Taurus Horoscope july 2023: ಪ್ರತಿಯೊಬ್ಬರಿಗೂ ಸಹ ಮುಂದಿನ ತಿಂಗಳ ರಾಶಿ ಭವಿಷ್ಯದ ಬಗ್ಗೆ ನಿರೀಕ್ಷೆಗಳನ್ನು ಹಾಗೂ ರಾಶಿಭವಿಷ್ಯದ ಬಗ್ಗೆ ಕುತೂಹಲ ಇದ್ದೇ ಇರುತ್ತದೆ ಹಾಗೆಯೇ ಎಲ್ಲರಿಗೂ ಸಹ ಒಂದೇ ರೀತಿಯ ಫಲಗಳು ಲಭಿಸುವುದು ಇಲ್ಲ ಬದಲಾಗಿ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ 2023 ಜುಲೈ ತಿಂಗಳಲ್ಲಿ ವೃಷಭ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ

ಹಾಗೆಯೇ ಅಂದುಕೊಂಡಷ್ಟು ಶುಭ ಫಲಗಳು ಲಭಿಸುವುದು ಇಲ್ಲ ಕಾರಣವೆಂದರೆ 12 ಮನೆಯಲ್ಲಿ ಗುರು ಹಾಗೂ ರಾಹು ಇರುವುದರಿಂದ ಚಂಡಾಲ ಯೋಗ ಕಂಡು ಬರುತ್ತದೆ ಹೀಗಾಗಿ ಅನೇಕ ಸಣ್ಣ ಪುಟ್ಟ ತೊಂದರೆಯನ್ನು ಅನುಭವಿಸಬೇಕಾಗಿ ಬರುತ್ತದೆ ಹಾಗೆಯೇ ಹಣಕಾಸಿನ ವಿಷಯದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕು. ಹಣಕಾಸಿನ ಖರ್ಚು ಹೆಚ್ಚಾಗಿ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಉಳಿತಾಯದ ಕಡೆಗೆ ಗಮನ ಹರಿಸಬೇಕು ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ವೃಷಭ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಜುಲೈ 6ರಂದು ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ ಜುಲೈ 8ರಂದು ಬುಧ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆಯೇ 16 ತಾರೀಖಿನಂದು ರವಿ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಜುಲೈ 24ರಂದು ಸಿಂಹ ರಾಶಿಗೆ ಬುಧನು ಪ್ರವೇಶ ಮಾಡುತ್ತಾನೆ ರವಿ 2ಮತ್ತು 3ನೆಯ ಮನೆಯಲ್ಲಿ ಇರುತ್ತದೆ ಕುಜ 4 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಬುಧ 2 ಮತ್ತು 3ಹಾಗೂ 4ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಗುರು 12 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಶುಕ್ರನು 3 ಮತ್ತು 4 ನೆಯ ಮನೆಯನ್ನು ಸಂಚಾರ ಮಾಡುತ್ತಾನೆ

Taurus Horoscope july 2023

ಶನಿ 10 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ರಾಹು 12 ಮತ್ತು ಕೇತು 6ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ವೃಷಭ ರಾಶಿಯವರಿಗೆ 12 ಮನೆಯಲ್ಲಿ ಗುರು ಇರುತ್ತಾನೆ ಹಾಗೆಯೇ ಅದೇ ಮನೆಯಲ್ಲಿ ರಾಹು ಸಹ ಇರುತ್ತಾನೆ ಹಾಗೆ 6ನೆಯ ಮನೆಯಲ್ಲಿ ಕೇತು ಇದ್ದು ಅಲ್ಲಿ ರಾಹುವಿನ ದೃಷ್ಠಿ ಬರುತ್ತದೆ .ರೋಗ ಸ್ಥಾನಕ್ಕೆ ಗುರು ಹಾಗೂ ರಾಹುವಿನ ಚಂಡಾಲ ದೃಷ್ಠಿ ಬರುತ್ತದೆ ಮೊದಲೇ ಅನಾರೋಗ್ಯಗಳು ಇದ್ದರೆ ಉಲ್ಬಣಗೊಳ್ಳುತ್ತದೆ ತುಂಬಾ ಅನಾರೋಗ್ಯ ಸಮಸ್ಯಯಿಂದ ಬಳಲುತ್ತಾರೆ 8ನೆಯ ತಾರಿಖಿ ನಂದು ಬುಧನ ಬದಲಾವಣೆ ಆದ ನಂತರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬರುತ್ತದೆ ಆರೋಗ್ಯದ ವಿಷಯದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಬೇಕು ಅಜೀರ್ಣದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ ಹೋಟೆಲ್ ಆಹಾರವನ್ನು ತಿನ್ನಬಾರದು .

ದಾಂಪತ್ಯ ಜೀವನದಲ್ಲಿ ಸುಖಮಯ ವಾತಾವರಣ ಕಂಡು ಬರುತ್ತದೆ ದಂಪತಿಗಳ ನಡುವೆ ಸಾಮರಸ್ಯ ಉಂಟಾಗುತ್ತದೆ ರವಿ ಸ್ಥಾನ ಬದಲಾವಣೆ ಆದ ನಂತರ ಸರಕಾರಿ ಉದ್ಯೋಗದಲ್ಲಿ ಹಿನ್ನೆಡೆ ಕಂಡು ಬರುತ್ತದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವರಿಗೆ ಬಡ್ತಿ ಸಿಗುತ್ತದೆ ಹಾಗೂ ವೇತನ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ರಾಜಕಾರಣಿಗಳಿಗೆ ಶುಭಕರವಾದ ವಾತಾವರಣ ಕಂಡು ಬರುವುದು ಇಲ್ಲ ಅಂದು ಕೊಂಡ ರೀತಿಯಲ್ಲಿ ರಾಜಕೀಯದಲ್ಲಿ ಸಾಧನೆ ಮಾಡಲು ಸಾಧ್ಯ ಆಗುವುದು ಇಲ್ಲ ಶತ್ರುಗಳ ಕಾಟ ಜಾಸ್ತಿ ಆಗುತ್ತದೆ ಸಿನಿಮಾ ರಂಗದ ನಟ ನಟಿಯರಿಗೆ ಅವಕಾಶಗಳು ಹೊರಟು ಹೋಗುತ್ತದೆ

