ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ನೇರ ಸಾಲ ಸೇರಿದಂತೆ ಹಲವು ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿ

0 207

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಎರಡು ಸಾವಿರದ ಇಪ್ಪತ್ತೊಂದು ಇಪ್ಪತ್ತೆರಡರ ವಿವಿಧ ಯೋಜನೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಹಾಗಾದರೆ ಅರ್ಜಿಯನ್ನು ಸಲ್ಲಿಸಲು ಯಾವ ಯಾವ ಅರ್ಹತೆಗಳು ಇರಬೇಕು ಯಾವ ಯಾವ ಯೋಜನೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ ಅರ್ಜಿ ಸಲ್ಲಿಸುವ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಈ ಎಲ್ಲ ಸಂಪೂರ್ಣವಾದ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಎರಡು ಸಾವಿರದ ಇಪ್ಪತ್ತೊಂದು ಇಪ್ಪತ್ತೆರಡನೇ ಸಾಲಿನ ಪರಿಶಿಷ್ಟ ಜಾತಿಯ ಬಂಜಾರ ಮತ್ತು ಲಂಬಾಣಿ ಫಲಾಪೇಕ್ಷೆಗಳಿಂದ ಯಾವ ಯಾವ ಯೋಜನೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂಬುದನ್ನು ನೋಡುವುದಾದರೆ ಮೊದಲನೇಯದು

ಸ್ವಯಂ ಉದ್ಯೋಗ ಯೋಜನೆ ಅದರಡಿಯಲ್ಲಿ ನೇರ ಸಾಲ ಯೋಜನೆ ಇಲ್ಲಿ ಹಣ್ಣು ಹಂಪಲು ಮೀನು ಮಾಂಸಮಾರಾಟ ಕುರಿ ಹಂದಿ ಮೊಲ ಸಾಕಾಣಿಕೆ ಅಥವಾ ಮಳಿಗೆ ಅಥವಾ ತಳ್ಳುಗಾಡಿ ದುಡಿಮೆ ಇತ್ಯಾದಿ ಕಿರು ಆರ್ಥಿಕ ಚಟುವಟಿಕೆಗಳಿಗೆ ಘಟಕ ವೆಚ್ಚ ಐವತ್ತು ಸಾವಿರ ಅಂದರೆ ಇಪ್ಪತ್ತೈದು ಸಾವಿರ ಸಹಾಯಧನ ಮತ್ತು ಇಪ್ಪತ್ತೈದು ಸಾವಿರ ರೂಪಾಯಿ ಸಾಲ ಸೌಲಭ್ಯವನ್ನು ನಿಗಮದಿಂದ ನೇರವಾಗಿ ಮಂಜೂರಿಮಾಡಲಾಗುವುದು.

ನಂತರ ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ ಇದರಲ್ಲಿ ಬರುವ ಚಟುವಟಿಕೆಗಳು ಪರಿಶಿಷ್ಟ ಜಾತಿಯ ಲಂಬಾಣಿ ಅಥವಾ ಬಂಜಾರ ಅಥವಾ ಲಮಾಣಿ ಜನಾಂಗದ ಅರ್ಹ ನಿರುದ್ಯೋಗಿಗಳು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡು ಆದಾಯ ಗಳಿಸಲು ಘಟಕವೆಚ್ಚಕ್ಕೆ ಬ್ಯಾಂಕಿನಿಂದ ಮಂಜೂರಾದ ಸಾಲದ ಶೇಕಡಾ ಎಪ್ಪತ್ತರಷ್ಟು ಅಥವಾ ಗರಿಷ್ಠ ಎರಡು ಲಕ್ಷದವರೆಗೆ ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು.

ಆನಂತರದಲ್ಲಿ ಬರುವ ಯೋಜನೆ ಪ್ರೇರಣಾ ಮೈಕ್ರೋ ಕ್ರೆಡಿಟ್ ಫೈನಾನ್ಸ್ ಯೋಜನೆ ಇದರಲ್ಲಿ ಬರುವ ಚಟುವಟಿಕೆಗಳು ಮಹಿಳೆಯರಲ್ಲಿ ಗುಂಪು ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮಹಿಳಾ ಗುಂಪುಗಳು ಸ್ವಯಂ ಉದ್ಯೋಗ ಕೈಗೊಂಡು ಆದಾಯ ಗಳಿಸಲು ಕನಿಷ್ಠ ಹತ್ತು ಸದಸ್ಯರಿರುವ ನೋಂದಾಯಿತ ಮಹಿಳಾ ಸ್ವ ಸಹಾಯ ಸಂಘಗಳಿಗೆ ಎರಡೂವರೆ ಲಕ್ಷ ರೂಪಾಯಿ ಅಂದರೆ ಪ್ರತಿ ಸದಸ್ಯರಿಗೆ ಹದಿನೈದು ಸಾವಿರ ಸಹಾಯಧನ ಮತ್ತು ಹತ್ತು ಸಾವಿರ ಸಾಲ ಅಂದರೆ ಒಟ್ಟು ಇಪ್ಪತ್ತೈದು ಸಾವಿರ ಬೀಜಧನ ಸೌಲಭ್ಯವನ್ನು ನಿಗಮದಿಂದ ಮಂಜೂರು ಮಾಡಲಾಗುವುದು.

