ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯರು ಕೂಡ ಯೋಚನೆ ಮಾಡುತ್ತಾರೆ ಯೋಚನೆ ಮಾಡುವುದನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಅತಿಯಾಗಿ ಯೋಚನೆ ಮಾಡುವುದು ಮತ್ತು ಅತಿಯಾಗಿ ಚಿಂತೆ ಮಾಡುವುದನ್ನ ಕಡಿಮೆ ಮಾಡಬಹುದು. ಯಾಕೆಂದ್ರೆ ಈ ಅವಧಿಯಲ್ಲಿ ಯಾವುದೇ ಈ ಓವರ್ ಥಿಂಕಿಂಗ್ ಅಥವಾ ಅತಿಯಾಗಿ ಯೋಚನೆ ಮಾಡೋದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರಿಸರ್ಚ್ ನ ಪ್ರಕಾರ ನಮ್ಮಲ್ಲಿ ಹಲವು ರೀತಿಯ ತಲೆನೋವುಗಳು, ಡಿಪ್ರೆಶನ್, ಸ್ಟ್ರೆಸ್, ಅನಕ್ಸಿಟಿ , ನಿದ್ರಾಹೀನತೆ ಇವುಗಳಿಗೆಲ್ಲ. ಪ್ರಮುಖ ಕಾರಣ ನಮ್ಮಲ್ಲಿರುವ ಚಿಂತೆ. ಈ ಚಿಂತೆಗೆ ಮೂಲ ಕಾರಣ ನಾವು ಅನಾವಶ್ಯಕ ವಿಚಾರಗಳ ಬಗ್ಗೆ ಯೋಚನೆ ಮಾಡುವುದು. ಅದರಲ್ಲೂ ಕೆಲವರು ಯಾವುದೋ ಒಂದು ವಿಷಯದ ಕುರಿತು ಯೋಚನೆ ಮಾಡುತ್ತಾ ಎಷ್ಟೋ ದಿನ ತಿಂಗಳು ವರ್ಷವನ್ನೆ ತಮ್ಮ ಅಮೂಲ್ಯವಾದ ಸಮಯವನ್ನು ಅನಾವಶ್ಯಕವಾಗಿ ವ್ಯರ್ಥ ಮಾಡಿರುತ್ತಾರೆ.

ಕೆಲವರು ತಮ್ಮ ಹಿಂದಿನ ಕಹಿ ಘಟನೆಗಳು, ಲವ್ ಫೇಲ್ಯೂರ್, ಕಳೆದುಕೊಂಡ ವಸ್ತು ಅಥವಾ ಉದ್ಯೋಗದ ಕುರಿತು ಯೋಚನೆ ಮಾಡುತ್ತಾರೆ . ಇನ್ನೂ ಕೆಲವರು ಬೇರೆಯವರನ್ನು ತಮ್ಮ ಜೊತೆ ಹೋಲಿಕೆ ಮಾಡಿಕೊಂಡು ಅವರ ಏಳ್ಗೆ ಕಂಡು ತಮಗಿಂತ ಅವರು ಬೇಗ ಅಭಿರ್ವದ್ಧಿ ಹೊಂದಿಬಿಟ್ಟರು ತಾವು ಇನ್ನು ಏಳ್ಗೆ ಹೊಂದಿಲ್ಲ ಎಂದು ಯೋಚನೆ ಮಾಡುತ್ತಾರೆ. ಇನ್ನೂ ಕೆಲವರು ಚಿಕ್ಕ ಚಿಕ್ಕ ವಿಷಯಗಳನ್ನೇ ದೊಡ್ಡದಾಗಿ ಮಾಡಿಕೊಂಡು ಅದರ ಬಗ್ಗೆ ಯೋಚನೆ ಮಾಡುತ್ತಾರೆ. ಉದಾಹರಣೆಗೆ:- ಯಾರ ಬಳಿಯಾದರು ಜಗಳ ಮಾಡಿದಾಗ ಅಯ್ಯೋ! ಅವನು ನನಗೆ ಬಹಳ ಅವಮಾನ ಮಾಡಿಬಿಟ್ಟ ನಾನು ಆಗಲೇ ಅವನಿಗೆ ಸರಿಯಾಗಿ ಉತ್ತರ ಕೊಡಬೇಕಿತ್ತು ಎಂದು ಯೋಚನೆ ಮಾಡುತ್ತಾರೆ. ಇನ್ನೂ ಕೆಲವರು ಪರೀಕ್ಷೆಯಲ್ಲಿ ನನಗಿಂತ ಬೇರೊಬ್ಬರಿಗೆ ಜಾಸ್ತಿ ಮಾರ್ಕ್ಸ್ ಬಂತು ಎಂದು, ಇನ್ನೂ ಕೆಲವರು ಬೇರೆಯವರ ಮೇಲೆ ಏನಾದರೂ ಮನಸ್ತಾಪ ಆದಾಗ ನಾನು ಹೇಗಾದರೂ ಸೇಡು ತೀರಿಸಿಕೊಳ್ಳಬೇಕು ಎಂದು ಯೋಚನೆ ಮಾಡುತ್ತಾರೆ. ನನಗೆ ಅವಮಾನ ಆಯ್ತು ನನ್ನನ್ನ ನಿರ್ಲಕ್ಷ್ಯ ಮಾಡ್ತಾ ಇದ್ದಾರೆ ಅಂತ ಈ ರೀತಿಯಾಗಿ ಚಿಕ್ಕ ಚಿಕ್ಕ ವಿಷಯಗಳನ್ನೇ ದೊಡ್ಡದಾಗಿ ಮಾಡಿಕೊಂಡು ಯೋಚನೆ ಮಾಡುತ್ತಾ ಚಿಂತಾಕ್ರಾಂತರಾಗು ಇರುತ್ತಾರೆ. ಇದನ್ನ ಓವರ್ ಥಿಂಕಿಂಗ್ ಅಂತ ಹೇಳ್ತಾರೆ. ಹಾಗಾದ್ರೆ ಈ ಓವರ್ ಥಿಂಕಿಂಗ್ ಇದರಿಂದ ಹೊರ ಬರುವುದು ಹೇಗೆ? ಇದರ ಬಗ್ಗೆ ಕೆಲವು ವೈಜ್ಞಾನಿಕ ಅಂಶಗಳನ್ನ ತಿಳಿಸಿಕೊಡ್ತೀವಿ.

ಮೊದಲನೆಯದಾಗಿ ನಾವು ವರ್ತಮಾನದಲ್ಲಿ ಬದುಕುವುದನ್ನು ಕಲಿಯಬೇಕು. ಮನುಷ್ಯ ತನ್ನ ಜೀವಿತ ಅವಧಿಯಲ್ಲಿ ಮೂರು ಕಾಳ ಘಟ್ಟದಲ್ಲಿ ಬದುಕುತ್ತಾನೆ. ಅದನ್ನ ಭೂತ ಕಾಲ, ವರ್ತಮಾನ ಕಾಲ ಮತ್ತು ಭವಿಷ್ಯತ್ ಕಾಲ ಅಂತ ವಿಂಗಡನೆ ಮಾಡಲಾಗಿದೆ. ಇಲ್ಲಿ ಬಹಳಷ್ಟು ಯೋಚನೆ ಮಾಡುವವರು ತಮ್ಮ ಹಿಂದಿನ ಘಟನೆಗಳ ಕುರಿತು ವರ್ತಮಾನ ಕಾಲದಲ್ಲಿ ಯೋಚನೆ ಮಾಡಿ ಮಾಡಿ ಕಾಲ ಹರಣ ಮಾಡಿರುತ್ತಾರೆ ಇದರಿಂದಾಗಿ ಅವರ ಭವಿಷ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದರಿಂದ ಮತ್ತೆ ಚಿಂತೆಗೆ ಒಳಗಾಗುತ್ತಾರೆ. ಹೀಗೆ ಅತಿಯಾಗಿ ಯೋಚನೆ ಮಾಡುವುದರಿಂದ ನಮ್ಮ ಮೆದುಳಿಗೆ ಅತಿಯಾಗಿ ಪೆಟ್ಟು ಬೀಳುತ್ತದೆ. ಇದರಿಂದ ಮೆದುಳಿನ ಕಾರ್ಯ ಕ್ಷಮತೆ ಕಡಿಮೆ ಆಗತ್ತೆ. ನಾವು ಅತಿಯಾಗಿ ಯೋಚನೆ ಮಾಡುವುದರಿಂದ ಸ್ಟ್ರೆಸ್ ಆಗತ್ತೆ ಇದರಿಂದ ಯಾವುದೇ ಕೆಲಸದಲ್ಲಿ ಆಸಕ್ತಿ ಇರಲ್ಲ. ನಮ್ಮ ಕೆಲಸ ಮಾಡುವ ಸಾಮರ್ಥ್ಯ ಕಡಿಮೆ ಆಗಿ ಕೋಣೆಗೆ ಯಾವುದೇ ಕೆಲಸ ಇಲ್ಲದೆ ಸೋಮಾರಿಯಾಗಿ ಇರುತ್ತೇವೆ. ಬೇಡವಾದ ದುಶ್ಚಟಗಳಿಗೆ ಆದಿಯಾಗಿ ದಿನ ಪೂರ್ತಿ ಸಮಯ ವ್ಯರ್ಥ ಮಾಡುತ್ತೇವೆ. ಹೀಗೆ ಮುಂದುವರೆದರೆ ನಮ್ಮ ಭವಿಷ್ಯದಲ್ಲಿ ಯಾವುದೇ ಬದಲಾವಣೆ ಆಗಲ್ಲ. ಹಾಗಾಗಿ ನಾವು ಭವಿಷ್ಯದಲ್ಲಿ ಆರಾಮಾಗಿ ಇರಬೇಕು ಅಂದ್ರೆ ವರ್ತಮಾನದಲ್ಲಿ ಬೇಡವಾದ ಯೋಚನೆಗಳನ್ನು ಬಿಟ್ಟು ಸರಿಯಾಗಿ ಕೆಲಸ ಮಾಡಬೇಕು. ಭವಿಷ್ಯದಲ್ಲಿ ಏನು ಸಾಧಿಸಬೇಕು ಅನಂತ ಅಂದುಕೊಂಡು ಇರುತ್ತೀರಿ ಅದರ ಬಗ್ಗೆ ಯೋಚನೆ ಮಾಡಿ ಗುರಿ ಸಾಧಿಸಿ. ಭವಿಷ್ಯತ್ತಿನಲ್ಲಿ ಉತ್ತಮವಾಗಿ ಇರಬಹುದು.

ಇದಕ್ಕೆ ಒಂದು ಉದಾಹರಣೆ ಅಂದರೆ, ಕೆ ಎಫ್ ಸಿ ಕಂಪನಿಯ ಮಾಲೀಕರಾದ ಅರ್ಲಂಡ್ ಡೇವಿಡ್ ಸಾಂಡರ್ಸ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನ ಕಳೆದುಕೊಂಡು ಮನೆ ಬಿಟ್ಟು ಬಂದು ಕಂಡಕ್ಟರ್ ಆಗಿ, ಫೈರ್ ಮಾನ್ ಹಾಗೂ ರೈಲ್ ವೇ ಅಲ್ಲಿ ಕೂಡ ಕೆಲಸ ಮಾಡುತ್ತಾರೆ. ನಂತರ ೧೯ನೇ ವಯಸ್ಸಿನಲ್ಲಿ ಜೋಸೆಫೀನ್ ಎಂಬ ಹುಡುಗಿ ಜೊತೆ ಮದುವೆ ಆಗುತ್ತಾರೆ. ನಂತರ ಒಂದು ಗಂಡು ಮಗು ಹಾಗು ಎರಡೂ ಹೆಣ್ಣು ಮಗು ಆಗಿ ಸುಂದರ ಸಂಸಾರ ನಡೆಸ್ತಾ ಇರ್ತಾರೆ. ಒಂದು ಕ್ಷುಲ್ಲಕ ಕಾರಣಕ್ಕೆ ರೈಲ್ವೇ ಅಲ್ಲಿ ತಮ್ಮ ಸಹೋದ್ಯೋಗಿಯ ಜೊತೆ ಜಗಳ ಮಾಡಿ ಉದ್ಯೋಗ ಕಳೆದುಕೊಳ್ಳುತ್ತಾರೆ.ಮುಂದೆ ಸಂಸಾರದಲ್ಲಿ ಸಹ ಕಲಹ ಆಗಿ ಹೆಂಡತಿ ಮಕ್ಕಳು ಬೇರೆ ಆಗುತ್ತಾರೆ. ನಂತರ ಕೆಲವು ದಿನಗಳ ಕಾಲ ಡಿಪ್ರೇಶನ್ ಆದರೂ ಸಹ ಚಿಂತೆ ಮಾಡುತ್ತಾ ಕೂರದೆ ಬೇರೆ ಬೇರೆ ಕೆಲಸಗಳನ್ನ ಮಾಡಿ ವಿಫಲ ಆಗಿ ನಂತರ ಒಂದು ಗ್ಯಾಸ್ ಸ್ಟೇಷನ್ ಪ್ರಾರಂಭಿಸಿ ಅಲ್ಲಿ ಪ್ರಯಾಣಿಕರ ಒತ್ತಾಯಕ್ಕೆ ಒಂದು ಚಿಕ್ಕ ರೆಸ್ಟೋರೆಂಟ್ ಪ್ರಾರಂಭ ಮಾಡ್ತಾರೆ.

