ಸ್ನೇಹಿತರೊಂದಿಗೆ ಜಾಲಿ ರೈಡ್ ನಲ್ಲಿರುವ ದರ್ಶನ್ ಫೋಟೋ ಗ್ಯಾಲರಿ

0 1

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆಗಾಗ ತಮ್ಮ ಸ್ನೇಹಿತರ ಜೊತೆಗೆ ಕಾಲ ಕಳೆಯಲು ಎಂದೇ ಫಾರ್ಮ್ ಹೌಸ್ ಗೆ ಹೋಗುವುದು ರೂಢಿ ಆಗಿದೆ. ಈಗಲೂ ಸಹ ಹಾಗೆಯೇ ತಮ್ಮ ಕೆಲವು ಬಾಲ್ಯ ಸ್ನೇಹಿತರು ಹಾಗೂ ಸಿನಿಮಾ ರಂಗದ ಕೆಲವು ಸ್ನೇಹಿತನೂ ಒಡಗೂಡಿಕೊಂಡು ದರ್ಶನ್ ಅವರು ಮತ್ತೆ ಜಾಲಿ ರೈಡ್ ಗೆ ಎಂದು ಹೋಗಿದ್ದಾರೆ. ಇದರ ಕುರಿತಾಗಿ ಮಾಹಿತಿ ಈ ಲೇಖನದಲ್ಲಿ ಇದೆ ನೋಡಿ.

ಮಂಗಳವಾರ ಡಿಬಾಸ್ ದರ್ಶನ್ ಅವರು ತಮ್ಮ ಚಿತ್ರರಂಗದ ಕೆಲ ಸ್ನೇಹಿತರು ಮತ್ತು ಬಾಲ್ಯದ ಗೆಳೆಯರ ಜೊತೆ ಮಡಿಕೇರಿಗೆ ಮೂರು ದಿನಗಳ ಪ್ರವಾಸಕ್ಕೆ ಹೋಗಿದ್ದರು. ಬೆಂಗಳೂರಿನ ಆರ್.ಆರ್ ನಗರದ ನಿವಾಸದಿಂದ ಹೊರಟ್ಟಿದ್ದ ದರ್ಶನ್ ಮತ್ತು ಸ್ನೇಹಿತರು ದರ್ಶನ್ ಅವರ ಟಿ ನರಸೀಪುರದ ತೂಗದೀಪ ಫಾರ್ಮ್ ಹೌಸ್‍ಗೆ ಹೋಗಿ ಅಲ್ಲಿಂದ ಮಡಿಕೇರಿಗೆ ಪ್ರಯಾಣ ಬೆಳೆಸಿದ್ದರು. ಸ್ನೇಹಿತರ ಜೊತೆ ಜಾಲಿಯಾಗಿ ಕ್ರಿಕೆಟ್ ಆಡಿರುವ ದರ್ಶನ್, ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಿ ಸಂತೋಷ ಪಟ್ಟಿದ್ದಾರೆ. ಸ್ನೇಹಿತರ ಜೊತೆ ಮೂರು ದಿನಗಳ ಕಾಲ ಪ್ರವಾಸಕ್ಕೆ ಹೋಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ದರ್ಶನ್ ಅಭಿಮಾನಿಗಳು ಹಂಚಿಕೊಂಡಿರುವ ವಿಡಿಯೋದಲ್ಲಿ ದರ್ಶನ್ ಅವರು ಫೀಲ್ಡಿಂಗ್ ಮಾಡುತ್ತಿದ್ದು, ಧರ್ಮ ಕೀರ್ತಿ ರಾಜ್ ಅವರು ಬೌಲಿಂಗ್ ಮಾಡುತ್ತಿದ್ದಾರೆ. ಈ ವೇಳೆ ಹಾಸ್ಯ ನಟ ಚಿಕ್ಕಣ್ಣ ಅವರು ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿದೆ. ತಾವು ತಂಗಿರುವ ರೆಸಾರ್ಟ್ ಮುಂದೆ ದರ್ಶನ್ ಮತ್ತು ಅವರ ಸ್ನೇಹಿತರು ಕ್ರಿಕೆಟ್ ಆಡಿದ್ದಾರೆ.

ಮಂಗಳವಾರ ಆರ್.ಆರ್ ನಗರದ ನಿವಾಸದಿಂದ ಸಾರಥಿ ದರ್ಶನ್ ಅವರ ನೇತೃತ್ವದಲ್ಲೇ ನಟ ಚಿಕ್ಕಣ್ಣ, ನಿರ್ಮಾಪಕ ಉಮಾಪತಿ, ಪ್ರಜ್ವಲ್ ದೇವರಾಜ್, ಪ್ರಣಮ್ ದೇವರಾಜ್ ಮತ್ತು ಬಾಲ್ಯದ ಗೆಳೆಯರು ಮಡಿಕೇರಿ ಕಡೆ ಹೋಗಿದ್ದರು. ಮೂರು ದಿನಗಳ ಕಾಲ ಡಿಬಾಸ್ ಮತ್ತವರ ಸ್ನೇಹಿತರು ಅಲ್ಲೇ ತಂಗಲಿದ್ದಾರೆ. ದರ್ಶನ್ ಅವರು ಟ್ರಿಪ್ ಹೊರಟಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು. ದರ್ಶನ್ ಅವರ ನಿವಾಸದ ಮುಂದೆ ಸುಮಾರು 15ಕ್ಕೂ ಹೆಚ್ಚಿನ ಬೈಕ್‍ಗಳು ನಿಂತಿರುವ ಫೋಟೋಗಳು ಮತ್ತು ಅವರು ಮನೆಯಿಂದ ಸೂಪರ್ ಬೈಕಿನಲ್ಲಿ ಹೋಗುತ್ತಿರುವ ವಿಡಿಯೋಗಳನ್ನು ಅವರ ಅಭಿಮಾನಿಗಳು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್ ತಮ್ಮ ನೀಲಿ ಬಣ್ಣದ ಬೈಕಿನಲ್ಲಿ ಕಪ್ಪು ಜಾಕೆಟ್ ತೊಟ್ಟು ರೈಡ್‍ಗೆ ಹೋಗಿದ್ದರು. ಇದರ ಜೊತೆಗೆ ಪ್ರಜ್ವಲ್ ದೇವರಾಜ್ ಅವರು ತಾವು ರೈಡಿಗೆ ಸಿದ್ಧವಾಗಿರುವ ಫೋಟೋಗಳನ್ನು ಸಹ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು.

Leave A Reply

Your email address will not be published.