ಉತ್ತರಕನ್ನಡ (Uttara Kannada) ಜಿಲ್ಲೆ ಶಿರಸಿ ತಾಲೂಕಿನಿಂದ ಹದಿನಾಲ್ಕು ಕಿಲೋಮೀಟರ್ ದೂರದಲ್ಲಿ ಸಹಸ್ರಲಿಂಗ ಎನ್ನುವ ಪ್ರಸಿದ್ದ ತಾಣ ಇದೆ ಹಾಗೆಯೇ ಇಲ್ಲಿ ಶಾಲ್ಮಲಾ ನದಿ ಹರಿಯುತ್ತದೆ ಶಾಲ್ಮಲಾ ನದಿಯ ದಂಡೆಯ ಮೇಲೆ ಸಾವಿರಾರು ಶಿವ ಲಿಂಗಗಳು (Shivalinga) ಇದೆ ಹಾಗೆಯೇ ನೋಡಿದರೆ ಭೂಲೋಕದ ಸ್ವರ್ಗದ ಹಾಗೆ ಇರುತ್ತದೆ ಈ ಸ್ಥಳದಲ್ಲಿ ಸಾವಿರಾರು ವರ್ಷದ ಇತಿಹಾಸ ಇರುತ್ತದೆ ಈ ಲಿಂಗಗಳನ್ನು ಕೆಳದಿ ನಾಯಕರ ಕಾಲದಲ್ಲಿ ಕೆತ್ತಲಾಗಿದೆ ಹಾಗೆಯೇ ಕೆಲವು ಲಿಂಗವನ್ನು ಕೆಳದಿ ನಾಯಕರು ಕೆತ್ತನೆ ಮಾಡಿದ್ದಾರೆ ಹಾಗೆಯೇ ಕೆಲವು ಲಿಂಗಗಳು ಪ್ರಾಕೃತಿಕವಾಗಿ ನಿರ್ಮಾಣಗೊಂಡಿದೆ

ಪ್ರತಿಯೊಂದು ಲಿಂಗದ ಪಕ್ಕದಲ್ಲಿ ನಂದಿಯ ವಿಗ್ರಹ ಸಹ ಇರುತ್ತದೆ ನೋಡಲು ತುಂಬಾ ಆಕರ್ಷವಾಗಿ ಹಾಗೂ ಪ್ರಕೃತಿಯ ನಡುವಿನಲ್ಲಿ ಶಾಲ್ಮಲಾ ನದಿಯ ದಂಡೆಯ ಮೇಲೆ ಒಂದು ಸಾವಿರ ಶಿವಲಿಂಗಗಳು ಇರುವುದು ನೋಡಲು ಎರಡು ಕಣ್ಣು ಸಾಲದು ಶಾಲ್ಮಲಾ ನದಿಯ ಹರಿವು ಜಾಸ್ತಿ ಇರುತ್ತದೆ ರಾತ್ರಿ ವೇಳೆಯಲ್ಲಿ ಎಲ್ಲ ಶಿವಲಿಂಗಗಳು ಮುಚ್ಚಿ ಹೋಗುತ್ತದೆ ಎಲ್ಲ ಶಿಲೆಗಳು ಸಹ ಶಾಲಿಗ್ರಾಮ ಶಿಲೆಗಳಾಗಿದೆ ಸುಮಾರು ಎರಡು ಕಿಲೋಮೀಟರ್ ವರೆಗೆ ಶಿವಲಿಂಗಗಳು ಇರುತ್ತದೆ ನಾವು ಈ ಲೇಖನದ ಮೂಲಕ ಶಾಲ್ಮಲಾ ನದಿಯ ದಂಡೆಯ ಮೇಲೆ ಇರುವ ಸಹಸ್ರಲಿಂಗ ಬಗ್ಗೆ ತಿಳಿದುಕೊಳ್ಳೋಣ.

