ಕೊಹ್ಲಿ ಪಡೆ ಸೇರಿದ ಸಿಕ್ಸರ್ ಕಿಂಗ್

0 0

ಕ್ರಿಕೆಟ್ ಎಂದರೆ ಸಾಕು ಎಲ್ಲಾ ವಯಸ್ಸಿನ ಜನರು ಕೂಡ ಕುತೂಹಲದಿಂದ ಮತ್ತು ಒಮ್ಮನಸ್ಸಿನಿಂದ ನೋಡುವಂತಹ ಕ್ರೀಡೆಯಾಗಿದೆ. ಹೆಚ್ಚಿನ ಯುವಕರು ಹುಮ್ಮಸ್ಸಿಂದ ಆಡುವ ಕ್ರೀಡೆಯಾಗಿದೆ. ಕ್ರಿಕೆಟನ್ನು ಜಂಟಲ್ಮನ್ ಗೇಮ್ ಎಂದು ಸಹ ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಟೆಸ್ಟ್ ಮ್ಯಾಚ್ ಗಳು ನಡೆಯುತ್ತಿದ್ದವು. ಜೊತೆಗೆ ಹೆಚ್ಚು ಜನರನ್ನು ಇದು ಆಕರ್ಷಿಸಿತು. ಭಾರತದಲ್ಲಿ ಹೆಚ್ಚಾಗಿ 90% ಜನರು ಕ್ರಿಕೆಟನ್ನು ಇಷ್ಟಪಡುತ್ತಾರೆ. ಈಗಿನ ಹೊಸ ಟ್ರೆಂಡ್ ಕ್ರಿಕೆಟ್ ಎಂದರೆ ಟಿ-ಟ್ವೆಂಟಿ ಕ್ರಿಕೆಟ್ ಟೂರ್ನಮೆಂಟ್ ಆಗಿದೆ. ಆದ್ದರಿಂದ ನಾವು ಇಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

20 ಓವರ್ ಗಳ ಮ್ಯಾಚ್ ನ ಅದ್ಭುತವಾದಂತಹ ಒಂದು ಆಟ ಜನರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ. 20 ಓವರ್ಗಳ ಪಂದ್ಯಗಳಲ್ಲಿ ಹೆಚ್ಚಾಗಿ ಅತಿವೇಗದ ರನ್ ಗಳಿಕೆ ಜನರನ್ನು ಮನರಂಜಿಸುತ್ತದೆ. ಈಗ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಇಂಡಿಯಾ ನಡುವಿನ ಟಿ20 ಪಂದ್ಯಕ್ಕೂ ಕೂಡ ಜನರು ಕಾತರದಿಂದ ಕಾಯುತ್ತಿದ್ದಾರೆ. ಈ ಟಿ20 ಪಂದ್ಯಕ್ಕೆ ಮೊದಲ ಬಾರಿಗೆ ಅತ್ಯುತ್ತಮ ರನ್ ಗಳಿಕೆಯ ಹೊಸ 3 ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಇಂಗ್ಲೆಂಡ್ ಜೊತೆ ಟಿ20 5 ಪಂದ್ಯಗಳ ಸರಣಿಗೆ ಬಿಸಿಸಿಐ ಸೂರ್ಯ ಕುಮಾರ್ ಯಾದವ್, ಕಿಶನ್, ಹಾಗೂ ತಿವಾಟಿಯ ಅವರನ್ನು ಆಯ್ಕೆ ಮಾಡಿದೆ.

2020 ರ ಇಂಡಿಯನ್ ಪ್ರೈಮಿರ್ ಲೀಗ್ ನಲ್ಲಿ ಈ ಮೂವರು ಆಟಗಾರರು ಅತ್ಯುತ್ತಮ ಪ್ರದರ್ಶನವನ್ನು ನೀಡಿ ಆಯ್ಕೆಸಮಿತಿಯ ಕಣ್ಣಿಗೆ ದೊರೆತಿದ್ದಾರೆ. ಈ ಮೂವರು ಅತ್ಯುತ್ತಮ ಆಟಗಾರರಿಗೆ ಇಂಡಿಯಾ ಟೀಮ್ ನಲ್ಲಿ ಆಡಲು ಅವಕಾಶ ಕೂಡ ಈಕಾರಣದಿಂದಲೇ ದೊರೆತಿದೆ. ಸೂರ್ಯಕುಮಾರ್ ಯಾದವ್ ಅವರು ಐಪಿಎಲ್ ನಲ್ಲಿ ಮುಂಬೈ ಟೀಮಿನ ಪರ ಆಟವಾಡಿ ಅತ್ಯುತ್ತಮ ರನ್ನನ್ನು ಕಲೆ ಹಾಕುವ ಮೂಲಕ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ. ಸೂರ್ಯಕುಮಾರ್ ಯಾದವರು 2020ರ ಟಿ20ಯಲ್ಲಿ ಮುಂಬೈ ಪರ 16 ಪಂದ್ಯಗಳನ್ನು ಆಡಿ 480 ರನ್ ಗಳಿಸಿದ್ದಾರೆ. ಯಾದವ್ ಅವರ ಜೊತೆ ಟೀಮ್ ಇಂಡಿಯಾಕ್ಕೆ ಆಯ್ಕೆಯಾದ ಇನ್ನೊಬ್ಬ ಮುಂಬೈ ಇಂಡಿಯನ್ಸ್ ಟೀಮ್ನ ಆಟಗಾರ ಇಶಾನ್ ಕಿಶನ್.

ಇಶಾನ್ ಕಿಶನ್ ವಿಕೆಟ್ ಕೀಪರ್ ಜೊತೆಗೆ ಅತ್ಯುತ್ತಮ ಬ್ಯಾಟಿಂಗ್ ಕೂಡ ಪ್ರದರ್ಶನ ಮಾಡಿ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ. 2020 ರ ಟಿ-ಟ್ವೆಂಟಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ 14 ಪಂದ್ಯಗಳಲ್ಲಿ ಒಟ್ಟು 30 ಸಿಕ್ಸರ್ ಸಿಡಿಸಿ 516 ರನ್ನನ್ನು ಕಲೆಹಾಕಿದ್ದಾರೆ. ಇದೇ ತರಹ ರಾಹುಲ್ ತಿವಾರಿ ಅವರು ಕೂಡ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಟೀಮ್ ಇಂಡಿಯಾ ತಂಡದ ಟಿ-20 ಟೀಮ್ಗೆ ಆಯ್ಕೆಯಾಗಿದ್ದಾರೆ. ಇವರು ಅತ್ಯುತ್ತಮ ಆಲ್-ರೌಂಡರ್ ಪ್ರದರ್ಶನವನ್ನು ಐಪಿಏಲ್ ನಲ್ಲಿ ನೀಡಿದ್ದಾರೆ. 2020ರ ಐಪಿಎಲ್ ನಲ್ಲಿ ರಾಜಸ್ತಾನ್ ಪರ 14 ಪಂದ್ಯ ಆಡಿದ ಇವರು ಎರಡು 256 ರನ್ ಗಳನ್ನು ಕಲೆ ಹಾಕಿದ್ದಾರೆ. ಹೀಗೆ ಈ ಮೂವರು ಆಟಗಾರರು ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಇಂಗ್ಲೆಂಡ್ ತಂಡದ ಟಿ-ಟ್ವೆಂಟಿ ಸರಣಿಗೆ ಟೀಮ್ ಇಂಡಿಯಾ ತಂಡಕ್ಕೆ ಆಯ್ಕೆಯಾಗಿದ್ದಾರೆ.

Leave A Reply

Your email address will not be published.