ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಒಂದು ಅತ್ಯಂತ ಪ್ರಮುಖವಾದ ಅಂಗ. ವಿಶೇಷ ದಿನಗಳಲ್ಲಿ ಹಬ್ಬ ಹರಿದಿನಗಳಲ್ಲಿ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ಆದರೆ ದೇವಸ್ಥಾನಗಳನ್ನು ನಿರ್ಮಿಸಲು ಮೂಲ ಉದ್ದೇಶ ಏನು? ಅವುಗಳನ್ನ ಎಷ್ಟು ಶ್ರದ್ಧೆಯಲ್ಲಿ ನಿರ್ಮಿಸಲಾಗಿತ್ತು? ದೇವಸ್ಥಾನಗಳ ಹಿಂದಿನ ವಿಜ್ಞಾನವೇನು? ನಾವು ಯಾವ ರೀತಿಯಲ್ಲಿ ಇಂತಹ ವಿಶೇಷ ಸ್ಥಳಗಳನ್ನು ನಮ್ಮ ಆಂತರಿಕ ಬೆಳವಣಿಗೆಗೆ ಉಪಯೋಗಿಸಿಕೊಳ್ಳಬಹುದು ಎಂಬುದನ್ನ ಸದ್ಗುರು ತಿಳಿಸಿಕೊಡುತ್ತಾರೆ.

ಸಾಮಾನ್ಯವಾಗಿ ದೇವಸ್ಥಾನ ಎಂದಾಕ್ಷಣ ಜನ ಯಾವ ಮತದ್ದು ಅಂತ ಯೋಚನೆ ಮಾಡ್ತಾರೆ. ದೇವಸ್ಥಾನ ಯಾವುದೇ ಒಂದು ನಿರ್ಧಿಷ್ಟ ಗುಂಪಿಗೆ ಸೇರಿದ್ದರೆ ಅದನ್ನ ದೇವಸ್ಥಾನ ಅಂತ ಹೇಳಲ್ಲ. ದೇವಸ್ಥಾನ ದೈವೀಕಥೆಗೆ ಒಂದು ಆಹ್ವಾನ. ದೈವತ್ವ ಹೆಚ್ಚು ಅಭಿವ್ಯಕ್ತ ಆಗೋದಕ್ಕೆ ನಾವು ಅಗತ್ಯ ಇರುವ ಸ್ಥಳ ಮತ್ತು ಬೇಕಾಗಿರುವ ಸಾಧನಗಳನ್ನ ಸ್ಥಾಪಿಸಿದ್ದರೆ ಹೆಚ್ಚು ಅನುಭವಾತ್ಮಕವಾಗಿ ಇರುತ್ತೆ. ತರಂಗಗಳನ್ನು ಸೆರೆ ಹಿಡಿಯಲು ಹೇಗೆ ಒಂದು ಮೊಬೈಲ್ ಫೋನ್ ಬೇಕೋ ಅದೇ ರೀತಿ ದೇವಸ್ಥಾನ ಕೂಡ ಒಂದು ರೀತಿ ಮೊಬೈಲ್ ಫೋನ್ ಇದ್ದಂತೆ ಇದರಲ್ಲಿ ನಾವು ಮಾತನಾಡಲು ಸಾಧ್ಯ ಇಲ್ಲ ಕೇಳಿಕೊಳ್ಳಬಹುದು. ಸದ್ಗುರು ಆತ್ಮ ಲಿಂಗವನ್ನು ಉಪಕರಣ ಅಂತ ಹೇಳ್ತಾರೆ ಆದರೆ ಜನ ಅದನ್ನು ಹಾಗೇ ಹೇಳಬೇಡಿ ದೇವರು ಅಂತ ಹೇಳ್ತಾರೆ.

