ಅಂದ್ರಪ್ರದೇಶದ ಗುಂಟೂರು ನಗರದ ನಿವಾಸಿ ಇವರು. ಇವರ ಹೆಸರು ಆಶಾ. ಇವರ ಗಂಡ ಬ್ಯಿಸನೆಸ್ ಮಾಡುತ್ತಿದ್ದು ಇವರದ್ದೊಂದು ಶ್ರೀಮಂತ ಕುಟುಂಬವೇ ಆಗಿತ್ತು. ಆಶಾ ಅವರು ಗರ್ಭಿಣಿ ಆಗಿದ್ದ ಸಮಯದಲ್ಲಿ ಅವರ ಗಂಡನ ಬ್ಯಿಸನೆಸ್ ಸಾಕಷ್ಟು ನಷ್ಟವನ್ನು ಹೊಂದಿತು. ಇದರ ಪರಿಣಾಮವಾಗಿ ಈ ಜೋಡಿ ಸುಮಾರು 80 ಲಕ್ಷವನ್ನು ಕಳೆದುಕೊಂಡು ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದರು. ಗಂಡ ಅನುಭವಿಸಿದ ಆರ್ಥಿಕ ಕಷ್ಟವನ್ನ ನೋಡಿ ಮಾನಸಿಕವಾಗಿ ಬಹಳ ನೊಂದುಕೊಂಡ ಆಶಾ ಡಿಲಿವರಿ ಡೇಟಿಗೂ ಮೊದಲೇ ಎಂಟು ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಿದರು. ಆಶಾ ಅವರು ಗರ್ಭಿಣಿ ಆಗಿದ್ದ ಸಮಯದಲ್ಲಿ ಯೋಗ ಪ್ರಾಣಾಯಾಮ ಮಾಡುತ್ತಿದ್ದ ಕಾರಣ ಎಂಟು ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಿದ್ದರೂ ಸಹ ಮಗು ಆರೋಗ್ಯದಿಂದ ಇತ್ತು. ಬಹಳ ಆರ್ಥಿಕ ಸಂಕಷ್ಟ ಇದ್ದುದರಿಂದ ಆ ಸಮಯದಲ್ಲಿ ಮಗುವಿಗೆ ಹಾಲು ಕೊಂಡುಕೊಳ್ಳಲೂ ಸಹ ಬಹಳ ಕಷ್ಟ ಪಡಬೇಕಾದ ಸಂದರ್ಭ ಇವರಿಗೆ ಬಂದಿತ್ತು. ಇದರ ಅಧ್ಯೆ ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಬಳಸಿದ ಕಾರಣ ಮಗುವಿನ ಬಣ್ಣ ಸಹ ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗಿತ್ತು. ಇದರಿಂದಾಗಿ ತಮ್ಮ ಅಜ್ಜಿಯ ಬಳಿ ಕೆಲವೊಂದಿಷ್ಟು ಮಾಹಿತಿಯನ್ನು ತಿಳಿದುಕೊಂಡ ಆಶಾ ಅವರು ಅಂಗಡಿಯಿಂದ ಬಾದಾಮಿ ತಂದುಕೊಂಡು ಅದರಿಂದ ಎಣ್ಣೆ ತೆಗೆದು ಮಗುವಿಗೆ ಹಚ್ಚುತ್ತಿದ್ದರು. ಇದರಿಂದ ಮಗುವಿನ ಚರ್ಮ ಕೆಲವೇ ದಿನಗಳಲ್ಲಿ ಮತ್ತೆ ಕಾಂತಿಯುತವಾಗಿ ಹೊಳೆಯುತ್ತಿತ್ತು. ಇದನ್ನ ನೋಡಿದೆ ಆಶಾ ಅವರ ಸ್ನೇಹಿತೆ ಕೂಡಾ ತನಗೂ ಈ ಬಾದಾಮಿ ಎಣ್ಣೆಯನ್ನು ಕೊಡುವಂತೆ ಕೇಳಿದರು.
ಈ ಸಮಯದಲ್ಲಿ ಆಶಾ ಅವರು ಒಂದು ಉಪಾಯ ಮಾಡಿ ಆ ಮೂಲಕ 200 ರೂಪಾಯಿ ಕೊಟ್ಟು ಬಾದಾಮಿ ಮತ್ತು ಇತರ ವಸ್ತುಗಳನ್ನು ತಂದು ಅದರಿಂದ ಸೋಪ್ ತಯಾರಿಸಿ ಮಾರಾಟ ಮಾಡಲು ಆರಂಭಿಸಿದರು. ಸೋಪಿನ ಪರಿಣಾಮ ಚೆನ್ನಾಗಿ ಇದ್ದ ಕಾರಣ ಇವರಿಗೆ ಬೇಡಿಕೆ ಹೆಚ್ಚಾಯಿತು. ಇವರು ಇನ್ವೆಸ್ಟ್ ಮಾಡಿದ 200 ರೂಪಾಯಿ ಹಣದಿಂದ ಬಂದ ಲಾಭವನ್ನು ಇಟ್ಟುಕೊಂಡು ನಂತರ ಹಂತ ಹಂತವಾಗಿ ಬೆಳೆದು ನೈಸರ್ಗಿಕವಾಗಿ ಮಕ್ಕಳಿಗೆ ಬಳಸುವ ಸೋಪ್, ಶಾಂಪೂ, ಹೇರ್ ಆಯಿಲ್ ಗಳನ್ನು ತಯಾರಿಸಿ ಫೇಸ್ಬುಕ್ ಹಾಗೂ ಆನ್ಲೈನ್ ನಲ್ಲಿ ತಾನ್ವಿ ನ್ಯಾಚುರಲ್ ಈ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದು ಲಕ್ಷ ಲಕ್ಷಹಣ ಗಳಿಸುತ್ತಾ ಇದ್ದಾರೆ. ಈಗ ಆಧುನಿಕ ಯಂತ್ರಗಳನ್ನು ತರಿಸಿಕೊಂಡು ಉತ್ಪಾದನೆಯನ್ನು ಹೆಚ್ಚಿಸಿರುವ ಆಶಾ ಅವರು ತಮ್ಮ ಆರ್ಥಿಕ ಸಂಕಷ್ಟದಿಂದ ಆಚೆ ಬಂದು ಉತ್ತಮ ಜೀವನವನ್ನೇ ರೂಪಿಸಿಕೊಂಡಿದ್ದಾರೆ. ಒಂದು ಚಿಕ್ಕ ಆಲೋಚನೆ ಹಾಗೂ 200 ರೂಪಾಯಿ ಇನ್ವೆಸ್ಟ್ಮೆಂಟ್ ಆಶಾ ಅವರ ಜೀವನವನ್ನೇ ಬದಲಿಸಿತು.