ಶಾಲ್ಮಲಾ ನದಿಯಲ್ಲಿ ಒಂದು ಸಾವಿರ ಶಿವಲಿಂಗ ಗಳು ಇದೆ ಈ (Shivalinga) ಶಿವಲಿಂಗ ಇರುವ ಸ್ಥಳ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಿಂದ 14 ಕಿಲೋಮೀಟರ್ ಪ್ರಯಾಣ ಮಾಡಿದರೆ ಶಾಲ್ಮಲಾ ನದಿ ಕಂಡು ಬರುತ್ತದೆ ಅಲ್ಲಿ ನದಿ ಬಂಡೆ ಗಳಲ್ಲಿ ಒಂದು ಸಾವಿರ ಶಿವಲಿಂಗಗಳು ಕಂಡು ಬರುತ್ತದೆ ಸಾಕ್ಷಾತ ಶಿವ ಪರಮಾತ್ಮ ಧರೆಗಿಳಿದ ಹಾಗೆ ಇರುತ್ತದೆ ಮಳೆಗಾಲದಲ್ಲಿ ಶಾಲ್ಮಲಾ ನದಿಯ ಹರಿವು ಜಾಸ್ತಿ ಇರುತ್ತದೆ ಒಂದು ಸಾವಿರ ಶಿವಲಿಂಗ ಮುಳುಗಿ ಹೋಗುತ್ತದೆ ಶಾಲ್ಮಲ ನದಿ ಸಮುದ್ರ ರೀತಿಯಲ್ಲಿ ಕೆಲಸ ಮಾಡುತ್ತದೆ ಸಮುದ್ರದ ನೀರಿನ ಮಟ್ಟ ರಾತ್ರಿ ಜಾಸ್ತಿ ಆಗುತ್ತದೆ ಹಾಗೆಯೇ ಬೆಳಿಗ್ಗೆ ಕಡಿಮೆ ಆಗುತ್ತದೆ ಹಾಗೆಯೇ ಶಾಲ್ಮಲಾ ನದಿ ಕೂಡ ರಾತ್ರಿ ಹರಿವು ಹೆಚ್ಚಾಗುತ್ತದೆ ಬೆಳಿಗ್ಗೆ ಕಡಿಮೆ ಆಗುತ್ತದೆ ಒಂದು ಸಾವಿರ ಲಿಂಗಗಳು ರಾತ್ರಿ ಮುಳುಗಿ ಹೋಗುತ್ತದೆ

ಬೆಳಿಗ್ಗೆ ಕಾಣಿಸುತ್ತದೆ ಹಾಗಾಗಿ ಮಾಯಾವಿ ಲಿಂಗಗಳು ಎಂದು ಕರೆಯುತ್ತಾರೆ ಒಂದೊಂದು ಶಿವಲಿಂಗಕ್ಕೆ ಸಹ ನಂದಿ ವಿಗ್ರಹ ಕೆತ್ತಲಾಗಿದೆ ಹಾಗೆಯೇ ಮಧ್ಯ ಭಾಗದಲ್ಲಿ ಗಣಪತಿ ಹಾಗೂ ಹನುಮಂತನ ವಿಗ್ರಹವನ್ನು ನೋಡಬಹುದಾಗಿದೆ ಎಲ್ಲ ಶಿಲೆಗಳು ಸಹ ಶಾಲಿಗ್ರಾಮ (Shali Grama) ಶಿಲೆಗಳಾಗಿದೆ ಸುಮಾರು ಎರಡು ಕಿಲೋಮೀಟರ್ ವರೆಗೆ ಶಿವಲಿಂಗಗಳು ಇರುತ್ತದೆ ನೋಡಲು ಸ್ವರ್ಗದ ರೂಪದಲ್ಲಿದೆ ಮಳೆ ಇಲ್ಲದ ಸಮಯದಲ್ಲಿ ಬಂಡೆಗಳ ಮೇಲೆ ಹೋಗಿ ಪೂಜೆ ಸಲ್ಲಿಸಬಹುದಾಗಿದೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ .

ಭಕ್ತರು ಶಾಲ್ಮಲಾ ನದಿಯಲ್ಲಿ ಸ್ನಾನ ಮಾಡಿ ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಾರೆ ಹಾಗೆಯೇ ತೂಗು ಸೇತುವೆ ಸಹ ಇರುತ್ತದೆ 1688 ರಿಂದ 1718ವರೆಗೆ ಈ ಪ್ರದೇಶವನ್ನು ಆಳ್ವಿಕೆ ಮಾಡಿದ್ದು ಅರಸಪ್ಪ ನಾಯಕ ಹಾಗೆಯೇ ಅರಸಪ್ಪ ನಾಯಕನಿಗೆ ಮಕ್ಕಳು ಇರುವುದು ಇಲ್ಲ ಆದ ಕಾರಣ ತಮಗೆ ಮಕ್ಕಳಾದರೆ ಶಾಲ್ಮಲಾ ನದಿಯ ದಂಡೆಯ ಮೇಲೆ ಶಿವಲಿಂಗ ಕೆತ್ತನೆ ಮಾಡುತ್ತೇನೆ ಎಂದು ಶಿವ ಪರಮಾತ್ಮನಲ್ಲಿ ಹರಕೆ ಮಾಡುತ್ತಾರೆ

ಹಾಗೆಯೇ ಶಾಲ್ಮಲಾ ನದಿಯ ದಂಡೆಯ ಮೇಲೆ ಎರಡು ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದರು ನಂತರ ಶಿರಸಿ ಸಾಮ್ರಾಜ್ಯದ ಹೊಸ ನಾಯಕರಾದ ಸದಾಶಿವ ನಾಯಕ ಅಪ್ಪಟ ಶಿವ ಭಕ್ತರಾಗಿದ್ದರು ಹಾಗಾಗಿ ಒಂದು ಸಾವಿರ ಶಿವಲಿಂಗವನ್ನು ಕೆತ್ತನೆ ಮಾಡಿ ಪ್ರತಿಷ್ಠಾಪನೆ ಮಾಡಿದ್ದರು. ಹಾಗೆಯೇ ಶಾಲ್ಮಲಾ ನದಿ ಆಂಟಿ ಸಪ್ಟಿಕ ಗುಣವನ್ನು ಹೊಂದಿದೆ ಹಾಗೆಯೇ ರೋಗ ನಿರೋಧಕ ಶಕ್ತಿ ಸಹ ಕಂಡು ಬಂದಿದೆ

ಶಾಲ್ಮಲಾ ನದಿಯಲ್ಲಿ ಸ್ನಾನ ಮಾಡಿದರೆ ಚರ್ಮರೋಗದ ಸಮಸ್ಯೆ ಇದ್ದರೆ ನಿವಾರಣೆ ಆಗುತ್ತದೆ ವಿಜ್ಞಾನಿಗಳು ನಡೆಸಿದ ಪರೀಕ್ಷೆಯಲ್ಲಿ ಸಹ ಇದನ್ನು ಹೇಳಲಾಗಿದೆ ಶಾಲ್ಮಲಾ ನದಿ ಸಾವಿರಾರು ಕಿಲೋಮೀಟರ್ ನಿಂದಾ ಅರಣ್ಯ ಪ್ರದೇಶದಿಂದ ಹರಿದುಕೊಂಡು ಬರುವುದರಿಂದ ಕಾಡಿನಲ್ಲಿರುವ ಔಷಧೀಯ ಸಸ್ಯಗಳ ಗುಣ ನೀರಿನಲ್ಲಿ ಕಂಡುಬರುತ್ತದೆ ಇದೊಂದು ಅಮೃತ ನದಿಯಾಗಿದೆ ಶಿವರಾತ್ರಿ ಹಬ್ಬದಂದು ಲಕ್ಷಕ್ಕೂ ಅಧಿಕ ಮಂದಿ ಸಹಸ್ರಲಿಂಗಕ್ಕೆ ಬರುತ್ತಾರೆ

ಸಾವಿರಾರು ವರ್ಷಗಳಿಂದ ಶಿವಲಿಂಗಗಳು ನೆಲೆಸಿದೆ ಹಾಗೆಯೇ ರಾಜರು ಪ್ರತಿಷ್ಠಾಪಿಸಿದ ಶಿವಲಿಂಗ ಎರಡರಲ್ಲಿ ಸಹ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತದೆ ಹೀಗೆ ಶಿರಸಿಯ ಸಮೀಪದ ಸಹಸ್ತ್ರಲಿಂಗವು ತುಂಬಾ ಪ್ರಸಿದ್ಧಿಯನ್ನು ಪಡೆದಿದೆ ಹಾಗೆಯೇ ಪ್ರವಾಸಿ ತಾಣವಾಗಿದ್ದು ಅನೇಕ ಭಕ್ತರು ದರ್ಶನ ಮಾಡುತ್ತಾರೆ ಶಾಲ್ಮಲಾ ನದಿಯ ಪುಣ್ಯ ತೀರ್ಥ ಸ್ನಾನವನ್ನು ಮಾಡಿ ಪೂಜೆ ಸಲ್ಲಿಸುತ್ತಾರೆ.

Leave a Reply

Your email address will not be published. Required fields are marked *