ದೇವಸ್ಥಾನಕ್ಕೆ ಹೋದಾಗ ಗಂಟೆ ಬಾರಿಸುವುದರ ಹಿಂದಿರುವ ಕಾರಣವೇನು ಗೊತ್ತೇ

0 4

ಸಾಮಾನ್ಯವಾಗಿ ನಾವು ಯಾವುದೇ ದೇವಸ್ಥಾನಗಳಿಗೆ ಹೋದರೂ ಸಹ ನೇರವಾಗಿ ದೇವಸ್ಥಾನದ ಒಳಗೆ ಪ್ರವೇಶ ಮಾಡಿಬಿಡುತ್ತೇವೆ ಆದರೆ ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ಹೀಗೆ ಮಾಡುವುದು ಸರಿಯಲ್ಲ ಯಾಕಂದ್ರೆ ನಮ್ಮ ಹಿಂದೂ ಧರ್ಮ ಪುರಾತನ ಧರ್ಮಗಳಲ್ಲಿ ಒಂದಾಗಿದ್ದು ಹಿಂದೂ ಧರ್ಮದಲ್ಲಿರುವ ಪ್ರತಿಯೊಂದು ಸಂಪ್ರದಾಯದ ಹಿಂದೆಯೂ ವೈಜ್ಞಾನಿಕ ಕಾರಣ ಮತ್ತು ಅದರದ್ದೇ ಆದ ಮಹತ್ವವಿರುವುದಂತೂ ಖಂಡಿತವಾಗಿಯೂ ನಂಬಲೇಬೇಕಾದ ಸತ್ಯ

ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ದೇವಸ್ಥಾನಗಳಿಗೆ ಹೋಗುವ ಮುನ್ನ ನಾವು ನಮ್ಮ ದೇಹವನ್ನು ಶುಭ್ರವಾಗಿಟ್ಟುಕೊಂಡು ಹೋಗಬೇಕು ದೇಹವಷ್ಟೇ ಅಲ್ಲದೇ ಮನಸ್ಸಿನಲ್ಲಿಯೂ ಕೂಡಾ ಯಾವುದೇ ರೀತಿಯ ಕಾಮ ಕ್ರೋಧಗಳು ಇರಬಾರದು ದೇಹದಷ್ಟೇ ಮನಸ್ಸು ಕೂಡಾ ಶುದ್ಧವಾಗಿರಬೇಕು ಅಷ್ಟೇ ಅಲ್ಲದೇ ದೇವಸ್ಥಾನಗಳಿಗೆ ಬಂದಾಗ ಮೊದಲಿಗೆ ತಮ್ಮ ಕೈ ಕಾಲುಗಳನ್ನು ಸ್ವಚ್ಛಗೊಳಿಸಿಕೊಂಡು ನಂತರ ದೇವಸ್ಥಾನದ ಗೋಪುರದ ದರ್ಶನ ಮಾಡಿ ಆನಂತರದಲ್ಲಿ ದೇವಸ್ಥಾನದ ಗರುಡಗಂಬವನ್ನು ಧ್ವಜವನ್ನು ದರ್ಶನ ಮಾಡಿದ ಮೇಲಷ್ಟೇ ದೇವಸ್ಥಾನದ ಒಳಗೆ ಪ್ರವೇಶ ಮಾಡಿ ಅಲ್ಲಿರುವ ಘಂಟೆಗಳನ್ನು ಮೊದಲು ಬಾರಿಸಿ ನಂತರವಷ್ಟೆ ದೇವರ ಮೂರ್ತಿಯ ದರ್ಶನ ಮಾಡಬೇಕು, ಅಲ್ಲದೇ ಮನೆಯಲ್ಲಿಯೂ ಕೂಡಾ ಘಂಟಾ ನಾದ ಮಾಡುವುದು ಸಂಪ್ರದಾಯ ಅಷ್ಟೇ ಅಲ್ಲದೆ ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ಘಂಟಾನಾದವನ್ನು ಮಾಡುವುದರಿಂದ ಅನೇಕ ಲಾಭಗಳಿವೆ.

