ಕಿರುತೆರೆ ಲೋಕದಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಹೊಂದಿರುವ ನಟ ಎಂದರೆ ಅಗ್ನಿಸಾಕ್ಷಿ ಧಾರವಾಹಿಯಿಂದ ಹೆಸರು ಪಡೆದಿರುವ ಅಂತಹ ವಿಜಯ್ ಸೂರ್ಯ. ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ವಿಜಯಸೂರ್ಯ ಅವರಿಗೆ ಬಹಳ ದೊಡ್ಡ ಅಭಿಮಾನಿ ಬಳಗವಿದೆ. ಆದರೆ ಅಗ್ನಿಸಾಕ್ಷಿ ಧಾರವಾಹಿಯಿಂದ ಹೊರ ಬಂದ ನಂತರ ವಿಜಯಸೂರ್ಯ ಕನ್ನಡದ ಇನ್ನೊಂದು ಧಾರವಾಹಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಆದರೆ ಅವರ ಅಭಿಮಾನಿಗಳಿಗೆ ಒಂದು ಬೇಸರದ ಸಂಗತಿ ಕಾದಿದೆ. ವಿಜಯ್ ಸೂರ್ಯ ಅವರ ಅಭಿಮಾನಿಗಳಿಗೆ ಕಾದಿರುವ ಬೇಸರದ ಸಂಗತಿ ಏನು? ಯಾವ ವಿಷಯ? ಎನ್ನುವುದರ ಕುರಿತಾಗಿ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ.

ಈಗ ಮೂರು ನಾಲ್ಕು ತಿಂಗಳ ಹಿಂದೆ ಆರಂಭವಾಗಿದ್ದ ಲಾಕ್ಡೌನ್ ನಿಂದಾಗಿ ಸಾಕಷ್ಟು ದಾರವಾಹಿಗಳು ಅರ್ಧಕ್ಕೆ ನಿಂತಿವೆ ಇನ್ನು ಸಾಕಷ್ಟು ದಾರವಾಹಿಗಳು ಅಂತ್ಯ ಕಂಡಿದೆ ಎನ್ನಬಹುದು. ಟಿಆರ್ಪಿ ಇಲ್ಲದೆಯೇ ಎಷ್ಟೋ ಧಾರವಾಹಿಗಳನ್ನು ನಿಲ್ಲಿಸಲಾಗಿದೆ. ಇವುಗಳ ಹಿಂದೆ ಸಾಕಷ್ಟು ಕನ್ನಡದ ಹೊಸ ಧಾರಾವಾಹಿಗಳು ಕೂಡ ಬಂದಿದ್ದು ಇವುಗಳ ಜೊತೆಗೆ ಪರಭಾಷೆಗಳ ಧಾರವಾಹಿಗಳು ಕೂಡ ಹೆಚ್ಚಾಗಿದ್ದು ಡಬ್ಬಿಂಗ್ ದಾರವಾಹಿಗಳ ಅಬ್ಬರವೂ ಹೆಚ್ಚಾಗಿಯೇ ಇದೆ ಎನ್ನಬಹುದು. ಲಾಕ್ಡೌನ್ ಮುಗಿಯುತ್ತಿದ್ದಂತೆಯೇ ಆರಂಭವಾದ ವಿಜಯ್ ಸೂರ್ಯ ಅಭಿನಯದ ಪ್ರೇಮಲೋಕ ಧಾರಾವಾಹಿ ಇನ್ನೇನು ಸ್ವಲ್ಪ ದಿನಗಳಲ್ಲಿ ಮುಕ್ತಾಯವಾಗುತ್ತದೆ ಎನ್ನುವ ವಿಚಾರವೊಂದು ತಿಳಿದುಬಂದಿದೆ. ಅಗ್ನಿಸಾಕ್ಷಿ ಧಾರಾವಾಹಿ ಮುಗಿಯುವ ಸ್ವಲ್ಪ ದಿನ ಮೊದಲೇ ನಟ ವಿಜಯ್ ಸೂರ್ಯ ಅಗ್ನಿಸಾಕ್ಷಿ ಧಾರವಾಹಿ ಇಂದ ಹೊರಬಿದ್ದಿದ್ದರು. ಅಷ್ಟರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರೇಮಲೋಕ ಧಾರವಾಹಿಯ ಮೂಲಕ ಮತ್ತೆ ತಮ್ಮ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ ವಿಜಯ್ ಸೂರ್ಯ. ಹಿಂದಿ ಭಾಷೆಯ ಯಶಸ್ವಿ ಧಾರವಾಹಿ ‘ಕಸೌಟಿ ಜಿಂದಗಿ ಕೆ ‘ ಧಾರವಾಹಿಯ ಕನ್ನಡ ರಿಮೇಕ್ ಪ್ರೇಮಲೋಕ ಧಾರವಾಹಿ ಆಗಿದೆ.

ಅಗ್ನಿಸಾಕ್ಷಿ ಗೆ ಗುಡ್ ಬೈ ಹೇಳಿದ ವಿಜಯಸೂರ್ಯ ಮತ್ತೆ ಪ್ರೇಮಲೋಕ ಧಾರವಾಹಿಯಲ್ಲಿ ನಟನೆ ಮಾಡುವ ಮೂಲಕ ತಮ್ಮ ಅಭಿಮಾನಿಗಳ ಮುಖದಲ್ಲಿ ಸಂತಸ ಮೂಡಿಸಿದ್ದರು. ಅಗ್ನಿಸಾಕ್ಷಿ ಅತಿ ಹೆಚ್ಚು ಟಿಆರ್ಪಿ ಗಳಿಸಿದ ಧಾರವಾಹಿ ಆಗಿತ್ತು ಈ ಹಿನ್ನೆಲೆಯಲ್ಲಿ ಪ್ರೇಮಲೋಕ ಧಾರವಾಹಿಗೂ ಕೂಡ ಹೆಚ್ಚು ಟಿಆರ್ಪಿ ಬರಬಹುದು ಎನ್ನುವ ನಿರೀಕ್ಷೆ ಇದ್ದಿತ್ತು. ಪ್ರೇಮಲೋಕ ಧಾರವಾಹಿ ಮೇಲೆ ಭಾರಿ ನಿರೀಕ್ಷೆ ಇದ್ದರೂ ಕೂಡ ಅಷ್ಟೊಂದು ಹೆಚ್ಚಿನ ಟಿಆರ್ಪಿ ಈ ಧಾರವಾಹಿಗೆ ಸಿಗಲಿಲ್ಲ. ಆದರೂ ಸಹ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡ ವಿಜಯಸೂರ್ಯ ಅವರ ತಮ್ಮ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿದ್ದರು.

ಇನ್ನು ಪ್ರೇಮಲೋಕ ಧಾರವಾಹಿಯಲ್ಲಿ ಸೂರ್ಯನ ಪಾತ್ರದಲ್ಲಿ ವಿಜಯ್ ಸೂರ್ಯ, ಪ್ರೇರಣಾ ಪಾತ್ರದಲ್ಲಿ ಅಂಕಿತ, ಶಿಶಿರ ಶಾಸ್ತ್ರಿ, ದರ್ಶಿನಿ ಇವರು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದಾರೆ. ಲಾಕ್ ಡೌನ್ ನಂತರದಲ್ಲಿ ಪ್ರೇಮಲೋಕ ಧಾರವಾಹಿ ಬಂದಿರುವುದಕ್ಕೆ ಮತ್ತಷ್ಟು ರೋಚಕ, ಹೊಸತನ ತಿರುವು ಇರುವ ಕಥೆ ಇದಾಗಿದೆ ಎಂದು ಪ್ರೇಕ್ಷಕರು ಕುತೂಹಲದಿಂದ ಕಾದಿದ್ದರು. ಹೇಗೆ ಧಾರವಾಹಿ ಆರಂಭವಾಯಿತೋ ಅಷ್ಟೇ ಬೇಗ ಪ್ರೇಮಲೋಕ ಧಾರವಾಹಿ ಮುಕ್ತಾಯ ಕೂಡಾ ಆಗುತ್ತಿದೆ ಎನ್ನುವ ಸುದ್ದಿ ಹರಡುತ್ತಿದೆ. ಇನ್ನು ಇದರ ಜೊತೆ ಜೊತೆಗೆ ನಟ ವಿಜಯ್ ಸೂರ್ಯ ಅವರ ಕೈಯ್ಯಲ್ಲಿ ಕೆಲವು ಸಿನಿಮಾಗಳು ಇವೆಯಂತೆ ಅನ್ನುವ ಸುದ್ದಿಗಳೂ ಕೂಡಾ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ನಟ ವಿಜಯ್ ಸೂರ್ಯ ಮತ್ತೆ ಕಿರುತೆರೆಗೆ ಮರಳುತ್ತಾರೋ ಅಥವಾ ಸಿನಿಮಾ ಕಡೆ ಒಲವು ತೋರುತ್ತಾರೋ ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *