ಭೂಮಿ ಮೇಲೆ ಹಲವಾರು ಪಕ್ಷಿ ಪ್ರಾಣಿಗಳು ವಾಸಿಸುತ್ತಿವೆ. ಭೂಮಿ ಮೇಲೆ ವಾಸಿಸುತ್ತಿರುವ ಅತ್ಯಂತ ದೊಡ್ಡ ಪಕ್ಷಿ ಎಂದರೆ ಅದು ಆಸ್ಟ್ರಿಚ್. ಆಸ್ಟ್ರಿಚ್ ಇದನ್ನು ನಮ್ಮ ಭಾಷೆಯಲ್ಲಿ ಹೇಳುವುದಾದರೆ ಉಷ್ಟ್ರಪಕ್ಷಿ.ನಾವು ಇಲ್ಲಿ ಉಷ್ಟ್ರಪಕ್ಷಿಯ ಬಗ್ಗೆ ವಿಶೇಷ ಮಾಹಿತಿಗಳನ್ನು ತಿಳಿಯೋಣ.

ಉಷ್ಟ್ರಪಕ್ಷಿಯು ಪ್ರಪಂಚದಲ್ಲಿ ಭೂಮಿ ಮೇಲೆ ವಾಸಿಸುವ ಅತ್ಯಂತ ದೊಡ್ಡಪಕ್ಷಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೆಚ್ಚಾಗಿ ಆಫ್ರಿಕಾ ಖಂಡದಲ್ಲಿ ಕಂಡು ಬರುತ್ತದೆ. ಇದರ ಎತ್ತರ ಸುಮಾರು 5ವರೆ ಅಡಿಯಿಂದ 7ಅಡಿಗಳು. ಇನ್ನು ಗಂಡು ಪಕ್ಷಿಗಳು ಸರಿಯಾಗಿ ಬೆಳೆದರೆ 7ರಿಂದ 9ಅಡಿಗಳಷ್ಟು ಎತ್ತರವಾಗಿರುತ್ತದೆ. ಇದು ಸುಮಾರು 100ರಿಂದ 160kg ತೂಕ ಇರುತ್ತದೆ.

ಇವುಗಳ ಕಣ್ಣಿನ ದೃಷ್ಟಿ ತುಂಬಾ ಚರುಕು. ಇವುಗಳು ಶತ್ರುಗಳನ್ನು ದೂರದಿಂದಲೇ ನೋಡುವ ಸಾಮರ್ಥ್ಯ ಈ ಹಕ್ಕಿಗಿದೆ. ಪಕ್ಷಿ ಜಾತಿಗೆ ಸೇರಿದರೂ ಇವು ಹಾರುವುದಿಲ್ಲ.ಆದರೆ ಒಂದು ಗಂಟೆಗೆ 70km ಓಡುವ ಸಾಮರ್ಥ್ಯ ಇದಕ್ಕಿದೆ.ಎಲ್ಲ ಹಕ್ಕಿಗಳಂತೆ ಇದಕ್ಕೆ 3 ಬೆರಳಿಲ್ಲ.ಕೇವಲ 2 ಬೆರಳುಗಳಿವೆ.ಉಷ್ಟ್ರಪಕ್ಷಿ ಸಸ್ಯಾಹಾರಿ. ಇದರ ಮುಖ್ಯ ಆಹಾರ ಹುಲ್ಲು.ಮತ್ತೆ ಕಲ್ಲು, ಮೊಳೆ ಇವುಗಳೆಲ್ಲವನ್ನು ನುಂಗುತ್ತದೆ.

ಇವುಗಳ ಕಣ್ಣು ತುಂಬಾ ದೊಡ್ಡದಾಗಿ ಇದ್ದು ಸುಮಾರು 5cm ಇರುತ್ತದೆ.ಇವುಗಳ ರೆಕ್ಕೆಗಳು 2ಮೀಟರ್ ನಷ್ಟು ಇದೆ.ಇವುಗಳಿಗೆ ಹಲ್ಲುಗಳಿಲ್ಲ. ಇದು ಹೊಟ್ಟೆಯಲ್ಲಿ ಸುಮಾರು ಒಂದು ಕೆ.ಜಿ.ಯಷ್ಟು ಕಲ್ಲನ್ನು ಇಟ್ಟುಗೊಂಡಿರುತ್ತವೆ.ನೀರಿಲ್ಲದೆ ಹಲವು ದಿನ ಬದುಕುತ್ತವೆ.ಬರೋಬ್ಬರಿ 50 ರಿಂದ 60ವರ್ಷಗಳ ಕಾಲ ಬದುಕೋ ಈ ಪಕ್ಷಿಗೆ ಯಾವುದೇ ರೋಗ ಬರುವುದಿಲ್ಲ.

