ಭಾನುವಾರದ ದಿನವನ್ನು ರಜಾ ದಿನವನ್ನಾಗಿ ಮಾಡಿದ ಮಹಾನ್ ವ್ಯಕ್ತಿ ಯಾರು ಗೊತ್ತೇ? ಓದಿ.

0 21,330

ಇಡೀ ವಾರ ಕೆಲಸ ಮಾಡಿ ಸುಸ್ತಾದ ಜನರು ಭಾನುವಾರ ಯಾವಾಗ ಬರುತ್ತದೆ ಅಂತ ಕಾಯುತ್ತಿರುತ್ತಾರೆ. ಭಾನುವಾರದ ಸಂತೋಷಕ್ಕಾಗಿ ಪ್ಲಾನ್ ಮಾಡುತ್ತಾರೆ. ಏಕೆಂದರೆ ಭಾನುವಾರ ವಿಶ್ರಾಮದ ದಿನ. ಭಾನುವಾರದ ರಜೆ ಕಲ್ಪನೆಯು ಬಂದಿದ್ದು ಹೇಗೆ ಮತ್ತು ಯಾವಾಗ ಎಂದು ನಾವು ಇಲ್ಲಿ ನೋಡೋಣ.

ಪಾಶ್ಚಾತ್ಯರ ಲೆಕ್ಕಾಚಾರದ ಪ್ರಕಾರ ಒಂದು ಅಥವಾ ಎರಡನೇ ಶತಮಾನದ ಮತ್ತು ಆನಂತರದ ಐದು ಮತ್ತು ಆರನೇ ಶತಮಾನದ ಅಸ್ತಿತ್ವದಲ್ಲಿದ್ದ ಎಲೆಸ್ಟಿಕ್ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದೊಂದು ವಾರವನ್ನು ಒಂದೊಂದು ಗ್ರಹ ಪ್ರತಿನಿಧಿಸುತ್ತದೆ. ರೋಮನ್ನರು ಹಾಗೂ ಈಜಿಪ್ಟಿಯನ್ನರ ಪ್ರಕಾರ ಈ ಶಾಸ್ತ್ರವನ್ನೇ ಅನುಸರಿಸಿದ್ದರಿಂದ ಅವರಿಗೆ ಈ ಕಾಲಮಾನದ ಅನುಭವ ಇತ್ತು. ವೇದಗಳ ಕಾಲದಿಂದಲೂ ಸೂರ್ಯನನ್ನು ಆರಾಧಿಸುವ ಕಲ್ಪನೆ ನಮ್ಮಲ್ಲಿತ್ತು.

ಅದರಲ್ಲೂ ವೀಕೇನ್ಡ್ ಅಂತ ಕರೆಯೋ ಭಾನುವಾರವನ್ನು ನಾವು ವಾರದ ಮೊದಲ ದಿನ ಎಂದು ಪರಿಗಣಿಸುತ್ತೇವೆ. ದಿನದ ಆರಂಭ ಹೇಗೆ ಸೂರ್ಯನಿಂದ ಆಗುತ್ತದೆಯೋ ಹಾಗೆ ವಾರದ ಆರಂಭ ಭಾನುವಾರದಿಂದ ಶುರುವಾಗುತ್ತದೆ.ನಮ್ಮಲ್ಲಿ ಆರುಸಾವಿರ ವರ್ಷಗಳ ಹಿಂದಿನ ಕಾಲದಿಂದಲೂ ಕಾಲಮಾನವನ್ನು ನಿರ್ಧರಿಸುವ ಪದ್ಧತಿ ಇತ್ತು.ಚಂದ್ರ ಒಂದು ನಕ್ಷತ್ರದಿಂದ ಮತ್ತೆ ಅದೇ ನಕ್ಷತ್ರಕ್ಕೆ ಬರುವದಕ್ಕೆ 27ನಕ್ಷತ್ರಗಳನ್ನು ಲೆಕ್ಕ ಹಾಕಲಾಗುತ್ತಿತ್ತು.

ಹಾಗೆಯೇ 27 ನಕ್ಷತ್ರಗಳನ್ನು ಗುರುತಿಸಿ ಅದರ ಆಧಾರದ ಮೇಲೆ ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನಗಳನ್ನು ಗುರುತಿಸಿ ಅದರ ಮೇಲೆ ಪಾಡ್ಯ, ಬಿದಿಗೆಗಳನ್ನು ಲೆಕ್ಕ ಹಾಕಿ ಭೂಮಿ ತನ್ನ ಸುತ್ತ ಸುತ್ತುವ ಪರಿಭ್ರಮಣಗಳನ್ನು ಲೆಕ್ಕ ಹಾಕಿ ಗ್ರಹಗಳನ್ನು ಗುರುತಿಸಿ ಅದಕ್ಕೆ ಹೆಸರಿಟ್ಟು ವಾರಗಳನ್ನು ಲೆಕ್ಕ ಹಾಕಿದರು.

ಭಾನುವಾರಕ್ಕೆ ಕ್ರಿಶ್ಚಿಯನ್ನರು ವಾರದಲ್ಲೊಂದು ಪ್ರಾರ್ಥನೆಯ ದಿನ ಎಂದು ಮಹತ್ವ ನೀಡಿದ್ದಾರೆ. ಮುಸ್ಲಿಮರು ಶುಕ್ರವಾರ ಪ್ರಾರ್ಥನೆಗೆ ಸಾಮೂಹಿಕ ಪ್ರಾರ್ಥನೆಗೆ ಮೀಸಲಿಟ್ಟಿದ್ದಾರೆ. ಸರ್ಕಾರಿ ರಜೆ ಎಂದು ಘೋಷಿಸಿದ್ದು ಬ್ರಿಟೀಷರು. ಸುಮಾರು 130ವರ್ಷಗಳ ಹಿಂದೆ ಭಾರತದಲ್ಲಿ ಭಾನುವಾರ ರಜೆ ಎಂದು ಅಸ್ತಿತ್ವಕ್ಕೆ ಬಂದಿತು.

ಕೃಷಿ ಪ್ರಧಾನವಾಗಿದ್ದ ನಮ್ಮ ದೇಶದಲ್ಲಿ ಹಿಂದೆ ಸೋಮವಾರ ಯಾವುದೇ ಚಟುವಟಿಕೆಗಳನ್ನು ಮಾಡುತ್ತಿರಲಿಲ್ಲ. ಎತ್ತುಗಳನ್ನು ಬಳಸಿ ಉಳುಮೆ ಮಾಡುತ್ತಿರಲಿಲ್ಲ. ಹಾಗಾಗಿ ಈ ದಿನದಲ್ಲಿ ರಜಾ ತೆಗೆದುಕೊಳ್ಳುತ್ತಿದ್ದರು. ಆದರೆ ಸೋಮವಾರ ಕ್ಷೌರಿಕರ ಅಂಗಡಿ ತುಂಬುತ್ತಿತ್ತು. ಏಕೆಂದರೆ ಅಂದು ರೈತರು ಖಾಲಿ ಇರುವುದರಿಂದ ಚೌರ ಮಾಡಿಸಲು ಹೋಗುತ್ತಿದ್ದರು.

ಭಾರತೀಯರಿಗೆ ರಜೆ ಕೊಡಬೇಕು ಎಂದು ಪಟ್ಟು ಹಿಡಿದು ಕುತ್ತಿದ್ದು ನಾರಾಯಣ್ ಮೇ ಗುಜೀರ್ ಲೋಕಂಡೆ. ಭಾರತದಲ್ಲಿ ಕಾರ್ಮಿಕರ ಪರವಾಗಿ ಹೋರಾಡಬೇಕೆಂದರೆ ಅನೇಕ ಸಂಘಗಳಿವೆ. ಈ ಕಾರ್ಮಿಕ ಸಂಘಗಳು ನಾಯಕರಿಂದಲೇ ಕೇರಳದಲ್ಲಿ ಅನೇಕ ಕಾರ್ಖಾನೆಗಳು ಮುಚ್ಚಿ ಹೋದ ದಾಖಲೆಗಳಿವೆ. ಇದೆಲ್ಲದರ ಜೊತೆಗೆ ಕಾರ್ಮಿಕರ ಪರವಾಗಿ ಸರ್ಕಾರ ರೂಪಿಸಿದ ಯೋಜನೆಗಳಿವೆ.ಆಗ ಭಾನುವಾರದ ರಜೆಗಾಗಿ ಮಾಡಿದ ಹೋರಾಟ,ನೋವು, ಸಂಕಷ್ಟ ಬಹಳ.

ಅಂತಹ ಸಮಯದಲ್ಲಿ ಭಾರತೀಯರ ಆಶಾಕಿರಣವಾದ ನಾರಾಯಣ್ ಮೇ ಗುಜೀರ್ ಲೋಕಂಡೆ ಅವರು.ಅವರು ಜ್ಯೋತಿ ಬಾ ಫುಲೆಯವರ ಸಹಪಾಠಿ.ಇವರು ಬ್ರಿಟಿಷರು ಬಾಂಬೆಯಲ್ಲಿ ನಡೆಸುತ್ತಿದ್ದ ಟೆಕ್ಸ್ಟೈಲ್ ಕಾರ್ಖಾನೆಯಲ್ಲಿ ಇವರು ಸ್ಟೋರ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದಾಗ ಭಾರತೀಯರು ಆ ಕಾರ್ಖಾನೆಯಲ್ಲಿ ಅನುಭವಿಸುತ್ತಿದ್ದ ನೋವನ್ನು ಕಂಡು ಅವರ ಕರುಳು ಚುರ್ ಎಂದಿತು.

ನಂತರ ಸತತ7ವರ್ಷದ ಹೋರಾಟದ ನಂತರ ಬ್ರಿಟಿಷ್ ಸರ್ಕಾರವು 1890ರ ಜೂನ್10ನೇ ತಾರೀಖು ಭಾನುವಾರವನ್ನು ರಜಾದಿನ ಎಂದು ಅಧಿಕೃತವಾಗಿ ಘೋಷಣೆ ಮಾಡಿತು.ಅಂದಿನಿಂದ ಇಂದಿನವರೆಗೆ ಭಾನುವಾರ ರಾಜಾದಿನವಾಗಿ ಮುಂದುವರಿದಿದೆ.

Leave A Reply

Your email address will not be published.