ಸಿಂಹ ರಾಶಿಯವರ ಪಾಲಿಗೆ 2022 ರಲ್ಲಿ ಆರ್ಥಿಕ ಸ್ಥಿತಿ ಹಾಗೂ ಅರೋಗ್ಯ ಹೇಗಿರಲಿದೆ ತಿಳಿಯಿರಿ

Astrology
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ನಾವಿಂದು ಎರಡು ಸಾವಿರದ ಇಪ್ಪತ್ತೆರಡನೇ ಇಸವಿಯಲ್ಲಿ ಸಿಂಹ ರಾಶಿಯವರಿಗೆ ಯಾವ ರೀತಿಯಾಗಿ ರಾಶಿಫಲ ಇರಲಿದೆ ಅವರ ಸ್ವಭಾವ ಶಿಕ್ಷಣ ಉದ್ಯೋಗ ವಿವಾಹ ಆರ್ಥಿಕ ಸ್ಥಿತಿ ಮತ್ತು ಆರೋಗ್ಯ ಹೇಗಿರಲಿದೆ ಎಂಬುವುದರ ಜೊತೆಗೆ ನೀವು ಈ ಇಡೀ ವರ್ಷ ವಹಿಸಬೇಕಾದ ಎಚ್ಚರಿಕೆ ಏನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಸಿಂಹ ರಾಶಿಯ ಸ್ವಾಮಿ ಗ್ರಹ ಸೂರ್ಯ ದೇವನಾಗಿದ್ದಾನೆ ಹಾಗಾಗಿ ಈ ರಾಶಿಯವರು ಸದೃಢ ಸ್ವಭಾವದವರಾಗಿರುತ್ತಾರೆ. ಆತ್ಮವಿಶ್ವಾಸಿಗಳಾಗಿರುತ್ತಾರೆ ಮತ್ತು ಸಾಹಸದ ಗುಣ ಸ್ವಭಾವಗಳಿಂದ ಸಂಪನ್ನಗಾರಾಗಿರುತ್ತಾರೆ. ಇವರು ತಮ್ಮೊಂದಿಗೆ ಇರುವ ಜನರನ್ನು ಸದಾ ಸುಖಿಯಾಗಿರುವಂತೆ ನೋಡಿಕೊಳ್ಳುತ್ತಾರೆ. ಜೊತೆಗೆ ಇವರು ಇನ್ನೊಬ್ಬರ ಅಧೀನದಲ್ಲಿದ್ದುಕೊಂಡು ಕೆಲಸ ಮಾಡುವುದಕ್ಕೆ ಇಷ್ಟವಾಗುವುದಿಲ್ಲ.

ಕಠಿಣಾತಿ ಕಠಿಣ ಪರಿಸ್ಥಿತಿಯಲ್ಲಿಯೂ ಇವರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ ಪರಿಸ್ಥಿತಿ ಅದೇನೇ ಆಗಿದ್ದರೂ ಅವರು ಎದೆಗುಂದುವುದಿಲ್ಲ. ಇವರು ತಮ್ಮ ಬುದ್ಧಿ ವಿವೇಕ ದಿಂದಾಗಿ ತಮ್ಮ ಸಮಸ್ಯೆಗಳಿಗೆ ಬಹುಬೇಗನೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ ಒಂಟಿಯಾಗಿ ನಡೆಯುವುದಕ್ಕಿಂತ ಎಲ್ಲರೊಂದಿಗೆ ಸೇರಿ ಹೆಜ್ಜೆ ಹಾಕುವುದನ್ನು ಇಷ್ಟಪಡುತ್ತಾರೆ. ಇವರಲ್ಲಿ ಆತ್ಮವಿಶ್ವಾಸ ಯಾವತ್ತು ಕಡಿಮೆಯಾಗುವುದಿಲ್ಲ.

ಸಿಂಹರಾಶಿಯವರು ಏನನ್ನೇ ಹೇಳಿದರೂ ಅದನ್ನು ಸ್ಪಷ್ಟ ರೂಪದಲ್ಲಿ ಹೇಳುತ್ತಾರೆ. ತಮ್ಮ ಜೀವನದಲ್ಲಿ ಯಾವಾಗಲೂ ಖುಷಿ ಪಡುತ್ತಿರುತ್ತಾರೆ ಸ್ವಭಾವದಿಂದ ಸ್ವಲ್ಪ ಗುಪ್ತವಾಗಿರುವ ಇವರು ಖುಷಿಯನ್ನಾಗಲಿ ಅಥವಾ ದುಃಖವನ್ನಾಗಲಿ ತಕ್ಷಣಕ್ಕೆ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದಿಲ್ಲ. ಆದರೆ ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಇವರು ಅವರ ದುಃಖವನ್ನು ದೂರ ಮಾಡುವುದಕ್ಕೆ ಪ್ರಯತ್ನಿಸುತ್ತಾರೆ.

ಇನ್ನು ಪ್ರೀತಿ ಪ್ರೇಮದ ವಿಷಯದಲ್ಲಿ ಇವರು ಸಾಕಷ್ಟು ಶ್ರೀಮಂತರಾಗಿರುತ್ತಾರೆ ಜೊತೆಗೆ ಇವರು ತಮ್ಮ ಸಂಗಾತಿಯ ಮೇಲೆ ತನಗಿಂತಲೂ ಹೆಚ್ಚಿನ ಭರವಸೆಯನ್ನು ಹೊಂದಿರುತ್ತಾರೆ. ಇವರು ಏನೂ ಹೇಳದಿದ್ದರೂ ಇವರ ಭಾವನೆಗಳನ್ನು ಅರಿತುಕೊಳ್ಳುವ ಸಂಗಾತಿಗಾಗಿ ಸದಾ ನಿರೀಕ್ಷೆ ಮಾಡುತ್ತಾರೆ. ಎರಡು ಸಾವಿರದ ಇಪ್ಪತ್ತೆರಡು ಸಿಂಹ ರಾಶಿಯ ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ಉಜ್ವಲವೂ ಉನ್ನತಿದಾಯಕವಾಗಿರುವ ಸಂಕೇತವನ್ನ ನೀಡುತ್ತಿದೆ.

ಆದಾಗ್ಯೂ ಇಲ್ಲಿ ಉನ್ನತ ವ್ಯಾಸಂಗದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಅಲ್ಲಲ್ಲಿ ಒಂದಿಷ್ಟು ಅಡೆತಡೆಗಳು ಕಂಡುಬರಲಿವೆ ಆದರೆ ಭವಿಷ್ಯದ ಬಗ್ಗೆ ನಿಮಗಿರುವ ಶ್ರದ್ಧೆ ಮತ್ತು ಪರಿಶ್ರಮವು ಖಂಡಿತವಾಗಿಯೂ ಫಲದಾಯಕ ವಾಗಿ ಕಂಡು ಬರಲಿದೆ. ನಿಮ್ಮ ಪರಿಶ್ರಮದಿಂದಾಗಿ ದೊಡ್ಡ ದೊಡ್ಡ ಪರೀಕ್ಷೆಗಳಲ್ಲಿಯೂ ಸಫಲತೆಯನ್ನು ಹೊಂದಬಹುದಾಗಿದೆ.

ಇನ್ನು ವ್ಯಾಪಾರ ವ್ಯವಹಾರ ನೌಕರಿಯ ಕುರಿತು ನೋಡುವುದಾದರೆ ನೌಕರಿಯ ದೃಷ್ಟಿಯಿಂದ ಎರಡು ಸಾವಿರದ ಇಪ್ಪತ್ತೆರಡು ಉತ್ತಮ ವರ್ಷವಾಗಿ ಸಾಬೀತಾಗಲಿದೆ. ಈ ಸಮಯದಲ್ಲಿ ನಿಮ್ಮ ಕೆಲಸಕಾರ್ಯಗಳಲ್ಲಿ ನಿಮ್ಮ ಮನಸ್ಸು ತಲ್ಲೀನವಾಗಲಿದೆ. ಅಲ್ಲದೆ ನಿಮ್ಮೆಲ್ಲ ಕೆಲಸಕಾರ್ಯಗಳು ಆನಂದಪೂರ್ವಕವಾಗಿ ಪೂರ್ಣಗೊಳ್ಳಲಿದೆ. ಇಲ್ಲಿ ನೀವು ನಿಮ್ಮ ಪರಿಶ್ರಮದಿಂದ ವೃತ್ತಿಯಲ್ಲಿ ತೊಡಗಿ ಕೊಳ್ಳಬೇಕಾಗುತ್ತದೆ ನಿಮ್ಮ ಸ್ವಯಂ ಪ್ರಯತ್ನ ನಿಮಗೆ ಸಫಲತೆಯನ್ನು ಒದಗಿಸಲಿದೆ

