ಸಾಮಾನ್ಯವಾಗಿ ಈ ಹಲ್ಲು ನೋವು ಸಮಸ್ಯೆ ಅನ್ನೋದು ಚಿಕ್ಕೋರಿಂದ ವಯಸ್ಸಾದವರಿಗೂ ಕಾಡುವಂತ ಸಮಸ್ಯೆ ಆಗಿದೆ ಇದಕ್ಕೆ ಹಲವು ಮನೆಮದ್ದುಗಳನ್ನು ತಿಳಿಯಬಹುದು, ಆದ್ರೆ ಈ ಮೂಲಕ ನಿಮಗೆ ಲವಂಗದ ಎಣ್ಣೆ ಹಲ್ಲು ನೋವಿಗೆ ಹೇಗೆ ಪರಿಣಾಮಕಾರಿ ಅನ್ನೋದನ್ನ ತಿಳಿಸುವ ಚಿಕ್ಕ ಪ್ರಯತ್ನ ನಮ್ಮಿಂದ. ನಿಮಗೆ ಇಷ್ಟವಾದರೆ ಈ ಮನೆಮದ್ದುಗಳನ್ನು ನಿಮ್ಮ ಆತ್ಮೀಯರಲ್ಲಿ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ. ಬನ್ನಿ ಒಂದಿಷ್ಟು ಮನೆಮದ್ದುಗಳನ್ನು ನಿಮಗೆ ಪರಿಚಯಿಸಿ ಕೊಡುತ್ತೇವೆ.

ಮೊದಲನೆಯದಾಗಿ ಹಲ್ಲು ನೋವಿಗೆ ಹಾಗೂ ಕೆಮ್ಮಿಗೆ ಈ ಮನೆಮದ್ದು, ಹಲ್ಲು ನೋವಿಗೆ ಲವಂಗದ ಎಣ್ಣೆ ಅಥವಾ ಲವಂಗದ ಮುಲಾಮನ್ನು ಹಲ್ಲು ನೋವು ಇರುವಂತ ಜಾಗಕ್ಕೆ ಹಚ್ಚುವುದರಿಂದ ಸಮಸ್ಯೆಗೆ ಪರಿಹಾರ ಕಾಣಬಹುದು. ಇನ್ನು ಕೆಮ್ಮು ಇದ್ರೆ ಕಲ್ಲು ಸಕ್ಕರೆ ಹಾಗೂ ಲವಂಗವನ್ನು ಬಾಯಿಗೆ ಹಾಕಿಕೊಂಡು ಜಗಿದು ಅದರ ರಸವನ್ನು ನುಂಗುವುದರಿಂದ ಕೆಮ್ಮು ಶಮನವಾಗುದು.

ಎರಡನೆಯ ಮನೆಮದ್ದು ಬಾಯಿ ವಾಸನೆ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಗೆ, ಒಂದೆರಡು ಲವಂಗವನ್ನು ಜಗಿಯುತ್ತಿದ್ದರೆ ಬಾಯಿ ವಾಸನೆ ದೂರವಾಗುವುದು. ಇನ್ನು ಲವಂಗದ ಕಷಾಯವನ್ನು ಮಾಡಿಕೊಂಡು ದಿನಕ್ಕೆ ಮೂರೂ ಬಾರಿ ಸೇವನೆ ಮಾಡುವುದರಿಂದ ಹೊಟ್ಟೆ ಉಬ್ಬರ ಅಜೀರ್ಣತೆ ಮುಂತಾದ ಸಮಸ್ಯೆಗಳು ನಿವಾರಣೆಯಾಗುವುದು.

ಇನ್ನು ಮೂರನೆಯ ಮನೆಮದ್ದು ಯಾವುದು ಅನ್ನೋದನ್ನ ನೋಡುವುದಾದರೆ ಕೆಮ್ಮು ಗಂಟಲು ಕಡಿತ ಅಜೀರ್ಣ ಬಗ್ಗೆ ತಿಳಿಯೋಣ, ಒಂದು ಲವಂಗವನ್ನು ಕಲ್ಲು ಉಪ್ಪಿನೊಂದಿಗೆ ಚಪ್ಪರಿಸುತ್ತ ನೀರು ಕುಡಿಯುತ್ತ ಹೋದರೆ ಗಂಟಲು ಕೆರೆತ ಹಾಗೂ ಕೆಮ್ಮು ಗುಣವಾಗುವುದು. ಲವಂಗದ ಕಷಾಯವನ್ನು ಸೇವನೆ ಮಾಡುವುದರಿಂದ ಹೊಟ್ಟೆ ಉಬ್ಬರ ಅಜೀರ್ಣತೆ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ನಿವಾರಣೆಯಾಗುವುದು.

Leave a Reply

Your email address will not be published. Required fields are marked *