ದಡ್ಡ ಮಂಡ, ಬುದ್ದಿ ಇಲ್ಲದವ ಅನಿಸಿಕೊಳ್ಳುತ್ತಿದ್ದ ವ್ಯಕ್ತಿ, ಜಗತ್ತಿಗೆ ಬೆಳಕು ನೀಡಿದ ಸ್ಪೂತಿದಾಯಕ ಕಥೆ.! ಓದಿ..

0 18

ನಾನು ವಿಫಲ ಆಗಿಲ್ಲ ನಾನು ಕೆಲಸ ಮಾಡುವ 10,000 ಮಾರ್ಗಗಳನ್ನು ಕಂಡು ಹಿಡಿದಿದ್ದೇನೆ ಎಂದು ಥಾಮಸ್ ಆಳ್ವಾ ಎಡಿಸನ್ ಹೇಳುತ್ತಾರೆ. ಎಲೆಕ್ಟ್ರಿಕ್ ಬಲ್ಬ್ ಅನ್ನು ಆವಿಷ್ಕಾರ ಮಾಡಿದ್ದು ಥಾಮಸ್ ಆಳ್ವಾ ಎಡಿಸನ್. ಇದರಿಂದಾಗಿ ಜಗತ್ತು ರಾತ್ರಿಯಲ್ಲಿಯೂ ಸಹ ಹಗಲಿನಂತೆ ಪ್ರಕಾಶಿಸುವಂತೆ ಆಯಿತು. ಆದರೆ ಥಾಮಸ್ ಆಳ್ವಾ ಎಡಿಸನ್ ನನ್ನು ಬಾಲ್ಯದಲ್ಲಿ ಪೆದ್ದ, ಮಂಡ ಬುದ್ಧಿಯವ ಎಂದೆಲ್ಲ ಕರೀತಾ ಇದ್ದರಂತೆ. ನಂತರ ತನ್ನ ಪರಿಶ್ರಮದಿಂದ ಹಲವಾರು ಆವಿಷ್ಕಾರಗಳನ್ನು ಸಾಧಿಸಿ ತೋರಿಸಿದ್ದಾರೆ. ಪ್ರತಿ ಒಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಹೆಣ್ಣು ಇರುತ್ತಾಳೆ ಎಂಬ ಮಾತಿದೆ. ಇದು ಥಾಮಸ್ ಆಳ್ವಾ ಎಡಿಸನ್ ಜೀವನಕ್ಕೆ ಸೂಕ್ತವಾಗಿದೆ. ಇಷ್ಟಕ್ಕೂ ಇವರ ಹಿಂದೆ ಇರುವ ಹೆಣ್ಣು ಬೇರೆ ಯಾರು ಅಲ್ಲ. ಥಾಮಸ್ ಆಳ್ವಾ ಎಡಿಸನ್ ನ ಸ್ವಂತ ತಾಯಿ.

ಥಾಮಸ್ ಆಳ್ವಾ ಎಡಿಸನ್ ಸ್ಕೂಲಿನಲ್ಲಿ ಓದುತ್ತ ಇರಬೇಕಾದರೆ ಒಂದು ದಿನ ಒಂದು ಪತ್ರವನ್ನು ತನ್ನ ತಾಯಿಗೆ ಕೊಟ್ಟು ಇದನ್ನ ಟೀಚರ್ ಕೊಟ್ರು ಅಂತ ಹೇಳ್ತಾರೆ. ಆಗ ಆ ಪತ್ರವನ್ನು ಓದಿದ ತಾಯಿಯ ಕಣ್ಣಲ್ಲಿ ನೀರು ಬರತ್ತೆ. ಅದನ್ನ ನೋಡಿ ಥಾಮಸ್ ಆಳ್ವ ಎಡಿಸನ್ ತನ್ನ ತಾಯಿಗೆ ಆ ಪಾತ್ರದಲ್ಲಿ ಏನು ಬರೆದಿದೆ ಅಂತ ಕೇಳ್ತಾರೆ. ಅದಕ್ಕೆ ಕಣ್ಣೀರು ಒರೆಸಿಕೊಂಡು ಆ ತಾಯಿ, ಇದರಲ್ಲಿ ನಿಮ್ಮ ಮಗ ಬಹಳ ಬುದ್ಧಿವಂತ ಆದರೆ ನಮ್ಮ ಸ್ಕೂಲಿನಲ್ಲಿ ಶಿಕ್ಷಕರು ಸಹ ಅವನಷ್ಟು ಚುರುಕಾಗಿ ಇಲ್ಲ ಹಾಗಾಗಿ ನಾವು ಅವನನ್ನ ನಮ್ಮ ಸ್ಕೂಲಿನಲ್ಲಿ ಓಡಿಸಲು ಸಾಧ್ಯ ಇಲ್ಲ ಹಾಗಾಗಿ ಇನ್ನು ಮುಂದೆ ಅವನು ಶಾಲೆಗೆ ಬರುವ ಅಗತ್ಯ ಇಲ್ಲ ನೀವು ಮನೆಯಲ್ಲಿಯೇ ಓದಿಸಿ ಎಂದು ಬರೆದಿದ್ದಾರೆ ಎಂದು ಹೇಳುತ್ತಾರೆ.

ಹಲವು ವರ್ಷಗಳ ನಂತರ ಎಡಿಸನ್ ತಾಯಿ ಮರಣ ಹೊಂದುತ್ತಾರೆ. ಅಷ್ಟರಲ್ಲಿ ಆಗಲೇ ಎಡಿಸನ್ ಎಲೆಕ್ಟ್ರಿಕ್ ಬಲ್ಪ್ ಗಳಂತಹ ಮಹಾನ್ ಆವಿಷ್ಕಾರ ಮಾಡಿ ಬಹಳಷ್ಟು ಫೇಮಸ್ ಆಗಿರುತ್ತಾರೆ. ಒಂದು ದಿನ ತಮ್ಮ ಮನೆಯಲ್ಲಿ ಇರುವ ಹಳೆಯ ವಸ್ತುಗಳನ್ನ ನೋಡಿ ತಮ್ಮ ಬಾಲ್ಯವನ್ನು ನೆನೆಸಿಕೊಳ್ಳುತ್ತ ಇರುತ್ತಾರೆ. ಆಗ ಅವರಿಗೆ ಒಂದು ಹಳೆಯ ಪತ್ರ ಸಿಗತ್ತೇ ಅದನ್ನ ತುಂಬಾ ಉತ್ಸಾಹದಿಂದಾ ಓದುತ್ತಾರೆ. ಇದು ಅದೇ ಬಾಲ್ಯದಲ್ಲಿ ಟೀಚರ್ ತಾಯಿಗೆ ಕೊಡಲು ಹೇಳಿದ ಪತ್ರ ಆಗಿರತ್ತೆ. ಆ ಪತ್ರದಲ್ಲಿ ನಿಮ್ಮ ಮಗ ಮೆಂಟಲಿ ವೀಕ್ ಅವನಿಂದ ಏನನ್ನೂ ಕಲಿಯಲು ಆಗಲ್ಲ ಹಾಗಾಗಿ ಅವನನ್ನು ಇನ್ನುಮುಂದೆ ಶಾಲೆಗೆ ಕಳಿಸಬೇಡಿ ಥಾಮಸ್ ಆಲ್ವಾ ಎಡಿಸನ್ ನಮ್ಮ ಶೂಳಿಗೆ ಲಾಯಕ್ ಅಲ್ಲ ಎಂದು ಬರೆದಿತ್ತು. ಇದನ್ನ ನೋಡಿ ಎಡಿಸನ್ ತುಂಬಾ ಅಳುತ್ತಾರೆ. ಒಬ್ಬ ಮೆಂಟಲಿ ವೀಕ್ ಹಾಗೂ ಎನೂ ಕಲಿಯಲು ಸಾಧ್ಯ ಇಲ್ಲ ಎಂದ ಹುಡುಗ ಜಗತ್ತಿನ ದೊಡ್ಡ ವಿಜ್ಞಾನಿ ಆಗುತ್ತಾನೆ. ಹಾಗೆ ಆಗುವ ಹಾಗೆ ಮಾಡಿದ್ದು ಎಡಿಸನ್ ನ ತಾಯಿ.

ಪಾತ್ರದಲ್ಲಿ ಉದ್ದದ್ದನ್ನೇ ಯಥಾವತ್ತಾಗಿ ತಾಯಿ ಎಡಿಸನ್ ಗೆ ಹೇಳಿದಿದ್ದರೆ, ಎಡಿಸನ್ ಇಷ್ಟು ದೊಡ್ಡ ವಿಜ್ಞಾನಿ ಆಗಳು ಸಾಧ್ಯವೇ ಆಗುತ್ತಾ ಇರಲಿಲ್ಲ. ಆದರೆ ಅವರ ತಾಯಿ ಅವರಲ್ಲಿ ಆತ್ಮ ವಿಶ್ವಾಸ ತುಂಬಿದರು. ಹಾಗಾಹಿ ನಿಮ್ಮನ್ನ ನೀವು ಇಂದಿಗೂ ಕಡಿಮೆ ಅಂತ ಅಂದುಕೊಳ್ಳಬಾರದು. ಒಬ್ಬ ಮಂಡ ಬುದ್ಧಿಯ ಹುಡುಗ ತನ್ನ ಆತ್ಮ ಸ್ಥೈರ್ಯದಿಂದ ಒಬ್ಬ ದೊಡ್ಡ ವಿಜ್ಞಾನಿ ಆಗ್ತಾನೆ ಅಂದರೆ, ಯಾರೂ ಕೂಡಾ ಏನು ಬೇಕಿದ್ದರೂ ಆಗಬಹುದು. ನೀವು ಅಂದುಕೊಂಡಿದ್ದನ್ನು ಸಾಧಿಸಬಹುದು.

Leave A Reply

Your email address will not be published.