ಕನ್ನಡ ಕಿರುತೆರೆ ನಟಿಯರಲ್ಲಿ ಇವರು ಕೂಡ ಒಬ್ಬ ಪ್ರಖ್ಯಾತಿ ಆಗಿರುವ ನಟಿ ಇಂದಿಗೂ ಇವರು ಧಾರಾವಾಹಿಯಲ್ಲಿ ಮಾಡಿದ ನಟನೆಯನ್ನು ಪ್ರೇಕ್ಷಕರು ಮರೆಯಲಿಲ್ಲ ಅವರು ಬೇರೆ ಯಾರೂ ಅಲ್ಲ ಸುಮಾರು 8 ವರ್ಷಗಳ ಕಾಲ ಕಲರ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿದಿಯಾಗಿ ಸುದ್ದಿ ಮಾಡಿರುವ ನಟಿ ವೈಷ್ಣವಿ ಗೌಡ ಆದರೆ ಇವರನ್ನು ಎಲ್ಲರೂ ಸನ್ನಿಧಿ ಎಂದೇ ಕರೆಯುತ್ತಾರೆ

ಅಷ್ಟೊಂದು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಅವರ ನಟನೆಯ ಮೂಲಕ ಇನ್ನೂ ಇವರು ತನ್ನ ತಾಯಿಯೊಂದಿಗೆ ಮಂದಿರಕ್ಕೆ ಹೋದಾಗ ಅಲ್ಲಿ ನಿರ್ಮಾಪಕರೊಬ್ಬರು ಇವರಿಗೆ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಕೇಳಿದರು ಕೊನೆಗೆ ದೇವಿ ಸೀರಿಯಲ್ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿ ನಂತರ ಪುನರ್‌ವಿವಾಹ’ದಲ್ಲಿ ನಟಿಸಿದ್ದು ತದನಂತರ ಅಗ್ನಿಸಾಕ್ಷಿ ಅಲ್ಲಿ ಸನ್ನಿದಿಯಾಗಿ ಜನರ ಮನದಲ್ಲಿ ತನ್ನ ಸ್ಥಾನವನ್ನು ಅಲಂಕರಿಸಿದರು

\ಇವರು ನಟನೆಗೆ ಬರುವ ವೇಳೆಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು ಆದರೆ ತಮ್ಮ ನಿರಂತರ ನಟನೆ ಕಾರಣ ತನ್ನ ಪದವಿಯನ್ನು ಅರ್ಧಕ್ಕೆ ನಿಲ್ಲಿಸಿ ನಟನೆಯ ಮೇಲೆ ಗಮನ ಹರಿಸಲು ಆರಂಭಿಸಿದರು ಇವರು ತಮ್ಮ ದೂರಶಿಕ್ಷಣ ಮೂಲಕ ಪದವಿಯನ್ನು ಪಡೆದರು .ಕುಚಿ ಪುಡಿ ಬೆಲ್ಲಿ ಡಾನ್ಸ್ ಹಾಗೂ ಭರತನಾಟ್ಯದಲ್ಲಿ ಪ್ರಾವಿಣ್ಯತೆ ಹೊಂದಿದ್ದಾರೆ . ಗಿರಿ ಗಿಟ್ಲೆ ಚಿತ್ರದ ಮೂಲಕ ಚಂದನವನ ಅಲ್ಲಿ ಪಾದಾರ್ಪಣೆ ಮಾಡಿದಾರೆ ಹಾಗೂ ಹಲವಾರು ಉತ್ಪನ್ನಗಳ ಜಾಹೀರಾತಿನ ರಾಯಬಾರಿಯು ಆಗಿದ್ದಾರೆ ಹಾಗೂ ಸುವರ್ಣ ಚಾನೆಲ್ ಅಲ್ಲಿ ಪ್ರಸಾರವಾಗುತ್ತಿದ್ದ ರಿಯಲಿಟಿ ಶೋ ಒಂದರ ನಿರೂಪಣೆ ಮಾಡಿದ್ದಾರೆ.

ಇವರು ಕಲರ್ ಕನ್ನಡ ಅಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ 8 ರ ಸ್ಪರ್ದಿಯು ಕೂಡ ಆಗಿದ್ದು ಅಲ್ಲಿಯೂ ಕೂಡ ಒಳ್ಳೆಯ ಆಟಗಾರ್ತಿ ಆಗಿದರು ಹಾಗೂ ಫೈನಲ್ ಹಂತಕ್ಕೂ ಹೋಗಿ ರನ್ನರ್ ಆಗಿದ್ದರು ಇನ್ನೂ ಸಾಮಾನ್ಯವಾಗಿ ಯಾವುದೇ ರಂಗದಲ್ಲಿ ಕೆಲಸ ಮಾಡುವರು ತಮ್ಮದೇ ಆದ ಸ್ವಂತ ಮನೆಯಲ್ಲಿ ಇರಬೇಕು ಅಂತ ಕನಸು ಇರುತ್ತದೆ ಬಣ್ಣದ ಲೋಕದಲ್ಲಿ ಬಣ್ಣ ಹಚ್ಚುವ ಕಲಾವಿದರಿಗೆ ತಮ್ಮದೇ ಆದ ಕನಸು ಹೊತ್ತು ತಮ್ಮದೇ ಆದ ರೀತಿಯಲ್ಲಿ ಅಭಿರುಚಿಯ ಮನೆಯನ್ನು ಕಟ್ಟಿಸಲು ಕನಸನ್ನು ಹೆಣೆದು ಇರುತ್ತಾರೆ

ಇದಕ್ಕೆ ವೈಷ್ಣವಿ ಗೌಡ ಅವರು ಕೂಡ ಹೊರತಲ್ಲ ಹಾಗಾಗಿ ಸನ್ನಿಧಿ ಅವರು ಕೂಡ ತಾವು ಕೂಡಿಟ್ಟ ಹಣದಿಂದ ತನ್ನದೇ ಆದ ಸ್ವಂತ ಮನೆಯನ್ನು ನಗರದಲ್ಲಿ ಖರೀದಿ ಮಾಡಿದ್ದು ಆ ಮನೆಯ ಗೃಹ ಪ್ರವೇಶಕ್ಕೆ ತನ್ನ ಆಪ್ತರು ಹಾಗೂ ಸಂಬಂಧಿಕರಿಗೆ ಅಷ್ಟೇ ಆಮಂತ್ರಣ ನೀಡಿದ್ದಾರೆ . ಇನ್ನು ತನ್ನ ಸೋಶಿಯಲ್ ಮೀಡಿಯಾದಲ್ಲಿ ಇನ್ಸ್ಟಗ್ರಾಮ್ ನಲ್ಲಿ ಫೋಟೋವನ್ನು ಹಂಚಿಕೊಂಡು ಸಂತಸ ವ್ಯಕ್ತ ಪಡಿಸಿದ್ದಾರೆ

ಇವರ ಗೃಹ ಪ್ರವೇಶಕ್ಕೆ ಬಿಗ್ ಬಾಸ್ ಅಲ್ಲಿ ಇದ್ದ ಅರವಿಂದ ಕೆಪಿ ದಿವ್ಯ ಉರುಡುಗ ಪ್ರಶಾಂತ್ ಸಂಬರಾಗಿ ನಟ ರಾಜೀವ್ ಮತ್ತು ಅವರ ಪತ್ನಿ ಹಾಗೂ ರಘು ವೈನ್ಸ್ ಸ್ಟೋರ್ ಬಾಗಿ ಆಗಿದ್ದು ವೈಷ್ಣವಿ ಅವರಿಗೆ ಶುಭಕೋರಿದರು ಹಾಗೂ ನಟ ವಿಜಯ ಸೂರ್ಯ ಕೂಡ ಪಾಲ್ಗೊಂಡಿದ್ದು ಅವರಿಗೆ ಶುಭಕೋರಿದರು ಇನ್ನು ವೈಷ್ಣವಿ ಅವರು ಹಿಂದೂ ಸಾಂಪ್ರದಾಯಿಕ ಸೀರೆಯನ್ನು ಹಾಕಿ ಮಿಂಚಿದರು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಇವರ ಫೋಟೋ ಸೆಲ್ಫಿಗಳು ಹರಿದಾಡುತ್ತಿವೆ ವೈಷ್ಣವಿ ಅವರ ಎಲ್ಲ ಕನಸುಗಳು ನನಸಾಗಲಿ ಹಾಗೆ ಜೀವನದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *