ತನಗಿಂತ 15 ವರ್ಷ ಚಿಕ್ಕ ಹುಡುಗನನ್ನು ಮದುವೆಯಾಗಲು ಹೊರಟಿರುವ 44 ವರ್ಷದ ಖ್ಯಾತ ನಟಿ

0 3

ಪ್ರೀತಿ ಮತ್ತು ವಯಸ್ಸಿಗೆ ಯಾವುದೇ ಸಂಬಂಧ ಇರುವುದಿಲ್ಲ. ಪ್ರೀತಿ ಮಾಡಬೇಕು ಅಂದುಕೊಂಡವರಿಗೆ ವಯಸ್ಸಿನ ಅಂತರ ಯಾವ ವಿಷಯವೂ ಅಲ್ಲ. ಮದುವೆಯೇ ಬೇಡ ತಾನು ಮದುವೆಯೇ ಆಗುವುದಿಲ್ಲ ಎಂದುಕೊಂಡು ಇಷ್ಟು ವರ್ಷ ಒಬ್ಬಂಟಿ ಜೀವನ ನಡೆಸಿದ ಈ ನಟಿಗೆ ಈಗ ಮದುವೆಯಾಗಬೇಕು ಎನ್ನುವ ಆಸೆ, ಹಂಬಲ ಹುಟ್ಟಿಕೊಂಡಿದೆ. ತನಗಿಂತ ಹದಿನೈದು ವರ್ಷ ಚಿಕ್ಕ ವಯಸ್ಸಿನ ಹುಡುಗನ ಜೊತೆ ಈ ನಟಿ ವಿವಾಹವಾಗಲು ಸಿದ್ಧವಾಗಿದ್ದಾರೆ. ತನಗಿಂತ ಚಿಕ್ಕ ವಯಸ್ಸಿನ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಿರುವ ಈ ನಟಿ ಯಾರು? ಹಾಗೂ ಅವರನ್ನು ಮದುವೆಯಾಗುತ್ತಿರುವ ಹುಡುಗ ಯಾರು? ಈ ಎಲ್ಲ ವಿಷಯಗಳ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

ಪ್ರೀತಿ ಅನ್ನೋದು ಯಾರಿಗೂ ಹೇಳಿಕೇಳಿ ಹುಟ್ಟುವುದಿಲ್ಲ ಅದು ಯಾರನ್ನು ಹೇಳಿಕೇಳಿ ಬರುವಂತದ್ದಲ್ಲ. ಕೆಲವರಿಗೇ ಒಬ್ಬ ವ್ಯಕ್ತಿಗಳಲ್ಲಿ ಇರುವಂತ ಎಷ್ಟೋ ಗುಣಗಳನ್ನು ನೋಡಿ ಆ ಗುಣಗಳಿಗೆ ಆಕರ್ಷಿತರಾಗಿ ಅವರ ಬಗ್ಗೆ ಪ್ರೀತಿ ಹುಟ್ಟುತ್ತದೆ. ಇನ್ನು ಎಷ್ಟೋ ಜನ ಒಬ್ಬರನ್ನೊಬ್ಬರು ನೋಡದೆ ಪ್ರೀತಿಸುತ್ತಿರುತ್ತಾರೆ. ಇನ್ನು ಈಗ ಒಂದು ವರ್ಷದಿಂದ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ನೋಡುತ್ತಿದ್ದರೆ ಪ್ರೀತಿಗೆ ವಯಸ್ಸಿನ ಅಂತರವೂ ಇಲ್ಲ ಎನ್ನುವುದು ತಿಳಿಯಬಹುದು. ಯಾರು ಯಾರನ್ನು ಯಾವಾಗ ಬೇಕಾದರೂ ಪ್ರೀತಿಸಬಹುದು. ಹಾಗೆಯೇ ಈ ನಟಿಗೂ ಕೂಡ ತನ್ನ 44 ನೇ ವಯಸ್ಸಿನಲ್ಲಿ ತನಗಿಂತ ಹದಿನೈದು ವರ್ಷ ಕಡಿಮೆ ವಯಸ್ಸಿನ ಹುಡುಗನ ಮೇಲೆ ಪ್ರೀತಿ ಉಂಟಾಗಿದೆ. ಇಷ್ಟು ವರ್ಷಗಳ ಕಾಲ ತನಗೆ ಮದುವೆ ಬೇಡ ಎಂದು ಕುಳಿತಿದ್ದ ಈ ನಟಿಗೆ ಈಗ ಮದುವೆಯಾಗಬೇಕೆಂಬ ಹಂಬಲ. ಮನುಷ್ಯನಾಗಿ ಹುಟ್ಟಿದ ಮೇಲೆ ತನ್ನ ಜೀವನವನ್ನು ಪೂರ್ತಿ ಒಬ್ಬಂಟಿಯಾಗಿ ನಡೆಸಲಾರ. ಜೀವನಕ್ಕೆ ಒಂದು ಜೀವನಸಂಗಾತಿ ಯಾರಾದರೂ ಒಬ್ಬರು ಬೇಕಾಗಿರುತ್ತದೆ. ಸ್ನೇಹಿತರಾಗಿ ನಂಬಿಕೆ ಉಳ್ಳವರು ಅಥವಾ ಅವರ ಮೇಲೆ ನಂಬಿಕೆ ಇಡುವಂತಹ ವ್ಯಕ್ತಿ ಯಾರಾದರೊಬ್ಬರು ನಮ್ಮ ಜೀವನದ ಸಂಗಾತಿಯಾಗಲಿ ಎನ್ನುವುದು ಎಲ್ಲರೂ ಬಯಸುವಂತದ್ದೆ. ಈ ನಟಿಗೂ ಕೂಡ ಅದೇ ರೀತಿಯ ಭಾವನೆ ಉಂಟಾಗಿರಬಹುದು. ಆ ನಟಿ ಯಾರು ಅನ್ನೋದನ್ನು ನೋಡೋಣ.

ತನ್ನ 18ನೇ ವಯಸ್ಸಿನಲ್ಲಿ ಮಿಸ್ ಇಂಡಿಯಾ ಮಿಸ್ ಯೂನಿವರ್ಸ್ ಎಂಬ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡ ದೇವಕನ್ಯೆ ಸುಶ್ಮಿತಾ ಸೇನ್. ಭಾರತಕ್ಕೆ ಮೊದಲ ವಿಶ್ವ ಸುಂದರಿ ಎನ್ನುವ ಪಟ್ಟವನ್ನು ತಂದುಕೊಟ್ಟ ಸುಂದರ ನಟಿ. ಆಗೆಲ್ಲ ಪ್ರಪಂಚದ ಟಾಪ್ ನಟರು ಈ ನಟಿಯ ಹಿಂದೆ ಬಿದ್ದಿದ್ದರು ಆದರೆ ಸೌಂದರ್ಯದ ಜೊತೆಗೆ ಒಳ್ಳೆಯ ವ್ಯಕ್ತಿತ್ವವನ್ನು ಕೂಡಾ ಬೆಳೆಸಿಕೊಂಡ ಸುಶ್ಮಿತಾ ಸೇನ್ ಸಾಕಷ್ಟು ಬಾಲಿವುಡ್ ಚಿತ್ರಗಳಲ್ಲಿ ಮಿಂಚಿದರು. ನಂತರ ಆರೋಗ್ಯದ ಸಮಸ್ಯೆಗಳನ್ನು ಎದುರಿಸಿದ ಈ ನಟಿ ತನ್ನ ಜೀವನದಲ್ಲಿ ತನಗೆ ಮದುವೆಯೇ ಬೇಡ ತಾನು ಮದುವೆ ಆಗುವುದೇ ಇಲ್ಲ ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಹಾಗಾಗಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದುಕೊಂಡು ಅವರಿಗೆ ತಾಯಿ ಆಗಿ ಆ ಇಬ್ಬರಿಗೂ ಸುಂದರ ಜೀವನವನ್ನು ರೂಪಿಸಿದರು.

ಈಗ ಸುಶ್ಮಿತಾ ಸೇನ್ ಅವರಿಗೆ 44 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಇವರು ಒಬ್ಬ ವ್ಯಕ್ತಿಯನ್ನು ನೋಡಿದ ಮೇಲೆ ಇವರಿಗೆ ಆ ವ್ಯಕ್ತಿಯನ್ನು ನೋಡಿದ ಮೇಲೆ ಹುಟ್ಟಿದ ಪ್ರೀತಿಯ ಭಾವನೆಗಳನ್ನು ತಡೆಯಲು ಆಗಲಿಲ್ಲವಂತೆ. ಸುಶ್ಮಿತಾ ಸೇನ್ ಅವರಿಗೆ ಪ್ರೀತಿ ಹುಟ್ಟಿದ ಆ ವ್ಯಕ್ತಿ ಯಾರು? ಒಂದು ಪ್ಯಾಷನ್ ಶೋ ಒಂದರಲ್ಲಿ ರೋಹ್ಮನ್ ಷಾ ಎಂಬ ವ್ಯಕ್ತಿಯನ್ನು ಸುಶ್ಮಿತಾ ಸೇನ್ ನೋಡುತ್ತಾರೆ. ಆಗಲೇ ಆ ವ್ಯಕ್ತಿಯ ಕಡೆ ಆಕರ್ಷಿತರಾಗುತ್ತಾರೆ ಹಾಗೂ ಆಗಲೇ ಅವರಿಗೆ ತಾನು ಮದುವೆ ಆಗಬೇಕು ಎನ್ನುವ ಆಸೆ ಹುಟ್ಟುತ್ತದೆ. ನಂತರದ ದಿನಗಳಲ್ಲಿ ಇಬ್ಬರೂ ಸ್ನೇಹಿತರಾಗುತ್ತಾರೆ ಹಾಗೂ ಪ್ರೀತಿಸಲು ಆರಂಭಿಸುತ್ತಾರೆ. ಹಾಗೆಯೇ ಮದುವೆ ಆಗುವ ನಿರ್ಧಾರಕ್ಕೂ ಬರುತ್ತಾರೆ. ಮಾಡೆಲ್ ಹಾಗೂ ನಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡ ರೊಹ್ಮನ್ ಷಾ ವಯಸ್ಸಿನಲ್ಲಿ ಸುಶ್ಮಿತಾ ಅವರಿಗಿಂತ ಹದಿನೈದು ವರ್ಷ ಚಿಕ್ಕವರು. 2020 ರ ಆರಂಭದಲ್ಲಿಯೇ ಇವರಿಬ್ಬರೂ ಮದುವೆ ಆಗಲು ಬಯಸಿದ್ದರು ಆದರೆ ಕರೋನ ಕಾರಣಕ್ಕಾಗಿ ಇವರ ಮದುವೆಯನ್ನು ಸಹ ಮುಂದೂಡಲಾಗಿದೆ. ಸೌಂದರ್ಯದ ಜೊತೆಗೆ ಒಳ್ಳೆಯ ಹೃದಯ ಹೊಂದಿರುವ ಸುಶ್ಮಿತಾ ಸೇನ್ ಮದುವೆ ಆಗಿ ಹೊಸ ಜೀವನ ರೂಪಿಸಿಕೊಳ್ಳುವತ್ತ ಹೆಜ್ಜೆ ಇಟ್ಟು ವಯಸ್ಸು ದೇಹಕ್ಕೆ ಹೊರತು ಪ್ರೀತಿಗೆ ಅಲ್ಲಾ ಎಂದು ನಿರೂಪಿಸಿದ್ದಾರೆ.

Leave A Reply

Your email address will not be published.