ತಿರುಪತಿ ತಿಮ್ಮಪ್ಪನ ಹೆಸರನ್ನು ಕೇಳದವರು ಯಾರು ಇಲ್ಲ ಹಿಂದೂಗಳ ಪಾಲಿನ ಪವಿತ್ರ ಕ್ಷೇತ್ರಗಳಲ್ಲಿ ತಿರುಪತಿಯು ಒಂದು. ಅಲ್ಲಿ ನೆಲೆಸಿರುವ ತಿಮ್ಮಪ್ಪನ ಸನ್ನಿಧಿಯಲ್ಲಿ ಹಲವಾರು ವಿಶೇಷತೆಗಳಿವೆ. ಗುರುವಾರ ಒಂದೇ ದಿನ ಮೂರು ಅವತಾರಗಳುನ್ನು ಎತ್ತುತ್ತಾನೆ ತಿಮ್ಮಪ್ಪ. ಆ ಒಂದು ಅವತಾರವನ್ನು ಕಣ್ಣು ತುಂಬಿಕೊಂಡರು ವೈಕುಂಠ ಪ್ರಾಪ್ತಿ ಆಗುತ್ತದೆ ತಿಮ್ಮಪ್ಪನ ಗರ್ಭ ಗುಡಿಯಲ್ಲಿ ನಡೆಯುತ್ತದೆ ಗುರುವಾರದ ಚಮತ್ಕಾರ. ಅಷ್ಟಕ್ಕೂ ಗುರುವಾರದ ತಿಮ್ಮಪ್ಪನ ಚಮತ್ಕಾರಗಳೇನು ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತದೆ.
ಹರಿವಾಸ ಅದೇ ಕಲಿಯುಗ ವೈಕುಂಠ, ಯುಗ ಯುಗಗಳಿಂದ ಶತ ಶತಮಾನಗಳಿಂದ ವರ್ಷಾನು ವರ್ಷಗಳಿಂದ ಜನ ನಂಬುತ್ತಿರುವುದು ಅವತ್ತಿಗೂ ಇವತ್ತಿಗೂ ನಮಗೆ ಗೊತ್ತಿರುವುದು ಶ್ರೀ ವೆಂಕಟೇಶ್ವರನ ನಿಲಯ. ವೃಷಾಭಾದ್ರಿ ಅಂಜನಾದ್ರಿ ನಿಲಾದ್ರಿ ಗರುಡಾದ್ರಿ ಶೇಷಾದ್ರಿ ನಾರಾಯಣಾದ್ರಿ ವೆಂಕಟಾದ್ರಿ ಈ ಸಪ್ತಗಿರಿಗಳು ಏಳೇಳು ಜನ್ಮದ ಪಾಪಗಳನ್ನು ತೊಳೆದು ವೈಕುಂಠಕ್ಕೆ ಸೇರಿಸುವ ಎಣಿಗಳಿದ್ದಂತೆ. ಹಾಗಾಗಿಯೇ ಎಷ್ಟೋ ಜನರು ಬರಿಗಾಲಲ್ಲಿ ಏಳು ಬೆಟ್ಟಗಳನ್ನು ಹತ್ತಿ ಸಪ್ತಗಿರಿ ವಾಸನ ಸನ್ನಿಧಿಯನ್ನು ಸೇರುವುದು.
