ಮತ್ತೆ ಸಿನಿಮಾದಲ್ಲಿ ನಟಿಸಲಿದ್ದಾರೆ ಶ್ವೇತಾ ಶ್ರೀವಾತ್ಸವ್. ಅವರು ಸಿನಿಮಾದಲ್ಲಿ ಇಷ್ಟುದಿನ ನಟಿಸದೆ ಇರಲು ಕಾರಣವೇನು ಹಾಗೂ ಎಷ್ಟು ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಶ್ವೇತಾ ಶ್ರೀವಾತ್ಸವ್ ಅವರು ತಮ್ಮ ಮಗಳು ಚಿಕ್ಕವಳಿರುವುದರಿಂದ ಸಿನಿಮಾದಲ್ಲಿ ನಟಿಸಲಿಲ್ಲ. ಅವರು ನಾನು ಯಾವ ಪಾತ್ರ ಮಾಡಬೇಕು ನೋಡಿಕೊಂಡು ಮಾಡುತ್ತೇನೆ ಎಂದು ಅವರು ಹೇಳಿದರು. ಈಗಿನ ಕಾಲದಲ್ಲಿ ಉಪದೇಶ ಮಾಡಿದರೆ ಜನರು ನೋಡುವುದಿಲ್ಲ ಮನರಂಜನೆ ಮಾಡುವುದು ಅವಶ್ಯಕವಾಗಿದೆ. ಅವರು ನಾಲ್ಕು ಸಿನಿಮಾಗಳಲ್ಲಿ ನಟಿಸಲು ಒಪ್ಪಿದ್ದಾರೆ ಮೂರು ಸಿನಿಮಾವನ್ನು ಅಫೀಷಿಯಲ್ ಆಗಿ ಒಪ್ಪಿದ್ದಾರೆ. ಮೂರು ಸಿನಿಮಾದಲ್ಲಿ ಶ್ವೇತಾ ಅವರ ಪಾತ್ರ ವಿಭಿನ್ನವಾಗಿದೆ. ಸಿನಿಮಾದ ಕಥೆ ಮುಖ್ಯವಾಗುತ್ತದೆ, ಸಿನಿಮಾದ ಸಂದೇಶ ಮತ್ತು ಅದನ್ನು ಹೇಳುವ ರೀತಿ ಮುಖ್ಯ ಎಂದು ಶ್ವೇತಾ ಅವರು ಹೇಳಿಕೊಂಡರು.

ಅವರು ನಟಿಸಲಿರುವ ಒಂದು ಸಿನಿಮಾ ಹಳೆ ಕನ್ನಡ ಸಿನಿಮಾ ಇದ್ದಾಗಿದೆ ಚೆನ್ನಾಗಿದೆ, ಇನ್ನೊಂದು ಸಿನಿಮಾ ಈಗಿನ ಟ್ರೆಂಡಿ, ಕಮರ್ಷಿಯಲ್ ಚಿತ್ರವಾಗಿದೆ, ಇನ್ನೂಂದು ಸಿನಿಮಾದಲ್ಲಿ ಸರ್ಕಾರಿ ಅಧಿಕಾರಿ ಪಾತ್ರವನ್ನು ಶ್ವೇತಾ ಅವರು ಮಾಡಲಿದ್ದಾರೆ. ಈ ಸಿನಿಮಾಗಳ ಮೂಲಕ ಮನರಂಜನೆ ಮಾಡುತ್ತೇನೆ ಎಂದು ಶ್ವೇತಾ ಅವರು ಹೇಳಿದ್ದಾರೆ. ದೇವರ ದಯೆ, ಜನರ ಆಶೀರ್ವಾದ ಬೇಕು, ನನಗೆ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಶ್ವೇತಾ ಅವರು ಹೇಳಿದ್ದಾರೆ. ಅವರು ಡಾಕ್ಟರ್ ರಾಜಕುಮಾರ್ ಹಾಗೂ ಅಪ್ಪು ಸರ್ ಅವರ ಅಭಿಮಾನಿಯಾಗಿದ್ದಾರೆ. ಒಟ್ಟಿನಲ್ಲಿ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿರುವ ಶ್ವೇತಾ ಅವರು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *