ಕ್ರಿಕೆಟ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ನೋಡೋಣ ಮನೆ ಮಂದಿ ಕೂಡಿ ನೋಡುವಂಥ ಒಂದು ಆಟ . ಚೆಂಡು ಹಾಗೂ ಬ್ಯಾಟುಗಳನ್ನು ಇಟ್ಕೊಂಡು ಆಡುವ ಆಟ ಹಿಂದಿನ ಕಾಲದಲ್ಲಿ ಹದಿನೆಂಟನೇ ಶತಮಾನದಲ್ಲಿ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿತ್ತು ಇಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯು 104 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ

ಕ್ರಿಕೆಟ್ ಅಲ್ಲಿ ಸಾಮಾನ್ಯವಾಗಿ ಟಿ 20 ಒನ್ ಡೇ ಮ್ಯಾಚ್ ಹಾಗೂ ಟೆಸ್ಟ್ ಮ್ಯಾಚ್ ಇದೆ ಹಾಗೆ ಐಪಿಲ್ ಕೂಡ ಇದರಲ್ಲಿ ಸೇರ್ಪಡೆ ಆಗಿದೆ . ಇಂಡಿಯನ್ ಪ್ರೀಮಿಯರ್ ಲೀಗ್ ಇದು ಒಂದು ಇಪ್ಪತ್ತು ಪಂದ್ಯಾವಳಿಗಳ ವೃತ್ತಿ ಪರ ಲೀಗ್ ಆಗಿದೆ ಇದು ಮುಂಬೈ ಹಾಗೂ ಮಹಾರಾಷ್ಟ್ರ ಅಲ್ಲಿ ತನ್ನ ಸಂಸ್ಥೆ ಹೊಂದಿದ್ದು ಬಿಸಿಸಿಐ ಅದ್ಯಕ್ಷರು ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಾರೆ ಇನ್ನು ಇದರಲ್ಲಿ ಎಂಟು ತಂಡಗಳಿದ್ದು ವಿದೇಶ ಆಟಗಾರರನ್ನು ಕೂಡ ಹೊಂದಿದೆ . ಇನ್ನು ಐಪಿಲ್ ಅಲ್ಲಿ ಲೀಗ್ ಕ್ರಿಕೆಟ್ ಬೆಟ್ಟಿಂಗ್ ಸ್ಪಾಟ್ ಫಿಕ್ಸಿಂಗ್ ಹಾಗೂ ಮನಿ ಲಾಂಡರಿಂಗ್ ಬಗ್ಗೆ ಹಲವಾರು ಆರೋಪಗಳು ಕೇಳಿಬಂದಿವೆ

2007 ರಲ್ಲಿ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಯಾವತ್ತೂ ಮರೆಯಲು ಸಾಧ್ಯವಿಲ್ಲ ಯುವರಾಜ್ ಸಿಂಗ್ ಅವರು ಪೂರ್ತಿ ಒಂದು ಓವರ್ ಅಂದ್ರೆ ಆರು ಬಾಲ್ ಸಿಕ್ಸರ್ ಬಾರಿಸಿದ್ದು ಹಾಗೂ ವರ್ಲ್ಡ್ ಕಪ್ ಅನ್ನ ತಮ್ಮ ತೆಕ್ಕೆಗೆ ಹಾಕಿಕೊಂಡು ಜಯಗಳಿಸಿದ್ದು ತದನಂತರ ಜನರಲ್ಲಿ ಟಿ 20 ಬಗ್ಗೆ ಕುತೂಹಲ ಹಾಗೂ ಜಾಸ್ತಿ ಆಸಕ್ತಿ ಮೂಡುವಲ್ಲಿ ಸಾಧ್ಯವಾಗಿತ್ತು ಯಾಕೆಂದರೆ ಕೇವಲ 20 ಓವರ್ ಆಟವನ್ನು ಮೂರು ಗಂಟೆ ಅಲ್ಲಿ ಮುಗಿಸುವ ಆಟ ಹಾಗಾಗಿ ಬಿಸಿಸಿಐ ಇದನ್ನು ಗುರುತಿಸಿ ಅವತ್ತಿನ ಕಾಲಕ್ಕೆ ವೈಸೆ ಪ್ರೆಸಿಡೆಂಟ್ ಆಗಿದ್ದ ಲಲಿತ್ ಮೋದಿ ಅವರು ಇದೆಲ್ಲವನ್ನೂ ಪರಿಗಣಿಸಿ ಯಾಕೆ ಟಿ 20 ಅನ್ನು ಲೀಗ್ ಆಗಿ ಮಾರ್ಪಾಡು ಮಾಡಬಾರದು ಎನ್ನುವ ಯೋಚನೆ ಇಂದ ಭಾರತದಲ್ಲಿ ಜನ್ಮತಾಳಿದ ಕ್ರೀಡೆ ಇಂದು ನಾವೆಲ್ಲಾ ಇಷ್ಟ ಪಟ್ಟು ನೋಡುತ್ತಿರುವ ಐಪಿಲ್ ಪಂದ್ಯ ಆಗಿದೆ.

ಮೊದಲನೆಯದಾಗಿ ಕಡಿಮೆ ಸಮಯದಲ್ಲಿ ಅಧಿಕ ಮನರಂಜನೆಯ ಇಪ್ಪತ್ತು ಓವರ್ ಅನ್ನು ಮೂರು ಗಂಟೆಯಲ್ಲಿ ಪೂರ್ತಿ ಮ್ಯಾಚ್ ಅನ್ನು ನೋಡುವ ಅವಕಾಶ ಕ್ರಿಕೆಟ್ ಅಭಿಮಾನಿಗಳ ಮನೆ ಗೆದ್ದಿತು ಹಾಗೆಯೇ ವರ್ಲ್ಡ್ ಕಪ್ ಅನ್ನು ಟಿ 20 ಪರಿಕಲ್ಪನೆಯ ಹಾಗೆ ಐಪಿಲ್ ಪಂದ್ಯವು ಇದ್ದುದರಿಂದ ಜನರು ಬೇಗನೆ ಆಕರ್ಷಣೆ ಹೊಂದುತ್ತಾರೆ ಇನ್ನು ಮೂರನೆಯದಾಗಿ ಸಾಮಾನ್ಯವಾಗಿ ಕ್ರಿಕೆಟ್ ಅಲ್ಲಿ ಆಯಾ ದೇಶದ ಒಳ್ಳೆಯ ಆಟಗಾರ ಪಂಗಡ ಜೊತೆ ಆಟ ಆಡುತ್ತಿದ್ದರು ಆದರೆ ಐಪಿಲ್ ಅಲ್ಲಿ ಎಲ್ಲಾ ದೇಶದ ವರ್ಲ್ಡ್ ಬೆಸ್ಟ್ ಆಟಗಾರರ ಆಯ್ಕೆ ಮಾಡಿ ಒಂದು ತಂಡದಲ್ಲಿ ಬೇರೆ ದೇಶದ ಆಟಗಾರರನ್ನು ನೋಡುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ಅವಕಾಶ ಒದಗಿದ್ದು ಇದು ಒಂದು ಪ್ರಮುಖ ಕಾರಣ

ಐಪಿಲ್ ಒಂದು ಮನೋರಂಜನೆಯ ಆಟ ಆಗಿರದೆ ವ್ಯವಹಾರಿಕ ಜೀವನದಲ್ಲಿ ತನ್ನದೇ ಆದ ಛಾಪನ್ನು ಹೊಂದಿದ್ದು ಐಪಿಲ್ ವ್ಯವಹಾರಿಕವಾಗಿ ಹೇಗೆ ತನ್ನ ಮಾರ್ಗದ ರಚನೆಯಾಗಿದೆ ಎಂಬುದರ ಬಗ್ಗೆ ಅರಿಯೋಣ . ಮೊದಲಿಗೆ ಬಿಸಿಸಿಐ ಒಂದು ಪ್ರವರ್ತಕ ನಿರ್ವಾಹಕ ಆಗಿ ಐಪಿಲ್ ಎನ್ನುವ ಆಸ್ತಿಯನ್ನು ಅರ್ ಸಿ ಬಿ ಮುಂಬೈ ಇಂಡಿಯನ್ಸ್ ಹಾಗೆ ಚೆನ್ನೈ ಸೂಪರ್ ಕಿಂಗ್ಸ್ ಹೀಗೆ ಫ್ರಾಂಚೈಸಿ ಮೂಲಕ ಆಟಗಾರ ಮೂಲಕ ಐಪಿಲ್ ತಂಡ ರಚನೆ ಮಾಡಲಾಗುವುದು ಇನ್ನು ಎಲ್ಲರಿಗೂ ತಿಳಿದಿರುವ ಹಾಗೆ ಆಟಗಾರರನ್ನು ಪ್ರತಿವರ್ಷ ಪ್ರತಿ ಸೀಸನ್ ಅಲ್ಲಿ ಬೆಡ್ಡಿಂಗ್ ಮೂಲಕ ಆಯ್ಕೆ ಮಾಡಲಾಗುತ್ತದೆ ಇನ್ನು ಇದೆಕ್ಕೆಲ್ಲ ದುಡ್ಡು ಅಗತ್ಯ ಐಪಿಲ್ ಹಾಗೂ ಫ್ರಾಂಚೈಸಿ ಕೂಡ ದುಡ್ಡು ಬೇಕು ಇದಕ್ಕೆ ಸಬ್ ಹೋಲ್ಡರ್ ಕಡೆ ಗಮನ ಹರಿಸಿದಾಗ ಎರಡು ಮೂಲದಿಂದ ಐಪಿಲ್ ಗೆ ಸಹಾಯ ಆಗುವುದು ಮೊದಲನೆಯ ಆಗಿ ಶೀರ್ಷಿಕೆಯ ಪ್ರಾಯೋಜಕರು ಅಂದರೆ ಐಪಿಲ್ ಹೆಸರು ಎಲ್ಲಾ ಕಡೆ ಬಿತ್ತರಿಸುವ ಕೆಲಸವನ್ನು ಈ ಪ್ರಾಯೋಜಕರು ಹೂಡಿಕೆ ಮಾಡಿ ಎಲ್ಲಾ ಕಡೆ ತಮ್ಮ ಹೆಸರು ಜೊತೆ ಸೇರಿಸಿ ಬಿತ್ತಾರಿಸುತ್ತರೆ