ಬೆಟ್ಟ ಹತ್ತುವಾಗ ಆಯಾಸವಿರುವುದಿಲ್ಲ ಹಸಿವಿರುವುದಿಲ್ಲ ಕಾರಣ ಒಂದೇ ಜಗದೋದ್ಧಾರನ ಶ್ರೀ ನಾರಾಯಣನ ನಾಮಾಮೃತ ಸ್ಮರಣೆ ದರ್ಶನ ಮಾತ್ರದಿಂದಲೇ ಜನ್ಮ ಜನ್ಮದ ಪುಣ್ಯ ಫಲ. ಗೋವಿಂದಾ ಗೋವಿಂದಾ ಎಂದ ಕೂಡಲೇ ಭಕ್ತರೆದುರೆ ವೈಕುಂಠವನ್ನು ತೋರಿಸುವ ದೇವ ದೇವ ಬೇಡಿದ್ದೆಲ್ಲವನ್ನು ಕೊಡುವ ಕಾಮಧೇನು ಕಲಿಯುಗ ವರದ ಕಷ್ಟಗಳನ್ನೆಲ್ಲ ಕರಗಿಸುವ ಸಂಕಟಹರ ಇಂತಹ ಮಹಾ ಕ್ಷೇತ್ರದಲ್ಲಿ ಕಾಲಿಟ್ಟು ಬಂಗಾರದ ಬಾಗಿಲನ್ನು ದಾಟಿದರೆ ಸಪ್ತ ದ್ವಾರಗಳು ಅವುಗಳನ್ನೆಲ್ಲವನ್ನು ಕೌತುಕದಿಂದ ಭಕ್ತಿಯಿಂದ ದಾಟಿದರೆ ಕಾಣಿಸುತ್ತಾನೆ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ತಿರುಮಾಲಾದಿಷ ವೆಂಕಟೇಶ್ವರ. ಇಂತಹ ಪುಣ್ಯ ಕ್ಷೇತ್ರದಲ್ಲಿ ವಾರದ ಆ ಒಂದು ದಿನ ಅದ್ಭುತವೇ ನಡೆಯುತ್ತದೆ.
ಸಂಕಟ ಬಂದರೆ ವೆಂಕಟರಮಣ ಎನ್ನುತ್ತೇವೆ ಆದರೆ ಈ ಮಹಾನುಭಾವನನ್ನು ಕಣ್ತುಂಬಿಕೊಂಡರು ಸಾಕು ಕ್ಷಣ ಕಾಲವಾದರೂ ಸರಿ ಕಂಡಿತಾ ನೆಮ್ಮದಿ ಮನೆ ಮಾಡುತ್ತದೆ ಇಂತಹ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನನ್ನು ಆ ಒಂದು ದಿನ ದರುಶನ ಮಾಡಿದರೆ ಸಾಕು ವೈಕುಂಠ ಪ್ರಾಪ್ತವಾಗುತ್ತದೆ ಅಷ್ಟಕ್ಕೂ ಆ ಒಂದು ದಿನ ಯಾವುದು ಎಂದರೆ ಆ ದಿನವೇ ಗುರುವಾರ. ಅದೃಷ್ಟವಶಾತ್ ಗುರುವಾರದಂದು ಮೂರು ಬಾರಿ ದರುಶನ ಭಾಗ್ಯ ದೊರೆತರೆ ಅದು ನಿಮ್ಮ ಪೂರ್ವ ಜನ್ಮದ ಪುಣ್ಯವೇ ಸರಿ.
ಅಂತಹ ಪುಣ್ಯ ನಿಮ್ಮದಾಗಿದ್ದರೆ ಗುರುವಾರದಂದು ತಿಮ್ಮಪ್ಪನ ಗರ್ಭಗುಡಿಯಲ್ಲಿ ಮೂರು ಅಚ್ಚರಿಗಳನ್ನು ಕಾಣಬಹುದು ಯಾಕೆಂದರೆ ಗುರುವಾರ ಮೂರು ಅವತಾರಗಳನ್ನು ಎತ್ತುತ್ತಾನೆ ತಿರುಪತಿ ತಿಮ್ಮಪ್ಪ. ಒಂದು ವೇಳೆ ಗುರುವಾರದಂದು ಮೂರು ಬಾರಿ ಸ್ವಾಮಿಯನ್ನು ನೋಡುವ ಅವಕಾಶ ಸಿಕ್ಕಿದರೆ ಗರ್ಭಗುಡಿಯಲ್ಲಿ ಎದುರಾಗುವ ಮೂರು ಅಚ್ಚರಿಗಳಾವವು ಎಂಬುದನ್ನು ನೋಡುವುದಾದರೆ ಮುಂಜಾನೆ ಒಂದು ರೀತಿ ಕಾಣಿಸಿಕೊಂಡರೆ ಮಧ್ಯಾಹ್ನ ಒಂದು ರೀತಿ ತಿಮ್ಮಪ್ಪನ ದರ್ಶನವಾಗುತ್ತದೆ ಇನ್ನು ರಾತ್ರಿ ಬೇರೆಯೇ ವಿಭಿನ್ನವಾದ ರೀತಿಯಲ್ಲಿ ಕಾಣುತ್ತಾನೆ ತಿಮ್ಮಪ್ಪ.
ಒಂದೇ ದಿನ ಮೂರು ರೀತಿಯಲ್ಲಿ ದರುಶನ ಕೊಡುತ್ತಾನೆ ತಿಮ್ಮಪ್ಪ. ತಿರುಪತಿ ತಿಮ್ಮಪ್ಪ ಎಂದರೆ ದಿನದ ಇಪ್ಪತ್ನಾಲ್ಕು ಗಂಟೆಗಳು ವಾರದ ಏಳೂ ದಿನಗಳು ಅಷ್ಟೇ ಏಕೆ ವರ್ಷದ ಮೂನ್ನುರಾ ಅರವತ್ತೈದು ದಿನಗಳು ಕಾರ್ಯನಿರತನಾಗಿರುತ್ತಾನೆ. ದಣಿವರಿಯದೆ ದರ್ಶನ ನೀಡುವ ಈ ಭಗವಂತನಿಗೆ ಪ್ರತಿನಿತ್ಯ ವಿಶೇಷವಾದ ಪೂಜೆ ಪುನಸ್ಕಾರ ಸೇವೆಗಳು ನಡೆಯುತ್ತಲೇ ಇರುತ್ತವೆ. ಈ ಜಗತ್ತಿನಲ್ಲಿ ತಿರುಪತಿ ಒಂದೇ ತಿಮ್ಮಪ್ಪನೂ ಒಬ್ಬನೇ ಆದರೆ ಭಗವಂತನಿಗೆ ನಡೆಯುವ ಸೇವೆಗಳು ಹಲವು ಒಂದೊಂದು ಸೇವೆಯು ವಿಶಿಷ್ಟ ವಿಭಿನ್ನ ವಿಶೇಷ ವರ್ಣರಂಜಿತ.
ಬಾನುವಾರದಿಂದ ಶನಿವಾರದ ವರೆಗೂ ಪ್ರತಿನಿತ್ಯ ಎಡಬಿಡದೆ ಸೇವೆಗಳು ನಡೆಯುತ್ತವೆ ಪ್ರತಿ ಸೇವೆಗಳು ಅತ್ಯಂತ ವಿಶೇಷ ಮತ್ತು ಶ್ರೀಮಂತಿಕೆಯಿಂದ ಕೂಡಿರುತ್ತವೆ. ತಿಮ್ಮಪ್ಪನಿಗೆ ಪ್ರತಿನಿತ್ಯ ಸೇವೆಗಳು ನಡೆಯುತ್ತವೆ ಆದರೂ ಗುರುವಾರ ನಡೆಯುವ ಸೇವೆಗಳು ಮಾತ್ರ ತುಂಬಾ ವಿಶೇಷವಾಗಿರುತ್ತದೆ.
ಯಾಕೆ ಗುರುವಾರ ನಡೆಯುವ ಸೇವೆಗೆ ಅಷ್ಟು ಮಹತ್ವ ಅಂದರೆ ಗುರುವಾದಂದು ತಿರುಮಲದಲ್ಲಿರುವ ವೆಂಕಟೇಶ್ವರನನ್ನು ನಾವು ಮೂರು ರೂಪದಲ್ಲಿ ನೋಡಬಹುದು. ಇದೇನಿದು ಇರುವವನು ಒಬ್ಬನೇ ತಿಮ್ಮಪ್ಪ ಅವನನ್ನು ಮೂರು ರೂಪದಲ್ಲಿ ಹೇಗೆ ನೋಡುವುದು ಒಬ್ಬನೇ ತಿಮ್ಮಪ್ಪ ಮೂರು ರೂಪದಲ್ಲಿ ಹೇಗೆ ದರ್ಶನ ಕೊಡುವುದಕ್ಕೆ ಸಾಧ್ಯ ಎಂದರೆ ಖಂಡಿತ ಅದು ತಿಮ್ಮಪ್ಪನಿಂದ ಸಾಧ್ಯ ಇದೆ. ತಿಮ್ಮಪ್ಪನಿಗೆ ಗುರುವಾರ ನಡೆಯುವ ಮೂರು ಸೇವೆಗಳಿಗು ಒಂದೊಂದು ವಿಶೇಷವಾದ ಹೆಸರು ಇದೆ. ಈ ಸೇವೆಗಳ ಮೂಲಕ ತಿಮ್ಮಪ್ಪನ ಮೂರು ರೀತಿಯ ದರ್ಶನ ಸಿಗುತ್ತದೆ ಭಕ್ತರಿಗೆ.
ಇದರಲ್ಲಿ ಮೊದಲನೆಯ ಅಮೋಘವಾದ ದರ್ಶನವೇ ನೇತ್ರ ದರ್ಶನ. ನಿತ್ಯ ನಿರ್ಮಲನಾದ ವೆಂಕಟರಮಣನ ನೆತ್ರಗಳನ್ನು ದರುಶನ ಮಾಡುವುದೇ ನೇತ್ರ ದರ್ಶನ. ನಿರುಪಮಾದೇವ ನಿಲವರ್ಣ ನಿಜದೈವ ಎನಿಸಿರುವ ತಿಮ್ಮಪ್ಪನ ನೇತ್ರ ದರ್ಶನ ಮಾಡುವುದು ಎಂದರೆ ಅದು ಸುಲಭದ ಮಾತಲ್ಲ. ತಪ್ಪು ಮಾಡಿದವರನ್ನು ದಂಡಿಸುವ ರೌಧ್ರನೇತ್ರಗಳವು ಶಿಷ್ಟರನ್ನು ರಕ್ಷಣೆ ಮಾಡುವ ದಾಯಾಮಯ ನೆತ್ರಗಳವು. ಪರಮ ಪುಣ್ಯನಾದ ತಿಮ್ಮಪ್ಪನ ಕಣ್ಣುಗಳ ದರುಶನ ಮಾಡುವುದೇ ಸ್ವಾಮಿಯ ಮೊದಲ ರೂಪ. ಗುರುವಾರ ಸ್ವಾಮಿಗೆ ಪ್ರಾತಃಕಾಲದ ಸುಪ್ರಭಾತ ಸೇವೆ ಮುಕ್ತಾಯ ಆಗುತ್ತಿದ್ದಂತೆ ಅರ್ಚಕರು ಗರ್ಭಗುಡಿಯನ್ನು ಪ್ರವೇಶ ಮಾಡುತ್ತಾರೆ
ಏಕಾಂತದಲ್ಲಿ ಸ್ವಾಮಿಗೆ ಹಾಕಿರುವ ಹೂವಿನ ಮಾಲೆಗಳನ್ನು ರತ್ನಾಭರಣಗಳನ್ನು ಸುವರ್ಣ ರತ್ನಹಾರಗಳು ಪಿತಾಂಬರವನ್ನು ತೆಗೆಯುತ್ತಾರೆ ತಿಮ್ಮಪ್ಪನನ್ನು ನಿರಾಭರಣನನ್ನಾಗಿ ಮಡುತ್ತಾರೆ ಪಚ್ಚ ಕರ್ಪೂರದಿಂದ ಸ್ವಾಮಿಯ ಹಣೆಗೆ ಧರಿಸಿರುವ ಉರ್ದ್ವ ಪುಂಡ್ರದ ಗಾತ್ರವನ್ನು ಕಡಿಮೆ ಮಾಡುತ್ತಾರೆ. ಈ ಮೂಲಕ ಸ್ವಾಮಿಯ ಕಣ್ಣುಗಳು ಭಕ್ತರಿಗೆ ಸ್ಪಷ್ಟವಾಗಿ ಕಾಣುವಂತೆ ಮಾಡುತ್ತಾರೆ. ಆ ಸಂದರ್ಭದಲ್ಲಿ ಸಣ್ಣ ನಾಮ ಮಾತ್ರ ಇರುತ್ತದೆ ಆಗ ಶ್ರೀವಾರ್ಯನಯನಾರವಿಂದದ ಸೌಂದರ್ಯವನ್ನು ಅಭೂತಪೂರ್ವವಾಗಿ ಸವಿಯಬಹುದು ಭಕ್ತ ವೃಂದ.