ನೌಕರಿ ಮಾಡುವವರು ತಮ್ಮ ಕಾರ್ಯಕ್ಷೇತ್ರದಲ್ಲಿ ಹೊಸ ಅನುಭವಗಳನ್ನು ಪಡೆದುಕೊಳ್ಳಲಿದ್ದು ಈ ಅನುಭವಗಳು ಭವಿಷ್ಯದಲ್ಲಿ ನಿಮಗೆ ಲಾಭವನ್ನು ತಂದು ಕೊಡಲಿದೆ. ಮತ್ತು ಕೆಲ ಜಾತಕದವರಿಗೆ ತಾವು ಇಚ್ಛೆಪಡುವ ಸ್ಥಳಕ್ಕೆ ವರ್ಗಾವಣೆ ಹೊಂದುವ ಅವಕಾಶ ಇದೆ ನಿಮಗೆ ಆರ್ಥಿಕ ಸಹಕಾರದ ಪ್ರಾಪ್ತಿಯು ಕೂಡ ಉಂಟಾಗಲಿದೆ. ಯಾರು ತಮ್ಮ ಸ್ವಂತ ವ್ಯವಹಾರದಲ್ಲಿ ತೊಡಗಿರುತ್ತಾರೆ ಅವರು ಸ್ವಲ್ಪ ಜಾಗೃತಿಯಲ್ಲಿ ಇರಬೇಕು. ಕಾರಣ ನಿಮ್ಮ ಬೇಜವಾಬ್ದಾರಿ ಮತ್ತು ಆಲಸ್ಯತನ ಕೊಂಚ ಏರಿಳಿತಗಳನ್ನು ಉಂಟುಮಾಡಬಹುದು ಹಾಗಾಗಿ ಇಲ್ಲಿ ಎಚ್ಚರಿಕೆ ಅವಶ್ಯಕವಾಗಿದೆ.

ಆರ್ಥಿಕ ವಿಚಾರದಿಂದಾಗಿ ನೀವು ಸ್ವಲ್ಪ ವಿಚಾರ ವಿಮರ್ಶೆ ಮಾಡಿ ಮುನ್ನಡೆಯುವ ಅವಶ್ಯಕತೆ ಇದೆ. ಒಂದೊಮ್ಮೆ ನೀವು ಇಲ್ಲಿ ಕರ್ಚು ಮತ್ತು ಹೂಡಿಕೆಯನ್ನು ಸರಿಯಾದ ರೀತಿಯಲ್ಲಿ ಮಾಡುವಿರಾದರೆ ಖಂಡಿತ ಆರ್ಥಿಕ ಸದೃಢತೆ ಲಭಿಸಲಿದೆ. ಇಲ್ಲಿ ನಿಮ್ಮ ಆದಾಯ ಮತ್ತು ಪರಿವಾರದ ಸಹಯೋಗದಿಂದ ಧನವನ್ನು ಆರ್ಜಿತ ಮಾಡುವುದರಲ್ಲೂ ಸಫಲರಾಗುವಿರಿ. ಇಲ್ಲಿ ಧನ ಸಂಬಂಧಿ ಲಾಭವಂತೂ ನಿಮಗೆ ಉಂಟಾಗಲಿದೆ ಜೊತೆಗೆ ಸಣ್ಣಪುಟ್ಟ ಖರ್ಚುಗಳು ಕೂಡ ಉಂಟಾಗಲಿದೆ ಹಾಗಾಗಿ ನೀವು ನಿಮ್ಮ ಸುಖ ಸೌಲಭ್ಯಗಳ ಮೇಲೆ ಮಾಡುವ ಕರ್ಚನ್ನು ನಿಯಂತ್ರಣ ಮಾಡುವ ಅವಶ್ಯಕತೆ ಇದೆ. ಹಾಗೆ ಆಕರ್ಷಣೆಗೆ ಒಳಗಾಗಿ ದೊಡ್ಡಮಟ್ಟದ ಹೂಡಿಕೆ ಮಾಡುವುದು ನಷ್ಟವನ್ನುಂಟು ಮಾಡಬಹುದು. ಇನ್ನು ಪಾರಿವಾರಿಕ ಜೀವನದ ಕುರಿತು ನೋಡುವುದಾದರೆ ಪಾರಿವಾರಿಕ ದೃಷ್ಟಿಕೋನದಿಂದ ಈ ಸಮಯ ಸಂತೋಷದಿಂದ ಕೂಡಿರಬಹುದಾಗಿದೆ.

