ಸಾವಿರ ತೆಲುಗು ಸಿನಿಮಾಗಳ ಸರದಾರ ಬ್ರಹ್ಮಾನಂದಂ ಅವರ ಜೀವನ ಹಾಗೂ ಸಿನಿ ಪ್ರಯಾಣದ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ತೆಲುಗಿನ ಹಾಸ್ಯ ಕಲಾವಿದ ಬ್ರಹ್ಮಾನಂದಂ ಮೂಲತಃ ಆಂಧ್ರದ ಗುಂಟೂರು ಜಿಲ್ಲೆಯ ಸತ್ಯನಪಲ್ಲಿಯಲ್ಲಿ 1956 ಫೆಬ್ರುವರಿ 1 ರಂದು ಸಾಧಾರಣ ಕುಟುಂಬದಲ್ಲಿ ಜನಿಸುತ್ತಾರೆ. ಇವರ ಮೂಲ ಹೆಸರು ಕನ್ನೆಗಂಟಿ ಬ್ರಹ್ಮಾನಂದಂ. ಇವರ ತಾಯಿ ಇವರು ಹುಟ್ಟಿದ ಕೆಲವೇ ದಿನಗಳಲ್ಲಿ ನಿಧನರಾದರು ತಾಯಿಯನ್ನು ಬಲಿ ಪಡೆದ ಮಗ ಎಂಬ ಜನರ ನಿಂದನೆಯೊಂದಿಗೆ ತಂದೆಯ ಪೋಷಣೆಯಲ್ಲಿ ಬೆಳೆದರು.

ಇವರ ತಂದೆ ಕೋಪಿಷ್ಟರಾಗಿದ್ದರಿಂದ ಸಣ್ಣ ಪುಟ್ಟ ತಪ್ಪಿಗೆ ಶಿ ಕ್ಷೆ ಕೊಡುತ್ತಿದ್ದರು. ಇವರು ನಿಂದನೆಯ ನಡುವೆಯೂ ವಿಧ್ಯಾಭ್ಯಾಸ ಮಾಡುತ್ತಾರೆ ಇವರಿಗೆ ಸಣ್ಣ ವಯಸ್ಸಿನಿಂದಲೂ ಸಿನಿಮಾ ಕಡೆ ಒಲವಿತ್ತು. ವಿದ್ಯಾಭ್ಯಾಸದಲ್ಲಿ ಪ್ರತಿಭಾವಂತರಾದ ಇವರು 10ನೇ ಕ್ಲಾಸಿನಲ್ಲಿ ಹೆಚ್ಚು ಅಂಕಗಳನ್ನು ಪಡೆದರು. ಮುಂದಿನ ವಿದ್ಯಾಭ್ಯಾಸಕ್ಕೆ ಮನೆಯಲ್ಲಿ ಅನುಕೂಲ ಇರಲಿಲ್ಲ ಆದರೆ ತಂದೆಯ ಸ್ನೇಹಿತನ ಸಹಾಯದಿಂದ ಪದವಿ ಶಿಕ್ಷಣ ಪಡೆದರು ನಂತರ ಸ್ನಾತ್ತಕೋತ್ತರ ಪದವಿ ಪಡೆದರು.

ತೆಲುಗು ಭಾಷಾ ಸಾಹಿತ್ಯದಲ್ಲಿ ಎಂಎ ಪಡೆದರು ಅವರಿಗೆ ಬೇಗನೆ ಲೆಕ್ಚರರ್ ಹುದ್ದೆಯೂ ಸಿಕ್ಕಿತು 9 ವರ್ಷಗಳ ಕಾಲ ಲೆಕ್ಚರರ್ ಆಗಿ ಕೆಲಸ ಮಾಡಿದರು ಈ ಸಮಯದಲ್ಲಿ ಅವರು ಸಿನಿಮಾ ನೋಡುತ್ತಿದ್ದರು. ಸಿನಿಮಾ ನೋಡುತ್ತಾ ಅಭಿನಯ ಪ್ರವೃತ್ತಿಯನ್ನು ಬೆಳೆಸಿಕೊಂಡರು. ನಗುತ್ತಾ, ನಗಿಸುತ್ತಾ ಪಾಠ ಮಾಡುವ ಅವರು ಕಾಲೇಜಿನಲ್ಲಿ ಎಲ್ಲರಿಗೂ ಮೆಚ್ಚಿನವರಾದರು.

ನಂತರ ದೂರದರ್ಶನದಲ್ಲಿ ಒಂದು ಹಾಸ್ಯ ಕಾರ್ಯಕ್ರಮಕ್ಕೆ ನಿರೂಪಕರಾಗಿ ಅವಕಾಶ ದೊರೆಯಿತು. ಈ ಕಾರ್ಯಕ್ರಮದಿಂದ ಜನಪ್ರಿಯರಾದ ಬ್ರಹ್ಮಾನಂದಂ ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ದೊರೆಯಿತು. ಸ್ವಯಂ ಕೃಷಿ, ಚಕ್ರವರ್ತಿ ಮೊದಲಾದ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ನಟಿಸಿದರು. ತಮ್ಮ ಲೆಕ್ಚರರ್ ಹುದ್ದೆಗೆ ರಾಜೀನಾಮೆ ನೀಡಿ ಚಿತ್ರರಂಗದಲ್ಲಿ ನಟಿಸಿದರು. ತೆಲುಗಿನ ಜನಪ್ರಿಯ ಹಾಸ್ಯ ನಟರಲ್ಲಿ ಒಬ್ಬರಾದರು.

ಸಾವಿರಾರು ಸಿನಿಮಾಗಳಲ್ಲಿ ನಟಿಸಿದ ಇವರು 64 ವರ್ಷದವರಾಗಿದ್ದು ಈಗಲೂ ಆಕ್ಟೀವ್ ಆಗಿ ನಟಿಸುತ್ತಾರೆ. ಅವರಿಗೆ ಪದ್ಮ ಶ್ರೀ, ಫಿಲ್ಮ್ ಫೇರ್ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಸಾವಿರ ಸಿನಿಮಾ ಪೂರೈಸಿದ ಭಾರತಿಯ ಕಲಾವಿದ ಎಂದು ಗಿನ್ನಿಸ್ ರೆಕಾರ್ಡ್ ದೊರೆತಿದೆ. ಇವರ ಪತ್ನಿಯ ಹೆಸರು ಲಕ್ಷ್ಮೀ. ಇವರಿಗೆ ರಾಜಗೌತಮ್ ಹಾಗೂ ಸಿದ್ದಾರ್ಥ ಎಂಬ ಇಬ್ಬರು ಮಕ್ಕಳಿದ್ದಾರೆ.

Leave a Reply

Your email address will not be published. Required fields are marked *