ತಿಮ್ಮಪ್ಪನಿಗೆ ಗುರುವಾರ ನಡೆಯುವ ಮೂರುಸೇವೆಗಳಲ್ಲಿ ಎರಡನೆಯದು ತಿರುಪ್ಪಾವಳಿ ಸೇವೆ ಈ ಸೇವೆಗೆ ಅನ್ನಕುಟೋತ್ಸವ ಅನ್ನಕುಟ ಮಹೋತ್ಸವ ಎಂದು ಕರೆಯುತ್ತಾರೆ. ಸ್ವಾಮಿಯ ನೇತ್ರ ದರ್ಶನದ ನಂತರ ತಿರುಪ್ಪಾವಳಿ ಸೇವೆ ನಡೆಯುತ್ತದೆ. ಈ ಸೇವೆಯಲ್ಲಿ ವೇದ ಪಂಡಿತರು ವೇದ ಪಾರಾಯಣದ ಮೂಲಕ ಶ್ರೀನಿವಾಸನ ಗದ್ಯಗಳನ್ನು ಪಠಿಸುತ್ತಾರೆ ಬಂಗಾರದ ಬಾಗಿಲ ಮುಂದೆ ಶ್ರೀನಿವಾಸನಿಗೆ ಸಮರ್ಪಿಸುವ ಅನ್ನದ ನಿವೇದನೆ ಇದು. ಬಂಗಾರದ ಬಾಗಿಲ ಮುಂದೆ ಗರುಡಾಳ್ವರ ಎದುರು ನಾಲ್ಕು ಸ್ತಂಭಗಳ ನಡುವೆ ನಾಲ್ಕುನೂರಾ ಎಂಬತ್ನಾಲ್ಕು ಕಿಲೋ ಅಕ್ಕಿಯಲ್ಲಿ ತಯಾರಾಗುವ ಪುಳಿಯೋಗರೆಯನ್ನು ದೊಡ್ಡ ಶಿಕರದಂತೆ ಹಾಕಿರುತ್ತಾರೆ.
ಪುಳಿಯೋಗರೆಯ ದೊಡ್ಡ ರಾಶಿಯನ್ನು ಕೆಲ ಭಾಗ ಮಾಡಿ ಅದರ ಮೇಲೆ ದೊಡ್ಡ ಅನ್ನ ಕೂಟವನ್ನು ನಿರ್ಮಿಸಲಾಗುತ್ತದೆ. ಪುಳಿಯೋಗರೆಯನ್ನು ಎಂಟು ದಿಕ್ಕುಗಳಿಗೆ ಎಂಟು ಶಿಖರಗಳನ್ನಾಗಿ ಮಾಡಲಾಗಿರುತ್ತದೆ ಹೀಗೆ ಪುಳಿಯೋಗರೆ ಅನ್ನ ರಾಶಿಯನ್ನು ನೈವೇದ್ಯಕ್ಕೆ ಸಿದ್ದ ಮಾಡಲಾಗುತ್ತದೆ. ಅನ್ನವನ್ನು ಸ್ವಾಮಿಗೇಕೆ ನೈವೇದ್ಯ ಮಾಡಬೇಕು ಅಂದರೆ ನಾವೆಲ್ಲ ಜೀವಿಸುವುದಕ್ಕೆ ಮೂಲವಾಗಿರುವುದೆ ಅನ್ನ ಕಲಿಯುಗದಲ್ಲಿ ನಮ್ಮ ಪ್ರಾಣ ಉಳಿಯುವುದಕ್ಕೆ ಅನ್ನ ಬೇಕೇಬೇಕು ಹೀಗಾಗಿ ಭಗವಂತನೆದುರು ನೀನು ನೀಡಿರುವ ಈ ಪ್ರಾಣದಿಂದ ಧರ್ಮ ಕಾರ್ಯವನ್ನು ಮಾಡಲು ನಿನಗೆ ಪುಳಿಯೋಗರೆಯನ್ನು ಅರ್ಪಿಸುತ್ತಿದ್ದೇನೆ ಸ್ವೀಕರಿಸಿ ಪ್ರಭು ಎಂದು ಅನ್ನ ನೈವೇದ್ಯವನ್ನು ಮಾಡಲಾಗುತ್ತದೆ
ಜೊತೆಗೆ ಈ ಲೋಕವನ್ನು ಸುಭಿಕ್ಷವಾಗಿ ನೋಡಿಕೋ ಎಂದು ಮಾಡುವ ಪುಳಿಯೋಗರೆ ಸೇವೆಯೇ ತಿರುಪ್ಪಾವಾಳಿ ಸೇವೆ. ಈ ಸೇವೆಯನ್ನು ಮಾಡುವ ವೇಳೆ ಭಗವಂತನಿಗೆ ಹೂವಿನ ಅಲಂಕಾರ ಕಡಿಮೆಯಿರುತ್ತದೆ ಹಣೆಯಲ್ಲಿ ಪಚ್ಚಕರ್ಪೂರದ ಉರ್ದ್ವ ಪುಂಡ್ರದ ಗಾತ್ರ ದೊಡ್ಡದಾಗಿರುತ್ತದೆ ತಿಮ್ಮಪ್ಪ ಅಂದರೆ ಶ್ರೀಮಂತಿಕೆ ಆದರೆ ಈ ಸೇವೆಯ ವೇಳೆ ಸ್ವಾಮಿಯನ್ನು ಸರಳವಾಗಿ ಅಲಂಕರಿಸಲಾಗುತ್ತದೆ. ಇದು ಗುರುವಾರ ಕಾಣಸಿಗುವ ತಿಮ್ಮಪ್ಪನ ಎರಡನೇ ರೂಪ.