ಸದ್ಗುರು ಅವರ ಪ್ರಕಾರ ಯಾವುದೇ ಒಂದು ಕೆಲಸ ಮಾಡುವ ವಸ್ತು ಉಪಕರಣವೆ ಆಗಿರುತ್ತದೆ. ಅತೀತದ ಬಾಗಿಲನ್ನು ತೆಗೆಯಲು ಒಂದು ಉಪಕರಣ ಇದೆ. ಹೇಗೆ ನಾವು ಇಂದು ಬಾಗಿಲಿನ ಸ್ಕ್ರೂ ಅನ್ನು ಬರೀ ಕೈ ಇಂದ ತೆಗೆಯಲು ಸಾಧ್ಯ ಇಲ್ಲವೋ ಹಾಗೇ ದೇವಸ್ಥಾನ ಕೂಡ ಅತೀತದ ಬಾಗಿಲು ತೆಗೆಯುವ ಒಂದು ಉಪಕರಣ. ಮಾನವ ಸಮಾಜದಲ್ಲಿ ಮಹತ್ವದ ಬೆಳವಣಿಗೆ ಆಗಿದ್ದು ಸಹ ನಾವು ಉಪಕರಣಗಳನ್ನು ಬಳಸಲು ಪ್ರಾರಂಭಿಸಿದ ಮೇಲೆಯೇ…. ಹಾಗಿದ್ದಾಗ ದೇವಸ್ಥಾನವನ್ನು ಒಂದು ಉಪಕರಣ ಅಂತ ಹೇಳಿದ್ರೆ ಅದು ಹೇಗೆ ಅವಹೇಳನಕಾರಿ ಆಗುತ್ತದೆ? ದೇವಸ್ಥಾನ ಕೂಡ ಒಂದು ಉಪಕರಣನೆ. ಆದರೆ ಈ ಉಪಕರಣವನ್ನು ಬಳಸಲು ಬೇರೆ ಬೇರೆ ವಿಧಾನಗಳಿವೆ. ಈ ಒಂದು ಉಪಕರಣಕ್ಕೆ ನೀವು ನಿರ್ಧಿಷ್ಟ ಮನಸ್ಥಿತಿಯಲ್ಲಿ ಇರಬೇಕು ಯಾಕೆಂದ್ರೆ ಒಂದು ಬೌತಿಕ ಉಪಕರಣ ಅಲ್ಲ . ನಿರ್ಧಿಷ್ಟ ಮನಸ್ಥಿತಿಯಲ್ಲಿ ನೋಡಬೇಕು. ಇದು ಒಂದು ಸ್ಥರದ ಪೂಜ್ಯ ಭಾವನೆ ಯನ್ನು ಹೊಂದಿರಬಹುದು. ಆ ಉಪಕರಣವನ್ನು ಬಳಸಲು ಒಳ್ಳೆಯ ಮನಸ್ತಿತಿ ಅವಶ್ಯಕ. ಹಾಗಾಗಿ ದೇವಸ್ಥಾನವನ್ನು ಒಂದು ಉಪಕರಣ ಅಂತ ತಿಳಿದು ಬಳಸುವುದು ಸೂಕ್ತ.

ದೇವಸ್ಥಾನ ನಮ್ಮ ಗುರಿ ಅಲ್ಲ ಅದು ಕೇವಲ ಬಾಗಿಲು ಅಷ್ಟೇ, ಸಾಮಾನ್ಯವಾಗಿ ಒಂದು ದೇವಸ್ಥಾನ ಕಟ್ಟೋಕೆ ಕಲ್ಲು ಬೇಕು ಆದ್ರೆ ಒಬ್ಬ ವ್ಯಕ್ತಿಯ ಅಂತರಾಳದಲ್ಲಿ ತಮ್ಮ ಜೀವನಕ್ಕಿಂತ ಹೆಚ್ಚು ಮಹತ್ವ ಕೊಡದೇ ದೇವಸ್ಥಾನ ಆಗಲ್ಲ. ಕೇವಲ ತಮ್ಮ ಜೀವನದ ಭಾಗವಾಗಿ ಅಲ್ಲ ಜೀವನದ ಅಮುಖ್ಯ ಅಂಶವಾಗಿ ಅಲ್ಲ. ದೇವಸ್ಥಾನ ಕಟ್ಟುವುದು ಒಂದು ಹವ್ಯಾಸ ಅಥವಾ ವೃತ್ತಿ ಅಲ್ಲ ಅದನ್ನು ಮೀರಿದ್ದು ಅದಕ್ಕಿಂತ ಮುಖ್ಯವಾದದ್ದು ಅಂತ ನೋಡಬೇಕು. ಭಾರತದಲ್ಲಿ ದೇವಸ್ಥಾನಗಳನ್ನು ಎಷ್ಟು ಭಕ್ತಿಯಿಂದ ನಿರ್ಮಿಸುತ್ತಾ ಇದ್ದರು ಎಂದರೆ ಒಂದು ದೇವಸ್ಥಾನವನ್ನು ಪೂರ್ಣಗೊಳಿಸಲು ಎರಡು ಮೂರು ತಲೆಮಾರುಗಳು ಬೇಕಾಗ್ತಾ ಇತ್ತು. ಉದಾಹರಣೆ ಗೆ ಮಹಾರಾಷ್ಟ್ರದ ಅಜಂತಾ ಎಲ್ಲೋರಾ ಸ್ಥಳದ ಕೈಲಾಸನಾಥ ದೇವಾಲಯ, ತಮಿಳುನಾಡಿನ ಹಲವು ದೇವಸ್ಥಾನಗಳು ಇವನ್ನ ಕೇವಲ ಒಂದೇ ಕಲ್ಲಿನಿಂದ ಕೆತ್ತನೆ ಮಾಡಲಾಗಿದೆ. ಮೂರು ಮಹಡಿಗಳನ್ನು ಒಂದೇ ಕಲ್ಲಿನಲ್ಲಿ ಕೆತ್ತಲಾಗಿದೆ. ಸುಮಾರು ಸಾವಿರಾರು ಟನ್ ಗಳಷ್ಟು ಕಲ್ಲನ್ನ ಕೆತ್ತಿ ತೆಗೆದಿರಬಹುದು. ದೇವಸ್ಥಾನದಲ್ಲಿ ಕಾಣುವ ಉಳಿದ ಖಾಲಿ ಜಾಗಗಳೂ ಸಹ ಕೆತ್ತಿರುವುದೆ ಆಗಿದೆ. ಸುಮಾರು ೬೦೦ ಮೂರ್ತಿಗಳಿವೆ ಸಂಕೀರ್ಣ ಕೆತ್ತನೆ ಇದೆ. ಇದರಲ್ಲಿ ಒಂದು ಸಣ್ಣ ತಪ್ಪು ಆದರೂ ಸಹ ಇಡೀ ದೇವಸ್ಥಾನವನ್ನು ಮತ್ತೆ ಕೆತ್ತಬೇಕೂ. ಯಾಕೆಂದ್ರೆ ಅದನ್ನ ಕಟ್ಟಿರಲ್ಲ ಒಂದನ್ನ ತೆಗೆದು ಇನ್ನೊಂದನ್ನು ಜೋಡಿಸಬಹುದು ಎನ್ನಲು ಆಗಲ್ಲ ಅದು ಒಂದೇ ಕಲ್ಲಿನಲ್ಲಿ ಕೆತ್ತಿರುವ ದೇವಸ್ಥಾನ. ಏನಿಲ್ಲ ಅಂದರೂ ೧೩೫ ವರ್ಷಗಳಲ್ಲಿ ನಾಲ್ಕು ತಲೆಮಾರಿನ ಜನ ಅದೇ ಕೆಲಸವನ್ನೇ ಮಾಡಿದ್ರು. ಆದರೆ ಅಲ್ಲಿ ಯಾರ ಹೆಸರನ್ನು ಸಹ ಬರೆಯಲಿಲ್ಲ. ೧೪/೧೫ ವರ್ಷದಲ್ಲಿ ಇರುವಾಗಲೇ ಕೆಲಸ ಪ್ರಾರಂಭಿಸಿ ಅಲ್ಲೇ ಮರಣವನ್ನು ಹೊಂದಿರಬಹುದು ಆದ್ರೆ ಅಲ್ಲಿ ಕಟ್ಟಿಸಿದ ರಾಜನ ಹೆಸರು ಕೆತ್ತನೆ ಮಾಡಿದ ಶಿಲ್ಪಿ ಯಾರ ಹೆಸರನ್ನು ಸಹ ಬರೆಯಲಿಲ್ಲ. ದೇವಸ್ಥಾನ ಅಂದ್ರೆ ಅದು ನಾವು ಯಾರು ಅಂತ ಗುರುತು ಬಿಡುವ ಸ್ಥಳ ಅಲ್ಲ.

ಒಂದು ಕಥೆ ಇದೆ. ಒಬ್ಬ ವ್ಯಕ್ತಿ ಇದ್ದ ಅವನಿಗೆ ಇಬ್ಬರು ಮಕ್ಕಳು. ತಂದೆ ಮಕ್ಕಳು ಕಷ್ಟ ಪಟ್ಟು ಕೆಲಸ ಮಾಡಿ ತೋಟ ಗದ್ದೆ ಮಾಡಿಕೊಂಡು ಶ್ರೀಮಂತರು ಆದರು. ಆ ವೃದ್ಧನ ಮರಣ ಕಾಲ ಬಂದಾಗ ತನ್ನ ಮಕ್ಕಳಿಗೆ ಹೇಳಿದ ಈ ಭೂಮಿಯಲ್ಲಿ ಏನೇ ಫಸಲು ಬಂದರು ಅದನ್ನ ಇಬ್ಬರೂ ಸರಿಯಾಗಿ ಹಂಚಿಕೊಳ್ಳಬೇಕು. ಯಾವುದೇ ಸಮಯದಲ್ಲೂ ನುಮ್ಮಿಬರಲ್ಲು ಜಗಳ ಆಗಬಾರದು. ಮಕ್ಕಳು ತಂದೆಗೆ ಮಾತು ಕೊಟ್ಟು ಹಾಗೆ ನಡೆದುಕೊಳ್ಳುತ್ತಾರೆ ಕೂಡ. ಭಾರತದಲ್ಲಿ ಭೂಮಿಯನ್ನ ಪಾಲು ಮಾಡಿಕೊಳ್ಳುವ ಪದ್ಧತಿ ಬಂದಿದ್ದು ಮೂರು ನಾಲ್ಕು ತಲೆಮಾರುಗಳ ಹಿಂದೆ ಅದಕ್ಕೂ ಮೊದಲು ಈ ಭೂಮಿ ನನ್ನದು ನಿನ್ನದು ಎಂದು ಇರಲಿಲ್ಲ ಫಸಲು ಮಾತ್ರ ಪಾಲು ಆಗ್ತಾ ಇತ್ತು. ಭೂಮಿಯನ್ನ ಪಾಲು ಮಾಡುವ ಕಲ್ಪನೆ ಇರಲಿಲ್ಲ. ಹಾಗಾಗಿ ಆ ವೃದ್ಧ ಸಹ ಬರೀ ಫಸಲು ಮಾತ್ರ ಪಾಲು ಮಾಡಿಕೊಳ್ಳಲು ಹೇಳಿದ್ದ ಮಕ್ಕಳು ಸಹ ಹಾಗೇ ನಡೆದೂಕೊಂಡರು.

ಸ್ವಲ್ಪ ಸಮಯದ ನಂತರ ಒಬ್ಬ ಮದುವೆ ಆಗ್ತಾನೆ ಐದು ಮಕ್ಕಳೂ ಆಗ್ತಾರೆ ಇನ್ನೊಬ್ಬ ಮದುವೆ ಆಗದೆ ಹಾಗೇ ಇದ್ದ ಆದರೂ ಸಹ ತಂದೆಯ ಮಾತಿನಂತೇ ಫಸಲನ್ನ ಸಮ ಭಾಗ ಮಾಡಿಕೊಳ್ತಾ ಇದ್ರು. ಒಂದು ದಿನ ಮದುವೆಯಾಗಿ ಐದು ಮಕ್ಕಳ ತಂದೆ ಆಗಿದ್ದವನ ತಲೆಗೆ ಒಂದು ಆಲೋಚನೆ ಹೊಕ್ಕಿತು ನನಗೆ ಹೆಂಡತಿ, ಮಕ್ಕಳು ಇದ್ದೂ ಅರ್ಧ ಭಾಗ ಸಿಗತ್ತೆ ನನ್ನ ಅಣ್ಣ ಒಬ್ಬನೇ ಅವನಿಗೂ ಅರ್ಧ ಭಾಗ ಸಿಗತ್ತೆ. ನನಗೆ ವಯಸ್ಸಾದಾಗ ಐದೂ ಮಕ್ಕಳೂ ದೊಡ್ಡವರಾಗಿ ಅವರೂ ಹೆಚ್ಚು ಗದ್ದೆ ಮಾಡಾಕೊಳ್ಳುತ್ತಾರೆ‌. ನಾವು ಹೆಚ್ಚು ಶ್ರೀಮಂತರಾಗಿ ಇರತೇವೆ ಆದ್ರೆ ನನ್ನ ಅಣ್ಣ ಒಬ್ಬನೇ ಇರೋದು ವಯಸ್ಸಾದಾಗ ಈಗಿನ ಅರ್ಧ ಭಾಗ ಮಾತ್ರ ಅವನ ಬಳಿ ಇಲತ್ತೆ ಇದು ಸರಿ ಅಲ್ಲ ಅವನು ತುಂಬಾ ಸ್ವಾಭಿಮಾನಿ ನಾನು ಜಾಸ್ತಿ ಕೊಟ್ಟರೆ ತಗೊಳಲ್ಲ. ನನ್ವ ಮಕ್ಕಳು ಮಾಡಿದ ಹೊಸ ಗದ್ದೆಯ ಫಸಲನ್ನ ಹಂಚಿಕೊಂಡರೂ ತಗೋಳಲ್ಲ ತಂದೆಯ ಗದ್ದೆಯ ಫಸಲನ್ನ ಮಾತ್ರ ಅರ್ಧ ತಗೊಳ್ತಾನೆ ಏನು ಮಾಡೋದು? ಅಂತ ಯೋಚಿಸಿ, ರಾತ್ರಿ ಎಲ್ಲರೂ ಮಲಗಿದ್ದಾಗ ಒಂದು ಚೀಲ ಧಾನ್ಯವನ್ನ ತೆಗೆದುಕೊಂಡು ಹೋಗಿ ಅಣ್ಣನ ಅಂಗಡಿಯಲ್ಲಿಟ್ಟು ಅಣ್ಣನಿಗೆ ತಿಳಿಯದಂತೇ ದಾನ ಮಾಡ್ತಾ ಇದ್ದ. ಒಬ್ಬನೇ ಇದ್ದ ಅಣ್ಣ, ನನ್ನ ತಮ್ಮನಿಗೆ ಹೆಂಡತಿ ಮಕ್ಕಳು ಇದ್ದಾರೆ ಅವನಿಗೆ ಹೆಚ್ಚು ಧಾನ್ಯ ಬೇಕು ಆದ್ರೆ ನಾನೇದರೂ ಕೊಡೋಕೆ ಹೋದ್ರೆ ತಗೋಳಲ್ಲ ಹಾಗಾಗಿ ಅಣ್ಣ ತನ್ನ ಧಾನ್ಯದ ಚೀಲವನ್ನ ತೆಗೆದುಕೊಂಡು ಹೋಗಿ ತಮ್ಮನ ಅಂಗಡಿಯಲ್ಲಿಟ್ಟು ದಾನ ಮಾಡುತ್ತಿದ್ದ. ಇದೂ ಯಾರಿಗೂ ತಿಳೀತಾ ಇರಲಿಲ್ಲ.

ರಾತ್ರಿ ಹೊತ್ತು ಒಮ್ಮೆ ಅಣ್ಣ ತಮ್ಮನ ಅಂಗಡಿಗೂ ತಮ್ಮ ಅಣ್ಣನ ಅಂಗಡಿಗೂ ಧಾನ್ಯ ಹಾಕ್ತಾ ಇರ್ತಾರೆ. ಇಬ್ಬರಿಗು ವಯಸ್ಸಾದಾಗ ಒಂದು ರಾತ್ರಿ ಚೀಲ ತಗೊಂಡು ಹೋಗಬೇಕಾದ್ರೆ ಇಬ್ಬರೂ ಮುಖಾಮುಖಿ ಆಗ್ತಾರೆ. ಇಬ್ಬರಿಗೂ ಏನು ನಡೀತಾ ಇದೆ ಅನ್ನೋದು ಅರ್ಥ ಆಗಿ ನೋಡಿಯೂ ನೋಡದಂತೇ ಹಿಂದಿರುಗುತ್ತಾರೆ. ಸ್ವಲ್ಪ ದಿನದಲ್ಲಿ ಇಬ್ಬರೂ ಮರಣ ಹೊಂದುತ್ತಾರೆ. ಹಳ್ಳಿ ಜನರು ಒಂದು ದೇವಸ್ಥಾನ ಕಟ್ಟಬೇಕು ಅಂತ ಜಾಗ ಹುಡುಕಿ ತುಂಬಾ ಜಾಗಗಳನ್ನ ನೋಡಿದ್ರು. ನಂತರ ಆ ರಾತ್ರಿ ಅಣ್ಣ ತಮ್ಮ ಭೇಟಿಯಾದ ಜಾಗದಲ್ಲಿ ದೇವಸ್ಥಾನ ಕಟ್ಟಬೇಕು ಅಂತ ನಿರ್ಧರಿಸುತ್ತಾರೆ. ಒಬ್ಬರನ್ನೊಬ್ಬರು ನೋಡಿ ತಮ್ಮ ಔದಾರ್ಯಕ್ಕೆ ಮುಜುಗರ ಆಗಿ ಮುಖ ತಿರುಗಿಸಿ ತಮ್ಮ ಕೆಲಸ ಮುಂದುವರೆಸಿದ್ದರು. ದೇವಸ್ಥಾನ ಕಟ್ಟೋಕೆ ಇದೇ ಸರಿಯಾದ ಅತ್ಯುತ್ತಮ ಜಾಗ ಅಂತ ತೀರ್ಮಾನ ಮಾಡ್ತಾರೆ‌. ಹೀಗೇ ದೇವಸ್ಥಾನ ಅಂದ್ರೆ ನಮ್ಮನ್ನ ಮೀರಿ ನೋಡುವುದು. ಅದು ಇಲ್ಲ ಅಂದ್ರೆ ದೇವಸ್ಥಾನ ಇಲ್ಲ ಅಂತ ಹೇಳ್ತಾರೆ ಸದ್ಗುರು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!