ಶಂಕರ್ ಅಶ್ವಥ್ ಅವರ ಮಗಳ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ

0 0

ಕನ್ನಡದ ಪೋಷಕ ನಟರಾದ ಸಿ ಅಶ್ವಥ್ ಅವರ ಮಗ ಶಂಕರ್ ಅಶ್ವಥ್ ಅವರು ಪೊಗರು ಸಿನಿಮಾದಲ್ಲಿ ತಮ್ಮ ನಟನೆಯ ಬಗ್ಗೆ ಪೊಗರು ಸಿನಿಮಾ ಶೂಟಿಂಗ್ ಸಂಪೂರ್ಣವಾಗಿ ಮುಗಿದ ನಂತರದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟನ್ನು ಹಂಚಿಕೊಂಡಿದ್ದಾರೆ. ಶಂಕರ್ ಅಶ್ವತ್ ಅವರು ಹಂಚಿಕೊಂಡ ಪೋಸ್ಟಿನಲ್ಲಿ ಶಂಕರ್ ಅಶ್ವಥ್ ಅವರು ರಶ್ಮಿಕಾ ನನ್ನ ಮಗಳಾಗಿ ನಟಿಸಿದ್ದು ನನ್ನ ಭಾಗ್ಯ ಇಂದು ಬರೆದುಕೊಂಡಿದ್ದಾರೆ. ಅವರು ಯಾತಕ್ಕಾಗಿ ರೀತಿಯಾಗಿ ಬರೆದುಕೊಂಡಿದ್ದಾರೆ? ಈ ಬರಹದಿಂದ ಅಭಿಮಾನಿಗಳ ಮೇಲೆ ಆದ ಪರಿಣಾಮ ಏನು? ಎನ್ನುವುದನ್ನು ಇಲ್ಲಿ ಕನ್ನಡ ಮೂಲಕ ತಿಳಿದುಕೊಳ್ಳೋಣ.

ಹಿರಿಯ ಪೋಷಕ ನಟ ಅಶ್ವಥ್ ಅವರು ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಬಹುಶಃ ಅಶ್ವತ್ ಎನ್ನುವುದಕ್ಕಿಂತ ಚಾಮಯ್ಯ ಮೇಷ್ಟ್ರು ಎಂದರೆ ಬಹಳ ಬೇಗ ಜನರ ಮನಸ್ಸಿಗೆ ತಟ್ಟಬಹುದು. ಅಶ್ವತ್ ಅವರು ಬಹಳ ಪ್ರಖ್ಯಾತ ಪೋಷಕ ನಟರು ಎನ್ನುವುದರಲ್ಲಿ ಎರಡು ಮಾತಿಲ್ಲ. ತಂದೆಯಂತೆಯೇ ಅವರ ಮಗ ಕೂಡಾ ಉತ್ತಮ ಪೋಷಕ ನಟ. ಅಶ್ವತ್ ಅವರ ಮಗ ಶಂಕರ್ ಅಶ್ವಥ್ ಅವರು ಸಹ ತಂದೆಯಂತೆಯೇ ಉತ್ತಮ ಪೋಷಕ ನಟ ಎಂದು ಪ್ರಖ್ಯಾತಿ ಹೊಂದಿದ್ದಾರೆ. ಅಪ್ಪನ ಹಾಗೆಯೆ ಉತ್ತಮ ಸಿನಿಮಾಗಳನ್ನು ಮಾಡುತ್ತಿರುವ ಶಂಕರ್ ಅಶ್ವಥ್ ಅವರು ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದಲ್ಲಿ ಕೂಡಾ ಪೋಷಕ ನಟನಾಗಿ ಅಭಿನಯಿಸಿದ್ದಾರೆ.

