tamboola Use Tips: ವೀಳ್ಯದೆಲೆಯನ್ನು ನಾವು ಬಹಳ ಕೆಲಸಗಳಿಗೆ ಉಪಯೋಗಿಸುತ್ತೇವೆ. ಆಧ್ಯಾತ್ಮಿಕವಾಗಿ ವೀಳ್ಯದೆಲೆ ತನ್ನದೆ ಆದ ಸ್ಥಾನವನ್ನು ಪಡೆದುಕೊಂಡಿದೆ. ಮನೆಯಲ್ಲಿ ಕಳಶವನ್ನು ಇಟ್ಟು ಪೂಜಿಸುವುದಾದರೆ ಕಳಶಕ್ಕೆ ವೀಳ್ಯದೆಲೆಯನ್ನು ಬಳಸುತ್ತಾರೆ ಜೊತೆಗೆ ವೀಳ್ಯದೆಲೆಯನ್ನಿಟ್ಟು ತಾಂಬೂಲವನ್ನು ಕೊಡಲಾಗುತ್ತದೆ. ಕಳಶಕ್ಕೆ ಅಥವಾ ತಾಂಬೂಲಕ್ಕೆ ಬಳಸಿದ ವೀಳ್ಯದೆಲೆಯನ್ನು ಪೂಜೆಯ ನಂತರ ಏನು ಮಾಡಬೇಕು, ವೀಳ್ಯದೆಲೆಯು ಯಾವ ರೀತಿ ಇರಬೇಕು ಹಾಗೂ ತಾಂಬೂಲದ ಮಹತ್ವವೇನು ಈ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ನಮಗೆ ಯಾರಾದರೂ ತಾಂಬೂಲ ಕೊಟ್ಟರೆ ಅದನ್ನು ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ ನಂತರ ಉಪಯೋಗಿಸಬೇಕು. ತಾಂಬೂಲ ಕೊಡುವಾಗ ದಂಟು ಅಂದರೆ ಮೂಲ ಕೊಡುವವರ ಕಡೆ ಇರಬೇಕು ತುದಿ ತೆಗೆದುಕೊಳ್ಳುವವರ ಕಡೆ ಇರಬೇಕು ಹೀಗೆ ಇರುವುದನ್ನು ನೋಡಿಕೊಂಡು ತಾಂಬೂಲ ಕೊಡಬೇಕು. ತಾಂಬೂಲದಲ್ಲಿ ವೀಳ್ಯದೆಲೆಯನ್ನು ಇಡಲಾಗುತ್ತದೆ ವೀಳ್ಯದೆಲೆ ಸೂರ್ಯಗ್ರಹನನ್ನು ಪ್ರತಿನಿಧಿಸುತ್ತದೆ. ತಾಂಬೂಲದಲ್ಲಿ ಅಡಿಕೆಯನ್ನು ಮುಖ್ಯವಾಗಿ ಇಡಲಾಗುತ್ತದೆ ಹೀಗಾಗಿ ತಾಂಬೂಲವನ್ನು ಕೊಡುವಾಗ ಮತ್ತು ತೆಗೆದುಕೊಳ್ಳುವಾಗ ಸರಿಯಾದ ಪದ್ಧತಿಯನ್ನು ಅನುಸರಿಸಿದರೆ ಮಾತ್ರವೇ ತಾಂಬೂಲದ ಪೂರ್ಣ ಫಲ ಕೊಡುತ್ತದೆ.
ಕೆಲವರಿಗೆ ಒಬ್ಬರ ಮನೆಯಲ್ಲಿ ಕೊಟ್ಟ ತಾಂಬೂಲ ಅಥವಾ ಬ್ಲೌಸ್ ಪೀಸ್ ಅನ್ನು ಇಟ್ಟುಕೊಂಡು ಬೇರೆಯವರಿಗೆ ತಾಂಬೂಲದಲ್ಲಿ ಇಟ್ಟು ಕೊಡುವ ಅಭ್ಯಾಸ ಇರುತ್ತದೆ ಹೀಗೆ ಮಾಡುವುದು ತಪ್ಪಾಗುತ್ತದೆ ಹೀಗೆ ಮಾಡಿದರೆ ನಮಗೆ ಸಿಕ್ಕ ಅದೃಷ್ಟವನ್ನು ನಾವಾಗಿಯೆ ಬೇರೆಯವರಿಗೆ ಧಾರೆ ಎರೆದಂತೆ ಆಗುತ್ತದೆ ಎಚ್ಚರ. ತಾಂಬೂಲ ಕೊಡುವಾಗ ಕಪ್ಪು ಬಣ್ಣದ ಬ್ಲೌಸ್ ಪೀಸ್ ಇಟ್ಟು ತಾಂಬೂಲ ಕೊಡಬಾರದು ಬೇರೆ ಯಾವುದೆ ಬಣ್ಣದ ಬ್ಲೌಸ್ ಪೀಸ್ ಇಟ್ಟು ಕೊಟ್ಟರು ಏನು ತೊಂದರೆ ಇಲ್ಲ.
ದೇವರ ಪೂಜೆ ಮಾಡುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ವೀಳ್ಯದೆಲೆಯ ತುದಿ ಬರುವ ಹಾಗೆ ಇಟ್ಟು ದೇವರಿಗೆ ನೈವೇದ್ಯ ಮಾಡಬೇಕು. ಹಸಿರಾಗಿರುವ, ಸುಂದರವಾಗಿರುವ ತೂತಿಲ್ಲದ ಹರಿದಿರದ ವೀಳ್ಯದೆಲೆಯನ್ನು ನೈವೇದ್ಯ ಮಾಡಬೇಕು ಹಾಗೂ ಅಂತಹ ವೀಳ್ಯದೆಲೆಯನ್ನು ತಾಂಬೂಲದಲ್ಲಿ ಇಟ್ಟು ಕೊಡಬೇಕು. ಮನೆಯಲ್ಲಿ ಕಳಶಕ್ಕೆ ಬಿಳಿ ವೀಳ್ಯದೆಲೆಯನ್ನು ಬಳಸಿದರೆ ಸ್ತ್ರೀ ದೋಷ ಮತ್ತು ಶಾಪ ಉಂಟಾಗುತ್ತದೆ. ದೇವರ ಪೂಜೆಗೆ ಮತ್ತು ಕಳಶಕ್ಕೆ ಇಟ್ಟಿರುವ ವೀಳ್ಯದೆಲೆಯನ್ನು ಎಲ್ಲೆಂದರಲ್ಲಿ ಬಿಸಾಕಬಾರದು ತುಳಿಯಲೂಬಾರದು ನಾವು ಊಟದ ನಂತರ ಅಡಿಕೆ ಮತ್ತು ಸುಣ್ಣದ ಜೊತೆ ವೀಳ್ಯದೆಲೆಯನ್ನು ತಿನ್ನಬೇಕು ಇದರಿಂದ ಪಚನದ ಶಕ್ತಿ ಉತ್ತಮವಾಗುತ್ತದೆ.
ಮಂಗಳವಾರದ ದಿನ ಮತ್ತು ಶುಕ್ರವಾರದ ದಿನ ಯಾವುದೆ ಕಾರಣಕ್ಕೂ ಮನೆಯಿಂದ ವೀಳ್ಯದೆಲೆಯನ್ನು ಹೊರಗೆ ಹಾಕಬಾರದು ಹಾಗೂ ಎಸೆಯಲೂಬಾರದು. ವೀಳ್ಯದೆಲೆಯ ಪ್ರತಿಯೊಂದು ಭಾಗದಲ್ಲಿಯೂ ಒಂದೊಂದು ಭಾಗದಲ್ಲಿ ಒಂದೊಂದು ದೇವತೆ ನೆಲೆಸಿರುತ್ತಾರೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ವೀಳ್ಯದೆಲೆಯ ತುಂಬಿನಲ್ಲಿ ಅಹಂಕಾರ ದೇವತೆ ಹಾಗೂ ದಾರಿದ್ರ ಲಕ್ಷ್ಮೀ ವಾಸವಾಗಿರುತ್ತಾಳೆ ಆದ್ದರಿಂದಲೆ ವೀಳ್ಯದೆಲೆಯನ್ನು ಹಾಕಿಕೊಳ್ಳುವಾಗ ಅದರ ತುಂಬನ್ನು ಮುರಿದು ಎಲೆ ಅಡಿಕೆ ಜೊತೆ ಹಾಕಿಕೊಳ್ಳುತ್ತಾರೆ.
ವೀಳ್ಯದೆಲೆಯ ಬುಡದಲ್ಲಿ ಮೃತ್ಯು ದೇವತೆಯು ವಾಸವಾಗಿರುತ್ತಾಳೆ ಆದ್ದರಿಂದ ತಾಂಬೂಲ ಹಾಕಿಕೊಳ್ಳುವಾಗ ವೀಳ್ಯದೆಲೆಯ ತುದಿಯ ಭಾಗವನ್ನು ಮುರಿದು ಹಾಕಿಕೊಳ್ಳುವುದು ಉತ್ತಮ. ಯಾರ ಮನೆಗಾದರೂ ಹೋದಾಗ ತಾಂಬೂಲ ಕೊಟ್ಟರೆ ಅದನ್ನು ಬೇಡ ಎನ್ನಬಾರದು ಹಾಗೂ ಅದನ್ನು ಎಲ್ಲೆಂದರಲ್ಲಿ ಬಿಸಾಕಲೂಬಾರದು. ಮನೆಯಲ್ಲಿ ಏನಾದರೂ ಪೂಜೆ ಇಟ್ಟುಕೊಂಡಿದ್ದರೆ ಪೂಜೆಯ ನಂತರ ಕಳಸದ ವೀಳ್ಯದೆಲೆಯನ್ನು ಪ್ರಸಾದದ ರೂಪದಲ್ಲಿ ಮನೆಯ ಹಿರಿಯರು ಹಾಗೂ ಮಗಳು ಅಳಿಯ ಇದ್ದರೆ ಅವರು ಮಾತ್ರ ಹಾಕಿಕೊಳ್ಳಬೇಕು ಬೇರೆಯವರು ಹಾಕಿಕೊಳ್ಳಬಾರದು.
ಕಳಸದಲ್ಲಿ ಬಳಸಿದ ವೀಳ್ಯದೆಲೆಯನ್ನು ಒಣಗಿಸಬಾರದು ಒಂದು ವೇಳೆ ಕಸದಲ್ಲಿ ವೀಳ್ಯದೆಲೆಯನ್ನು ಗುಡಿಸಿದರೆ ಆ ಮನೆಗೆ ದಾರಿದ್ರ್ಯ ಬರುತ್ತದೆ ಕಳಸ ದೇವಿಯ ಶಾಪದಿಂದಾಗಿ ಸಂಪಾದಿಸಿದ ಹಣ ಬೇರೆಯವರ ಪಾಲಾಗುತ್ತದೆ ಅಲ್ಲದೆ ಸಾಲ ಭಾದೆ ಹಾಗೂ ಶತ್ರು ಭಾದೆ ಹೆಚ್ಚಾಗುತ್ತದೆ ಹೀಗಾಗಿ ಕಳಸಕ್ಕೆ ಬಳಸಿದ ವೀಳ್ಯದೆಲೆಯನ್ನು ಜೋಪಾನವಾಗಿ ಗಿಡದ ಬುಡಕ್ಕೆ ಹಾಕಬೇಕು.
ಕಳಸದ ವೀಳ್ಯದೆಲೆಯನ್ನು ಬಿಸಾಕುವ ಬದಲು ತುಳಸಿ ಕಟ್ಟೆಗೆ ಹಾಕಬೇಕು ಸರ್ವ ತೀರ್ಥಗಳು ತುಳಸಿಯಲ್ಲಿ ಇರುವುದರಿಂದ ತುಳಸಿಯು ಶ್ರೇಷ್ಠವಾದದ್ದು. ಕಳಸಕ್ಕೆ ಬಳಸಿದ ವೀಳ್ಯದೆಲೆಯನ್ನು ಹರಿವ ನದಿಯಲ್ಲಿ ಅಥವಾ ಹೊಳೆಯಲ್ಲಿ ಬಿಡಬೇಕು ಹೀಗೆ ಮಾಡುವುದರಿಂದ ನೆನೆದ ಕಾರ್ಯ ಬಹು ಬೇಗನೆ ಈಡೇರುತ್ತದೆ. ಈ ಮಾಹಿತಿ ಉಪಯುಕ್ತವಾಗಿದ್ದು ತಪ್ಪದೆ ಎಲ್ಲರಿಗೂ ತಿಳಿಸಿ, ವೀಳ್ಯದೆಲೆಯ ಪ್ರಯೋಜನವನ್ನು ಪಡೆದುಕೊಳ್ಳಿ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.