ಇವು ಒಂದು ವರ್ಷ ಆದ ಮೇಲೆ ಮೊಟ್ಟೆ ಇಡಲು ಶುರುಮಾಡುತ್ತವೆ. 3ದಿನಕ್ಕೆ ಒಂದು ಮೊಟ್ಟೆ ಇಡುತ್ತದೆ.ಸುಮಾರು 37ಕೋಳಿ ಮೊಟ್ಟೆಗೆ ಇದರ ಒಂದು ಮೊಟ್ಟೆ ಸಮವಾಗಿರುತ್ತದೆ. ಒಂದು ಉಷ್ಟ್ರಪಕ್ಷಿಯ ಮೊಟ್ಟೆಗೆ 1000ರೂಪಾಯಿಗಳ ಬೆಲೆಯಿದೆ.

25000 ವರ್ಷಗಳ ಹಿಂದೆ ಭಾರತದಲ್ಲಿ ಇದು ವಾಸವಾಗಿತ್ತು. ಆಫ್ರಿಕಾದಲ್ಲಿ ಕಾಣ ಸಿಗುವ ಈ ಪಕ್ಷಿಯ ಹೊರ ಕವಚ ಮಧ್ಯಪ್ರದೇಶದಲ್ಲಿ ಸಿಕ್ಕಿತ್ತು.ಇದನ್ನು ಸಂಶೋಧನೆಗೆ ಒಳಪಡಿಸಿದಾಗ ತಿಳಿಯಿತು ಸಿಕ್ಕ ಕವಚಕ್ಕೂ ಆಫ್ರಿಕಾದಲ್ಲಿ ಕಾಣಸಿಗುವ ಉಷ್ಟ್ರಪಕ್ಷಿಯ ಹೊರ ಕವಚಕ್ಕೂ ಒಂದೇ ಸಾಮ್ಯತೆ ಇತ್ತು.ಇದರಿಂದ 25000 ವರ್ಷಗಳ ಕಾಲದ ಹಿಂದೆ ಭಾರತದಲ್ಲಿ ಇತ್ತು ಎಂದು ತಿಳಿಯಿತು.

ಇವು ತಮ್ಮ ಮೊಟ್ಟೆಗಳನ್ನು ತುಂಬಾ ಸುರಕ್ಷಿತವಾಗಿ ಇಟ್ಟುಕೊಳ್ಳುತ್ತವೆ.ಬೇರೇ ಪಕ್ಷಿಗಳ ಹಾಗೇ ಗೂಡು ಕಟ್ಟುವುದಿಲ್ಲ.ಮಣ್ಣಿನಲ್ಲಿ ಒಂದು ಹೊಂಡವನ್ನು ಮಾಡಿ ಸುರಕ್ಷಿತವಾಗಿ ಇಡುತ್ತವೆ.ಅವುಗಳನ್ನು ಕಡಿಯುವುದು ತುಂಬಾ ಕಷ್ಟದ ಕೆಲಸ. ಹಾಗಾಗಿ ಆದಿವಾಸಿಗಳು ಈ ಉಷ್ಟ್ರಪಕ್ಷಿಯ ವೇಷ ಹಾಕಿಕೊಂಡು ಮೊಟ್ಟೆಗಳನ್ನು ಕಡಿಯುತ್ತಿದ್ದರು. ಈ ಮೊಟ್ಟೆಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ ಇದರ ಬೆಲೆಯೂ ಹೆಚ್ಚಾಗಿದೆ. ಇನ್ನು ಹೆಚ್ಚಿನ ಉಪಯುಕ್ತ ವಿಚಾರಗಳನ್ನು ತಿಳಿಯಲು ನಮ್ಮ ಪೇಜ್ ಅನ್ನು ಫಾಲೋ ಮಾಡಿ ಜೊತೆಗೆ ಈ ಕೆಳಗಿನ ವಿಡಿಯೋ ನೋಡಿ

By

Leave a Reply

Your email address will not be published. Required fields are marked *