ಈ ವರ್ಷ 2022 ಟಾಟಾ ಅವರು ಐಪಿಲ್ ನ ಪ್ರಾಯೋಜಕರು ಆಗಿದ್ದಾರೆ ಇದರಿಂದ ಟಾಟಾ ಅವರಿಗೆ ಏನೆಲ್ಲಾ ಪ್ರಯೋಜನ ಪಡೆಯಲು ಸಾಧ್ಯ ಎಂದು ತಿಳಿಯೋಣ ಟಾಟಾ ಸಂಸ್ಥೆ ಅವರು ಸುಮಾರು 498 ಕೋಟಿ ಹಣವನ್ನು ಐಪಿಲ್ ಪಂದ್ಯಕ್ಕೆ ಬಂಡವಾಳ ಹೂಡಿದ್ದಾರೆ ಇದರಿಂದ ಟಾಟಾ ಅವರ ಹೆಸರು ಪ್ರಸಿದ್ದು ಹಾಗೂ ಜನರು ನೋಡುಗರ ಮೂಲಕ ಇವರ ಬ್ರಾಂಡ್ ಪ್ರಖ್ಯಾತಿ ಹೊಂದುವುದು ಹಾಗೂ ಟಾಟಾ ವ್ಯವಹಾರ ಅಲ್ಲಿ ಕೂಡ ಬೆಳವಣಿಗೆ ಸಾಧ್ಯತೆ ಇದೆ ಹಿಂದೆ ವಿವೋ ಅವರು ಐಪಿಲ್ ನ ಪ್ರಾಯೋಜಕರು ಅದ ಕಾರಣ ಅವರ ವ್ಯವಹಾರ ಅಲ್ಲಿ ಉನ್ನತ ಗುಣಮಟ್ಟದ ಬೆಳವಣಿಗೆ ಆಗಿದೆ ಎಲ್ಲರಿಗೂ ಗೊತ್ತಿರುವಂತೆ ವಿವೊ ಮೊಬೈಲ್ ಬಗ್ಗೆ ಜನರ ಕ್ರೇಜ್ ಜಾಸ್ತಿ ಆಗಿತ್ತು ಆರಂಭಿಕ ಹಂತದಲ್ಲಿ ಡಿ ಎಲ್ ಎಫ್ ಅವರು ಪ್ರಾಯೋಜಕರು ಅಗಿದರು ಪ್ರತಿಯೊಬ್ಬ ಪ್ರಾಯೋಜಕರು ಇಂತಿಷ್ಟು ವರ್ಷಕ್ಕೆ ಅಂತ ಒಪ್ಪಂದ ಮಾಡಿಕೊಂಡಿರುತ್ತಾರೆ ನಂತರ ಡ್ರೀಮ್ 11 ಪೆಪ್ಸಿ ಮುಂತಾದವರು ಪ್ರತಿ ವರ್ಷ ಇಂತಿಷ್ಟು ಹಣವನ್ನು ನೀಡುತ್ತ ಪ್ರಾಯೋಜಕರು ಆಗಿದ್ದರು

