ಮೀನ ರಾಶಿಯವರ ಡಿಸೆಂಬರ್ ತಿಂಗಳಿನ ಫಲಾಫಲಗಳು ಇಲ್ಲಿವೆ

Astrology
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

12 ರಾಶಿಗಳಲ್ಲಿ ಒಂದೊಂದು ರಾಶಿಯೂ ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ರಾಶಿ ಭವಿಷ್ಯ, ಗುಣ ಸ್ವಭಾವವನ್ನು ವಿಭಿನ್ನವಾಗಿ ಹೊಂದಿರುತ್ತಾರೆ. ಅದರಂತೆ ಮೀನ ರಾಶಿಯವರ ಡಿಸೆಂಬರ್ ತಿಂಗಳಿನ ಫಲಾಫಲಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮಂಗಳ ಗ್ರಹದಿಂದ ಮೀನ ರಾಶಿಯವರಿಗೆ ಅನುಕೂಲ ಉಂಟಾಗುತ್ತದೆ. ಹಣಕಾಸಿನ ಸ್ಥಿತಿಯಲ್ಲಿ ಉತ್ತಮವಾಗುತ್ತದೆ. ಡಿಸೆಂಬರ್ 5 ನೇ ತಾರೀಖಿನ ನಂತರ ಈ ರಾಶಿಯವರಿಗೆ ವಿದೇಶದಿಂದ ಹಣ ಬರುವ ಸಂಭವವಿದೆ, ಬಿಸಿನೆಸ್ ಮಾಡುವವರಿಗೆ ಹೆಚ್ಚಿನ ಲಾಭ ಆಗುವ ಸಂಭವವಿದೆ. ಶೇರ್ ಮಾರ್ಕೆಟ್ ನಲ್ಲಿ ಇನ್ವೆಸ್ಟ್ ಮಾಡಿರುವವರಿಗೆ ಲಾಭವಾಗುತ್ತದೆ. ಡಿಸೆಂಬರ್ 9ರ ನಂತರ ಹೊಸ ಯೋಜನೆಯಿಂದ ಹೆಚ್ಚಿನ ಹಣ ಬರುವ ಸಂಭವವಿದೆ. ಪ್ರಯತ್ನ ಮಾಡುವುದರಿಂದ ಈ ಸಮಯದಲ್ಲಿ ಸಂಬಂಧಗಳಲ್ಲಿ ಉತ್ತಮ ಮಟ್ಟಕ್ಕೆ ಹೋಗಬಹುದು. ಪತಿ-ಪತ್ನಿಯರ, ತಂದೆ-ಮಗ, ತಾಯಿ-ಮಗಳ ಸಂಬಂಧದಲ್ಲಿ ಏರಿಳಿತಗಳು ಕಂಡುಬರುತ್ತದೆ ಆದ್ದರಿಂದ ಮೀನ ರಾಶಿಯವರು ತಾಳ್ಮೆಯಿಂದ ವರ್ತಿಸಬೇಕು.

ಈ ರಾಶಿಯವರು ಸಣ್ಣ ಪುಟ್ಟ ವಿಷಯಕ್ಕೆ ಅಪಮಾನ ಸೋಲು ಅನುಭವಿಸಬಹುದು ಆದ್ದರಿಂದ ಎಚ್ಚರಿಕೆಯಿಂದ ಇರಬೇಕು. ಈ ಸಮಯದಲ್ಲಿ ಈ ರಾಶಿಯವರ ನಿಂತ ಕೆಲಸಗಳು ಪ್ರಗತಿ ಕಾಣುತ್ತದೆ. ಆರೋಗ್ಯದ ಸಮಸ್ಯೆಗಳು ಉಲ್ಬಣಗೊಂಡು ಆಸ್ಪತ್ರೆಗೆ ಸೇರುವ ಪರಿಸ್ಥಿತಿ ಬರಬಹುದು. ಈ ರಾಶಿಯ ಶುಗರ್ ರೋಗಿಗಳು ಎಚ್ಚರಿಕೆಯಿಂದ ಇರಬೇಕು. ಈ ರಾಶಿಯವರ ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸರ್ಕಾರಿ ನೌಕರರಿಗೆ ಈ ಸಮಯದಲ್ಲಿ ಓಡಾಟಗಳು ದೂರದ ಪ್ರಯಾಣ ಮಾಡಬೇಕಾಗಿ ಬರಬಹುದು. ವಿವಾಹವಾಗದ ಮೀನರಾಶಿಯವರಿಗೆ ಆಕಸ್ಮಿಕವಾಗಿ ಉತ್ತಮ ಸಂಬಂಧ ಬರುವ ಸಂಭವವಿದೆ.

ಈ ರಾಶಿಯವರಿಗೆ ಗುರು ಬಲ ಇದ್ದಾಗ ಮದುವೆಯಾಗುತ್ತದೆ. ಇಂಪೋರ್ಟ್ ಎಕ್ಸ್ಪೋರ್ಟ್ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಆದಾಯ ಲಭಿಸುತ್ತದೆ. ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೂ ಉತ್ತಮ ಲಾಭವಿದೆ. ಡಿಸೆಂಬರ್ ತಿಂಗಳ ಒಂಭತ್ತರ ನಂತರ ನಿಮ್ಮ ಪ್ರಯತ್ನಕ್ಕೆ ಫಲ ಸಿಗುತ್ತದೆ. ಈ ರಾಶಿಯವರು ತಮ್ಮ ಮೇಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಗುರುವಿಗೆ ಸಂಬಂಧಪಟ್ಟ ವಸ್ತ್ರಗಳನ್ನು ಗುರುಹಿರಿಯರಿಗೆ ದಾನಮಾಡಬೇಕು. ಗುರುವಾರದ ದಿನ ಗುರುವಿನ ಬೀಜ ಮಂತ್ರವನ್ನು ಪಠಿಸಬೇಕು. ಈ ರಾಶಿಯು ಮಂಗಳನನ್ನು ಆರಾಧಿಸಬೇಕು. ಈ ಮಾಹಿತಿಯನ್ನು ಮೀನರಾಶಿಯವರಿಗೆ ತಪ್ಪದೆ ತಿಳಿಸಿ, ಹಾಗೆ ನಿಮ್ಮ ರಾಶಿ ಯಾವುದು ಹಾಗೂ ಅದಕ್ಕೆ ಸಂಬಂಧಿಸಿದ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *