ಪೆಟ್ರೋಲ್ ಬಗ್ಗೆ ಚಿಂತೆ ಬೇಡ ಪೆಟ್ರೋಲ್ ಹಾಗೂ ವಿದ್ಯುತ್ ಎರಡರಿಂದ ಓಡುತ್ತೆ

0 3

ಎಲೆಕ್ಟ್ರಿಕಲ್ ವೆಹಿಕಲ್ ಈಗಿನ ದುಬಾರಿ ಇಂಧನದ ಕಾಲದಲ್ಲಿ ಜನರಿಗೆ ಅತ್ಯುತ್ತಮ ಹಣ ಉಳಿತಾಯ ಮಾಡುವ ಮತ್ತು ಇಂಧನ ಉಳಿತಾಯ ಮಾಡುವ ಸಾರಿಗೆಯ ಮಾರ್ಗವಾಗಿದೆ. ಈಗಿನ ಪೆಟ್ರೋಲ್ ವಾಹನಗಳ ದರವೂ ಕೂಡ ಹೆಚ್ಚಾಗಿದೆ. ಆದರೆ ಬರೀ ಇಲೆಕ್ಟ್ರಿಕಲ್ ವಾಹನದ ಬಗ್ಗೆ ನೋಡುವುದಾದರೆ ಇದನ್ನು ಖರೀದಿ ಮಾಡಲು ಸರಿಯಾದ ರೇಂಜ್ ದೊರಕುವುದಿಲ್ಲ. ಇದು ನಲವತ್ತರಿಂದ ಐವತ್ತು ಕಿಲೋಮೀಟರ್ ಒಂದು ಸಾರಿ ಚಾರ್ಜ್ ಮಾಡಿದಾಗ ದೊರಕಬಹುದು. ಆದ್ದರಿಂದ ನಾವು ಇಲ್ಲಿ ಎಲೆಕ್ಟ್ರಿಕಲ್ ವೇಕಲ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಎಲೆಕ್ಟ್ರಿಕಲ್ ವೇಕಲ್ ಓಡುವ ಸಾಮರ್ಥ್ಯವು ಕಡಿಮೆಯಾಗಿರುತ್ತದೆ. ಇನ್ನೊಂದು ವಿಚಾರವೆಂದರೆ ಈ ಗಾಡಿಗಳನ್ನು ಹೆಚ್ಚಾಗಿ ಪ್ಲಾಸ್ಟಿಕ್ ನಿಂದಲೇ ಮಾಡಿರುತ್ತಾರೆ. ಆದಕಾರಣ ಈ ವೆಕಲ್ ಗಳಲ್ಲಿ ಹೆಚ್ಚು ದೂರ ಕ್ರಮಿಸಲು ಕಷ್ಟವಾಗುತ್ತದೆ. ಎಲೆಕ್ಟ್ರಿಕ್ ವಾಹನಗಳು ಒಳ್ಳೆಯ ಗುಣಮಟ್ಟದ ಗಾಡಿಯನ್ನು ಖರೀದಿಸಲು ಒಂದು ಕಾಲರಿಂದ ಎರಡು ಲಕ್ಷದವರೆಗೆ ಆಗುತ್ತದೆ. ಹೀಗೆ ನೋಡಿದಾಗ ಎಲೆಕ್ಟ್ರಿಕಲ್ ವೇಕಲ್ ಗಿಂತ ಪೆಟ್ರೋಲ್ ವೇಕಲ್ ನ್ನು ಬಳಸುವುದು ಸೂಕ್ತವೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಹೀಗಾಗಿ ಕೆಲವರು ನಮ್ಮಲ್ಲಿ ಇರುವ ವಾಹನದಲ್ಲಿಯೇ ಎಲೆಕ್ಟ್ರಿಕಲ್ ಜೊತೆಗೆ ಪೆಟ್ರೋಲ್ ಎರಡರ ಬಳಕೆಯನ್ನು ಮಾಡಿ ವಾಹನ ಚಲಾಯಿಸುವ ಯೋಜನೆಯನ್ನು ಕೂಡ ಮಾಡುತ್ತಾರೆ. ಈ ತರಹದ ಯೋಜನೆ ಈಗಾಗಲೇ ಮಾರ್ಕೆಟ್ನಲ್ಲಿ ಲಭ್ಯವಾಗಿದೆ.

ಇದಕ್ಕೆ ಹೈಬ್ರಿಡ್ ಸಿಸ್ಟಮ್ ಎಂದು ಕರೆಯುತ್ತಾರೆ. ಹೈಬ್ರಿಡ್ ಸ್ಕೂಟರ್ ಕೀಟಗಳು ಈಗಾಗಲೇ ಮಾರ್ಕೆಟ್ನಲ್ಲಿ ದೊರಕುತ್ತಿದೆ. ಮೊದಲನೆಯದಾಗಿ ನಮ್ಮ ಗಾಡಿಯ ಎಕ್ಸಲೇಟರ್ ಕೇಬಲ್ ಅನ್ನು ತೆಗೆದು ಹೈಬ್ರಿಡ್ ಕಿಟ್ ನಲ್ಲಿ ಕೊಡುವ ಎಕ್ಸಲೇಟರ್ ಕೇಬಲ್ ಅನ್ನು ಸೇರಿಸಬೇಕು. ಜೊತೆಗೆ ಕಂಟ್ರೋಲರ್ ಅನ್ನು ಕೂಡ ಬೈಕ್ನಲ್ಲಿ ಸೇರಿಸಬೇಕು. ಜೊತೆಗೆ 1500 ವ್ಯಾಟ್ ಹಬ್ ಮೋಟಾರ್ ಅನ್ನು ಹಿಂದಿನ ಗಾಲಿಗೆ ಪ್ಲೇಟ್ ನ ಸಹಾಯದ ಮೂಲಕ ಕೂರಿಸಬೇಕು. ಇದರಲ್ಲಿ ಒಂದೇ ಎಕ್ಸಲೇಟರ್ ಕೇಬಲ್ ನ ಮೂಲಕ ಪೆಟ್ರೋಲ್ ಮತ್ತು ಬ್ಯಾಟರಿ ಎರಡರಲ್ಲಿಯೂ ಗಾಡಿಯನ್ನು ಚಲಾಯಿಸಬಹುದು. ಎಲೆಕ್ಟ್ರಿಕಲ್ ಅಥವಾ ಪೆಟ್ರೋಲ್ ನಲ್ಲಿ ಬಳಸಲು ಒಂದು ಸ್ವಿಚ್ ನೀಡಲಾಗುತ್ತದೆ. ಇದರ ಮೂಲಕ ಬೇಕಾದಾಗ ಪೆಟ್ರೋಲ್ಗೆ ಅಥವಾ ಬ್ಯಾಟರಿಗೆ ಗಾಡಿಯನ್ನು ಹಸ್ತಾಂತರಿಸಿಗೊಳಿಸಿಕೊಳ್ಳಬಹುದು.

ಬ್ಯಾಟರಿಯನ್ನು ವೇಕಲ್ ಗಳ ಕೆಳಗಿನ ಸ್ಟೋರೇಜ್ ಜಾಗದಲ್ಲಿ ಇಡಬಹುದು. ಬ್ಯಾಟರಿ ಆಧಾರದ ಮೇಲೆ ವೇಕಲ್ ಗಳನ್ನು 60ರಿಂದ 70 ಕಿಲೋಮೀಟರ್ ವರೆಗೆ ಆರಾಮವಾಗಿ ಕ್ರಮಿಸಬಹುದು. ಬ್ಯಾಟರಿ ಖಾಲಿಯಾದ ಕ್ಷಣದಲ್ಲಿ ಸ್ವಿಚ್ ನ ಮೂಲಕ ಅದನ್ನು ಪೆಟ್ರೋಲ್ಗೆ ಹಸ್ತಾಂತರಿಸಿಕೊಂಡು ಪೆಟ್ರೋಲ್ ನಲ್ಲಿ ಸಂಚರಿಸಬಹುದು. ಈ ಹೈಬ್ರಿಡ್ ಸ್ಕೂಟರ್ ಬೆಸಿಕ್ ಕಿಟ್ಟಿಗೆ 20 ಸಾವಿರ ರೂಗಳು ಇದೆ. ಜೊತೆಗೆ ಬ್ಯಾಟರಿಗಳು ಅದರ ಕೆಪ್ಯಾಸಿಟಿಯ ಮೇಲೆ ರೆಟ್ ನಿರ್ಧಾರವಾಗಿರುತ್ತದೆ. ಅಜಮಾಸು ಬ್ಯಾಟರಿ 25ರಿಂದ 35 ಸಾವಿರ ರೂನಲ್ಲಿ ದೊರೆಯುತ್ತದೆ. ಈಗಿನ ಪೆಟ್ರೋಲ್ ನ ದುಬಾರಿ ಬೆಲೆಯಲ್ಲಿ ಈ ತರಹದ ವ್ಯವಸ್ಥೆಯನ್ನು ಬಳಸಿಕೊಳ್ಳುವುದು ಉತ್ತಮವಾಗಿದೆ.

Leave A Reply

Your email address will not be published.