ನಮ್ಮ ಹಿಂದೂ ಸಂಪ್ರದಾಯದಲ್ಲಿ ಆಚರಣೆಗೆ ಹಲವಾರು ಹಬ್ಬಗಳು ಇವೆ. ಅದರಲ್ಲಿ ಪರಮೇಶ್ವರನನ್ನು ಆರಾಧಿಸುವ ಮಹಾಶಿವರಾತ್ರಿ ಕೂಡಾ ಒಂದು. ಬಹಳ ಭಕ್ತಿಯಿಂದ ಶ್ರದ್ಧೆಯಿಂದ ದೇಶದಾದ್ಯಂತ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಅದರಲ್ಲೂ ಶಿವನ ಆರಾಧಕರು ಮಹಾಶಿವರಾತ್ರಿಯಂದು ಹಲವಾರು ವ್ರತ, ಉಪವಾಸ ಆಚರಣೆಗಳನ್ನು ಮಾಡುತ್ತಾರೆ. ಈ ಮಹಾ ಶಿವರಾತ್ರಿಯ ಹಬ್ಬದಂದು ಏನೆಲ್ಲ ಮಾಡಬಹುದು ಏನೆಲ್ಲ ಮಾಡಬಾರದು ಅನ್ನುವುದನ್ನು ತಿಳಿದುಕೊಳ್ಳೋಣ.

ಶಿವರಾತ್ರಿಯ ದಿನ ಶಿವನಿಗೆ ಪೂಜೆ. ಶಿವ ರಾತ್ರಿಯ ದಿನ ಶಿವ ಪೂಜನೀಯ ಶಿವನಿಗೆ ಸಕಲ ಸಂಕಷ್ಟ ನಿವಾರಣೆಗಾಗಿ, ಸಕಲ ಪ್ರಾಪ್ತಿಗಾಗಿ ಶಿವನನ್ನು ಪ್ರಾರ್ಥಿಸಿ ಪೂಜಿಸುವ ದಿನ. ಬೆಳಿಗ್ಗೆ ಬೇಗನೆ ಎದ್ದು ಶುದ್ಧವಾಗಿ ಶುಭ್ರ ಬಟ್ಟೆಯನ್ನು ಧರಿಸಿ ಒಳ್ಳೆಯ ಮನಸ್ಸಿನಿಂದ ಶಿವನಿಗೆ ಪೂಜೆಯನ್ನು ಮಾಡಬೇಕು. ಶಿವಲಿಂಗದ ಪೂಜೆ… ಸಾಮಾನ್ಯವಾಗಿ ಮನೆಗಳಲ್ಲಿ ಶಿವಲಿಂಗ ಅಥವಾ ಸಾಲಿಗ್ರಾಮವನ್ನು ಇಟ್ಟಿರುತ್ತಾರೆ ಅದನ್ನು ನೀರಿನಿಂದ ಶುದ್ಧ ಮಾಡಿಕೊಳ್ಳಬೇಕು. ಶಿವಲಿಂಗ ಅಥವಾ ಶಿವ ವಿಗ್ರಹಕ್ಕೆ ಅಭಿಷೇಕವನ್ನು ಮಾಡಬೇಕು. ಶಿವನಿಗೆ ವಿಶೇಷವಾಗಿ ಹಾಲಿನ ಅಭಿಶೇಖವನ್ನೂ ಕೂಡಾ ಮಾಡಬೇಕಾಗುತ್ತದೆ. ಅದಲ್ಲದೇ ಜೇನುತುಪ್ಪ ಮತ್ತು ಶ್ರೀಗಂಧದಿಂದ ಶಿವನಿಗೆ ಅಭಿಷೇಕವನ್ನು ಮಾಡಿ ಶಿವನಿಗೆ ಪೂಜೆಯನ್ನು ಮಾಡಬೇಕಾಗುತ್ತದೆ. ಶಿವನಿಗೆ ಬಿಳಿ ಬಣ್ಣದ ಹೂವು ಇಷ್ಟ ಅಂತ ಹೇಳುತ್ತಾರೆ. ಅದರ ಜೊತೆಗೆ ಕೇದಿಗೆ ಹೂವನ್ನು ಕೂಡಾ ಶಿವನಿಗೆ ಅರ್ಪಿಸಬಹುದು. ಶಿವನನ್ನು ಪೂಜಿಸಲು ಭಕ್ತಿಯಿಂದಬಿಲ್ವ ಪತ್ರೆಯನ್ನು ಅರ್ಪಿಸಿದರೂ ಸಾಕಾಗುತ್ತದೆ. ಹಾಗಾಗಿ ಬಿಲ್ವ ಪಾತ್ರೆಯನ್ನು ಇತ್ತು ಪೂಜಿಸುವುದು ಸೂಕ್ತ.

