ತಿಂಗಳಲ್ಲಿ 5 ರಿಂದ 6 ಕೆಜಿ ತೂಕ ಇಳಿಸಿಕೊಳ್ಳಿ, ಮನೆಮದ್ದು

0 3

ಮನುಷ್ಯನ ದೇಹಕ್ಕೆ ತೂಕ ಎನ್ನುವ ಅಂಶವು ಸಮಪ್ರಮಾಣದಲ್ಲಿ ಇರಬೇಕು. ಯಾವುದಾದರೂ ಅಷ್ಟೇ ಅತಿ ಹೆಚ್ಚಾದರೆ ವಿಷ ಎನ್ನುವುದು ಎಲ್ಲರಿಗೂ ತಿಳಿದಿದೆ. ಕೆಲವರು ಅತಿಯಾದ ತೂಕವನ್ನು ಹೊಂದಿರುತ್ತಾರೆ. ಹಾಗೆಯೇ ಕೆಲವರು ಅತಿ ಕಡಿಮೆ ತೂಕವನ್ನು ಹೊಂದಿರುತ್ತಾರೆ. ಆದರೆ ಅವರ ವಯಸ್ಸು ಎಷ್ಟು ಇರಬೇಕೋ ಅಷ್ಟು ಇದ್ದರೆ ಅದು ಮನುಷ್ಯನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ದರಿಂದ ನಾವು ತೂಕವನ್ನು ಇಳಿಸಿಕೊಳ್ಳಲು ಮನೆಮದ್ದುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮಾರುಕಟ್ಟೆಗಳಲ್ಲಿ ಎಷ್ಟೋ ರೀತಿಯ ವಸ್ತುಗಳು ಸಿಗುತ್ತವೆ. ಆದರೆ ಅವುಗಳು ಅತಿಯಾದ ರಾಸಾಯನಿಕಗಳನ್ನು ಹೊಂದಿರುತ್ತವೆ. ಮಾರುಕಟ್ಟೆಯ ಔಷಧಿಗಳನ್ನು ತೆಗೆದುಕೊಂಡಾಗ ಪರಿಣಾಮ ಕಂಡರೂ ಸಹ ನಂತರದಲ್ಲಿ ಅದು ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಯಾವುದೇ ರೀತಿಯ ರೋಗಗಳು ಅಥವಾ ಯಾವುದೇ ರೀತಿಯ ತೊಂದರೆಗಳು ಉಂಟಾದಾಗ ಹೆಚ್ಚಾಗಿ ಮನೆಮದ್ದಿಗೆ ಬೆಲೆ ಕೊಡುವುದು ಬಹಳ ಒಳ್ಳೆಯದು.

ಮೊದಲು ಜೀರಿಗೆಯನ್ನು ತೆಗೆದುಕೊಳ್ಳಬೇಕು. ಜೀರಿಗೆಯು ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ಹಾಗೆಯೇ ಇದು ಜೀರ್ಣಕ್ರಿಯೆಗೆ ಬಹಳ ಒಳ್ಳೆಯ ಔಷಧಿ ಎಂದು ಹೇಳಬಹುದು. ಹಾಗೆಯೇ ಜೀರಿಗೆಯು ಹೊಟ್ಟೆಯ ಸುತ್ತ ಇರುವ ಬೊಜ್ಜನ್ನು ಕರಗಿಸಲು ಒಳ್ಳೆಯ ಉಪಾಯ ಆಗಿದೆ. ಹಾಗೆಯೇ ನಂತರದಲ್ಲಿ ಬಡೆಸೊಪ್ಪು. ಇದು ಥೈರಾಯ್ಡ್ ಮತ್ತು ಕೊಲೆಸ್ಟ್ರಾಲ್ ಅನ್ನು ಕರಗಿಸುತ್ತದೆ. ಹಾಗೆಯೇ ಓಂಕಾಳು ಇದು ಕೂಡ ಕೊಲೆಸ್ಟ್ರಾಲ್ ಮಟ್ಟವನ್ನು ದೇಹದಲ್ಲಿ ಕಡಿಮೆ ಮಾಡಲು ಸಹಕಾರಿ.

ಮೊದಲು ಜೀರಿಗೆ, ಬಡೆಸೊಪ್ಪು ಮತ್ತು ಓಂಕಾಳನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಈ ಮೂರನ್ನು ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರದಲ್ಲಿ ಮಿಕ್ಸಿ ಜಾರಿಗೆ ಹಾಕಿ ಪುಡಿಯನ್ನು ಮಾಡಿಕೊಳ್ಳಬೇಕು. ನಂತರ ಒಂದು ಲೋಟ ನೀರಿಗೆ ಒಂದು ಚಮಚ ಈ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಇದನ್ನು ದಿನನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಕುಡಿಯಬೇಕು. ಇದರಿಂದ ದೇಹದ ಬೊಜ್ಜನ್ನು ಕರಗಿಸಿಕೊಳ್ಳಬಹುದು. ಆದರೆ ಇದನ್ನು ದೇವರೇ ಮಾಡಿದ ಒಂದು ತಾಸಿನ ನಂತರ ಉಪಹಾರವನ್ನು ಸೇವನೆ ಮಾಡಬೇಕು.

Leave A Reply

Your email address will not be published.