ಚಿಕ್ಕ ವಯಸ್ಸಲ್ಲೇ ರುಚಿಯಾಗಿ ಚಿಕನ್ ಪದಾರ್ಥಗಳನ್ನು ಮಾಡುವುದು ಕಲಿತಿದ್ದರು ಇದನ್ನೇ ರೆಸ್ಟೋರೆಂಟ್ ನಲ್ಲಿ ಮಾಡಲು ಪ್ರಾರಂಭಿಸುತ್ತಾರೆ. ನಂತರ ಬ್ಯುಸಿನೆಸ್ ಇಂಪ್ರೂವ್ ಮಾಡಲು ೪೨ ನೇ ವಯಸ್ಸಿನಲ್ಲಿ ಕಾರ್ನಲ್ ಯೂನಿವರ್ಸಿಟಿ ಅಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡ್ತಾರೆ. ನಂತರ ರಸ್ತೆ ಅಗಲೀಕರಣದ ಕಾರಣಕ್ಕೆ ಅವರ ರೆಸ್ಟೋರೆಂಟ್ ಮುಚ್ಚಲಾಯಿತು. ಕೊನೆಗೆ ಪ್ರಸಿದ್ಧ ಹೋಟೆಲುಗಳಿಗೆ ತಮ್ಮ ಚಿಕನ್ ಪತಾರ್ಥಗಳನ್ನ ಹಿಡಿದು ತಿರುಗುತ್ತಾರೆ ಆದರೆ ಎಲ್ಲರೂ ಅವರನ್ನು ತಿರಸ್ಕರಿಸುತ್ತಾರೆ. ಕೊನೆಗೆ ಒಬ್ಬರನ್ನ ಭೇಟಿ ಮಾಡಿ ತಮ್ಮ ಕೆ ಎಫ್ ಸಿ ಚಿಕನ್ ಬಗ್ಗೆ ಹೇಳುತ್ತಾರೆ. ಸ್ಯಾಂಡರ್ಸ್ ಮತ್ತು ಹಾರ್ಮನ್ ನಡುವೆ ಒಪ್ಪಂದ ಆಗಿ ಬ್ಯುಸಿನೆಸ್ ಶುರು ಮಾಡ್ತಾರೆ. ಸ್ಯಾಂಡರ್ಸ್ ನಂತರ ತಾವೇ ಸ್ವತಃ ಕೆ ಎಫ್ ಸಿ ಚಿಕನ್ ಸೆಂಟರ್ ಶುರು ಮಾಡ್ತಾರೆ ಇಂದು ಕೆ ಎಫ್ ಸಿ ಎಲ್ಲಾ ದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ.