ಬಹುನಿರೀಕ್ಷೆಯ ಪೊಗರು ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಅಷ್ಟೆ ಮುಕ್ತಾಯಗೊಂಡಿದೆ. ಪೊಗರು ಸಿನಿಮಾದಲ್ಲಿ ಶಂಕರ್ ಅಶ್ವಥ್ ಅವರ ಪಾತ್ರ ನಟಿ ರಶ್ಮಿಕಾ ಮಂದಣ್ಣ ತಂದೆಯ ಪಾತ್ರ. ಈ ಬಗ್ಗೆ ಪೋಷಕ ನಟ ಶಂಕರ್ ಅಶ್ವಥ್ ಸಾಮಾಜಿಕ ಜಾಲತಾಣದಲ್ಲಿ ನಟಿ ರಶ್ಮಿಕಾ ಮಂದಣ್ಣ ಮಗಳಾಗಿ ನಟಿಸಿದ್ದು ನನ್ನ ಭಾಗ್ಯ ಎಂದು ಬರೆದುಕೊಂಡಿದ್ದಾರೆ. ಪೊಗರು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನನ್ನ ಮಗಳಾಗಿ ನಟಿಸಿದ್ದು ನನ್ನ ಭಾಗ್ಯ. ಮಗಳ ಮಾತಿಗೆ ಬೆಲೆ ಕೊಟ್ಟು ಆಶೀರ್ವಾದಿಸಿದ ಕೊನೆಯ ಸನ್ನಿವೇಶದ ಚಿತ್ರೀಕರಣ ಕೂಡಾ ಮುಗಿದಿದೆ ಎಂದು ಬರೆದುಕೊಂಡಿದ್ದಾರೆ.

ಎರಡು ವರ್ಷಕ್ಕೂ ಮೀರಿ ನಡೆದ ಪೊಗರು ಚಿತ್ರದ ಚಿತ್ರೀಕರಣ ಮುಗಿದಿದೆ. ಚಿತ್ರೀಕರಣದ ಕುರಿತಾಗಿ ಶಂಕರ್ ಅಶ್ವಥ್ ಅವರು ತಮ್ಮ ಅನುಭವಗಳನ್ನು ಸಹ ಹಂಚಿಕೊಂಡಿದ್ದಾರೆ ಆದರೆ ಮೇಲೆ ಹೇಳಿದ ಈ ಪೋಸ್ಟ್ ಬಗ್ಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಶಂಕರ್ ಅಶ್ವಥ್ ಅವರು ರಶ್ಮಿಕಾ ಮಂದಣ್ಣ ಜೊತೆ ನಟಿಸುವುದು ನನ್ನ ಭಾಗ್ಯ ಎಂದು ಬರೆದು ಹಾಕಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ನಿಮ್ಮ ಜೊತೆ ರಶ್ಮಿಕಾ ಅಭಿನಯಿಸುತ್ತಿರುವುದು ರಶ್ಮಿಕಾ ಪುಣ್ಯ, ನಿಮ್ಮ ಭಾಗ್ಯ ಎಂದು ಹೇಳಬೇಡಿ ಎಂದು ಅಭಿಮಾನಿಗಳು ವಿನಂತಿ ಮಾಡುತ್ತಿದ್ದಾರೆ. ಅಂದಹಾಗೆ ನಟ ಶಂಕರ್ ಅಶ್ವಥ್ ಮತ್ತು ರಶ್ಮಿಕಾ ಮೊದಲು ದರ್ಶನ್ ಅಭಿನಯದ ಯಜಮಾನ ಸಿನಿಮಾದಲ್ಲಿ ನಟಿಸಿದ್ದರು. ಆ ಸಮಯದಲ್ಲೂ ಶಂಕರ್ ಅಶ್ವಥ್ ರಶ್ಮಿಕಾ ನನ್ನ ಮಗಳಿದ್ದಂತೆ ಎಂದು ಹೇಳಿ ರಶ್ಮಿಕಾ ಜೊತೆ ಫೋಟೋ ಶೇರ್ ಮಾಡಿದ್ದರು.

ಪೊಗರು ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷೆಯ ಸಿನಿಮಾ. ಸದ್ಯ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ಪೊಗರು ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಮೂಲಗಳ ಪ್ರಕಾರ ಪೊಗರು ಸಿನಿಮಾ ಕ್ರಿಸ್ಮಸ್ ಗೆ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಸಿನಿಮಾತಂಡ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.

Leave A Reply

Your email address will not be published.