ಇದರ ನಂತರ ನಡೆಯುವುದೇ ಪೂಲಂಗಿ ಸೇವೆ. ಈ ಸೇವೆಯಲ್ಲಿ ತಿಮ್ಮಪ್ಪನನ್ನು ನೋಡುವುದಕ್ಕೆ ಎರಡು ಕಣ್ಣು ಸಾಲುವುದಿಲ್ಲ ಸೇವಂತಿಗೆ ಗುಲಾಬಿ ಸ್ಫಟಿಕ ಮಲ್ಲಿಗೆ ತುಳಸಿ ಹೀಗೆ ಸುವಾಸನೆ ಭರಿತ ಹೂಗಳು ಬಣ್ಣ ಬಣ್ಣದ ಹಾರಗಳು ತಿಮ್ಮಪ್ಪನನ್ನು ಸಿಂಗರಿಸಲು ಸಜ್ಜಾಗಿ ನಿಂತಿರುವ ಹೂವಿನ ಲೋಕವದು ತಿಮ್ಮಪ್ಪನಿಗೆ ನಡೆಯುವ ಗುರುವಾರದ ಸೇವೆಗಳಲ್ಲಿ ಪೂಲಂಗಿ ಸೇವೆ ರಮಣೀಯವಾದುದು. ವೆಂಕಟೇಶ್ವರ ಸ್ವಾಮಿ ಬಗೆ ಬಗೆಯ ಹೂವಿನ ಅಲಂಕಾರದಲ್ಲಿ ಭಕ್ತರಿಗೆ ಮನ್ಮಥನಂತೆ ಕಾಣುತ್ತಾನೆ.
ಬಣ್ಣ ಬಣ್ಣದ ಹೂವುಗಳನ್ನು ವಸ್ತ್ರಾಭರಣಗಳನ್ನಾಗಿ ಮಾಡಿಕೊಂಡು ದರ್ಶನ ನೀಡುವ ಈ ಸ್ವಾಮಿಯನ್ನು ಎಷ್ಟು ನೋಡಿದರೂ ನಿಮ್ಮ ಕಣ್ಣು ದಣಿಯುವುದಿಲ್ಲ ಯಾವುದೇ ರೇಷ್ಮೆ ಚಿನ್ನ ವಸ್ತ್ರಾಭರಣಗಳಿಲ್ಲದೆ ಕೇವಲ ಹೂವಿನ ಅಲಂಕಾರದಲ್ಲಿ ಸ್ವಾಮಿಯ ದರ್ಶನ ನೀಡುವ ಪೂಲಂಗಿ ಸೇವೆ ಅತ್ಯಂತ ರಮಣೀಯವಾಗಿರುತ್ತದೆ. ತಿಮ್ಮಪ್ಪನ ಈ ರೂಪ ದರ್ಶನವೇ ಗುರುವಾರದ ಸ್ವಾಮಿಯ ಮೂರನೇ ರೂಪ. ಇದಿಷ್ಟು ಗುರುವಾರದ ದಿನ ಸ್ವಾಮಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆಯುವ ಚಮತ್ಕಾರ ಆ ದಿನ ತಿಮ್ಮಪ್ಪ ಅತ್ಯಂತ ವಿಶೇಷವಾಗಿ ರಮ್ಯ ರಮಣೀಯವಾಗಿ ಕಾಣುತ್ತಾನೆ ಎಂಬುದೆ ವಿಶೇಷ.