Ultimate magazine theme for WordPress.

KRS ಡ್ಯಾಮ್ ಕಟ್ಟಿದ್ದರ ಹಿಂದಿನ ರೋಚಕ ಕಥೆ ನಿಮಗೆ ಗೊತ್ತಾ? ಇಲ್ಲಿದೆ ನೋಡಿ

0 170

KRS Dam Contraction Information: ನಮ್ಮ ಕರ್ನಾಟಕದ ಜನತೆಗೆ ಕಾವೇರಿ ಒಂದು ರೀತಿ ಜೀವನದಿ ಇದ್ದ ಹಾಗೆ. ಕಾವೇರಿಯ ಉಗಮಸ್ಥಾನ ಇರುವುದು ಕರ್ನಾಟಕದಲ್ಲಿ, ಕಾವೇರಿ ಹರಿಯುವುದು ಕರ್ನಾಟಕದಲ್ಲಿ. ಕರ್ನಾಟಕದ ಜನತೆಗೆ ವಿಶೇಷವಾಗಿ ರೈತರಿಗೆ ಕಾವೇರಿ ನದಿಯ ನೀರಿನಿಂದ ಆಗುವ ಸಹಾಯದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಕಾವೇರಿ ನದಿಯ ನೀರನ್ನು ಶೇಖರಿಸಿ ಇಟ್ಟು, ಅಗತ್ಯವಿರುವ ಸಮಯದಲ್ಲಿ ನೀರನ್ನು ಹೊರಬಿಡುತ್ತಾರೆ. ಕಾವೇರಿ ವಿಚಾರಕ್ಕೆ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರದ ನಡುವೆ ಮತ್ತು ಜನರ ನಡುವೆ ಬರಗಾಲ ಇರುವ ಸಮಯದಲ್ಲಿ ಆಗುವ ಘರ್ಷಣೆಗಳ ಬಗ್ಗೆ ನಮಗೆ ಗೊತ್ತೇ ಇದೆ. ಆದರೆ ಕೆ.ಆರ್.ಎಸ್ ಡ್ಯಾಮ್ ನಿರ್ಮಾಣದ ಹಿಂದಿನ ರೋಚಕ ಕಥೆ ನಿಮಗೆ ಗೊತ್ತಾ?

ಕೆ.ಆರ್.ಎಸ್ ಡ್ಯಾಮ್ ಕಟ್ಟಿದ್ದು ಸ್ವಾತಂತ್ರ್ಯ ಬರುವುದಕ್ಕಿಂತ ಮೊದಲು, ಆಗ ನಮ್ಮ ರಾಜ್ಯವನ್ನು ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು. 1870ರ ವೇಳೆಯಲ್ಲಿ ಬ್ರಿಟಿಷರು ಮೈಸೂರು ರಾಜ್ಯವನ್ನು ಆಳುತ್ತಿದ್ದರು, ನಂತರ ರಾಜ್ಯದ ಆಳ್ವಿಕೆ ಮೈಸೂರು ಮಹಾರಾಜರ ಕೈಸೇರಿತು. ಆ ವೇಳೆ ರಾಜ್ಯದ ಮಹಾರಾಜ ಆಗಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರ್, ಇವರು ಒಮ್ಮೆ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದಾಗ, ಅಲ್ಲಿನ ಬರಡು ಭೂಮಿಯನ್ನು ನೋಡಿ, ಮಹಾರಾಜರ ಮನಸ್ಸಿಗೆ ಬಹಳ ನೋವಾಗುತ್ತದೆ.

ಆಗ ಹೇಗಾದರೂ ಮಾಡಿ ಈ ಭೂಮಿಯನ್ನು ಅಭಿವೃದ್ಧಿಗೊಳಿಸಬೇಕು ಎಂದು ಮಹಾರಾಜರು ನಿರ್ಧಾರ ಮಾಡುತ್ತಾರೆ. ನಮ್ಮ ರಾಜ್ಯದಲ್ಲಿ ಹರಿಯುವ ಕಾವೇರಿ ನೀರಿನ ಸಹಾಯದಿಂದ ಮಂಡ್ಯ ಜಿಲ್ಲೆಯ ಈ ಬರಡು ಭೂಮಿಗಳ ಅಭಿವೃದ್ಧಿ ಮಾಡಬೇಕು, ಅದಕ್ಕಾಗಿ ಒಂದು ಡ್ಯಾಮ್ ಕಟ್ಟಿಸಬೇಕು ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಧರಿಸಿ, ಈ ಕೆಲಸ ಮಾಡಲು ಸಾಮರ್ಥ್ಯ ಇರುವ ಇಂಜಿನಿಯರ್ ಗಾಗಿ ಹುಡುಕಾಟ ನಡೆಸುತ್ತಾರೆ..

KRS Dam Contraction Information

ಆಗ ಸರ್ ಎಂ. ವಿಶ್ವೇಶ್ವರಯ್ಯ ಅವರು ಈ ಕೆಲಸಕ್ಕೆ ಸೂಕ್ತವಾದ ವ್ಯಕ್ತಿ ಎಂದು ನಿರ್ಧಾರವಾಗುತ್ತದೆ. ಆ ವೇಳೆ ವಿಶ್ವೇಶ್ವರಯ್ಯ ಅವರು ಬಾಂಬೆಯಲ್ಲಿ ಕೆಲಸ ಮಾಡುತ್ತಾ ಇರುತ್ತಾರೆ. ಆಗ ಅವರಿಗೆ ತಾವು ಹುಟ್ಟಿ ಬೆಳೆದ ಊರಿಗಾಗಿ ಇಂಥದ್ದೊಂದು ಉತ್ತಮವಾದ ಕೇಳದ ಮಾಡುವ ಅವಕಾಶ ಸಿಕ್ಕಾಗ, ಅವರು ಕೂಡ ಮರುಯೋಚಿಸಿದ ಕರ್ನಾಟಕಕ್ಕೆ ಬಂದರು, ಈ ರೀತಿಯಾಗಿ ವಿಶ್ವೇಶ್ವರಯ್ಯ ಅವರನ್ನು ಯಶಸ್ವಿಯಾಗಿ ಮತ್ತೆ ತಾಯ್ನಾಡಿಗೆ ಕರೆತರಲಾಯಿತು.

ವಿಶ್ವೇಶ್ವರಯ್ಯ ಅವರು ಕನ್ನಂಬಾಡಿ ಕಟ್ಟೆ ಅಂದರೆ ಕೆ.ಆರ್.ಎಸ್ ಡ್ಯಾಮ್ ಸಿದ್ಧಪಡಿಸಲು ತಯಾರಿ ಶುರು ಮಾಡಿ, ಡ್ಯಾಮ್ ಕಟ್ಟಿಸಲು ಬೇಕಿರುವ ನಕ್ಷೆಯನ್ನು ಸಿದ್ಧಪಡಿಸಿದರು. ಆದರೆ ಈ ಡ್ಯಾಮ್ ಕತ್ತಿಸುವುದಕ್ಕೆ ಅಗತ್ಯ ಇರುವಷ್ಟು ಆರ್ಥಿಕ ಬೆಂಬಲ ಮೈಸೂರು ಸಂಸ್ಥಾನದಲ್ಲಿ ಇರಲಿಲ್ಲ. ಹಣದ ಕೊರತೆ ಇದ್ದ ವೇಳೆ ಗುಜರಾತ್ ಗೆ ಸೇರಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪತ್ನಿ ಪ್ರತಾಪ್ ಕುಮಾರಿ ಅವರು ಡ್ಯಾಮ್ ಕಟ್ಟಿಸುವ ಕೆಲಸಕ್ಕೆ ಬೆಂಬಲ ನೀಡುತ್ತಾರೆ..

ಪ್ರತಾಪ ಕುಮಾರಿ ಅವರು ತಮ್ಮ ಹತ್ತಿರ ಎಲ್ಲಾ ಒಡವೆಗಳು ಆಭರಣಗಳನ್ನು ಕೊಟ್ಟು, ಡ್ಯಾಮ್ ಕಟ್ಟುವ ಕೆಲಸವನ್ನು ಪೂರ್ತಿ ಮಾಡಿ ಎಂದು ಸಪೋರ್ಟ್ ಮಾಡುತ್ತಾರೆ. ಹಣಕ್ಕೆ ಕೊರತೆ ಆಗಿದೆ ಎನ್ನುವ ವಿಷಯ ಮೈಸೂರು ರಾಜ್ಯದ ಎಲ್ಲಾ ಜನತೆಗೆ ಗೊತ್ತಾಗುತ್ತದೆ. ಆಗ ಜನರು ಕೂಡ ಡ್ಯಾಮ್ ಕಟ್ಟುವ ಕೆಲಸಕ್ಕೆ ಸಹಾಯ ಮಾಡಲು ಮುಂದಾಗುತ್ತಾರೆ. ಜನರು ಸಹ ತಮ್ಮ ಹತ್ತಿರ ಇದ್ದ ಹಣ, ಚಿನ್ನದ ಒಡವೆಗಳು ಇದೆಲ್ಲವನ್ನು ಸಹ ಜನರು ಅರಮನೆ ತಲುಪುವ ಹಾಗೆ ಮಾಡುತ್ತಾರೆ.

ಇನ್ನು ಕೆಲವು ಜನರು ತಾವು ಕೃಷಿ ಮಾಡುತ್ತಿದ್ದ ಜಾಗವನ್ನು ಕೂಡ ಬಿಟ್ಟುಕೊಡುತ್ತಾರೆ. ಈ ಎಲ್ಲಾ ರೀತಿಯಿಂದ ಡ್ಯಾಮ್ ಕಟ್ಟುವ ಕೆಲಸ ಶುರು ಮಾಡಲಾಗುತ್ತದೆ. 1911 ರಲ್ಲಿ ಕೆ.ಆರ್.ಎಸ್ ಡ್ಯಾಮ್ ಕಟ್ಟುವ ಕೆಲಸ ಶುರುವಾಗಿ, ಡ್ಯಾಮ್ ನಿರ್ಮಾಣ ಮುಕ್ತಾಯ ಆಗುವುದು 1923ರಲ್ಲಿ. ಕನ್ನಂಬಾಡಿ ಎನ್ನುವ ಊರಿನಲ್ಲಿ ಡ್ಯಾಮ್ ಕಟ್ಟಿಸಿದ ಕಾರಣ ಕನ್ನಂಬಾಡಿ ಕಟ್ಟೆ ಎಂದು ಹೆಸರಿಡಲಾಯಿತು. ಈ ರೀತಿಯಾಗಿ ಹಲವು ಜನರ ಆಸೆ, ಕನಸು, ತ್ಯಾಗ ಇದೆಲ್ಲದರ ಫಲವಾಗಿ ಕೆ.ಆರ್.ಎಸ್ ಡ್ಯಾಮ್ ನಿರ್ಮಾಣವಾಯಿತು. ಈ ಡ್ಯಾಮ್ ಮತ್ತು ಕಾವೇರಿ ನೀರಿನ ಜೊತೆಗೆ ಕರ್ನಾಟಕದ ಜೊತೆಗೆ ವಿಶೇಷವಾದ ಬಾಂಧವ್ಯವಿದೆ.

Leave A Reply

Your email address will not be published.