Viral News: ಈಗಿನ ಕಾಲದಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡುವುದಕ್ಕೆ ಯಾರೂ ಕೂಡ ಮುಂದೆ ಬರುವುದಿಲ್ಲ. ಆದರೆ ಈ ನಿಜವಾದ ಘಟನೆಯನ್ನು ನೀವು ಕೇಳಿದರೆ ನಿಜಕ್ಕೂ ಶಾಕ್ ಎಂದು ಎನಿಸುತ್ತದೆ. (Baba Ka Daba) ಬಾಬಾ ಕಾ ಡಾಬಾ ಎನ್ನುವ ವಯಸ್ಸಾದ ಗಂಡ ಮತ್ತು ಹೆಂಡತಿಯ ವೀಡಿಯೋ ವೈರಲ್ ಆಗಿರುವುದು ನಿಮಗೆಲ್ಲರಿಗೂ ಗೊತ್ತೇ ಇರುತ್ತದೆ.

ಕರೋನಾ ಹಾವಳಿಯಿಂದ ಇಡೀ ಭಾರತ ಲಾಕ್‌ ಡೌನ್ ಆಗಿತ್ತು ಆ ಸಮಯದಲ್ಲಿ ಇವರು ನಡೆಸುತ್ತಿದ್ದ ಒಂದು ಚಿಕ್ಕ ಹೋಟೆಲ್ ನ ವ್ಯಾಪಾರ ತುಂಬ ಕಡಿಮೆಯಾಗಿತ್ತು. ಇದರಿಂದ ಅವರಿಗೆ ತುಂಬ ನಷ್ಟವಾಗಿತ್ತು ಕೂಡ ಹಾಗಾಗಿ ಇವರಿಬ್ಬರೂ ನಮಗೆ ಸಹಾಯ ಮಾಡಿ ಎಂದು ಕೇಳಿಕೊಂಡಿರುವ ವಿಡಿಯೋ (Youtube) ಯೂಟ್ಯೂಬಲ್ಲಿ ತುಂಬಾನೆ ವೈರಲ್ ಆಗಿತ್ತು.

ಇದನ್ನು ನೋಡಿದ ಸಾಕಷ್ಟು ಜನರು ಅಲ್ಲಿಗೆ ಹೋಗಿ ಆ ದಂಪತಿಗಳಿಗೆ ಸಹಾಯವನ್ನು ಮಾಡಿದ್ದಾರೆ. ಇದರಂತೆಯೇ ಗುಜರಾತ್ ನಲ್ಲಿ ಮುಬಾರಕ್ ನಗರದಲ್ಲಿ ಇರುವ ದಚ್ಚು ರಾಧಾ ಎನ್ನುವ ಹೊಟೇಲ್ ಅನ್ನು ದಚ್ಚು ದಾದಾ ಎನ್ನುವ 70 ವರ್ಷದ ಮಾಲೀಕ ನಡೆಸುತ್ತಿದ್ದರು. ಇಲ್ಲಿ ವಿಧವಾದ ಅಡುಗೆಯ ತಯಾರಿಕೆಗಳನ್ನು ಮಾಡಲಾಗುತ್ತದೆ. ಒಂದು ದೊಡ್ಡ ತಟ್ಟೆಯಲ್ಲಿ ಚಪಾತಿ ಪಲ್ಯ ಅನ್ನ ಸಾಂಬಾರ್ ಇನ್ನೂ ಸಾಕಷ್ಟು ವಿಧವಾದ ಊಟವನ್ನು ನೀಡುತ್ತಿದ್ದರು. ಆದರೆ ಇವರು ಒಂದು ತಟ್ಟೆಗೆ ಕೇವಲ 20 ರೂ.ಗಳನ್ನು ಮಾತ್ರ ತೆಗೆದುಕೊಳ್ಳುತ್ತಿದ್ದರು.

ಇದನ್ನು ನೋಡಿದ ಜನರಿಗೆ ಅವರ ಮೇಲೆ ಅನುಮಾನ ಶುರುವಾಯಿತು. ಇಷ್ಟೊಂದು ವಿಧವಾದ ರುಚಿಕರವಾದ ಊಟವನ್ನು ನೀಡಿ ಇದಕ್ಕೆ ಕೇವಲ 20 ರೂ.ಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಯಾಕೆ ಎಂದು ಆತನನ್ನು ವಿಚಾರಿಸಿದರು. ಆಗ ದಚ್ಚು ದಾದಾ ಹೇಳಿದ್ದು ಒಂದೇ ಕೊರೋನಾ ಸಮಯದಲ್ಲಿ ನಾವೆಲ್ಲರೂ ಒಂದು ಪಾಠವನ್ನು ಕಲಿತಿದ್ದೇವೆ. ಅದು ಏನೆಂದರೆ ನಾವು ಸತ್ತ ಮೇಲೆ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಇದ್ದಾಗ ಮತ್ತೊಬ್ಬರಿಗೆ ಸಹಾಯ ಮಾಡಬೇಕು ಎನ್ನುವ ಒಂದೇ ಕಾರಣಕ್ಕೆ ನಾನು ಈ ರೀತಿ ಮಾಡುತ್ತಿದ್ದೇನೆ.

ಇದನ್ನೂ ಓದಿ..ನೋಡೋಕೆ ಚಿಕ್ಕ ಹಳ್ಳಿ ಆದ್ರೆ ಈ ಊರಲ್ಲಿ 150 ಮಂದಿ ವೈದ್ಯರಾಗಿ ಉನ್ನತ ಹುದ್ದೆಯಲ್ಲಿದ್ದಾರೆ, ಅಷ್ಟೇ ಅಲ್ಲ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ.

ನಾನು ಎಲ್ಲರಿಗೂ ಊಟವನ್ನು ಉಚಿತವಾಗಿ ಕೊಡಬೇಕೆನ್ನುವ ಆಸೆಯಿದೆ. ಆದರೆ ಆ ದೇವರು ನನಗೆ ಇನ್ನೂ ಅಷ್ಟು ಶಕ್ತಿ ಕೊಟ್ಟಿಲ್ಲ. ಇದರಿಂದ ಊಟಕ್ಕೆ ಎಷ್ಟು ಖರ್ಚಾಗುತ್ತದೆ ಅಷ್ಟು ಹಣವನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ. ಇನ್ನೂ ಕೆಲವರು ಆ 20 ರೂ.ಗಳನ್ನು ಕೊಡುವುದಕ್ಕೆ ಆಗದೇ ಇರುವವರಿಗೆ ನಾನು ಉಚಿತ ಊಟವನ್ನು ನೀಡುತ್ತಿದ್ದೇನೆ ಎಂದು ಹೇಳಿದರು. ಇದನ್ನು ಕೇಳಿದರೆ ನಿಜಕ್ಕೂ ಸಂತೋಷವಾಗುತ್ತದೆ. ಈಗಿನ ಕಾಲದಲ್ಲೂ ಈ ರೀತಿ ಸಹಾಯ ಮಾಡುವ ವ್ಯಕ್ತಿಗಳು ಇದ್ದಾರೆ ಎಂದರೆ ತುಂಬಾ ಖುಷಿ ಎನಿಸುತ್ತದೆ.

By

Leave a Reply

Your email address will not be published. Required fields are marked *