ಶರೀರದ ಮೇಲೆ ಆಗುವಂತ ತದ್ದು ಸಮಸ್ಯೆಗೆ ರಾಮಬಾಣ ಈ ಮನೆಮದ್ದು

0 28

ತದ್ದು ಎಂಬ ಕಾಯಿಲೆಗೆ ನಾವು ಈ ಲೇಖನದ ಮೂಲಕ ಮನೆಮದ್ದನ್ನು ತಿಳಿದುಕೊಳ್ಳೋಣ. ತದ್ದು ಇದು ನೋಡೋಕೆ ಗಜಕರ್ಣ ಆದಹಾಗೆ ಕಾಣಿಸುವುದು. ತದ್ದು ಇದು ನಮ್ಮ ದೇಹದ ಕೈ ಕಾಲುಗಳು, ಹೊಟ್ಟೆ ಬೆನ್ನಿನ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ರೌಂಡ್ ಆಗಿ ಇರುತ್ತದೆ ಇದನ್ನು ರಿಂಗ್ವರ್ಮ್ ಎಂದೂ ಸಹ ಕರೆಯಬಹುದು. ಇದು ಕಡಿತ ಉಂಟು ಮಾಡುತ್ತದೆ ಕಡಿತ ಉಂಟಾದಾಗ ಆ ಜಾಗದಲ್ಲಿ ಕೆಂಪಾಗಿ ಕೆಲವರಿಗೆ ರಸಿಕೆ ( ಕೀವು ) ಕೂಡಾ ಉಂಟಾಗಬಹುದು. ಮಕ್ಕಳು, ವಯಸ್ಕರರು, ಮಹಿಳೆಯರನ್ನು ನಿತ್ಯ ಈ ಕಾಯಿಲೆ ಕಾಡುತ್ತಿದ್ದು, ಮುಜುಗರಕ್ಕೆ ಒಳಗಾಗುವಂತಾಗಿದೆ. ಕೆಲವರ ಮುಖ, ಕುತ್ತಿಗೆ, ಕೈಗೆಲ್ಲಾಕಾಣಿಸಿಕೊಂಡು ಹೊರಗೆ ತೆರಳಲು ಹಿಂಜರಿಕೆ ಅನುಭವಿಸುವಂತಾಗಿದೆ. ಮುಖದ ಮೇಲೆ ಬೆನ್ನು, ಕುತ್ತಿಗೆ ಇತರ ದೇಹದ ಭಾಗದಲ್ಲಿಚರ್ಮದ ಗುಳ್ಳೆ ಅಥವಾ ತುರಿಕೆಯಾಗಿ ಕೆಂಪಾಗುವುದಕ್ಕೆ ಇಲ್ಲಿನ ವೈದ್ಯರು ಫಂಗಲ್‌ ಇನಪೆಕ್ಷನ್‌ ಎನ್ನುತ್ತಾರೆ. ಹಾಗಾದ್ರೆ ಈ ತದ್ದೂ ಆಗೋಕೆ ಕಾರಣ ಏನು? ಇದಕ್ಕೆ ಮನೇ ಮದ್ದು ಎನು? ಎನ್ನುವುದನ್ನು ನಾವಿಲ್ಲಿ ನೋಡೋಣ.

ತದ್ದು ಆಗೋಕೆ ಮುಖ್ಯ ಕಾರಣ ಏನು ಎಂದು ನೋಡುವುದಾದರೆ, ಕ್ರಿಮಿಗಳು, ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್ ಇವುಗಳಿಂದಾಗಿ ತದ್ದು ಉಂಟಾಗುತ್ತದೆ. ಮುಖ್ಯವಾಗಿ ಈ ಕ್ರಿಮಿಗಳು, ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್ ಇವುಗಳು ನಮ್ಮ ದೇಹದಲ್ಲಿ ಉಂಟಾಗಲು ಮುಖ್ಯ ಕಾರಣ ಎಂದರೆ ಸ್ವಚ್ಛತೆ ಇಲ್ಲದೆ ಇರುವುದು. ಸ್ವಚ್ಛತೆಯ ಕೊರತೆಯಿಂದಾಗಿ ಇವೆಲ್ಲ ಆಗುತ್ತವೆ. ಇನ್ನೊಬ್ಬರು ಬಳಸಿದ ಬಟ್ಟೆಗಳನ್ನು ನಾವು ಬಳಕೆ ಮಾಡುವುದು, ಬೇರೆಯವರ ಸೋಪ್, ಕಾಸ್ಮೆಟಿಕ್ ಗಳನ್ನ ಬಳಸುವುದು ಅಥವಾ ನಮ್ಮ ದೇಹದ ವೈಯಕ್ತಿಕ ಸ್ವಚ್ಛತೆಯ ಕೊರತೆಯಿಂದಾಗಿ ನಮ್ಮ ದೇಹದಲ್ಲಿ ಕ್ರಿಮಿಗಳು ಉತ್ಪತ್ತಿ ಆಗಿ ಚರ್ಮದ ಸಮಸ್ಯೆಗಳು ಉಂಟಾಗುತ್ತವೆ.

ಇನ್ನು ತದ್ದು ಉಂಟಾದಾಗ ಇದರ ಲಕ್ಷಣ ಹೇಗೆ ಇರುತ್ತದೆ ಎಂದು ನೋಡುವುದಾದರೆ , ಇದು ಆದಾಗ ಉರಿ ಮತ್ತು ಕೆರೆತ ಉಂಟಾಗುತ್ತದೆ. ಕೀವು ಆಗುವುದು , ಜ್ವರ ಬಂದು ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಮತ್ತು ಇದು ನಮ್ಮ ದೇಹದಲ್ಲಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹಾಗೂ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ತದ್ದು ಹೇಗೆ ಹರಡುತ್ತದೆ? ಹೇಗೆ ಬರುತ್ತದೆ ಎಂದು ತಿಳಿದ ಮೇಲೆ ಇದಕ್ಕೆ ಸೂಕ್ತವಾದ ಮನೇಮದ್ದನ್ನು ಕೂಡಾ ನಾವು ತಿಳಿದಿರುವುದು ಅವಶ್ಯಕ. ಇದಕ್ಕೆ ಮನೇ ಮದ್ದು ಏನು? ಎಂದು ನೋಡುವುದಾದರೆ , ಒಂದು ಮುಷ್ಟಿ ಅಷ್ಟು ಕಹಿ ಬೇವಿನ ಸೊಪ್ಪು ಅದರ ರಸ ತೆಗೆದು ಅದಕ್ಕೆ ಒಂದಿಷ್ಟು ಅರಿಶಿನದ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಈ ಮಿಶ್ರಣವನ್ನು ತದ್ದು ಆದ ಜಾಗಕ್ಕೆ ಹಚ್ಚಬೇಕು. ಅರಿಶಿನ ಮತ್ತು ಕಹಿಬೇವಿನ ಸೊಪ್ಪು ದೇಹದಲ್ಲಿ ಇರುವ ಕ್ರಿಮಿಗಳನ್ನು ಸಾಯಿಸುತ್ತದೆ. ದೇಹದಲ್ಲಿ ಆದ ಇನ್ಫೆಕ್ಷನ್ ಅನ್ನು ಕಡಿಮೆ ಮಾಡಿ ಕ್ರಮೇಣವಾಗಿ ಹಂತ ಹಂತವಾಗಿ ತದ್ದು ಕಡಿಮೆ ಆಗಲು ಸಹಾಯ ಮಾಡುತ್ತದೆ.

ಒಂದು ವೇಳೆ ಈ ಮನೆಮದ್ದನ್ನು ಮಾಡಿಯೋ ಸಹ ತದ್ದು ಕಡಿಮೆ ಆಗದೇ ಇದ್ದರೆ ಆಯುರ್ವೇದದಲ್ಲಿ ಸಾಕಷ್ಟು ಲೇಪಗಳು ಇವೆ ಅವುಗಳನ್ನು ಹಚ್ಚಬಹುದು. ಮಂಜಿಶ್ಟ ದಿಂದ ತಯಾರಿಸಿದ ಕಷಾಯ ಮತ್ತು ಲೇಪವನ್ನು ಬಳಸಿಕೊಂಡು ಕಡಿಮೆ ಮಾಡಿಕೊಳ್ಳಬಹುದು. ಸಾಧ್ಯವಾದಷ್ಟು ಸ್ವಚ್ಛತೆಯನ್ನು ಕಾಪಾಡಿಕೊಂಡು ಕಡಿಮೆ ಮಾಡಿಕೊಳ್ಳಬೇಕು ಇಲ್ಲವಾದರೆ ಇದು ಮನೆಯಲ್ಲಿ ಇರುವ ಎಲ್ಲರಿಗೂ ಹರಡುತ್ತದೆ. ಚಿಕಿತ್ಸೆ ಪಡೆದುಕೊಳ್ಳುವುದಕ್ಕಿಂತ ಈ ರೀತಿಯ ಸುಲಭದ ಮನೆಮದ್ದನ್ನು ಮಾಡಿಕೊಳ್ಳುವುದು ಉತ್ತಮ.

Leave A Reply

Your email address will not be published.