೇಲೆ ಗ್ರಹಣ ಅಥವಾ ಗ್ರಹದ ಫಲ ತಪ್ಪುವುದಿಲ್ಲ. ಅಧರ್ಮ ಹೆಚ್ಚಾದಂತೆಲ್ಲ ಕೆಟ್ಟ ಫಲಗಳು ಹೆಚ್ಚಾಗುತ್ತವೆ ಡಿಸೆಂಬರ್ ನಾಲ್ಕು ಎರಡು ಸಾವಿರದ ಇಪ್ಪತ್ತೊಂದರಂದು ಈ ವರ್ಷದ ಕೊನೆಯ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ ಹತ್ತು: ಐವತ್ತೊಂಬತ್ತರಿಂದ ಮಧ್ಯಾಹ್ನ ಮೂರುಗಂಟೆ ಏಳು ನಿಮಿಷದವರೆಗೆ ಗ್ರಹಣ ಇರುತ್ತದೆ.

ಆದರೆ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ ಗ್ರಹಣ ಕಾಣಿಸಲಿ ಕಾಣಿಸದಿರಲಿ ಅದರ ಪರಿಣಾಮ ಇದ್ದೆ ಇರುತ್ತದೆ. ಸಾಮಾನ್ಯವಾಗಿ ಗ್ರಹಣದಿಂದ ಶೇಕಡ ಎಪ್ಪತ್ತರಷ್ಟು ನಕಾರಾತ್ಮಕ ಪರಿಣಾಮ ಇರುತ್ತದೆ. ಎರಡು ಸಾವಿರದ ಹತ್ತೊಂಬತ್ತರ ಡಿಸೆಂಬರ್ ನಲ್ಲಿ ಧನಸ್ಸು ರಾಶಿಯಲ್ಲಿ ವಿಚಿತ್ರ ಸೂರ್ಯಗ್ರಹಣ ಸಂಭವಿಸಿತ್ತು ಅದು ವಿಶ್ವಾದ್ಯಂತ ಗೋಚರವಾಗಿತ್ತು ಅಲ್ಲಿ ಆರು ಗ್ರಹಗಳ ಸಂಯೋಗವಾಗಿತ್ತು.

ಈಗ ಡಿಸೆಂಬರ್ ನಾಲ್ಕರಂದು ನಡೆಯುವ ಸೂರ್ಯಗ್ರಹಣ ವೃಶ್ಚಿಕರಾಶಿಯಲ್ಲಿ ನಡೆಯಲಿ ಇಲ್ಲಿ ಐದು ಗ್ರಹಗಳ ಸಂಯೋಗವಾಗಲಿದೆ. ಹಾಗಾಗಿ ಇದು ಎಲ್ಲಾ ಕಡೆಗಳಲ್ಲಿಯೂ ಗೋಚರಿಸುವುದಿಲ್ಲ. ವೃಶ್ಚಿಕ ರಾಶಿಯನ್ನು ಕೀಟ ರಾಶಿ ವಿಷ ರಾಶಿ ಎಂದು ಕರೆಯಲಾಗುತ್ತದೆ ಪ್ರಪಂಚಕ್ಕೆ ಈ ಗ್ರಹಣ ಕಾಣಿಸದಿದ್ದರೂ ಇದರ ಫಲ ಪರಿಣಾಮಕಾರಿಯಾಗಿರುತ್ತದೆ. ಈ ಗ್ರಹಣದಲ್ಲಿ ರವಿ ಚಂದ್ರ ಬುಧ ಕುಜ ಮತ್ತು ಕೇತು ಸಂಯೋಗವಿದೆ. ಈ ಗ್ರಹಣದ ಫಲಗಳು ನಿಧಾನವಾಗಿ ಗೋಚರಿಸಲಿದೆ. ಈ ಗ್ರಹಣ ಸಂಭವಿಸುವುದು ಜೇಷ್ಠ ನಕ್ಷತ್ರ ದಲ್ಲಿ ಜೇಷ್ಠ ನಕ್ಷತ್ರ ಬುಧನ ನಕ್ಷತ್ರ ವಾಗಿದೆ. ಬುಧ ಇಂಟರ್ನೆಟ್ ಡಿಜಿಟಲ್ ಮೀಡಿಯಾ ಟೆಲಿಕಾಂ ಸೆಟಲೈಟ್ ಸೂಚಕ ಇದಕ್ಕೆ ಸಂಬಂಧಿಸಿದಂತೆ ಕೆಲವು ಹಗರಣಗಳು ಹೊರಗೆ ಬರುವ ಸಾಧ್ಯತೆ ಇದೆ.

ಈ ಗ್ರಹಣದಿಂದ ನರಗಳಿಗೆ ಸಂಬಂಧಿಸಿದಂತೆ ಮತ್ತು ಮೆದುಳಿಗೆ ಸಂಬಂಧಿಸಿದಂತೆ ಹೊಸ ಕಾಯಿಲೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಬುಧನ ಅಧಿಪತಿ ಮಹಾವಿಷ್ಣು ಬುಧ ಮಹಾವಿಷ್ಣುವನ್ನು ಸೂಚಿಸುತ್ತಾನೆ. ಈ ಗ್ರಹಣದ ನಂತರ ವಿಷ್ಣುವಿನ ದೇವಾಲಯದ ವಾತಾವರಣ ಅಷ್ಟು ಕ್ಷೇಮಕರವಾಗಿ ಇರುವುದಿಲ್ಲ ದೇವಾಲಯದ ಪೂಜಾ ಪದ್ಧತಿ ಇರಬಹುದು ಅಥವಾ ಪ್ರಕೃತಿ ವಿಕೋಪಗಳಿಂದ ಅಷ್ಟು ಶುಭ ವಾಗಿರುವುದಿಲ್ಲ. ವೃಶ್ಚಿಕ ಕುಜನ ಸ್ವಕ್ಷೇತ್ರ ವಾಗಿದ್ದರು ಈ ಬಾರಿ ಕುಜ ಮತ್ತು ಕೇತುವಿನ ಮಿಲನದಿಂದ ಅಷ್ಟು ಶುಭ ವಿರುವುದಿಲ್ಲ.

ಕುಜ ಕ್ರೀಡೆಯನ್ನು ಸೂಚಿಸುತ್ತಾನೆ ಈ ಗ್ರಹ ಸ್ಥಿತಿಯ ಮಿಲನವನ್ನು ತೆಗೆದುಕೊಂಡಾಗ ಅಂತರರಾಷ್ಟ್ರೀಯ ಪ್ರತಿಷ್ಠಿತ ಕ್ರೀಡಾಪಟುವಿನ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಶುಕ್ರ ಮನೆಯಲ್ಲಿ ರಾಹು ಇದ್ದಾನೆ ಅಂದರೆ ವೃಷಭದಲ್ಲಿ. ಹಾಗೂ ಶುಕ್ರ ಶತ್ರು ರಾಶಿ ಧನಸ್ಸು ರಾಶಿಯ ಕಡೆಯ ಭಾಗದಲ್ಲಿ ಇದ್ದಾನೆ. ಧನಸು ವೃದ್ಧ ರಾಶಿ ಮತ್ತು ಶುಕ್ರ ಕಲೆಯನ್ನು ಸೂಚಿಸುತ್ತಾನೆ ಹಾಗಾಗಿ ಇದರ ಪರಿಣಾಮ ಏನಾಗುತ್ತದೆ ಎಂದರೆ ಸಿನಿಮಾರಂಗಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಸಿನಿಮಾ ರಂಗದ ಹಿರಿಯ ಕಲಾವಿದರ ಯೋಗಕ್ಷೇಮಕ್ಕೆ ಅಷ್ಟು ಒಳ್ಳೆಯದಲ್ಲ.

ಶನಿ ಸ್ವಕ್ಷೇತ್ರದಲ್ಲಿ ಬಲ ವಾಗಿರುವುದರಿಂದ ಇನ್ನಷ್ಟು ಜನೋಪಕಾರಿ ಕಾನೂನುಗಳ ರಚನೆಯಾಗುವ ಸಾಧ್ಯತೆ ಇದೆ. ಗುರು ಧನಿಷ್ಠ ನಕ್ಷತ್ರದಲ್ಲಿ ಇರುವುದರಿಂದ ಅಂತರಾಷ್ಟ್ರೀಯ ಕೀರ್ತಿ ಪಡೆದಿರುವ ಒಂದು ಸ್ವಯಂಘೋಷಿತ ದೇವತಾ ಮನುಷ್ಯನ ಯೋಗಕ್ಷೇಮಕ್ಕೆ ಅಷ್ಟು ಒಳ್ಳೆಯದಲ್ಲ. ಧನ ಕಾರಕನಾಗಿ ಗುರು ಕುಂಭದಲ್ಲಿ ಇದ್ದಾಗ ವಿಶ್ವ ಆರ್ಥಿಕತೆಗೆ ಒಳ್ಳೆಯದಾಗುತ್ತದೆ ಈ ಗ್ರಹಣದ ಪರಿಣಾಮದಿಂದ ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದ ಮೇಲೂ ವಿಚಿತ್ರ ಪರಿಣಾಮಗಳು ಉಂಟಾಗುತ್ತದೆ.

ಅದರಲ್ಲಿಯೂ ಮೇಷ ವೃಷಭ ವೃಶ್ಚಿಕ ರಾಶಿಯ ರಾಜಕಾರಣಿಗಳ ಮೇಲೆ ಪರಿಣಾಮ ಉಂಟಾಗುತ್ತದೆ ಈ ರಾಶಿಯ ರಾಜಕಾರಣಿಗಳು ಹೆಚ್ಚಿನ ಜಾಗ್ರತೆಯನ್ನು ವಹಿಸುವುದು ಒಳ್ಳೆಯದು. ಪ್ರಕೃತಿಯ ಮೇಲೆ ಈ ಗ್ರಹಣದ ಪರಿಣಾಮ ಇನ್ನೂ ಮೂರು ತಿಂಗಳವರೆಗೆ ಇರಬಹುದು. ಆದರೆ ಈಗ ಗ್ರಹಣದಿಂದ ಯಾರು ಭಯಪಡುವ ಅವಶ್ಯಕತೆ ಇಲ್ಲ ಏಕೆಂದರೆ ಅವರು ಧಾರ್ಮಿಕ ಕಾರ್ಯಗಳನ್ನು ಮಾಡಿ ಮಂತ್ರಜಪ ಗಳನ್ನು ಮಾಡುತ್ತಾ ಅವರವರ ಕಾರ್ಯವನ್ನು ಸರಿಯಾಗಿ ಮಾಡುತ್ತಾ ಹೋದರೆ ಈ ವಿಕೋಪಗಳು ನಿಯಂತ್ರಣಕ್ಕೆ ಬರಬಹುದು.

Leave A Reply

Your email address will not be published.