ಒಂದುವೇಳೆ ಸ್ಯಾಂಡರ್ಸ್ ತನ್ನ ಹಳೆಯ ಘಟನೆಗಳ ಕುರಿತು ಚಿಂತೆ ಮಾಡುತ್ತಾ ಇದ್ದರೆ ಪ್ರಸಿದ್ದ ಕೆ ಎಫ್ ಸಿ ಸೆಂಟರ್ ಆರಂಭಿಸಲು ಆಗುತ್ತಿರಲಿಲ್ಲ. ತಮ್ಮ ಆಸಕ್ತಿ ಇರುವ ವಿಷಯದ ಬಗ್ಗೆ ಮಾತ್ರ ತಮ್ಮ ವರ್ತಮಾನ ಕಾಲದಲ್ಲಿ ಯೋಚನೆ ಮಾಡಿದರು. ಒಂದು ಗುರಿ ಇಟ್ಟುಕೊಂಡು ಅದನ್ನೇ ಸಾಧಿಸಿದರು ಕೂಡ ಅದೂ ತಮ್ಮ ೬೨ ನೇ ವಯಸ್ಸಿನಲ್ಲಿ.

ಇದೆ ರೀತಿ ನೀವು ಕೂಡ ಹಿಂದೆ ಆಗಿದ್ದರ ಕುರಿತು ಯೋಚನೆ ಮಾಡದೆ ಈಗ ನಡೆಯುತ್ತಿರುವುದರ ಬಗ್ಗೆ ಯೋಚನೆ ಮಾಡಬೇಕು. ಮನಸ್ಸಿಗೆ ನೋವು ಉಂಟು ಮಾಡುವ ವಿಷಯವನ್ನು ಆದಷ್ಟು ಬೇಗ ಮನಸ್ಸಿನಿಂದ ತೆಗೆದು ಹಾಕಬೇಕು. ಹಾಗಾಗಿ ವರ್ತಮಾನದಲ್ಲಿ ಬದುಕುವುದು ಕಲಿಯಬೇಕು. ಅತಿಯಾಗಿ ಚಿಂತೆ ಮಾಡುವುದರಿಂದ ಹೊರ ಬರಲು ನಿಮಗೆ ಇಷ್ಟ ಇರುವ ಯಾವುದೇ ಕೆಲಸದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು. ನಮ್ಮ ಮನಸು ಮೆದುಳು ಒಂದೇ ಸಮಯಕ್ಕೆ ಎರಡೂ ವಿಷಯದ ಬಗ್ಗೆ ವಿಚಾರ ಮಾಡಲ್ಲ. ಯಾವ ವಿಷಯದ ಬಗ್ಗೆ ಆಸಕ್ತಿ ಇರುತ್ತದೆಯೋ ಅದೇ ವಿಷಯದ ಬಗ್ಗೆ ಸಕ್ರಿಯರಾಗಿ ಇದ್ದಲ್ಲಿ ಮನಸ್ಸು ಬೇರೆ ಯಾವ ಯೋಚನೆಯನ್ನು ಮಾಡಲಾರದು.

ಧ್ಯಾನ ಪ್ರಾಣಾಯಾಮ ಮಾಡುವುದರಿಂದ ಸಹ ನಾವು ಅತಿಯಾಗಿ ಯೋಚನೆ ಚಿಂತೆ ಮಾಡುವುದನ್ನು ನಿಲ್ಲಿಸಬಹುದು. ಪ್ರತಿ ದಿನ ಹತ್ತರಿಂದ ಇಪ್ಪತ್ತು ನಿಮಿಷ ಧ್ಯಾನ ಪ್ರಾಣಾಯಾಮ ಮಾಡುವುದರಿಂದ ನಮ್ಮ ಮೆದುಳು ಮತ್ತು ಮನಸ್ಸು ಎರಡೂ ನಮ್ಮ ಹಿಡಿತದಲ್ಲಿ ಇರತ್ತೆ. ಯಾವುದೇ ಕೆಲಸವನ್ನು ಸುದೀರ್ಘವಾಗಿ ಮಾಡುವ ಸಾಮರ್ಥ್ಯ ಬರುತ್ತದೆ. ಹಾಗೇ ಜೀವನದಲ್ಲಿ ನಕಾರಾತ್ಮಕವಾಗಿ ಯೋಚನೆಗಳ ಮಾಡದೆ ಸಕಾರಾತ್ಮಕವಾಗಿ ಯೋಚನೆ ಮಾಡಬೇಕು. ಇವು ನಮ್ಮ ಜೀವನದಲ್ಲಿ ಯಶಸ್ಸು ಕಾಣಲು ಕಾರಣ ಆಗತ್ತೆ.

ರಿಸರ್ಚ್ ಪ್ರಕಾರ ನಾವು ನಮ್ಮ ಭವಿಷ್ಯತ್ತಿನಲ್ಲಿ ಹೀಗೆ ಆಗಬಹುದು ಹಾಗೇ ಆಗಬಹುದು ಎಂದು ಯೋಚನೆ ಚಿಂತೆ ಮಾಡುವುದು ಶೇಕಡಾ ಎಂಭತ್ತರಷ್ಟು ಘಟನೆಗಳು ನಡೆಯುವುದೆ ಇಲ್ಲ. ಇವು ನಾವು ನಮ್ಮ ಮನಸಲ್ಲಿ ಸೃಷ್ಟಿ ಮಾಡಿಕೊಂಡ ಭಯ. ಹೀಗೆ ಭವಿಷ್ಯದ ಬಗ್ಗೆ ಚಿಂತೆ ಮಾಡದೇ ವರ್ತಮಾನದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು. ನಾವು ಎಂದಿಗೂ ನಮ್ಮನ್ನ ಬೇರೆಯವರ ಜೊತೆ ಹೋಲಿಕೆ ಮಾಡಿಕೊಳ್ಳಬಾರದು. ನಾವು ಯಾವಾಗ ನಮ್ಮನ್ನ ಬೇರೆಯವರ ಜೊತೆ ಹೋಲಿಕೆ. ಮಾಡಿಕೊಳ್ಳುತ್ತೇವೋ ಆಗ ನಮ್ಮ ಮನಸಲ್ಲಿ ಗೊಂದಲ ಉಂಟಾಗುತ್ತದೆ.

ಹೀಗೆ ಹೋಲಿಕೆ ಮಾಡಿಕೊಳ್ಳುವುದು ನಮಗೆ ನಾವು ದ್ರೋಹ ಮಾಡಿಕೊಂಡಂತೆ ಆಗುತ್ತದೆ. ಹಾಗಾಗಿ ನಿಮ್ಮ ಸ್ನೇಹಿತರು ಸಂಬಂಧಿಕರು ಯಾರೇ ಆಗಲಿ ಏಳ್ಗೆ ಕಂಡಲ್ಲಿ ಅದನ್ನ ನು ಮ ಜೊತೆ ಹೋಲಿಕೆ ಮಾಡಿಕೊಳ್ಳಬೇಡಿ. ಇದರಿಂದ ನಿಮಗೆ ನಿಮ್ಮ ಕೆಲಸದಲ್ಲಿ ಆಸಕ್ತಿ ಉಂಟಾಗುತ್ತದೆ. ಬದಲಿಗೆ ನೀವು ನಿಮಗೆ ಆಸಕ್ತಿ ಇರುವ ಕೆಲಸಗಳಲ್ಲಿ ಸಕ್ರಿಯರಾಗುವಂತೇ ಒರಯತ್ನ ಪಡಿ. ಪ್ರಯತ್ನ ಪಟ್ಟರೆ ಯಾವುದೇ ಕೆಲಸವೂ ಸಹ ಅಸಾಧ್ಯ. ಜೀವನದಲ್ಲಿ ಪ್ರಯತ್ನ ಪಟ್ಟರೆ ಏನನ್ನು ಬೇಕಿದ್ದರೂ ಸಾಧಿಸಬಹುದು. ಈ ಅಂಶಗಳನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಸುಮ್ಮನೆ ಅತಿಯಾಗಿ ಚಿಂತೆ ಮಾಡುವುದನ್ನ ನಿಲ್ಲಿಸಬಹುದು ಇಂದು ನೆಮ್ಮದಿಯ ಜೀವನವನ್ನೂ ಸಹ ಸಾಗಿಸಬಹುದು.

Leave a Reply

Your email address will not be published. Required fields are marked *