ವ್ಯಯದ ಚಂಡಾಲ ಯೋಗ ಕಂಡು ಬರುತ್ತದೆ ಹಣಕಾಸಿನ ವಿಷಯದಲ್ಲಿ ನಷ್ಟ ಹೊಂದಬಹುದಾಗಿದೆ. ವಿರೋಧಿಗಳು ಪ್ರಾಬಲ್ಯ ಸಾಧಿಸುತ್ತಾರೆ ಹಣದ ಹೂಡಿಕೆ ಮಾಡಲು ಇದೊಂದು ಸಕಾಲವಲ್ಲ ತಂದೆ ಅಥವಾ ತಾಯಿಯ ಆರೋಗ್ಯದಲ್ಲಿ ಏರುಪೇರುಗಳು ಕಂಡು ಬರುತ್ತದೆ ವೃತ್ತಿ ವ್ಯವಹಾರದಲ್ಲಿ ಅಂದುಕೊಂಡ ಮಟ್ಟದಲ್ಲಿ ಅಭಿವೃದ್ದಿ ಕಂಡು ಬರುವುದಿಲ್ಲ ಕುಟುಂಬದಲ್ಲಿ ಭೂ ವ್ಯವಹಾರದಲ್ಲಿ ಸಂಬಂಧಿಸಿದಂತೆ ಮನಸ್ತಾಪ ಕಂಡು ಬರುತ್ತದೆ ಸಹೋದರ ಸಹೋದರಿಯರ ನಡುವೆ ಮಾನಸಿಕ ವ್ಯತ್ಯಾಸಗಳು ಕಂಡು ಬರುತ್ತದೆ ಅನಿರೀಕ್ಷಿತವಾಗಿ ನಷ್ಟವನ್ನು ಅನುಭವಿಸಬೇಕಾಗಿ ಬರುತ್ತದೆ ದೇವರ ಆರಾಧನೆ ಮಾಡಬೇಕು

ವೃಷಭ ರಾಶಿಯವರಿಗೆ ಸಾಮಾಜಿಕ ಪರಿಹಾರ ಎಂದರೆ ಪ್ರಕೃತಿಯ ರಕ್ಷಣೆ ಮಾಡಬೇಕು ರಸ್ತೆ ಬದಿಗಳಲ್ಲಿ ಹಾಗೂ ಹತ್ತಿರದ ಉದ್ಯಾನವನಗಳಲ್ಲಿ ಹಣ್ಣಿನ ಗಿಡವನ್ನು ನೆಟ್ಟು ಪಾಲನೆ ಪೋಷಣೆ ಮಾಡಬೇಕು ಹಾಗೆಯೇ ಇದರಿಂದಾಗಿ ಅನೇಕ ಪ್ರಾಣಿ ಪಕ್ಷಿಗಳಿಗೆ ನೆರವಾಗುತ್ತದೆ ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ಕೊಡಬೇಕು ಆಧ್ಯಾತ್ಮಿಕ ಪರಿಹಾರ ಎಂದರೆ ಕೃತಿಕಾ ನಕ್ಷತ್ರ 2 ಮತ್ತು3 ಹಾಗೂ 4 ನೆಯ ಪಾದದಲ್ಲಿ ಜನಿಸಿದವರು ಶ್ರೀ ಗುರು ಪಾದುಕಾ ಸ್ತೋತ್ರದ ಪಠಣ ಮಾಡಬೇಕು ಸಾಧ್ಯ ಆದರೆ 3 ಬಾರಿ ಪಾರಾಯಣ ಮಾಡಬೇಕು

ರೋಹಿಣಿ ನಕ್ಷತ್ರದಲ್ಲಿ ಜನಿಸಿದವರು ಶಿವಕ್ಷರ ಮಾಲ ಸ್ತೋತ್ರವನ್ನು ಪಠಣ ಮಾಡಬೇಕು ಮೃಗಶಿರಾ ನಕ್ಷತ್ರದವರು ಆನಂದ ಲಹರಿಯ ಪಾರಾಯಣ ಮಾಡಬೇಕು ಹೀಗೆ 2023 ಜುಲೈ ತಿಂಗಳಲ್ಲಿ ವೃಷಭ ರಾಶಿಯವರಿಗೆ ಮಿಶ್ರ ಫಲಾಗಲಿಂದ ಕೂಡಿರುತ್ತದೆ ಹಾಗೆಯೇ ಅನೇಕ ಸಣ್ಣ ಪುಟ್ಟ ತೊಂದರೆಗಳು ಕಂಡು ಬರುತ್ತದೆ ಅನಿರೀಕ್ಷಿತವಾಗಿ ನಷ್ಟವನ್ನು ಅನುಭವಿಸಬೇಕಾಗಿ ಬರುತ್ತದೆ ಹಾಗಾಗಿ ಬಹಳ ಎಚ್ಚರಿಕೆಯಿಂದ ಇರಬೇಕು. ಮುಂದಿನ 6 ತಿಂಗಳು ಈ ರಾಶಿಗಳ ಮೇಲೆ ಶನಿಯ ಅಪಾರ ಆಶೀರ್ವಾದವಿದೆ, ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ ಆದ್ರೆ..

Leave a Reply

Your email address will not be published. Required fields are marked *