ನೀವು ಮಹತ್ವಪೂರ್ಣ ಕಾರ್ಯಗಳಲ್ಲಿ ನಿಮ್ಮ ಪರಿವಾರದ ಸದಸ್ಯರ ಸಲಹೆಗಳನ್ನು ಪಡೆದುಕೊಳ್ಳಲಿದ್ದಿರಿ. ಕೆಲಸಕಾರ್ಯಗಳಲ್ಲಿ ನೀವು ತೊಡಗಿಸಿಕೊಂಡರು ಪರಿವಾರಕ್ಕಾಗಿ ಸಮಯವನ್ನು ಮೀಸಲಿಡಲಿದ್ದಿರಿ. ಈ ಸಮಯದಲ್ಲಿ ನೀವು ನಿಮ್ಮ ಪರಿವಾರದವರೊಂದಿಗೆ ಧಾರ್ಮಿಕ ಯಾತ್ರೆಗೆ ತೆರಳಬಹುದಾದ ಸಂಭವವಿದೆ. ನಿಮ್ಮ ಸಹೋದರ ಸಹೋದರಿಯರೊಂದಿಗೆ ನಿಮ್ಮ ಬಾಂಧವ್ಯ ಸದೃಢವಾಗಿ ಕಂಡುಬರಲಿದೆ. ಒಟ್ಟಾರೆಯಾಗಿ ಎರಡು ಸಾವಿರದ ಇಪ್ಪತ್ತೆರಡರಲ್ಲಿ ನಿಮ್ಮ ಪಾರಿವಾರಿಕ ಜೀವನವು ಸಂತೋಷವಾಗಿ ಸಾಗಲಿದೆ.

ಇನ್ನು ನಿಮ್ಮ ಪ್ರೇಮ ಮತ್ತು ವೈವಾಹಿಕ ಜೀವನದ ಬಗ್ಗೆ ನೋಡುವುದಾದರೆ ಈ ಸಮಯಾವಧಿಯಲ್ಲಿ ನಿಮ್ಮ ಪ್ರೇಮ ಜೀವನ ಬಹುತೇಕ ಸುಖದ ಪರಿಣಾಮವನ್ನು ಹೊತ್ತು ತರಲಿದೆ ಆದಾಗ್ಯೂ ಕೆಲವೊಮ್ಮೆ ಅಲ್ಲೊಂದು ಇಲ್ಲೊಂದು ಸಣ್ಣಪುಟ್ಟ ಸಮಸ್ಯೆಗಳು ಭಾದಿಸಬಹುದು. ಸಂಗಾತಿಯೊಂದಿಗೆ ಸಂಬಂಧವು ಸದೃಢವಾಗಿ ಕಂಡುಬರಲಿದೆ ಜೊತೆಗೆ ಅವಿವಾಹಿತರ ಜಾತಕದವರ ಪಾಲಿಗೂ ಸಮಯ ಉತ್ತಮವಾಗಿರಲಿದೆ. ಈ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನವು ಸಂತೋಷದಿಂದ ಕೂಡಿರಲಿ ದೆ.

ಇನ್ನು ನಿಮ್ಮ ಆರೋಗ್ಯದ ಕುರಿತಾಗಿ ನೋಡುವುದಾದರೆ ಎರಡು ಸಾವಿರದ ಇಪ್ಪತ್ತೆರಡನೇ ಇಸವಿಯಲ್ಲಿ ಸಿಂಹರಾಶಿಯವರು ಆರೋಗ್ಯದ ಕುರಿತಾಗಿ ಒಂದಿಷ್ಟು ಜಾಗೃತಿಯನ್ನು ವಹಿಸಬೇಕು ಇಲ್ಲಿ ನಿಮಗೆ ಅಲ್ಲಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಾಧಿಸಲಿದೆ ಇಲ್ಲಿ ಒಂದೊಮ್ಮೆ ನೀವು ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಉತ್ತಮ ಆಹಾರ ಪಾನೀಯ ಯೋಗ ಧ್ಯಾನ ದಂತಹ ಚಟುವಟಿಕೆಗಳನ್ನು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅನೇಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ

ಜೊತೆಗೆ ನೀವು ಮಾನಸಿಕವಾಗಿಯೂ ಸಕಾರಾತ್ಮಕ ಯೋಚನೆಗಳನ್ನು ಮಾಡಬೇಕು ಜೊತೆಗೆ ಸಕಾರಾತ್ಮಕವಾಗಿ ನಡೆದುಕೊಂಡಲ್ಲಿ ಉತ್ತಮ ಆರೋಗ್ಯವು ನಿಮ್ಮದಾಗಿರಲಿದೆ. ಈ ರೀತಿಯಾಗಿ ಎರಡು ಸಾವಿರದ ಇಪ್ಪತ್ತೆರಡನೇ ವರ್ಷದಲ್ಲಿ ಸಿಂಹರಾಶಿಯವರಿಗೆ ಮಿಶ್ರಿತ ಫಲಗಳು ಇರಲಿವೆ ನೀವು ಸಿಂಹ ರಾಶಿಯವರಾಗಿದ್ದರೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ನಾವು ಮೇಲೆ ತಿಳಿಸಿರುವ ಕ್ರಮಗಳನ್ನು ಅನುಸರಿಸಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *