ಹಲ್ಲು ನೋವು ಇದು ಹೆಚ್ಚಾಗಿ ನೂರರಲ್ಲಿ ಸುಮಾರು 60 ಶೇಕಡಾದಷ್ಟು ಜನರು ಇದನ್ನು ಅನುಭವಿಸುತ್ತಿರುತ್ತಾರೆ. ಹಲ್ಲುನೋವು ಇದು ಬಂದರೆ ಊಟವನ್ನು ಮಾಡಲು ಸಹ ಆಗುವುದಿಲ್ಲ. ಹಲ್ಲುಗಳಲ್ಲಿ ಸಂವೇದನಾಶೀಲತೆ ಉಂಟಾಗುತ್ತದೆ. ಸಂವೇದನಾಶೀಲತೆ ಉಂಟಾದಾಗ ಅತಿಯಾದ ಸಿಹಿಯನ್ನು ತಿನ್ನಲು ಸಾಧ್ಯವಿಲ್ಲ. ಹಾಗೆಯೇ ತಣ್ಣವಾದ ನೀರನ್ನು ಹಲ್ಲಿಗೆ ತಾಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾವು ಇಲ್ಲಿ ಹಲ್ಲುನೋವನ್ನು ತಾತ್ಕಾಲಿಕವಾಗಿ ಕಡಿಮೆಮಾಡಿಕೊಳ್ಳಲು ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಹಲ್ಲುನೋವು ಉಂಟಾದಾಗ ಐಸ್ಕ್ಯೂಬ್ ನ್ನು ಹಲ್ಲಿನ ಮೇಲೆ ಇಟ್ಟುಕೊಳ್ಳಬೇಕು. ಇದನ್ನು ಸುಮಾರು 15 ನಿಮಿಷಗಳ ಕಾಲ ಇಟ್ಟುಕೊಳ್ಳಬೇಕು. ಹಾಗೆಯೇ ನಂತರದಲ್ಲಿ ಒಣಗಿಸಿದ ಪುದಿನಾ ಎಲೆಗಳನ್ನು ತೆಗೆದುಕೊಂಡು ಒಂದು ಲೋಟ ನೀರಿಗೆ ಹಾಕಿ ಸುಮಾರು 20 ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ನಂತರದಲ್ಲಿ ಇದನ್ನು ಬಾಯಿಗೆ ಹಾಕಿ ಚೆನ್ನಾಗಿ ಮುಕ್ಕಳಿಸಬೇಕು. ಇದರಿಂದ ಸಹ ಹಲ್ಲುನೋವನ್ನು ದೂರ ಇಡಬಹುದು. ಹಾಗೆಯೇ ಹೈಡ್ರೋಜನ್ ಪೆರಾಕ್ಸೈಡ್ 3ಎಂ.ಎಲ್. ನಷ್ಟು ತೆಗೆದುಕೊಂಡು ಅದಕ್ಕೆ ಕಾಲು ಲೀಟರ್ ನೀರು ಬೆರೆಸಿ ಬಾಯಿಗೆ ಹಾಕಿ ಮೌತ್ವಾಶ್ ಮಾಡಬೇಕು.

ದಿನಕ್ಕೆ ಮೂರು ಬಾರಿ ಹೀಗೆ ಮಾಡಬೇಕು. ಹಾಗೆಯೇ ಹಲ್ಲುನೋವು ಉಂಟಾದಾಗ ನೋವಿರುವ ಹಲ್ಲಿಗೆ ಲವಂಗವನ್ನು ಇಟ್ಟುಕೊಳ್ಳಬೇಕು. ಲವಂಗದ ಎಣ್ಣೆಯನ್ನು ಸಹ ಬಳಸಬಹುದು. ನೋವು ಇರುವ ಜಾಗಕ್ಕೆ ಒಂದು ಹನಿ ಲವಂಗದ ಎಣ್ಣೆಯನ್ನು ಹಾಕಬೇಕು. ಇದು ಒಂದು ಚೀನಾದ ಔಷಧಿ ಹಾಗೂ ಆಯುರ್ವೇದದ ಔಷಧಿಯಾಗಿದೆ. ಇದು ಹಲ್ಲುನೋವಿಗೆ ಒಂದು ತಾತ್ಕಾಲಿಕ ಔಷಧಿಯಾಗಿದೆ. ಹಾಗೆಯೇ ಪೇರಲೆ ಹಣ್ಣಿನ ಎಲೆಗಳನ್ನು ತಂದು ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ನಂತರದಲ್ಲಿ ಅದನ್ನು ಬಾಯಿಗೆ ಹಾಕಿ ಇಟ್ಟುಕೊಳ್ಳಬೇಕು.

ಇದರಿಂದ ಹಲ್ಲುನೋವು ದೂರವಾಗುತ್ತದೆ. ಹಾಗೆಯೇ ಕೆಲವರು ಹಲ್ಲುನೋವು ಬಂತೆಂದರೆ ಮಾತ್ರೆಯನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಹಾಗೆಯೇ ಅತಿಯಾದ ಹಲ್ಲು ಹುಳುಕು ಆಗಿದ್ದಲ್ಲಿ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ಏಕೆಂದರೆ ಅದು ಹಾಗೆಯೇ ಮುಂದೆ ಹುಳುಕು ಆದರೆ ಅತಿ ಹೆಚ್ಚಿನ ಹಣವನ್ನು ಹಲ್ಲಿಗೆ ಹಾಕಬೇಕಾಗುತ್ತದೆ. ಆದ್ದರಿಂದ ವರ್ಷಕ್ಕೆ ಒಂದು ಬಾರಿಯಾದರೂ ಹಲ್ಲಿನ ವೈದ್ಯರ ಹತ್ತಿರ ಹೋಗಿ ಪರೀಕ್ಷೆ ಮಾಡಿಸುತ್ತಿರಬೇಕು. ಹಲ್ಲು ಸರಿಯಾಗಿ ಇದ್ದರೆ ಮಾತ್ರ ಎಲ್ಲಾ ಆಹಾರಗಳನ್ನು ಸೇವನೆ ಮಾಡಲು ಸಾಧ್ಯವಾಗುತ್ತದೆ.

Leave a Reply

Your email address will not be published. Required fields are marked *