ಎರಡನೆಯದು ಐಪಿಲ್ ಪಂದ್ಯವನ್ನು ನಾವು ನೋಡಲು ಮಾದ್ಯಮ ಅಗತ್ಯ ಅಂದರೆ ಟಿವಿ ಚಾನೆಲ್ ಬೇಕೆ ಬೇಕು ನಿಜ ಮಾದ್ಯಮದ ಹಕ್ಕು ನಮಗೆ ಅಗತ್ಯ ಮಾದ್ಯಮದವರಿಗೆ ಇಂತಿಷ್ಟು ಅಂತ ಒಪ್ಪಂದ ಅನ್ನು ಐಪಿಲ್ ಅವರಲ್ಲಿ ಮಾಡಿಕೊಂಡು ಲೈವ್ ಸ್ಟ್ರೀಮಿಂಗ ಹಾಗೂ ಬ್ರಾಡ್ ಕಾಸ್ಟ್ ಮಾದ್ಯಮ ಅಂದರೆ ಎಲ್ಲೋ ನಡೆಯುವ ಪಂದ್ಯದ ಪ್ರಸಾರವನ್ನು ಕ್ರಿಕೆಟ್ ಪ್ರಿಯರು ಮನೆಯಲ್ಲಿ ಕುಳಿತು ಕ್ರಿಕೆಟ್ ಅದರ ನೇರ ಪ್ರಸಾರ ಅನ್ನು ನೋಡುವ ಅವಕಾಶ ಸಿಗುವುದು ಇನ್ನು ಆರಂಭದಲ್ಲಿ ಸೋನಿ ಪಿಕ್ಚರ್ ನೆಟ್ವರ್ಕ್ ಹಾಗೂ ವರ್ಲ್ಡ್ ಸ್ಪೋರ್ಟ್ಸ್ ಗ್ರೂಪ್ ಇವೆರಡೂ ಮಾದ್ಯಮ ಅವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪರವಾನಿಗೆ ಪಡೆದು ಪ್ರಸಾರ ಆರಂಬಿಸಿದರು

ಇದರಿಂದ ಇವರಿಗೆ ಜನರ ಗೋಚರತೆ ಜಾಸ್ತಿ ಆಗಿದನ್ನು ನೋಡಿ ಹಲವಾರು ಜಾಹೀರಾತುಗಳನ್ನು ಹತ್ತು ಅಥವ ಹದಿನೈದು ನಿಮಿಷ ಆಟದ ಮದ್ಯೆ ಪ್ರಸಾರ ಮಾಡುತಲಿದ್ದರು ಇದರಿಂದ ಒಂದು ಜಾಹೀರಾತಿಗೆ ಅದು 15 ಇಲ್ಲ 10 ಸೆಕೆಂಡ್ ಇದ್ದು ಸುಮಾರು 10-15 ಲಕ್ಷ ಅಷ್ಟು ಶುಲ್ಕವನ್ನು ಪಡೆಯುತ್ತಿದ್ದರು ಇದರಿಂದ ಜನರು ನೋಡುಗರ ಸಂಖ್ಯೆ ಜಾಸ್ತಿ ಆಗಿ ಜಾಹೀರಾತು ಅವರಿಗೂ ಲಾಭ ಸಿಕ್ಕಿ ಇವರ ವ್ಯವಹಾರ ಅಲ್ಲಿ ಬೆಳವಣಿಗೆ ಆಗಿತ್ತು ಹಾಗಾಗಿ ಮೀಡಿಯಾ ಅವರು ಮೂರು ವರ್ಷ ಅಥವಾ ಐದು ವರ್ಷ ಇಂತಿಷ್ಟು ಹಣವನ್ನು ನೀಡಿ ಒಪ್ಪಂದ ಮಾಡಿಕೊಳ್ಳುತ್ತಾರೆ ಇನ್ನು ಸೋನಿ ನೆಟ್ವರ್ಕ್ ಜಾಹೀರಾತಿನ ಮೂಲಕ ಸುಮಾರು ಹನ್ನೆರಡು ಬಿಲಿಯನ್ ರೂಪಾಯಿ 2016 ಅಲ್ಲಿ ಗಳಿಕೆ ಪಡೆಯುತ್ತಾರೆ ತದನಂತರ ಸಪ್ಟೆಂಬರ್ ಅಲ್ಲಿ ಸ್ಟಾರ್ ಇಂಡಿಯಾ ಈ ಒಪ್ಪಂದವನ್ನು ತಾನು ತೆಗೆದುಕೊಂಡು ಐದು ವರ್ಷಗಳ ಒಪ್ಪಂದಕ್ಕೆ ಸುಮಾರು 163 ಬಿಲಿಯನ್ ರೂಪಾಯಿಗಳನ್ನ ಪಡೆಯುತ್ತಾರೆ ಹಾಗಾಗಿ ಇಂದಿಗೆ ಸ್ಟಾರ್ ಇಂಡಿಯಾ ಮಹತ್ತರವಾದ ಪ್ರಸಾರ ಮಾದ್ಯಮ ಅಲ್ಲಿ ಹೆಸರುವಾಸಿ ಅದ ಮಾದ್ಯಮ.

ಇದರಲ್ಲಿ ಸುಮಾರು 60% ಹಣದ ಆದಾಯವನ್ನು ಐಪಿಲ್ ಹೊಂದಿದ್ದು ಸಾಮಾನ್ಯವಾಗಿ ಐಪಿಲ್ ತಂಡದಲ್ಲಿ ಒಳ್ಳೆಯ ಆಟ ಆಡಲು ಆಗದಿದ್ದರೂ ಹಾಗೂ ಸೋತು ಹೋದರು ಕೂಡ ಪ್ರತಿಯೊಬ್ಬ ಆಟಗಾರನಿಗೆ ನಿಗದಿ ಪಡಿಸಿದ ಹಣ ಅಥವಾ ಆದಾಯ ಅನ್ನು ಐಪಿಲ್ ಕಡೆಯಿಂದ ಅವರಿಗೆ ಸೇರುವುದು 50% ಆದಾಯವನ್ನು ಫ್ರಾಂಚೈಸಿ ಹಾಗೂ 45% ಆದಾಯವನ್ನು ಪ್ರತ್ಯೇಕ ತಂಡಕ್ಕೆ ಹಾಗೂ 5% ಯಾವ ತಂಡ ಅದ್ಬುತ ಆಟವನ್ನು ಅಡಿ ಗೆಲ್ಲುವ ಅವರಿಗೆ ಸೇರುವುದು ಹಾಗಾದ್ರೆ ಜಾಸ್ತಿ ಹಣ ಚನ್ನೈ ಸೂಪರ್ ಕಿಂಗ್ಸ್ ಸೇರುವುದು 75% ಅಷ್ಟು ಅಭಿಮಾನಿಗಳನ್ನು ಹೊಂದಿದ್ದು ಹಾಗಾಗಿ ಎಲ್ ಐ ಸಿ ಅವರು 6% ಪಾಲನ್ನು ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಹೊಂದಿದ್ದಾರೆ

ಇನ್ನು ಇವರಲ್ಲದೆ ಐಪಿಲ್ ಅಲ್ಲಿ ಪ್ರಾಯೋಜಕರು ಉದಾಹರಣೆ ಆಟಗಾರರ ಶರ್ಟ್ ಮೇಲೆ paytm DHL ಹೀಗೆ ಹೆಸರು ನೋಡಬಹುದು ಇವರು ಕೂಡ ಕೂಡ ಹಣವನ್ನು ಫ್ರಾಂಚೈಸಿ ಅಲ್ಲಿ ಹೂಡಿಕೆ ಮಾಡಿದ್ದು ಇದರಲ್ಲಿ 30% ಅಷ್ಟು ಬಿಸಿಸಿಐ ಸೇರುತ್ತದೆ ಹೀಗೆ ಐಪಿಲ್ ಅಲ್ಲಿ ವ್ಯವಹಾರ ಮಾಡುತ್ತಾರೆ

ಯಾವುದೇ ವ್ಯವಹಾರವನ್ನು ಮಾಡುವ ಮೊದಲು ಜನರ ಅಭಿರುಚಿ ಹಾಗೂ ಅವರ ಹೇಗೆ ಒಪ್ಪಿಕೊಳ್ಳುತ್ತಾರೆ ಎಂದು ಯೋಚಿಸಿ ನಿರ್ಧಾರ ಮಾಡಬೇಕು ಐಪಿಲ್ ಮೂಲಕ ನಾವು ಕಲಿಯಬೇಕಾದದ್ದು ಇಷ್ಟೆ ಹೇಗೆ ಒಂದು ಅವಕಾಶವನ್ನು ಬಳಸಿಕೊಂಡು ತಮ್ಮ ಗುರಿ ಹಾಗೂ ತನ್ನ ಗಮ್ಯ ತಲುಪಬಹುದು ಎನ್ನುವುದನ್ನು ನಾವು ಗಮನಿಸಬೇಕು..

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!