ಶಿವರಾತ್ರಿಯಂದು ಶಿವನ ದೇವಸ್ಥಾನಕ್ಕೆ ಹೋಗು ದೇವರ ದರ್ಶನ ಪಡೆಯುವುದು ಸೂಕ್ತ. ಹಾಗಾಗಿ ನಿಮ್ಮ ಮನೆಯ ಸಮೀಪ ಇರುವಂತಹ ಶಿವನ ದೇವಸ್ಥಾನಕ್ಕೆ ಕುಟುಂಬದವರೆಲ್ಲರೂ ಹೋಗಿ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡುಬರಬೇಕು. ಸಾಮಾನ್ಯವಾಗಿ ಶಿವನಿಗೆ ಹಾಲು ಮತ್ತು ಅದರ ಮೂಲಗಳಿಂದ ಮಾಡುದ ಸಿಹಿಯನ್ನು ನೈವೇದ್ಯವಾಗಿ ಅರ್ಪಿಸಬೇಕು. ಶಿವರಾತ್ರಿ ಶಿವನನ್ನು ಆರಾಧಿಸುವ ದಿನ. ಈ ದಿನವನ್ನು 108 ಬಾರಿ ಶಿವನ ನಾಮವನ್ನು ಪಠಣೆ ಮಾಡುವುದು ಒಳ್ಳೆಯದು. ಅಲ್ಲದೇ ಲಿಂಗಾಷ್ಟಕ ಮತ್ತು ಇತರೆ ಸ್ತೋತ್ರಗಳನ್ನು ಜಪಿಸುವುದು ಮತ್ತು ಇತರರಿಗೆ ಹೇಳಿಕೊಡುವುದು ಕೂಡ ತುಂಬಾ ಒಳ್ಳೆಯದು. ಹಾಗೆ ಈ ದಿನ ಶಿವನ ಮಾಂತ್ರ ಆದ ಓಂ ನಮಃ ಶಿವಾಯ ಎಂಬ ಮಂತ್ರವನ್ನು 108 ಬಾರಿ ಜಪಿಸುವುದು ಒಳ್ಳೆಯದು. ಶಿವರಾತ್ರಿಯಂದು ಉಪವಾಸ ಮಾಡುವುದು ಮೊದಲಿನಿಂದಲೂ ಬಂದ ಪದ್ಧತಿ. ಯಾವುದೇ ವಯಸ್ಸಿನವರು ಆದರೂ ಕೂಡಾ ತಮಗೆ ಸಾಧ್ಯ ಆಗುವ ರೀತಿಯಲ್ಲಿ ಉಪವಾಸವನ್ನು ಮಾಡಬಹುದು. ಈ ದಿನ ಕೇವಲ ಫಲಹಾರಗಳನ್ನು ಮಾತ್ರ ಸೇವಿಸಬೇಕಾಗುತ್ತದೆ. ಶಿವರಾತ್ರಿಯ ದಿನ ಶಿವ ರಾತ್ರಿ ಎಲ್ಲ ತಾಂಡವ ಆಡುತ್ತಾ ಇರುತ್ತಾನೆ ಎಂಬ ನಂಬಿಕೆ ಇದೆ ಹಾಗಾಗಿ ನಾವೂ ಜಾಗರಣೆಯನ್ನು ಮಾಡಬೇಕಾಗುತ್ತದೆ. ಶಿವನ ಎಲ್ಲಾ ದೇವಾಲಯಗಳಲ್ಲಿಯೂ ಕೂಡ ಬೆಳಗಿನವರೆಗೂ ಜಾಗರಣೆಯನ್ನು ಮಾಡಲಾಗುತ್ತದೆ. ನ್ರತ್ಯ, ಭಜನೆ ಹೀಗೆ ಹಲವಾರು ಕಾರ್ಯಕರಾಮಗಳನ್ನು ಆಯೋಜಿಸಿ ಜಾಗರಣೆಯನ್ನು ಮಾಡಲಾಗುತ್ತದೆ. ಇಂತಹ ಸಮಾರಂಭಗಗಲ್ಲಿ ಪಾಲ್ಗೊಂಡು ನಾವೂ ಕೂಡಾ ಜಾಗರಣೆಯನ್ನ ಮಾಡುವುದು ತುಂಬಾ ಮುಖ್ಯ. ಮಂತ್ರ ಪಠಣೆಯ ಮೂಲಕ ಜಾಗರಣೆ ಮಾಡುತ್ತಾ ಶಿವನನ್ನು ಪೂಜಿಸಿದರೆ ನಿಮ್ಮ ಸಕಲ ದೋಷ ನಿವಾರಣೆ ಆಗಿ ಸಕಲ ಪ್ರಾಪ್ತಿ ಆಗುತ್ತದೆ ಎಂಬುವುದು ನಮ್ಮ ಹಿರಿಯರ ಭಾವನೆ. ಇವಿಷ್ಟು ಶಿವರಾತ್ರಿಯ ಕುರಿತಾದ ಒಂದು ಪುಟ್ಟ ಮಾಹಿತಿ.

Leave a Reply

Your email address will not be published. Required fields are marked *