ಇಲ್ಲೊಂದು ವಿಶೇಷವಾದ ಒಂದು ಗ್ರಾಮ ಇದೆ. ಇದು ಸಾಮಾನ್ಯ ಗ್ರಾಮ ಏನೂ ಅಲ್ಲ. ಭಕ್ತಿಗೆ ಇದು ಇನ್ನೊಂದು ರೂಪ. ಈ ಗ್ರಾಮದಲ್ಲಿ ಜನಿಸುವ ಪ್ರತಿಯೊಬ್ಬರಿಗೂ ಒಂದೇ ಹೆಸರನ್ನು ಇಡಲಾಗುತ್ತದೆ ಹಾಗೂ ಅಷ್ಟೇ ಅಲ್ಲದೆ ಆ ಊರಿಗೆ ಮದುವೆಯಾಗಿ ಬರುವ ಹುಡುಗಿಗೂ ಸಹ ಅದೇ ಒಂದೇ ಹೆಸರಿನಿಂದ ಕರೆಯಲಾಗುತ್ತದೆ. ಅಷ್ಟಕ್ಕೂ ಈ ಗ್ರಾಮದ ವಿಶೇಷತೆ ಏನೂ? ಈ ಗ್ರಾಮ ಯಾವ ಜಿಲ್ಲೆಯಲ್ಲಿದೆ ಇವೆಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ.

ಈ ಒಂದು ಹಳ್ಳಿ ಇರುವುದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ. ಈ ಗ್ರಾಮದ ಹೆಸರು ಉಲ್ಲಿಕೆರೆ ಇನಾಮ್ ಗ್ರಾಮ. ಈ ಗ್ರಾಮದ ದೇವತೆ ಕದ್ದೆಮ್ಮ ದೇವಿ. ಈ ಗ್ರಾಮದಲ್ಲಿ ಐದುನುರಕ್ಕೂ ಹೆಚ್ಚು ಮನೆಗಳಿದ್ದು ಎರಡುಸಾವಿರದಐದುನೂರಕ್ಕೂ ಹೆಚ್ಚು ಜನ ವಾಸ ಮಾಡುತ್ತಾ ಇದ್ದಾರೆ. ಇಲ್ಲಿ ಈ ಊರಿನಲ್ಲಿ ಜನಿಸುವಂತಹ ಮಗು ಗಂಡು ಮಗು ಆಗಿದ್ದರೆ ಕದ್ದೆಪ್ಪ ಎಂದೂ ಹೆಣ್ಣು ಮಗು ಆಗಿದ್ದಲ್ಲಿ ಕದ್ದೆಮ್ಮ ಎಂದೂ ಹೆಸರನ್ನ ಇಡುತ್ತಾರೆ. ಅಷ್ಟೇ ಅಲ್ಲದೇ ಈ ಊರಿಗೆ ಮಾದುವೆಯಾಗಿ ಬರುವ ಸೊಸೆಗೂ ಸಹ ಕದ್ದೆಮ್ಮ ಎಂಬ ಹೆಸರಿನಿಂದಲೇ ಕರೆಯಲಾಗುತ್ತದೆ. ಜನರಿಗೆ ಕದ್ದೆಮ್ಮ ದೇವಿಯ ಹೆಸರನ್ನೇ ಇಡದಿದ್ದರೆ ಈ ದೇವಿ ತಮ್ಮ ಕುಟುಂಬದ ರಕ್ಷಣೆ ಮಾಡುವುದಿಲ್ಲ ಎಂದು ನಂಬಿ ದೇವಿಯ ಹೆಸರಿನಿಂದಲೇ ಕರೆಯುತ್ತಾರೆ. ಇದು ಇವರ ಅನಾಧಿಕಾಲದ ನಂಬಿಕೆ ಕೂಡ ಆಗಿದೆ.

ಇಲ್ಲಿನ ಇನ್ನೊಂದು ವಿಶೇಶ ಅಂದರೆ ಮಕ್ಕಳು ಆಗದವರು ಇಲ್ಲಿ ಬಂದು ಈ ಗ್ರಾಮ ದೇವಿಯ ಬಳಿ ಬಂದು ಪ್ರಾರ್ಥಿಸಿಕೊಂಡವರಿಗೆ ಮಕ್ಳಳಾಗಿರುವ ಉದಾಹರಣೆಗಳೂ ಬೇಕಾದಷ್ಟು ಇವೆ. ಆಧಿನೀಕತೆಯ ಈ ಕಾಲದಲ್ಲಿ ಇನ್ನೂ ಸಹ ಇಂತದ್ದೊಂದು ಗ್ರಾಮ ಇದೆ ಎನ್ನುವುದು ಆಶ್ಚರ್ಯಕರ ಸಂಗತಿ ಎನ್ನಬಹುದು.ಬಹುಶಃ ಈ ಊರಿನಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಈ ದೇವಿಯ ಹೆಸರನ್ನೇ ಇಟ್ಟು , ಜನರನ್ನು ಒಂದೇ ಹೆಸರಿನಿಂದ ಕರೆಯುವ ಗ್ರಾಮ ನಮ್ಮ ದೇಶದಲ್ಲಿ ಮಾತ್ರ ಅಲ್ಲದೆ ಪ್ರಪಂಚದಲ್ಲಿ ಕೂಡಾ ಬೇರೆ ಇಲ್ಲೂ ಕಾಣಿಸುವುದಿಲ್ಲ. ಇಂತಹ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವುದು ಸುಲಭವೇನೂ ಅಲ್ಲ. ಆಧುನಿಕತೆಯ ಹೆಸರಿನಲ್ಲಿ ಈ ಪ್ರಪಂಚ ಎಷ್ಟೇ ಮುಂದುವರೆದಿದ್ದರೂ ಈ ಊರಿನ ಜನರ ದೇವರ ಮೇಲಿನ ನಂಬಿಕೆ ಅಗಾಧವಾದದ್ದು.

Leave a Reply

Your email address will not be published. Required fields are marked *