ಘಂಟಾ ನಾದವನ್ನು ಮಾಡುವುದರಿಂದ ಅದರಿಂದ ಓಂಕಾರ ನಾದವು ಹೊರಹೊಮ್ಮುತ್ತದೆ ಅಲ್ಲದೇ ಆ ಓಂಕಾರ ನಾದವು ಭಕ್ತರ ಕಿವಿಯಲ್ಲಿ ಪ್ರಣವ ನಾದವಾಗುವುದರೊಂದಿಗೆ ಅವರ ಮನಸ್ಸನ್ನು ಏಕಾಗ್ರತೆಯಿಂದ ದೇವರ ಮೇಲೆ ಕೇಂದ್ರೀಕರಿಸಲು ಇದು ಸಹಾಯಕವಾಗುತ್ತದೆ, ಅಷ್ಟೇ ಅಲ್ಲದೇ ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ದೇವರನ್ನು ವಿಗ್ರಹದ ಒಳಗೆ ಆಹ್ವಾನಿಸಲು ಘಂಟೆಯನ್ನು ಬಾರಿಸುತ್ತಾರೆ ಅಲ್ಲದೇ ಘಂಟೆಯಲ್ಲಿಯೂ ಸಹ ದೇವರಿದ್ದಾನೆಂದು ನಮ್ಮ ಪುರಾಣಗಳು ಸ್ಪಷ್ಟಪಡಿಸುತ್ತವೆ.

ಘಂಟೆಯು ಸಾಮಾನ್ಯವಾದುದಲ್ಲ ಘಂಟೆಗಳಿಗೆ ನಮ್ಮ ಹಿಂದೂ ಧರ್ಮದಲ್ಲಿ ಬಹಳಷ್ಟು ಮಹತ್ವವಿದೆ ಅಲ್ಲದೇ ಘಂಟೆಯ ಪ್ರತಿಯೊಂದು ಭಾಗಕ್ಕೂ ಸಹ ಪ್ರಾಮುಖ್ಯತೆ ಇದೆ ಘಂಟೆಯ ನಾಲಿಗೆಯಲ್ಲಿ ಸರಸ್ವತಿ ದೇವಿಯು ನೆಲೆಸಿರುತ್ತಾಳೆ, ಘಂಟೆಯ ಉದರ ಭಾಗದಲ್ಲಿ ಮಾಹಾ ರುಧ್ರನು ಮತ್ತು ಸೃಷ್ಟಿಕರ್ತ ಬ್ರಹ್ಮನು ನೆಲೆಸಿರುತ್ತಾರೆ ಮತ್ತು ಘಂಟೆಯ ಮುಖ ಭಾಗದಲ್ಲಿ ವಾಸುಕಿಯು ನೆಲೆಸಿದ್ದು ಇನ್ನೂ ಘಂಟೆಯ ಹಿಡಿಯಲ್ಲಿ ಮಹಾಪ್ರಾಣ ಶಕ್ತಿಯು ಇರುತ್ತದೆ ಈ ಎಲ್ಲ ಕಾರಣಗಳಿಂದಾಗಿ ಘಂಟೆಯು ಒಂದು ದೇವರ ಪವಿತ್ರ ಅಂಶವಾಗಿದೆ ಘಂಟೆಯನ್ನು ನಾವು ಬಾರಿಸುವುದರಿಂದ ದುಷ್ಟ ಶಕ್ತಿಗಳು ನಮ್ಮ ಬಳಿ ಸುಳಿಯಲಾರವು.

ಆದರೆ ಯಾವುದೇ ಕಾರಣಕ್ಕೂ ದೇವಸ್ಥಾನದಿಂದ ಹಿಂತಿರುಗುವಾಗ ಘಂಟೆಯನ್ನು ಬಾರಿಸಬಾರದು ಯಾಕಂದ್ರೆ ಹೀಗೆ ಮಾಡುವುದು ಅಶುಭದ ಸಂಕೇತ ಎಂದು ಶಾಸ್ತ್ರಗಳು ಹೇಳುತ್ತವೆ, ಘಂಟೆಯನ್ನು ಬಾರಿಸುವಾಗ ಅದರ ನಾದದಿಂದ ಆಧ್ಯಾತ್ಮಿಕ ಭಾವನೆಗಳು ಮನಸ್ಸಿನಲ್ಲಿ ಮೂಡುವುದಲ್ಲದೆ ಮಾನಸಿಕ ಪ್ರಶಾಂತತೆ ನಿಮ್ಮಲ್ಲಿ ನೆಲೆಸುತ್ತದೆ ಎಂಬುದನ್ನೂ ಕೂಡಾ ನಮ್ಮ ಧರ್ಮ ಶಾಸ್ತ್ರವು ಒಪ್ಪುತ್ತದೆ.

Leave A Reply

Your email address will not be published.