ಇನ್ನು ಎರಡನೇ ಯೋಜನೆ ಗಂಗಾಕಲ್ಯಾಣ. ಯೋಜನೆ ಈ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಖುಷ್ಕಿ ಜಮೀನಿಗೆ ಮೂರೂವರೆ ಲಕ್ಷ ಸಿಂದ ನಾಲ್ಕೂವರೆ ಲಕ್ಷದವರೆಗೆ ಘಟಕ ವೆಚ್ಚದಲ್ಲಿ ಕೊಳವೆ ಬಾವಿ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲಾಗುವುದು. ಅಂದರೆ ಜಮೀನಿನಲ್ಲಿ ಕೊಳವೆಬಾವಿಯನ್ನು ಕೊರೆದು ಅದಕ್ಕೆ ಪಂಪ ಸೆಟ್ ಅಳವಡಿಸಿ ವಿದ್ಧುಧ್ದಿಕರಣ ಮಾಡುವುದು.

ಮೂರನೇ ಯೋಜನೆ ಭೂ ಒಡೆತನ ಯೋಜನೆ. ಇದು ಬಹಳ ಉತ್ತಮವಾದ ಯೋಜನೆಯಾಗಿದೆ ಈ ಯೋಜನೆಯಡಿಯಲ್ಲಿ ಭೂ ರಹಿತ ಮಹಿಳಾ ಕಾರ್ಮಿಕರಿಗೆ ಹದಿನೈದರಿಂದ ಇಪ್ಪತ್ತು ಲಕ್ಷ ರೂಪಾಯಿಗಳನ್ನೂ ಘಟಕ ವೆಚ್ಚದಲ್ಲಿ ಕೃಷಿ ಯೋಗ್ಯವಾದ ಜಮೀನನ್ನು ಪ್ರತಿ ಘಟಕದಲ್ಲಿ ಎರಡು ಎಕರೆ ಖುಷ್ಕಿ ಅಥವಾ ಒಂದು ಎಕರೆ ಕರಿ ಅಥವಾ ಅರ್ಧ ಎಕರೆ ಭಾಗವಾಯ್ತು ಅಥವಾ ಘಟಕ ವೆಚ್ಚಕ್ಕೆ ಲಭ್ಯವಾಗುವಷ್ಟು ಜಮೀನನ್ನು ನಿಗಮದಿಂದ ಖರೀದಿಸಿ ನೋಂದಣಿ ಮಾಡಿಸಿ ಕೊಡಲಾಗುವುದು.

ಅಂದರೆ ನಿಮ್ಮ ಕುಟುಂಬದಲ್ಲಿ ಯಾರಾದರೂ ಭೂ ರಹಿತ ಮಹಿಳೆಯರಿದ್ದರೆ ಅವರ ಹೆಸರಿನಲ್ಲಿ ಯಾವುದೇ ಕೃಷಿ ಜಮೀನು ಇಲ್ಲದ ಕಾರಣ ತಾಂಡಾ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಸಲ್ಲಿಸಿ ಮಹಿಳಾ ಕಾರ್ಮಿಕರ ಹೆಸರಿನಲ್ಲಿ ನಿಗಮದಿಂದ ಜಮೀನು ಖರೀದಿ ಮಾಡಿ ನಿಮ್ಮ ಹೆಸರಿನಲ್ಲಿ ನೋಂದಣಿ ಮಾಡಿ ಕೊಡುತ್ತಾರೆ.

ಅರ್ಜಿ ಸಲ್ಲಿಸಲು ಆರಂಭದ ದಿನಾಂಕ ಐದು ಆಗಸ್ಟ್ ಎರಡುಸಾವಿರಾದಇಪ್ಪತ್ತೊಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಐದು ಸೆಪ್ಟೆಂಬರ್ ಎರಡುಸಾವಿರಾದಇಪ್ಪತ್ತೊಂದು. ನಿಮಗೆ ಅರ್ಜಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ವಿದೆ ನಿಮಗೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೇನಿಸಿದಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವೆಬ್ ಸೈಟ್ ಅನ್ನು ತೆರೆದು ಅಲ್ಲಿ ನೀವು ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಬಹುದು.

ಈ ರೀತಿಯಾಗಿ ಎರಡು ಸಾವಿರದ ಇಪ್ಪತ್ತೊಂದು ಇಪ್ಪತ್ತೆರಡನೇ ಸಾಲಿನ ಬಹಳ ಉತ್ತಮವಾದ ಯೋಜನೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಅರ್ಜಿಯನ್ನು ಸಲ್ಲಿಸಲು ಇನ್ನು ಒಂದು ತಿಂಗಳ ಕಾಲಾವಕಾಶವಿದೆ ನೀವು ಇದರ ಉಪಯೋಗವನ್ನು ಪಡೆದುಕೊಳ್ಳಿ ನಿಮ್ಮ ಸ್ನೇಹಿತರಿಗೂ ಈ ಯೋಜನೆಯ ಮಾಹಿತಿಯನ್ನು ತಿಳಿಸಿರಿ.

Leave A Reply

Your email address will not be published.